ಬೆನಿಟೋ ಮುಸೊಲಿನಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೧೮ ನೇ ಸಾಲು:
ಮುಸೊಲಿನಿಯ ತಾಯಿ ಒಬ್ಬ ದೈವಭಕ್ತೆಯಾದ ಕ್ಯಾಥೊಲಿಕಳೂ<ref name="dmsmith_1">ಡಿ.ಎಮ್.ಸ್ಮಿತ್ 1982, p. 1</ref> ತಂದೆ ಪಾದ್ರಿಗಳನ್ನು ವಿರೋಧಿಸುವವರೂ ಆಗಿದ್ದರು.<ref name="dmsmith_8">ಡಿ.ಎಮ್.ಸ್ಮಿತ್ 1982, p. 8</ref> ಆತನ ತಾಯಿ ರೋಸಾ ಆತನನ್ನು ರೋಮನ್ ಕ್ಯಾಥೊಲಿಕ್ ಚರ್ಚಿನಲ್ಲಿ ಬ್ಯಾಪ್‌ಟೈಜ್ ಮಾಡಿಸಿದ್ದಲ್ಲದೆ ಪ್ರತಿ ಭಾನುವಾರ ತನ್ನೆಲ್ಲ ಮಕ್ಕಳನ್ನೂ ಪ್ರಾರ್ಥನಾಸಭೆಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಆತನ ತಂದೆ ಇವುಗಳಲ್ಲಿ ಎಂದೂ ಭಾಗವಹಿಸಲಿಲ್ಲ.<ref name="dmsmith_1" /> ಧಾರ್ಮಿಕ ವಸತಿಶಾಲೆಯಲ್ಲಿ ತಾನು ಕಳೆದ ಸಮಯವನ್ನು ಮುಸೊಲಿನಿ ಒಂದು ಶಿಕ್ಷೆಯೆಂದು ಭಾವಿಸಿದ್ದ, ತನ್ನ ಅನುಭವಗಳನ್ನು ನರಕಕ್ಕೆ ಹೋಲಿಸಿದ ಮತ್ತು "ಒಂದು ಸಾರಿ ಬೆಳಗಿನ ಮಾಸ್‌ಗೆ ಹೋಗಲು ಆತ ನಿರಾಕರಿಸಿದ್ದರಿಂದ ಆತನನ್ನು ಬಲವಂತವಾಗಿ ಎಳೆದೊಯ್ಯಬೇಕಾಯಿತು."<ref name="dmsmith_2-3">ಡಿ.ಎಮ್.ಸ್ಮಿತ್ 1982, p. 2-3</ref>
 
ಮುಂದೆ ಮುಸೊಲಿನಿ ತನ್ನ ತಂದೆಯ ರೀತಿ ಪಾದ್ರಿಗಳ ವಿರೋಧಿಯಾಗುವವನಿದ್ದ. ಯುವಕನಾಗಿದ್ದಾಗ, ಆತ ತನ್ನನ್ನು "ತಾನೊಬ್ಬ ನಾಸ್ತಿಕನೆಂದು ಕರೆದುಕೊಂಡಿದ್ದನು ಮತ್ತು ದೇವರನ್ನು ತನ್ನನ್ನು ಸಾಯಿಸುವಂತೆ ಸವಾಲೊಡ್ಡುವುದರ ಮೂಲಕ ತನ್ನ್ ಸುತ್ತಮುತ್ತಲಿನ ನೋಡುಗರನ್ನು ದಿಗ್ಭ್ರಾಂತಗೊಳಿಸಿದ್ದನು."<ref name="dmsmith_8" /> ಧರ್ಮದ ಬಗ್ಗೆ ಸಹಿಷ್ಣುತೆಯುಳ್ಳ ಮತ್ತು ತಮ್ಮ ಮಕ್ಕಳನ್ನು ಬ್ಯಾಪ್‌ಟೈಜ್ ಮಾಡಿದ ಸಮಾಜವಾದಿಗಳನ್ನು ಆತ ಬಲವಾಗಿ ಖಂಡಿಸುತ್ತಿದ್ದನು. ವಿಜ್ಞಾನವು ದೇವರಿಲ್ಲವೆಂದು ಸಾಬೀತುಪಡಿಸಿರುವುದಾಗಿಯೂ, ಐತಿಹಾಸಿಕ ಜೀಸಸ್ ಒಬ್ಬ ಅಜ್ಞಾನಿಯೂ ಹುಚ್ಚನೂ ಆಗಿದ್ದನೆಂದೂ ಆತ ನಂಬಿದ್ದನು. ಆತ ಧರ್ಮವನ್ನು ಒಂದು ಮಾನಸಿಕ ರೋಗವೆಂದು ಪರಿಗಣಿಸುತ್ತಿದ್ದನು ಮತ್ತು ಕ್ರೈಸ್ತಧರ್ಮವು ತ್ಯಾಗ ಮತ್ತು ಹೇಡಿತನಕ್ಕೆ ಉತ್ತೇಜನ ನೀಡುತ್ತಿದೆಯೆಂದು ಆರೋಪಿಸಿದನು.<ref name="dmsmith_8" />
 
ಮುಸೊಲಿನಿ ಫ್ರೆಡರಿಕ್ ನೀಶೆಯ ಪ್ರಶಂಸಕನಾಗಿದ್ದನು. ಡೆನಿಸ್ ಮ್ಯಾಕ್ ಸ್ಮಿಥ್‌ರ ಪ್ರಕಾರ, "ನೀಶೆಯಲ್ಲಿ ಆತನಿಗೆ ಕ್ರಿಶ್ಚಿಯನ್ ಸದ್ಗುಣಗಳಾದ ನಮ್ರತೆ, ತ್ಯಾಗ, ದಾನಧರ್ಮ ಮತ್ತು ಒಳ್ಳೆಯತನಗಳ ವಿರುದ್ಧದ ಯುದ್ಧಕ್ಕೆ ತಕ್ಕನಾದ ಸಮರ್ಥನೆಯು ದೊರಕಿತು."<ref name="dmsmith_12">ಡಿ.ಎಮ್.ಸ್ಮಿತ್ 1982, p. 12</ref> ನೀಶೆಯ ಮಹಾಮಾನವ ಕಲ್ಪನೆಯನ್ನು ಆತ ಶ್ಲಾಘಿಸುತ್ತಿದ್ದನು, ಈ ಮಹಾಮಾನವ "ದೇವರು ಮತ್ತು ಜನತೆಯನ್ನು ಉಲ್ಲಂಘಿಸುವವನೂ, ಸಮಾನತೆ ಮತ್ತು ಪ್ರಜಾತಂತ್ರವನ್ನು ದ್ವೇಷಿಸುವವನೂ, ಬಲಹೀನರು ಸೋಲನ್ನೊಪ್ಪಿಕೊಳ್ಳಬೇಕೆಂದೂ, ಅವರು ಒಪ್ಪಿಕೊಳ್ಳಲು ತಡಮಾಡಿದರೆ ಅವರನ್ನು ಅದರೆಡೆ ತಳ್ಳಬೇಕೆಂದು ನಂಬುವವನೂ ಆಗಿದ್ದನು."<ref name="dmsmith_12" />
೩೨೪ ನೇ ಸಾಲು:
ಮುಸೊಲಿನಿ ಕ್ರಿಶ್ಚಿಯನ್ ಧರ್ಮ ಮತ್ತು ಕ್ಯಾಥೊಲಿಕ್ ಚರ್ಚುಗಳ ವಿರುದ್ಧ ತೀಕ್ಷ್ಣವಾದ ವಾಗ್ದಾಳಿಯನ್ನು ಮಾಡುತ್ತ, "ಪವಿತ್ರ ಅತಿಥೇಯರ ಬಗ್ಗೆ ಮತ್ತು ಕ್ರಿಸ್ತ ಮತ್ತು ಮೇರಿ ಮ್ಯಾಗ್ಡಲೀನರ ನಡುವೆ ಇದ್ದಿತೆನ್ನಲಾದ ಸಂಬಂಧದ ಬಗ್ಗೆ ಪ್ರಚೋದನಕಾರಿಯಾದ ಮತ್ತು ದೈವನಿಂದೆಯ ಮಾತುಗಳನ್ನು ಕೂಡ ಆಡುತ್ತಿದ್ದನು."<ref name="dmsmith_15">ಡಿ.ಎಮ್.ಸ್ಮಿತ್ 1982, p. 15</ref> ಕ್ರಿಶ್ಚಿಯನ್ ಧರ್ಮವನ್ನು ಅನುಸರಿಸುವ ಅಥವಾ ಧಾರ್ಮಿಕ ವಿವಾಹಗಳಿಗೆ ಸಮ್ಮತಿಸುವ ಯಾವುದೇ ಸಮಾಜವಾದಿಯನ್ನು ಪಕ್ಷದಿಂದ ಹೊರಹಾಕಬೇಕೆಂದು ಆತ ಬಲವಾಗಿ ನಂಬುತ್ತಿದ್ದನು. ಆತ ಕ್ಯಾಥೊಲಿಕ್ ಚರ್ಚ್ ಅನ್ನು ಅದರ "ದಬ್ಬಾಳಿಕೆಯ ಪ್ರವೃತ್ತಿ ಮತ್ತು ಯೋಚನಾ ಸ್ವಾತಂತ್ರ್ಯವನ್ನು ನೀಡಲು ಅನುಮತಿ ನಿರಾಕರಿಸುತ್ತಿದ್ದುದಕ್ಕಾಗಿ.." ಖಂಡಿಸುತ್ತಿದ್ದನು. ಮುಸೊಲಿನಿಯ ಪತ್ರಿಕೆ ''La Lotta di Classe'' ನ ಸಂಪಾದಕೀಯ ವಿಭಾಗವು ಕ್ರಿಶ್ಚಿಯನ್ ವಿರೋಧಿ ಧೋರಣೆಯನ್ನು ಪಾಲಿಸುತ್ತಿದ್ದಿತು.<ref name="dmsmith_15" />
 
ಈ ರೀತಿಯ ವಿರೋಧ ವ್ಯಕ್ತಪಡಿಸುತ್ತಿದ್ದರೂ ಮುಸೊಲಿನಿ ಜನಪ್ರಿಯತೆಯನ್ನು ಗಳಿಸುವುದಕ್ಕಾಗಿ ಮುಂದಿನ ದಿನಗಳಲ್ಲಿ ಇಟಲಿಯಲ್ಲಿ ಹೆಚ್ಚಿನ ಜನಸಂಖ್ಯೆಯಲ್ಲಿದ್ದ ಕ್ಯಾಥೊಲಿಕರ ಬೆಂಬಲವನ್ನು ಗಳಿಸಲು ಪ್ರಯತ್ನಿಸುವವನಿದ್ದನು. 1924ರಲ್ಲಿ ಮುಸೊಲಿನಿ ತನ್ನ ಮೂವರು ಮಕ್ಕಳಿಗೆ ಕಮ್ಯುನಿಯನ್ ನೀಡಿಸಿದನು. 1925ರಲ್ಲಿ ಪಾದ್ರಿಯೊಬ್ಬನು ನಡೆಸಿಕೊಟ್ಟ ಧಾರ್ಮಿಕ ವಿವಾಹ ಸಮಾರಂಭವೊಂದರಲ್ಲಿ ಆತನು ತಾನು ಹತ್ತು ವರುಷಗಳ ಹಿಂದೆ ಪೌರ ಸಮಾರಂಭವೊಂದರಲ್ಲಿ ಮದುವೆಯಾಗಿದ್ದ ತನ್ನ ಪತ್ನಿ ರೇಶೇಲ್‌ಳನ್ನು ಮತ್ತೆ ಮದುವೆಯಾದನು.<ref name="rmussolini_129">ರೇಶೇಲ್ ಮುಸೊಲಿನಿ 1974, p. 129</ref> ಹಾಗೂ 1929ರಲ್ಲಿ ಆತನು ರೋಮನ್ ಕ್ಯಾಥೊಲಿಕ್ ಚರ್ಚಿನ ಜತೆಗೆ ಒಂದು ಕಾನ್‌ಕಾರ್ಡ್ತಾಟ್ ಮತ್ತು ಒಪ್ಪಂದಕ್ಕೆ ಸಹಿ ಹಾಕಿದನು.<ref name="dmsmith_162-163" />
 
ಆದರೆ, ಈ ಸಂಧಾನದ ನಂತರ ಆತನು ಚರ್ಚು ರಾಜ್ಯಕ್ಕೆ ಅಧೀನವಾಗಿದೆಯೆಂದು ಘೋಷಿಸಿದನು ಮತ್ತು "ದೈವದೂಷಣೆ ಮಾಡುವ ರೀತಿಯಲ್ಲಿ ಕ್ಯಾಥೊಲಿಸಿಸಮ್ ಮೂಲವಾಗಿ ಒಂದು ಸಣ್ಣ ಪಂಥವಾಗಿತ್ತೆಂದೂ ಅದು ರೋಮನ್ ಸಾಮ್ರಾಜ್ಯದ ಸಂಸ್ಥೆಯ ಜತೆಗೆ ಸೇರಿಕೊಂಡಿದ್ದರಿಂದ ಪ್ಯಾಲೆಸ್ತೀನಿನಿಂದಾಚೆಗೆ ಹರಡಲು ಸಾಧ್ಯವಾಯಿತೆಂದು ಹೇಳಿದನು."<ref name="dmsmith_162-163">ಡಿ.ಎಮ್.ಸ್ಮಿತ್ 1982, p. 162-163</ref> ಕಾನ್‌ಕಾರ್ಡ್ಯಾಟ್‌ನ ನಂತರ, "ಕಳೆದ ಏಳು ವರ್ಷಗಳಲ್ಲಿ ಆಗಿದ್ದಕ್ಕಿಂತ ಹೆಚ್ಚು ಸಂಖ್ಯೆಯ ಕ್ಯಾಥೊಲಿಕ್ ಸುದ್ದಿಪತ್ರಿಕೆಗಳನ್ನು ಆತ ಮುಟ್ಟುಗೋಲು ಹಾಕಿಕೊಂಡನು."<ref name="dmsmith_162-163" /> ಈ ಹೊತ್ತಿಗೆ ಮುಸೊಲಿನಿಯು ಕ್ಯಾಥೊಲಿಕ್ ಚರ್ಚಿನಿಂದ ಹೊರದೂಡಲ್ಪಡುವುದಕ್ಕೆ ಬಲು ಹತ್ತಿರದ ಘಟ್ಟವನ್ನು ತಲುಪಿದನು.<ref name="dmsmith_162-163" />
 
೧೯೩೨ ಮುಸೊಲಿನಿಯು ಪೋಪ್‌ನೊಂದಿಗೆ ಬಹಿರಂಗವಾಗಿ ರಾಜಿ ಮಾಡಿಕೊಂಡನು, ಆದರೆ "ಯಾವುದೇ ನಿಯತಕಾಲಿಕಗಳಲ್ಲಿ ತಾನು ಪೋಪ್‌ನ ಎದುರು ಮಂಡಿಯೂರಿರುವ ಅಥವಾ ಭಕ್ತಿ ಪ್ರದರ್ಶಿಸುತ್ತಿರುವ ಯಾವುದೇ ಚಿತ್ರವು ಬರದಂತೆ ನೋಡಿಕೊಂಡನು."<ref name="dmsmith_162-163" /> ಆತ ಕ್ಯಾಥೊಲಿಕರಿಗೆ "ಫ್ಯಾಸಿಸಮ್ ಕೂಡ ಕ್ಯಾಥೊಲಿಕ್ ಆಗಿತ್ತೆಂದೂ, ತಾನು ಖುದ್ದಾಗಿ ದಿನದ ಕೆಲವು ಭಾಗವನ್ನು ಪ್ರಾರ್ಥನೆಯಲ್ಲಿ ಕಳೆಯುತ್ತಿದ್ದನೆಂದೂ.." ಮನವರಿಕೆ ಮಾಡಲು ಬಯಸಿದ್ದನು.<ref name="dmsmith_162-163" /> ಪೋಪ್ ಮುಸೊಲಿನಿಯನ್ನು "ದೈವಾನುಗ್ರಹದಿಂದ ಕಳಿಸಲ್ಪಟ್ಟ ಮನುಷ್ಯ" ಎಂದು ಕರೆಯಲು ಆರಂಭಿಸಿದನು.<ref name="dmsmith_15" /><ref name="dmsmith_162-163" /> ದೈವಭಕ್ತನಾಗಿಉ ಕಾಣಿಸಿಕೊಳ್ಳುವ ಮುಸೊಲಿನಿಯ ಎಲ್ಲಾ ಪ್ರಯತ್ನಗಳ ಹೊರತಾಗಿ, ಪಾರ್ಟಿಯ ಆದೇಶದ ಪ್ರಕಾರ, ಆತನನ್ನು ವರ್ಣಿಸಲು ಬಳಸಲಾಗುವ ಎಲ್ಲ ವಿಶೇಷಣಗಳೂ ಕೂಡ " ದೇವರನ್ನು ವರ್ಣಿಸಲು ಬಳಸಲಾಗುವ ವಿಶೇಷಣಗಳಂತೆಯೇ ಕಾಣುವಂತೆ ನೋಡಿಕೊಳ್ಳಬೇಕಾಗಿತ್ತು.."<ref name="dmsmith_162-163" />
 
1938ರಲ್ಲಿ ಮುಸೊಲಿನಿಯು ತನ್ನ ಪುರೋಹಿತಶಾಹೀ-ವಿರೋಧಿ ನೀತಿಯನ್ನು ಮತ್ತೆ ಪ್ರತಿಪಾದಿಸಲು ಆರಂಭಿಸಿದನು. ಕೆಲವೊಮ್ಮೆ ಆತನು ತನ್ನನ್ನು "ಪಕ್ಕಾ ನಂಬಿಕೆಯಿಲ್ಲದಿರುವವನು" ಎಂದು ವರ್ಣಿಸಿಕೊಳ್ಳುತ್ತಿದ್ದನಲ್ಲದೆ, ಒಮ್ಮೆ ತನ್ನ ಕ್ಯಾಬಿನೆಟ್‌ಗೆ ತಿಳಿಸಿದ ಪ್ರಕಾರ "ಬಹುಶಃ ಇಸ್ಲಾಮ್ ಕ್ರೈಸ್ತಧರ್ಮಕ್ಕಿಂತ ಹೆಚ್ಚು ಪರಿಣಾಮಕಾರಿ" ಮತ್ತು "ಪೋಪನ ಧಿಕಾರವು ಇಟಲಿಯ ದೇಹದಲ್ಲಿ ಬೆಳೆಯುತ್ತಿರುವ ಬಾವು ಮತ್ತು ಇದನ್ನು ’ಒಂದೇಬಾರಿಗೆ ಸಂಪೂರ್ಣವಾಗಿ ನಾಶ ಮಾಡಬೇಕಾಗಿದೆ’ ಏಕೆಂದರೆ ಇಟಲಿಯಲ್ಲಿ ಪೋಪ್ ಮತ್ತು ತನಗೆ - ಇಬ್ಬರಿಗೂ ಜತೆಯಲ್ಲಿ ಬದುಕುವಷ್ಟು ಜಾಗವಿಲ್ಲವೆಂದೂ ಹೇಳಿದನು."<ref name="dmsmith_222-223">ಡಿ.ಎಮ್.ಸ್ಮಿತ್ 1982, p. 222-223</ref> ಮುಂದೆ ಆತ ಸಾರ್ವಜನಿಕವಾಗಿ ಈ ರೀತಿಯ ಪುರೋಹಿತಶಾಹೀ-ವಿರೋಧಿ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಿದನಾದರೂ, ಖಾಸಗಿಯಾಗಿ ಈ ರೀತಿಯ ಹೇಳಿಕೆಗಳನ್ನು ನೀಡುವುದು ಮುಂದುವರೆಯಿತು.
 
1943ರಲ್ಲಿ ಅಧಿಕಾರದಿಂದ ಪದಚ್ಯುತನಾದಂದಿನಿಂದ ಮುಸೊಲಿನಿ "ದೇವರು ಮತ್ತು ಆತ್ಮಸಾಕ್ಷಿಯ ಕರೆಗೆ ಬೆಲೆಗೊಡುವುದರ ಬಗ್ಗೆ" ಮಾತನಾಡತೊಡಗಿದನು, ಆದರೆ ಕ್ಯಾಥೊಲಿಕ್ ಮತಕ್ಕೆ ಹಿಂದಿರುವುದಾಗಿ ಘೋಷಿಸಿಕೊಂಡರೂ ಕೂಡ "ಆತ ಪಾದ್ರಿಗಳು ಮತ್ತು ಚರ್ಚಿನ ಮತ ಸಂಸ್ಕಾರಗಳಿಗೆ ಯಾವುದೇ ಬೆಲೆ ನೀಡುತ್ತಿರಲಿಲ್ಲ".<ref name="dmsmith_311">ಡಿ.ಎಮ್.ಸ್ಮಿತ್ 1982, p. 311</ref> ಈ ಹೊತ್ತಿಗೆ ಆತನು ಪೋಪ್ ಹಿಂದೆ ತನ್ನ ಬಗ್ಗೆ ಹೇಳಿದ್ದ "ತಾನು ಸಮಾಜವನ್ನು ಉದ್ಧಾರ ಮಾಡಲೋಸುಗ ದೇವರು ಕಳಿಸಿರುವ ವ್ಯಕ್ತಿ" ಎಂಬ ಹೇಳಿಕೆಯನ್ನು ಬಲವಾಗಿ ನಂಬತೊಡಗಿದ್ದನು. ಜತೆಗೇ ಆತನು ತನ್ನ ಮತ್ತು ಯೇಸುಕ್ರಿಸ್ತನ ನಡುವೆ ಸಮಾನಾಂತರ ವಿಚಾರಗಳನ್ನು ಕಲ್ಪಿಸಲು ತೊಡಗಿದನು.<ref name="dmsmith_311" /> ಮುಸೊಲಿನ ವಿಧವೆ ರೇಶೇಲ್ ತನ್ನ ಹೇಳಿಕೆಯಲ್ಲಿ ಆಕೆಯ ಪತಿಯು "ತನ್ನ ಕೊನೆಯ ವರುಷಗಳ ತನಕವೂ ಯಾವುದೇ ಧಾರ್ಮಿಕ ನಂಬಿಕೆಗಳನ್ನಿಟ್ಟುಕೊಂಡಿರಲಿಲ್ಲ" ಎಂದು ಹೇಳಿಕೆ ನೀಡಿದಳು.<ref name="rmussolini_131">ರೇಶೇಲ್ ಮುಸೊಲಿನಿ1974, p. 131</ref> ಮುಸೊಲಿನಿ ಸತ್ತು ಹನ್ನೆರಡು ವರ್ಷಗಳ ನಂತರ ಆತನಿಗೆ ಕ್ರಿಶ್ಚಿಯನ್ ವಿಧಿಯ ಮೂಲಕ ಸಂಸ್ಕಾರವನ್ನು ನಡೆಸಲಾಯಿತು.<ref name="rmussolini_135">ರೇಶೇಲ್ ಮುಸೊಲಿನಿ 1974, p. 135</ref>
 
===ಜನಾಂಗೀಯ ದೃಷ್ಟಿಕೋನ ===
"https://kn.wikipedia.org/wiki/ಬೆನಿಟೋ_ಮುಸೊಲಿನಿ" ಇಂದ ಪಡೆಯಲ್ಪಟ್ಟಿದೆ