ಬೆನಿಟೋ ಮುಸೊಲಿನಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೮೫ ನೇ ಸಾಲು:
 
===ವಿದೇಶೀ ನೀತಿ===
[[ವಿದೇಶೀ ನೀತಿ]]ಯಲ್ಲಿ ಮುಸೊಲಿನಿ ಬಲುಬೇಗನೆ ತಾನು ಅಧಿಕಾರಕ್ಕೆ ಬರುವ ಹಾದಿಯಲ್ಲಿ ಉಪಯೋಗಿಸಿದ [[ಶಾಂತಿವಾದ]] ಮತ್ತು [[ಚಕ್ರಾಧಿಪತ್ಯವಾದ]]-ವಿರೋಧೀ ಸಿದ್ಧಾಂತಗಳಿಂದ ಹೊರಬಂದು ತೀವ್ರವಾದೀ ರೂಪದ ಆಕ್ರಮಣಕಾರಿ ರಾಷ್ಟ್ರೀಯತಾವಾದವನ್ನು ಬೆಂಬಲಿಸಲು ಆರಂಭಿಸಿದನು. ಆತನು ಇಟಲಿಯನ್ನು ಯುರೋಪಿನಲ್ಲಿ ಮತ್ತು ಇಡೀ ಪ್ರಪಂಚದಲ್ಲಿ "ಅಮೋಘ, ಗೌರವಿತ ಮತ್ತು ಭಯಭಕ್ತಿ ಮೂಡಿಸುವ" ರಾಷ್ಟ್ರವನ್ನಾಗಿ ಮಾಡಲು ಕನಸು ಕಂಡನು. ಇದಕ್ಕೆ ನೀಡಬಹುದಾದ ಒಂದು ಮೊದಮೊದಲ ಉದಾಹರಣೆಯೆಂದರೆ 1923ರ [[ಕೋರ್ಫು]] ಮೇಲಿನ ಬಾಂಬ್ ದಾಳಿ. ಇದಾದ ಮೇಲೆ ಆತ ಕೆಲವೇ ಕಾಲದಲ್ಲಿ [[ಅಲ್ಬೇನಿಯಾ]]ದಲ್ಲಿ [[ಕೈಗೊಂಬೆ ಆಳ್ವಿಕೆ]]ಯನ್ನು ನೆಲೆಗೊಳಿಸಿದನಲ್ಲದೆ ಸುಮಾರು 1912ನಿಂದಲೂ ಹೆಚ್ಚೂಕಡಿಮೆ ವಸಾಹತು ನೆಲೆಯಾಗಿದ್ದ [[ಲಿಬಿಯಾ]]ದಲ್ಲಿ ಇಟಾಲಿಯನ್ ನಿಯಂತ್ರಣವನ್ನು ನಿರ್ದಯವಾಗಿ ಕ್ರೋಢೀಕರಿಸಿದನು. [[ಮೆಡಿಟರೇನಿಯನ್ ಅನ್ನು ಮೇರ್ ನೋಸ್ಟ್ರಮ್|ಮೆಡಿಟರೇನಿಯನ್ ಅನ್ನು ''ಮೇರ್ ನೋಸ್ಟ್ರಮ್'']] ([[ಲ್ಯಾಟಿನ್]]ನಲ್ಲಿ "ನಮ್ಮ ಸಮುದ್ರ") ಆಗಿ ಮಾಡುವುದು ಆತನ ಕನಸಾಗಿತ್ತು, ಮತ್ತು ಪೂರ್ವ ಮೆಡಿಟರೇನಿಯನ್ ಮೇಲೆ ಆಯಕಟ್ಟಿನ ಹಿಡಿತವನ್ನು ಕಡ್ಡಾಯಮಾಡುವ ಸಲುವಾಗಿ ಆತನು ಗ್ರೀಕ್ ದ್ವೀಪ [[Leros]]ನಲ್ಲಿ ಒಂದು ಬೃಹತ್ ನೌಕಾ ನೆಲೆಯನ್ನು ಸ್ಥಾಪಿಸಿದನು.
ಹೀಗಿದ್ದಾಗ್ಯೂ, ವಿದೇಶ ನೀತಿಯ ಆತನ ಮೊದಲ ತೊದಲುಹೆಜ್ಜೆಗಳು ಆತನನ್ನು ಓರ್ವ ರಾಜನೀತಿಜ್ಞನಂತೆ ಬಿಂಬಿಸುವಂತೆನಿಸಿದವು, ಎಕೆಮ್ದರೆ ಆತನು 1925ರ [[ಲೊಕಾರ್ನೋ]] ಒಪ್ಪಂದಗಳಲ್ಲಿ ಭಾಗವಹಿಸಿದನು ಮತ್ತು 1933ರಲ್ಲಿ ಪ್ರಯತ್ನಿಸಲಾದ [[Four Power Pact]] ಮುಸೊಲಿನಿಯ ಯೋಜನೆಯಾಗಿದ್ದಿತು. 1935ರಲ್ಲಿ ಜರ್ಮನಿಯ ವಿರುದ್ಧ [[Stresa Front]] ಅನ್ನು ಅನುಸರಿಸುತ್ತಿರುವಾಗ ಮುಸೊಲಿನಿಯ ನೀತಿಯು ನಾಟಕೀಯ ತಿರುವನ್ನು ಪಡೆದುಕೊಂಡಿತಲ್ಲದೆ ತನ್ನ ಆಕ್ರಮಣಶೀಲ ಪ್ರವೃತ್ತಿಯನ್ನು ಮತ್ತೊಮ್ಮೆ ಬಹಿರಂಗಪಡಿಸಿತು. ಯುದ್ಧದ ಈ ಡೊಮಿನೊ ಪರಿಣಾಮವು [[ಎರಡನೇ ಇಟಾಲೋ-ಅಬಿಸೀನಿಯನ್ ಯುದ್ಧ]]ದಿಂದ ಆರಂಭವಾಯಿತು.
 
"https://kn.wikipedia.org/wiki/ಬೆನಿಟೋ_ಮುಸೊಲಿನಿ" ಇಂದ ಪಡೆಯಲ್ಪಟ್ಟಿದೆ