ಬೆನಿಟೋ ಮುಸೊಲಿನಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೯೬ ನೇ ಸಾಲು:
 
{{Listen |filename=Rimozione di Mussolini.ogg|title=Dismissal and arrest of Mussolini|description=Italian radio statement announcing the dismissal of Mussolini, 25 July 1943.}}
[[ಇಟಾಲಿಯನ್ ಫ್ಯಾಸಿಸ್ಟ್]] ಸರ್ಕಾರದ ಕೆಲವು ಪ್ರಮುಖ ಸದಸ್ಯರು ಈ ಹೊತ್ತಿಗೆ ಮುಸೊಲಿನಿಯ ವಿರುದ್ಧವಾಗಿಬಿಟ್ಟಿದ್ದರು. ಅವರಲ್ಲಿ ಗ್ರಾಂಡಿ ಮತ್ತು ಮುಸೊಲಿನಿಯ ಅಳಿಯ [[ಗ್ಯಾಲಿಯಾಜ್ಜೊ ಚಿಯಾನೊ]] ಇದ್ದರು. ತನ್ನ ಹಲವಾರು ಸಹೋದ್ಯೋಗಿಗಳು ಬಂಡೇಳುವುದಕ್ಕೆ ಹತ್ತಿರವಾಗಿದ್ದರಿಂದ ''ಇಲ್ ಡೂಶೆ'' ಯು ಬಲವಂತವಾಗಿ ಜುಲೈ 24ರಂದು [[ಗ್ರ್ಯಾಂಡ್ ಕೌನ್ಸಿಲ್ ಆಫ್ ಫ್ಯಾಸಿಸಮ್]]ನ ಸಭೆಯನ್ನು ಕರೆಯಬೇಕಾಯಿತು: ಇದು ಯುದ್ಧ ಆರಂಭವಾದ ಮೇಲೆ ಈ ಸಂಸ್ಥೆಯು ಸೇರಿದ ಮೊದಲ ಸಭೆಯಾಗಿದ್ದಿತು. ಜರ್ಮನರು ದಕ್ಷಿಣದಿಂದ ನಿರ್ಗಮಿಸುವ ಬಗ್ಗೆ ಆಲೋಚಿಸುತ್ತಿದ್ದಾರೆಂದು ಆತ ಘೋಷಿಸಿದಾಗ ಗ್ರಾಂಡಿ ಆತನ ಮೇಲೆ ವಾಗ್ದಾಲಿಯನ್ನು ನಡೆಸಿದನು.<ref name="lastdays" /> ಮಸೂದೆಯೊಂದನ್ನು ಮಂಡಿಸಿದ ಗ್ರಾಂಡಿ ಮಹಾರಾಜನನ್ನು ಆತನ ಸಂವಿಧಾನಾತ್ಮಕ ಅಧಿಕಾರವನ್ನು ಸಂಪೂರ್ಣವಾಗಿ ಬಳಸಿಕೊಂಡು ಮುಸೊಲಿನಿಯ ಬಗ್ಗೆ [[ಅವಿಶ್ವಾಸ ಮತನಿರ್ಣಯ]]ವನ್ನು ಜಾರಿಗೊಳಿಸಲು ಮನವಿ ಮಾಡಿದನು. ಈ ಮಸೂದೆಯು 19–7ರ ಅಂತರದಿಂದ ಅನುಮೋದಿಸಲ್ಪಟ್ಟಿತು. ಈ ತೀವ್ರವಾದ ಆಕ್ಷೇಪಣೆಯ ಹೊರತಾಗಿಯೂ ಮುಸೊಲಿನಿ ಮರುದಿನ ಎಂದಿನಂತೆ ಕೆಲಸಕ್ಕೆ ಮರಳಿದನು. ಊಹೆಯ ಪ್ರಕಾರ ಆತ ಗ್ರ್ಯಾಂಡ್ ಕೌನ್ಸಿಲ್ ಅನ್ನು ಕೇವಲ ಒಂದು ಸಲಹೆಗಾರ ಅಂಗವಾಗಿ ಕಾಣುತ್ತಿದ್ದನು ಮತ್ತು ಈ ಮತನಿರ್ಣಯವು ಯಾವುದೇ ಪ್ರಮುಖವಾದ ಪರಿಣಾಮವನ್ನು ಬೀರುವುದೆಂದು ಆತ ಭಾವಿಸಿರಲಿಲ್ಲ.<ref name="fital" /> ಅಂದು ಮಧ್ಯಾಹ್ನ ಆತನಿಗೆ ಈ ಹಿಂದೆಯೇ ಆತನನ್ನು ಪದಚ್ಯುತಗೊಳಿಸಲು ತೀರ್ಮಾನಿಸಿದ್ದ ರಾಜ [[ವಿಕ್ಟರ್ ಎಮ್ಯಾನುಯೆಲ್ III]]ನಿಂದ ಅರಮನೆಗೆ ಬರುವಂತೆ ಕರೆಬಂದಿತು. ಮುಸೊಲಿನಿಯು ಮಹಾರಾಜನಿಗೆ ಸಭೆಯ ಬಗ್ಗೆ ಹೇಳಲು ಪ್ರಯತ್ನಿಸುತ್ತಿರುವಂತೆಯೇ ಆತನನ್ನು ತಡೆದ ವಿಕ್ಟರ್ ಎಮ್ಯಾನುಯೆಲ್ ಮುಸೊಲಿನಿಗೆ ಆತನನ್ನು ಪದಚ್ಯುತಗೊಳಿಸಲಾಗುತ್ತಿದೆಯೆಂದೂ, ಆತನ ಸ್ಥಾನಕ್ಕೆ ಮಾರ್ಷಲ್ [[ಪಿಯೆತ್ರೋ ಬ್ಯಾಡೋಗ್ಲಿಯೋ]]ನನ್ನು ನಿಯುಕ್ತಗೊಳಿಸಲಾಗುತ್ತಿದೆಯೆಂದೂ ತಿಳಿಸಿದನು.<ref name="fital" /> ಮುಸೊಲಿನಿ ಅರಮನೆಯಿಂದ ತೆರಳಿದ ನಂತರ ರಾಜನ ಆದೇಶದಂತೆ ಆತನನ್ನು [[ಕ್ಯಾರಾಬಿನಿಯರಿ]]ಗಳು ಬಂಧಿಸಿದರು.<ref name="prisonrescue" />
[[File:Bundesarchiv Bild 101I-567-1503A-07, Gran Sasso, Mussolini mit deutschen Fallschirmjägern.jpg|thumb|right| ಸೆಪ್ಟೆಂಬರ್ 12, 1943ರಂದು ಕ್ಯಾಂಪೋ ಇಂಪೆರಾತೋರ್‌ನಿಂದ ಜರ್ಮನ್ ಸೈನಿಕರ ಮೂಲಕ ರಕ್ಷಿಸಲ್ಪಟ್ಟ ಮುಸೊಲಿನಿ.]]
 
"https://kn.wikipedia.org/wiki/ಬೆನಿಟೋ_ಮುಸೊಲಿನಿ" ಇಂದ ಪಡೆಯಲ್ಪಟ್ಟಿದೆ