ಬೆನಿಟೋ ಮುಸೊಲಿನಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೫೪ ನೇ ಸಾಲು:
{{main|Economy of Italy under Fascism, 1922-1943}}
[[File:Mussolini all'Alfa Romeo.JPG|thumb|ಬೆನಿಟೊ ಮುಸೊಲಿನಿ ಅಲ್ಫಾರೋಮಿಯೋ ಫ್ಯಾಕ್ಟರಿಗಳ ಭೇಟಿಯ ಸಂದರ್ಭದಲ್ಲಿ.]]
ಆರ್ಥಿಕ ಹಿನ್ನಡೆಗಳು ಅಥವಾ [[ನಿರುದ್ಯೋಗ]] ಮಟ್ಟಗಳ ವಿರುದ್ಧ ಹೋರಾಡುವ ಸಲುವಾಗಿ ಮುಸೊಲಿನಿ ಇಟಲಿಯ ಎಲ್ಲೆಡೆಯಲ್ಲೂ ಹಲವಾರು ಸಾರ್ವಜನಿಕ ನಿರ್ಮಾಣ ಯೋಜನೆಗಳನ್ನು ಮತ್ತು ಸರ್ಕಾರೀ ಕಾರ್ಯಗಳನ್ನು ಆರಂಭಿಸಿದನು . ಆತನ ಮೊದಲ ಮತ್ತು ಜನಜನಿತವಾಗಿರುವ ಯೋಜನೆಯೆಂದರೆ [[ಹಸಿರು ಕ್ರಾಂತಿ]]ಯ ರೀತಿಯಲ್ಲಿಯೇ ಇಟಲಿಯಲ್ಲಿ ನಡೆದ "ಬ್ಯಾಟಲ್ ಫಾರ್ ಗ್ರೇನ್", ಇದರ ಮೂಲಕ 5,000 ಹೊಸ ಫಾರ್ಮುಗಳನ್ನು ಆರಂಭಿಸಲಾಯಿತು ಮತ್ತು [[ಪಾಂಟೈನ್ ಜೌಗುಪ್ರದೇಶ]]ಗಳನ್ನು ಒಣಗಿಸಿ ಸುಮಾರು ಐದು ಕೃಷಿಪ್ರಧಾನ ಪಟ್ಟಣಗಳಷ್ಟು ಭೂಮಿಯನ್ನು ಮರಳಿ ಪಡೆಯಲಾಯಿತು. [[ಸಾರ್ಡೀನಿಯಾ]]ದಲ್ಲಿ ಒಂದು ಮಾದರಿ ಕೃಷಿ ಪಟ್ಟಣವನ್ನು ರೂಪಿಸಲಾಯಿತು ಮತ್ತು ಅದಕ್ಕೆ ''ಮುಸೊಲಿನಿಯಾ'' ಎಂದು ಹೆಸರಿಡಲಾಯಿತು; ಈಗ ಅದನ್ನು [[ಆರ್ಬೋರಿಯಾ]] ಎಂದು ಕರೆಯಲಾಗುತ್ತದೆ. ಮುಸೊಲಿನಿ ಈ ಪಟ್ಟಣದ ರೀತಿಯಲ್ಲಿಯೇ ದೇಶದ ಉದ್ದಗಲಕ್ಕೂ ಸಾವಿರಾರು ಹೊಸ ಕೃಷಿ ನೆಲೆಗಳನ್ನು ಸ್ಥಾಪಿಸುವ ಬಯಕೆ ಹೊಂದಿದ್ದನು. ಈ ಯೋಜನೆಯು ಆರ್ಥಿಕವಾಗಿ ಲಾಭದಾಯಕವಲ್ಲದ ಬೆಳೆಗಳೆಡೆಗಳಿಂದ ಸಂಪನ್ಮೂಲಗಳನ್ನು ಧಾನ್ಯಗಳನ್ನು ಬೆಳೆಯುವತ್ತ ತಿರುಗಿಸುತ್ತಿತ್ತು. ಈ ಯೋಜನೆಗೆ ಸಂಬಂಧಿಸಿದ ಹೆಚ್ಚು [[ತೆರಿಗೆ]]ಗಳು ಅದಕ್ಷತೆ ಹರಡಲು ಕಾರಣವಾದವು, ಮತ್ತು ರೈತರಿಗೆ ಸರ್ಕಾರವು ನೀಡಿದ [[ಸಬ್ಸಿಡಿಗಳು]] ದೇಶವನ್ನು ಹೆಚ್ಚು ಸಾಲದೆಡೆ ತಳ್ಳಿದವು. ಮುಸೊಲಿನಿಯು "ಬ್ಯಾಟ್ಲ್ ಫಾರ್ ಲ್ಯಾಂಡ್" ಎಂಬ ಯೋಜನೆಯನ್ನು ಆರಂಭಿಸಿದನು, ಈ ನೀತಿಯು 1928ರಲ್ಲಿ ರೂಪಿಸಲಾದ [[ಭೂಮಿ ಹಿಂಪಡೆತ]]ವನ್ನು ಆಧರಿಸಿತ್ತು. ಈ ಯೋಜನೆಗೆ ಮಿಶ್ರಫಲ ದೊರಕಿತು; 1935ರಲ್ಲಿ [[ಕೃಷಿ]]ಗಾಗಿ ಕೈಗೊಂಡ ಪಾಂಟೈನ್ ಜೌಗುಪ್ರದೇಶವನ್ನು ಒಣಗಿಸುವ ಯೋಜನೆಯು ಪ್ರಚಾರಕಾರ್ಯಕ್ಕೆ ಒಳ್ಳೆಯದಾಗಿದ್ದು, [[ನಿರುದ್ಯೋಗಿ]]ಗಳಿಗೆ ಕೆಲಸ ಒದಗಿಸಿ ಹೆಚ್ಚು ಭೂಪ್ರದೇಶವುಳ್ಳವರು ಸಬ್ಸಿಡಿಗಳನ್ನು ನಿಯಂತ್ರಿಸುವಂತೆ ಮಾಡಿದರೂ ಬ್ಯಾಟ್ಲ್ ಫಾರ್ ಲ್ಯಾಂಡ್‌ನ ಇತರ ವಿಭಾಗಗಳು ಅಷ್ಟೇನೂ ಯಶಸ್ಸು ಗಳಿಸಲಿಲ್ಲ. ಈ ಕಾರ್ಯಕ್ರಮವು ಬ್ಯಾಟ್ಲ್ ಫಾರ್ ಗ್ರೇನ್‌ನೊಂದಿಗೆ ಹೊಂದಿಕೊಂಡಿರಲಿಲ್ಲ (ದೊಡ್ಡ ಪ್ರಮಾಣದಲ್ಲಿ ಗೋಧಿ ಬೆಳೆಯಲು ಸಣ್ಣ ವಿಸ್ತೀರ್ಣದ ಭೂಮಿಗಳನ್ನು ನಿಗದಿಪಡಿಸಲಾಗಿತ್ತು), ಮತ್ತು [[ಎರಡನೇ ವಿಶ್ವಯುದ್ಧ]]ದ ವೇಳೆಯಲ್ಲಿ ಪಾಂಟೈನ್ ಜೌಗುಪ್ರದೇಶವು ಇಟಲಿಯ ಕೈತಪ್ಪಿಹೋಯಿತು. 10,000ಕ್ಕೂ ಕಡಿಮೆ ಸಂಖ್ಯೆಯ [[ರೈತ]]ರು ಮರುಹಂಚಿಕೆಯಾದ ಭೂಮಿಯಲ್ಲಿ ಮತ್ತೆ ವಾಸ್ತವ್ಯ ಹೂಡಿದರು, ಹಾಗೂ ರೈತರ ಬಡತನದ ಹೆಚ್ಚುತ್ತಲೇ ಇತ್ತು. 1940ರಲ್ಲಿ ಬ್ಯಾಟ್ಲ್ ಫಾರ್ ಲ್ಯಾಂಡ್ ಯೋಜನೆಯನ್ನು ಬರಖಾಸ್ತು ಮಾಡಲಾಯಿತು.
{{Corporatism sidebar}}
ಜತೆಗೇ [[ಆರ್ಥಿಕ ಕುಸಿತ]]ದ ವಿರುದ್ಧ ಹೋರಾಡಲು ಆತನು ಯೋಜನೆಯನ್ನು ಆರಂಭಿಸಿ ಜನತೆಯು ಸ್ವ-ಇಚ್ಛೆಯಿಂದ [[ನೆಕ್‌ಲೇಸ್]]ಗಳು, [[ಮದುವೆಯ ಉಂಗುರ]]ಗಳು ಮೊದಲಾದ [[ಚಿನ್ನ]]ದ [[ಆಭರಣ]]ಗಳನ್ನು ಸರ್ಕಾರೀ ಅಧಿಕಾರಿಗಳಿಗೆ ದಾನ ಮಾಡಿ ಅವುಗಳಿಗೆ ಬದಲಾಗಿ "ಗೋಲ್ಡ್ ಫಾರ್ ದ ಫಾದರ್‌ಲ್ಯಾಂಡ್" ಅಂಕಿತವಿರುವ [[ಸ್ಟೀಲ್]]ನ [[ಮಣಿಕಟ್ಟು]] ಆಭರಣಗಳನ್ನು ಪಡೆಯುವಂತೆ ಪ್ರೋತ್ಸಾಹಿಸಿದನು. [[ರೇಶೇಲ್ ಮುಸ್ಸೊಲಿನಿ]] ಕೂಡ ತನ್ನ ಮದುವೆಯ ಉಂಗುರವನ್ನು ದಾನವಾಗಿ ನೀಡಿದಳು. ಹೀಗೆ ಸಂಗ್ರಹವಾದ ಚಿನ್ನವನ್ನು ಕರಗಿಸಿ ಗಟ್ಟಿಗಳನ್ನಾಗಿ ಪರಿವರ್ತಿಸಿ [[ರಾಷ್ಟ್ರೀಯ ಬ್ಯಾಂಕ್]]ಗಳಿಗೆ ಹಂಚಲಾಯಿತು.
೧೬೦ ನೇ ಸಾಲು:
ಮುಸೊಲಿನಿ ಸರ್ಕಾರವು ಉದ್ಯಮಗಳನ್ನು ನಿಯಂತ್ರಿಸುವುದರ ಬಗ್ಗೆ ಒತ್ತು ನೀಡಿದನು: 1935ರ ಹೊತ್ತಿಗೆ ಮುಸೊಲಿನಿಯ ಹೇಳಿಕೆಯೊಂದರ ಪ್ರಕಾರ ಮುಕ್ಕಾಲುಪಾಲು ಇಟಾಲಿಯನ್ ಉದ್ಯಮಗಳು ರಾಜ್ಯದ ನಿಯಂತ್ರಣದಲ್ಲಿದ್ದವು. ಅದೇ ವರ್ಷ, ಆತನು ಆರ್ಥಿಕ ವ್ಯವಸ್ಥೆಯನ್ನು ನಿಯಂತ್ರಿಸುವ ಸಲುವಾಗಿ ಹಲವಾರು ಶಾಸನಗಳನ್ನು ಹೊರಡಿಸಿದನು ಹಾಗೂ ಇವುಗಳ ಪ್ರಕಾರ ಎಲ್ಲಾ ಬ್ಯಾಂಕುಗಳು, ಉದ್ಯಮಗಳು ಮತ್ತು ಖಾಸಗೀ ಪೌರರಿಂದ ಬಲವಂತವಾಗಿ ಎಲ್ಲಾ ವಿದೇಶೀ ಸ್ಟಾಕುಗಳು ಮತ್ತು ಬಾಂಡ್‌ಗಳನ್ನು ಬ್ಯಾಂಕ್ ಆಫ್ ಇಟಲಿಗೆ ಸಲ್ಲಿಸುವಂತೆ ಆದೇಶ ನೀಡಲಾಯಿತು. 1938ರಲ್ಲಿ ಆತನು ವೇತನ ಮತ್ತು [[ಬೆಲೆನಿಯಂತ್ರಣ]]ಗಳನ್ನು ಕೂಡ ಜಾರಿಗೆ ತಂದನು.<ref>[http://www.mises.org/story/1935 The Vampire Economy: Italy, Germany, and the US], ಜೆಫ್ರೀ ಹರ್ಬೆನರ್, Mises Institute, ಅಕ್ಟೋಬರ್ 13, 2005</ref> ಜರ್ಮನಿಯನ್ನು ಹೊರತುಪಡಿಸಿ ಇತರೆಲ್ಲಾ ರಾಷ್ಟ್ರಗಳ ಜತೆಗಿನ ವಾಣಿಜ್ಯ ವ್ಯವಹಾರಗಳಿಗೆ ಕಡಿವಾಣ ಹಾಕುವುದರ ಮೂಲಕ ಆತನು ಇಟಲಿಯನ್ನು ಸ್ವಾವಲಂಬಿಯಾದ [[ಸ್ವಾಯತ್ತ]] ರಾಷ್ಟ್ರವನ್ನಾಗಿ ಮಾಡಲು ಹವಣಿಸಿದನು.
 
1943ರಲ್ಲಿ ಮುಸೊಲಿನಿ ಆರ್ಥಿಕ [[ಸಾಮಾಜೀಕರಣ]]ದ ಸಿದ್ಧಾಂತವನ್ನು ಪ್ರಸ್ತುತಪಡಿಸಿದನು.
 
===ಸರ್ಕಾರ===
"https://kn.wikipedia.org/wiki/ಬೆನಿಟೋ_ಮುಸೊಲಿನಿ" ಇಂದ ಪಡೆಯಲ್ಪಟ್ಟಿದೆ