ಬೆನಿಟೋ ಮುಸೊಲಿನಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೧೪ ನೇ ಸಾಲು:
ಡೊಲ್‌ಫಸ್‌ನ ಹತ್ಯೆಯ ನಂತರ ಮುಸ್ಸೊಲಿನಿಯು ಜರ್ಮನ್ ತೀವ್ರಗಾಮಿಯು ಸಮರ್ಥಿಸುತ್ತಿದ್ದ ವಿಚಾರಗಳಾದ ಜನಾಂಗೀಯವಾದ (ವಿಶೇಷವಾಗಿ [[ನಾರ್ಡಿಸಿಸಮ್]] ಮತ್ತು ಜರ್ಮನಿಸಮ್) ಮತ್ತು ಯಹೂದ್ಯ-ವಿರೋಧಿವಾದಗಳನ್ನು ತಿರಸ್ಕರಿಸುವುದರ ಮೂಲಕ ಹಿಟ್ಲರ‍್ನಿಂದ ದೂರವಿರಲು ಹವಣಿಸಿದನು. ಈ ಅವಧಿಯಲ್ಲಿ ಮುಸೊಲಿನಿ ನಾಜೀ ರೀತಿಯ ಜೈವಿಕ ಜನಾಂಗವಾದವನ್ನು ತಿರಸ್ಕರಿಸಿದನಲ್ಲದೆ ಅದಕ್ಕೆ ಬದಲಾಗಿ ತಾನು ಕಟ್ಟಬೇಕೆಂದು ಬಯಸುತ್ತಿದ್ದ [[ಇಟಾಲಿಯನ್ ಸಾಮ್ರಾಜ್ಯ]]ದ ಭಾಗಗಳ "[[ಇಟಾಲಿಯನೀಕರಣ]]"ಕ್ಕೆ ಪ್ರಾಮುಖ್ಯತೆ ನೀಡಿದನು.<ref name="cultural" /> [[ಯುಜೆನಿಕ್ಸ್(ಸುಸಂತಾನಶಾಸ್ತ್ರ)]]ನ ಯೋಜನೆಗಳು ಮತ್ತು ಒಂದು [[ಆರ್ಯನ್]] ರಾಷ್ಟ್ರದಂತಹ ಜನಾಂಗೀಯ ಪರಿಕಲ್ಪನೆಗಳು ನಿಜವಾಗುವುದು ಸಾಧ್ಯವಿಲ್ಲ ಎಂದು ಆತ ಘೋಷಿಸಿದನು.<ref name="cultural">{{cite news|url=http://jch.sagepub.com/cgi/reprint/7/3/115|publisher=jch.sagepub.com|title=Mussolini's Cultural Revolution: Fascist or Nationalist?|date=8 January 2008}}</ref>
 
ವಿಶೇಷವಾಗಿ ಮುಸೊಲಿನಿಗೆ ಜರ್ಮನರು ಇಟಾಲಿಯನರನ್ನು ಅಡ್ಡತಳಿಯ ನಾಯಿಗಳ ಜನಾಂಗವೆಂದು ಆರೋಪ ಹೊರಿಸುವುದರ ಬಗ್ಗೆ ಸೂಕ್ಷ್ಮಗ್ರಾಹಿಯಾಗಿದ್ದನು. ಇದಕ್ಕೆ ಪ್ರತಿಯಾಗಿ ಆತ ಹಲವಾರು ಸಂದರ್ಭಗಳಲ್ಲಿ ಜರ್ಮನರ ಜನಾಂಗೀಯ ಪರಿಶುದ್ಧತೆಯ ಕೊರತೆಯ ಬಗ್ಗೆ ವಿಡಂಬನಾತ್ಮಕವಾಗಿ ಮಾತನಾಡಿದನು. 1934ರ ಬೇಸಿಗೆಯಲ್ಲಿ ಜರ್ಮನ್ ಜನತೆಯು ಆರ್ಯನ್ ಅಥವಾ ಯಹೂದಿ ಜನಾಂಗಗಳಿಗೆ ಸೇರಿರುವರೆಂಬ ಗುರುತಿರುವ ಪಾಸ್‌ಪೋರ್ಟನ್ನು ಇಟ್ಟುಕೊಂಡಿರಬೇಕೆಂಬ ನಾಜೀ ಶಾಸನದ ಬಗ್ಗೆ ಚರ್ಚೆ ಮಾಡುತ್ತ ಮುಸೊಲಿನಿ ಅವರು "ಜರ್ಮೇನಿಕ್ ಜನಾಂಗ"ಕ್ಕೆ ಸದಸ್ಯತ್ವವನ್ನು ಯಾವ ಆಧಾರದ ಮೇಲೆ ನೀಡುವರೊ ಎಂದು ಆಶ್ಚರ್ಯ ಪ್ರಕಟಿಸಿದನು :
<blockquote>"''ಯಾವ ಜನಾಂಗ? '' ''ಜರ್ಮನ್ ಜನಾಂಗ ಎಂಬುದೊಂದಿದೆಯೆ? '' ''ಅದು ಯಾವಾಗಲಾದರು ಆಸ್ತಿತ್ವದಲ್ಲಿದ್ದಿತೆ? '' ''ಎಂದಾದರು ಅದು ಅಸ್ತಿತ್ವದಲ್ಲಿರುವುದೆ? '' ''ಅದು ನಿಜವೆ, ಕಟ್ಟುಕಥೆಯೆ ಅಥವಾ ಸೈದ್ಧಾಂತಿಕರ ವಂಚನೆಯ ತಂತ್ರವೆ? '' </blockquote>
 
ಆಹಾ, ಇರಲಿ, ಇದಕ್ಕೆ ನಾವು ಉತ್ತರಿಸುತ್ತೇವೆ, ಜರ್ಮೇನಿಕ್ ಜನಾಂಗ ಅಸ್ತಿತ್ವದಲ್ಲಿಲ್ಲ. ಹಲವಾರು ಆಂದೋಲನಗಳು. ಕುತೂಹಲ. ಮಂಪರು. ನಾವು ಪುನರುಚ್ಚರಿಸುತ್ತೇವೆ. ಅಸ್ತಿತ್ವದಲ್ಲಿಲ್ಲ. ನಾವು ಹೀಗೆ ಹೇಳುತ್ತಿಲ್ಲ. ವಿಜ್ಞಾನಿಗಳು ಹೇಳುತ್ತಾರೆ. ಹಿಟ್ಲರ್ ಹೀಗೆ ಹೇಳುತ್ತಾನೆ''." -- ಬೆನಿಟೊ ಮುಸೊಲಿನಿ, 1934.<ref>{{Citation
| last = Gillette
| first = Aaron
೨೪೬ ನೇ ಸಾಲು:
ಇಟಾಲಿಯನ್ ಫ್ಯಾಸಿಸಮ್ ಜನಾಂಗದ ಬಗೆಗಿನ ತನ್ನ 1920ರ ಹೊತ್ತಿಗಿನ ಅಭಿಪ್ರಾಯಗಳನ್ನು 1934ರ ಹೊತ್ತಿಗೆ ಬದಲಾಯಿಸಿತ್ತಾದರೂ, ಸೈದ್ಧಾಂತಿಕವಾಗಿ ಇಟಾಲಿಯನ್ ಫ್ಯಾಸಿಸಮ್ ಮೂಲವಾಗಿ [[ಇಟಾಲಿಯನ್ ಯಹೂದಿ]] ಸಮುದಾಯದ ಬಗ್ಗೆ ಯಾವುದೇ ಭೇದಭಾವವನ್ನು ತೋರಲಿಲ್ಲ:[[ರೋಮನ್ ಚಕ್ರವರ್ತಿಗಳ]]" ಕಾಲದಿಂದಲೂ ಅವರ ಸಣ್ಣ ತಂಡವೊಂದು ಅಲ್ಲಿಯೇ ನೆಲೆಸಿರುವುದೆಂದು ಅರಿತಿದ್ದ ಮುಸೊಲಿನಿ ಅವರನ್ನು "ಹಾಗೆಯೇ ತೊಂದರೆಗೂಡುಮಾಡದೆ ಇರಿಸಬೇಕು" ಎಂಬ ಭಾವನೆಯನ್ನು ಹೊಂದಿದ್ದನು.<ref>{{cite book | last = Hollander | first =Ethan J| title =Italian Fascism and the Jews| publisher = University of California| url =http://weber.ucsd.edu/~ejhollan/Haaretz%20-%20Ital%20fascism%20-%20English.PDF |format=PDF| isbn =0803946481 | year = 1997}}</ref> [[ನ್ಯಾಶನಲ್ ಫ್ಯಾಸಿಸ್ಟ್ ಪಾರ್ಟಿ]]ಯಲ್ಲಿ ಹಲವರು ಯಹೂದಿಗಳಿದ್ದರು, ಉದಾಹರಣೆಗೆ 1935ರಲ್ಲಿ ಯಹೂದಿ ಫ್ಯಾಸಿಸ್ಟ್ ಪತ್ರಿಕೆಯಾದ ''La Nostra Bandiera'' <ref>{{cite news|url=http://www.acjna.org/acjna/articles_detail.aspx?id=300|publisher=ACJNA.org|title=The Italian Holocaust: The Story of an Assimilated Jewish Community|date=8 January 2008}}</ref> ("ನಮ್ಮ ಧ್ವಜ")ವನ್ನು ಆರಂಭಿಸಿದ [[ಎಟೋರ್ ಒವಾಜ್ಜಾ]].
 
1938ರ ಹೊತ್ತಿಗೆ ಮುಸೊಲಿನಿಯ ಮೇಲೆ ಹಿಟ್ಲರನಿಗಿದ್ದ ಅಗಾಧ ಪ್ರಭಾವವು ''[[ಮ್ಯಾನಿಫೆಸ್ಟೊ ಆಫ್ ರೇಸ್]]'' ಅನ್ನು ಪರಿಚಯಿಸುವುದರೊಂದಿಗೆ ಸ್ಪಷ್ಟವಾಯಿತು. ಈ ಮ್ಯಾನಿಫೆಸ್ಟೋವನ್ನು ನಾಜೀ [[ನ್ಯೂರೆಂಬರ್ಗ್ ಕಾನೂನುಗಳ]] ಮಾದರಿಯಲ್ಲಿ ರಚಿಸಲಾಗಿದ್ದು,<ref name="Paxton" /> ಇದು ಯಹೂದಿಗಳ [[ಇಟಾಲಿಯನ್ ಪೌರತ್ವ]]ವನ್ನು ಕಸಿದುಕೊಂಡಿದ್ದು ಮಾತ್ರವಲ್ಲದೆ ಇದರಿಂದ ಅವರನ್ನು ಸರ್ಕಾರೀ ಅಥವಾ ಯಾವುದೇ ವೃತ್ತಿಯನ್ನು ಮಾಡುವ ಅವಕಾಶಗಳಿಂದಲೂ ವಂಚಿತರನ್ನಾಗಿಸಿತು. ಇಟಾಲಿಯನ್ ನೀತಿಯ ಮೇಲಿನ ಈ ಜರ್ಮನ್ ಪ್ರಭಾವವು ಫ್ಯಾಸಿಸ್ಟ್ ಇಟಲಿಯಲ್ಲಿ ಸ್ಥಾಪನೆಯಾಗಿದ್ದ ಸಮತೋಲನವನ್ನು ಬಿಗಡಾಯಿಸಿತು ಮತ್ತು ಇಟಾಲಿಯನ್ನರ ನಡುವೆ ಎಷ್ಟು ಪಖ್ಯಾತಿ ಪಡೆಯಿತೆಂದರೆ, [[ಪೋಪ್ ಪಯಸ್ XII]] ಮುಸೊಲಿನಿಗೆ ಒಂದು ಪತ್ರವನ್ನು ಕಳುಹಿಸಿ ಹೊಸ ಕಾನೂನುಗಳ ವಿರುದ್ಧ ಪ್ರಕಟಿಸಿದರು.<ref>{{cite news|url=http://www.historylearningsite.co.uk/mussolini_roman_catholic.htm|publisher=HistoryLearningSite.co.uk|title=Mussolini and the Roman Catholic Church|date=8 January 2008}}</ref>
 
ಹೆಚ್ಚಿನ ಊಹೆಗಳ ಪ್ರಕಾರ 1938ರಲ್ಲಿ ಮ್ಯಾನಿಫೆಸ್ಟೋವನ್ನು ಒಳಗೊಳ್ಳುವ ಮುಸೊಲಿನಿಯ ನಿರ್ಧಾರವು ಜರ್ಮನಿಯ ಜತೆ ಇಟಲಿಯ ಸಂಬಂಧಗಳನ್ನು ಉತ್ತಮಪಡಿಸುವ ಸಲುವಾಗಿ ಕೈಗೊಂಡ ತಂತ್ರ ಮಾತ್ರವಾಗಿತ್ತು. ಡಿಸೆಂಬರ್ 1943ರಲ್ಲಿ [[ಬ್ರೂನೋ ಸ್ಪ್ಯಾಂಪನ್ಯಾಟೋ]] ಬಳಿ ಹೇಳಿಕೊಂಡ ಮಾತುಗಳು ಆತನು ಮ್ಯಾನಿಫೆಸ್ಟೋ ಆಫ್ ರೇಸ್‌ನ ಬಗ್ಗೆ ವಿಷಾದಿಸುತ್ತಿದ್ದನೆಂಬುದನ್ನು ಸೂಚಿಸುತ್ತವೆ:
"https://kn.wikipedia.org/wiki/ಬೆನಿಟೋ_ಮುಸೊಲಿನಿ" ಇಂದ ಪಡೆಯಲ್ಪಟ್ಟಿದೆ