ಬೆನಿಟೋ ಮುಸೊಲಿನಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೫೨ ನೇ ಸಾಲು:
 
===ಮುಸೊಲಿನಿಯ ದೇಹ===
29 ಏಪ್ರಿಲ್ 1945ರಂದು ಮುಸೊಲಿನಿ, ಪೆಟಾಚ್ಚಿ ಮತ್ತು ಅವರ ಜತೆ ಕೊಲ್ಲಲಾದ ಇತರ ಫ್ಯಾಸಿಸ್ಟ್‌ಗಳ ಶವಗಳನ್ನು ಒಂದು ಚಲಿಸುತ್ತಿರುವ ವ್ಯಾನಿನಲ್ಲಿ ಹಾಕಿ ದಕ್ಷಿಣದ ಕಡೆ [[ಮಿಲಾನ್]]ಗೆ ರವಾನಿಸಲಾಯಿತು. ಅಲ್ಲಿ ಬೆಳಗಿನಜಾವ ಸುಮಾರು ಮೂರು ಘಂಟೆಯ ಹೊತ್ತಿಗೆ ಓಲ್ಡ್ ಪಿಯಾಜ್ಜಾ ಲೊರೆಟೊನ ಮೈದಾನದಲ್ಲಿ ಅವರ ದೇಹಗಳನ್ನು ಎಸೆಯಲಾಯಿತು. ಕೊಂಚ ಸಮಯದ ಹಿಂದಷ್ಟೇ ಅದೇ ಜಾಗದಲ್ಲಿ ಕೊಲ್ಲಲಾಗಿದ್ದ 15 ಮಂದಿ ಫ್ಯಾಸಿಸ್ಟ್-ವಿರೋಧಿಗಳ ಗೌರವಾರ್ಥ ಈ ಜಾಗವನ್ನು "ಪಿಯಾಜ್ಜಾ ಕ್ವಿಂಡೀಚಿ ಮಾರ್ಟೈರಿ" ಎಂದು ಮರುನಾಮಕರಣ ಮಾಡಲಾಗಿತ್ತು.<ref>[[ಟೈಮ್ ಮ್ಯಾಗಜೀನ್]], ಮೇ 7, 1945</ref>
 
ಗುಂಡಿಕ್ಕಿದ ಮೇಲೆ ಆ ದೇಹಗಳನ್ನು ಒದೆಯಲಾಯಿತು, ಉಗಿಯಲಾಯಿತು ಮತ್ತು ಒಂದು ಗ್ಯಾಸ್ ಸ್ಟೇಶನ್ನಿನ ಮಾಂಸ ನೇತುಹಾಕುವ ಕೊಕ್ಕೆಗಳಿಂದ ತಲೆಕೆಳಗಾಗಿ ನೇತುಹಾಕಲಾಯಿತು. ಇದಾದ ಮೇಲೆ ಕೆಳಗಿನಿಂದ ನಾಗರಿಕರೆಲ್ಲರೂ ಆ ದೇಹಗಳಿಗೆ ಕಲ್ಲು ಹೊಡೆದರು. ಫ್ಯಾಸಿಸ್ಟರನ್ನು ಹೋರಾಟ ಮುಂದುವರೆಸದಂತೆ ತಡೆಯಲು ಮತ್ತು ಅದೇ ಜಾಗದಲ್ಲಿ ಆಕ್ಸಿಸ್ ಅಧಿಕಾರಿಗಳು ಹಲವಾರು ಪಾರ್ಟಿಸಾನ್ ಹೋರಾಟಗಾರರನ್ನು ಗಲ್ಲಿಗೇರಿಸಿದ್ದಕ್ಕೆ ಪ್ರತೀಕಾರವಾಗಿ ಹೀಗೆ ಮಾಡಲಾಯಿತು. ಸ್ಥಾನಭ್ರಷ್ಟನಾದ ನಾಯಕನ ದೇಹವು ಮೂದಲಿಕೆ ಮತ್ತು ದೂಷಣೆಗಳಿಗೆ ಪಾತ್ರವಾಯಿತು.
 
[[ಫ್ಯಾಸಿಸ್ಟ್]] ನಿಷ್ಟನಾಗಿದ್ದ [[ಅಖೀಲ್ಲ್ ಸ್ಟಾರಾಚೆ]]ಯನ್ನು ಬಂಧಿಸಿ ಮರಣದಂಡನೆ ವಿಧಿಸಲಾಯಿತು ಮತ್ತು ಆತನನ್ನು ಪಿಯಾಜ್ಜೇಲ್ ಲೊರೆಟೋಗೆ ಕರೆದುಕೊಂಡುಹೋಗಿ ಮುಸೊಲಿನಿಯ ದೇಹವನ್ನು ತೋರಲಾಯಿತು. ಹಿಂದೊಮ್ಮೆ ಮುಸೊಲಿನಿಯನ್ನು ಕುರಿತು "ಆತ ಒಬ್ಬ ದೇವರು" ಎಂದಿದ್ದ ಸ್ಟಾರಾಚೆ,<ref>Quoted in "Mussolini: A New Life" - ಪುಟ 276 - ನಿಕೋಲಸ್ ಬರ್ಜೆಸ್ ಫ್ಯಾರೆಲ್&nbsp;– 2004</ref> ತನಗೆ ಗುಂಡಿಕ್ಕಲಾಗುವ ಮುನ್ನ ತನ್ನ ನಾಯಕನ ಉಳಿದಿದ್ದ ದೇಹಕ್ಕೆ ವಂದನೆ ಸಲ್ಲಿಸಿದ. ನಂತರ ಸ್ತಾರಾಚೆಯ ದೇಹವನ್ನು ಮುಸೊಲಿನಿಯ ದೇಹದ ಪಕ್ಕದಲ್ಲಿ ನೇತುಹಾಕಲಾಯಿತು.
 
ಮುಸೊಲಿನಿಯ ಸಾವು ಮತ್ತು ಮಿಲಾನ್‌ನಲ್ಲಿ ಆತನ ದೇಹವನ್ನು ಪ್ರದರ್ಶಿಸಿದ ನಂತರ ಆತನನ್ನು ನಗರದ ಉತ್ತರಭಾಗದಲ್ಲಿದ್ದ ಮುನಿಸಿಪಲ್ ಸಿಮಿಟರಿ [[ಮ್ಯುಜಾಕ್]]ನ ಗುರುತಿಲ್ಲದ ಜಾಗವೊಂದರಲ್ಲಿ ಸಮಾಧಿ ಮಾಡಲಾಯಿತು. 1946ರ [[ಈಸ್ಟರ್ ಭಾನುವಾರ]]ದ ದಿನ ಆತನ ದೇಹವನ್ನು [[ಡೊಮಿನಿಕೊ ಲೆಚಿಸಿ]] ಮತ್ತು ಇನ್ನಿಬ್ಬರು [[ನಿಯೋಫ್ಯಾಸಿಸ್ಟ್‌ಗ]]ಳು ಕಂಡುಹಿಡಿದು ಅಗೆದು ಹೊರತೆಗೆದರು. ತಮ್ಮ ನಾಯಕನೊಂದಿಗೆ ಪರಾರಿಯಾದ ಅವರು ತೆರೆದ ಸಮಾಡಿಯ ಮೇಲೆ ಈ ಸಂದೇಶವನ್ನು ಬಿಟ್ಟಿದ್ದರು: "ಕೊನೆಗೂ, ಓ ಡೂಚೆ, ನೀನು ನಮ್ಮೊಂದಿಗಿದ್ದೀಯೆ. ನಾವು ಗುಲಾಬಿ ಹೂಗಳಿಂದ ನಿನ್ನನ್ನು ಆಚ್ಛಾದಿಸುವೆವು, ಅದರೆ ನಿನ್ನ ಸಂಪನ್ನತೆಯ ಪರಿಮಳವು ಆ ಗುಲಾಬಿಗಳ ಪರಿಮಳವನ್ನೂ ಮೀರಿಸುವುದು."
 
ಹಲವಾರು ತಿಂಗಳುಗಳವರೆಗೆ ಪತ್ತೆಯಾಗದೆ - ನೂತನ ಇಟಾಲಿಯನ್ ಗಣತಂತ್ರದ ಅತಂಕಕ್ಕೆ ಕಾರಣವಾಗಿದ್ದ ಡೂಚೆಯ ದೇಹವನ್ನು ಕೊನೆಗೂ ಆಗಸ್ಟಿನಲ್ಲಿ [[ಸರ್ಟೋಸಾ ಡಿ ಪಾವಿಯಾ]] ಎಂಬ ಮಿಲಾನ್‌ನ ಹೊರಭಾಗದಲ್ಲಿ ಸಣ್ಣ ಟ್ರಂಕೊಂದರಲ್ಲಿ ಅಡಗಿಸಿಟ್ಟಿದ್ದದ್ದನ್ನು ಪತ್ತೆಹಚ್ಚಿ ’ವಶಪಡಿಸಿ’ಕೊಳ್ಳಲಾಯಿತು. ಆನಂತರದ ತನಿಖೆಯಿಂದ ಶವವು ಒಂದು ಜಾಗದಿಂದ ಇನ್ನೊಂದಕ್ಕೆ ಸಾಗಿಸಲಾಗುತ್ತಲೆ ಇತ್ತೆಂಬುದು ಪತ್ತೆಯಾದರೂ ಕೂಡ, ಇಬ್ಬರು [[ಫ್ರಾನ್ಸಿಸ್ಕನ್]] ಸಹೋದರರ ಮೇಲೆ ಶವವನ್ನು ಅಡಗಿಸಿಟ್ಟ ಆರೋಪ ಹೊರಿಸಲಾಯಿತು. ಏನು ಮಾಡಬೇಕೆಂದು ತೋಚದ ಅಧಿಕಾರಿಗಳು ಈ ಅವಶೇಷಗಳನ್ನು ಮುಂದಿನ ಹತ್ತು ವರ್ಷಗಳವರೆಗೆ ರಾಜಕೀಯ ಬಂಧನದಲ್ಲಿಟ್ಟುಕೊಂಡಿದ್ದರು, ಮತ್ತು ಲೆಚಿಸಿ ಮತ್ತು ಮೂವಿಮೆಂಟೊ ಸೋಶಿಯೇಲ್ ಇಟಾಲಿಯಾನೊ ನಡೆಸಿದ ಪ್ರಚಾರದ ನಂತರ ಅವರು ಅದನ್ನು ಆತನ ಹುಟ್ಟಿದ ಸ್ಥಳವಾದ [[ರೊಮಾನಾ]]ದ [[ಪ್ರೆಡೆಪ್ಪಿಯೋ]]ನಲ್ಲಿ ಮರುಸಮಾಧಿ ಮಾಡಲು ಅನುಮತಿಸಿದರು.
 
ಒಬ್ಬ ಫ್ಯಾಸಿಸ್ಟ್ ಉಪ ಅಧಿಕಾರಿಯಾಗಿದ್ದ ಲೆಚಿಸಿ ಮುಂದೆ ತನ್ನ ಜೀವನ ಚರಿತ್ರೆ ''ವಿದ್ ಮುಸೊಲಿನಿ ಬಿಫೋರ್ ಎಂಡ್ ಆಫ್ಟರ್ ಪಿಯಾಜೇಲ್ ಲೊರೆಟೊ'' ವನ್ನು ಬರೆದನು. ಆಗಿನ ಪ್ರಧಾನಮಂತ್ರಿಯಾಗಿದ್ದ [[ಅದೋನ್ ಜೋಲಿ]] ಪೂರ್ವ ಸರ್ವಾಧಿಕಾರಿಯ ವಿಧವೆ [[ಡೊನ್ನಾ ರೆಶೇಲ್]]ರನ್ನು ಆತನ ಅವಶೇಷಗಳನ್ನು ಮರಳಿಸುತ್ತಿರುವೆನೆಂದು ತಿಳಿಸುವುದಕ್ಕಾಗಿ ಸಂಪರ್ಕಿಸಿದರು, ಏಕೆಂದರೆ ಅವರಿಗೆ ಸಂಸತ್ತಿನಲ್ಲಿ ಲೆಚಿಸಿಯನ್ನೊಳಗೊಂಡಂತೆ ದೂರ- ಬಲಪಂಥದ ಬೆಂಬಲದ ಅವಶ್ಯಕತೆಯಿತ್ತು. ಪ್ರೆಡಾಪ್ಪಿಯೋನಲ್ಲಿ ಸರ್ವಾಧಿಕಾರಿಯನ್ನು ಒಂದು [[ಕ್ರಿಪ್ಟ್ (ಚರ್ಚಿನ ನೆಲಮಾಳಿಗೆಯಲ್ಲಿನ ಸಮಾಧಿ)]] (ಮುಸೊಲಿನಿಗೆ ದೊರಕಿದ ಒಂದೇ ಒಂದು ಗೌರವ). ಆತನ ಸಮಾಧಿಯು [[ಅಮೃತಶಿಲೆ]]ಯ [[ದಂಡಗಳು ಮತ್ತು ಕೊಡಲಿ]]ಗಳಿಂದ ಸುತ್ತುವರಿಯಲ್ಪಟ್ಟಿದ್ದು, ಅತನ ದೊಡ್ಡ ಗಾತ್ರದ ಉತ್ತಮಪಡಿಸಲ್ಪಟ್ಟ [[ವಿಗ್ರಹ]]ವೊಂದು [[ಸಮಾಧಿ]]ಯ ಮೇಲೆ ಕಂಡುಬರುತ್ತದೆ.
 
==ಪರಂಪರೆ==
"https://kn.wikipedia.org/wiki/ಬೆನಿಟೋ_ಮುಸೊಲಿನಿ" ಇಂದ ಪಡೆಯಲ್ಪಟ್ಟಿದೆ