ಹೊಯಿಸಳ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
 
No edit summary
೪ ನೇ ಸಾಲು:
 
ಹೊಯಿಸಳ ಮಕ್ಕಳ ಕವಿತೆಗಳ ಭಾಷೆ ತುಂಬಾ ಸರಳ. ಮಕ್ಕಳನ್ನು ಆಕರ್ಷಿಸುವ ಲಯವೈವಿಧ್ಯ, ವಸ್ತುವೈವಿಧ್ಯಗಳಿವೆ. ಅನೇಕ ಕವಿತೆಗಳಲ್ಲಿ ನವಿರಾದ ಹಾಸ್ಯಲೇಪವಿದೆ. ಆದ್ದರಿಂದ ಹೊಯಿಸಳರ ಪದ್ಯಗಳು ಈಗಲೂ ಮುದ್ದು ಪುಟಾಣಿಗಳಿಗೆ ಖುಶಿಕೊಡುವಂತಿದೆ.
 
==ಹೊಯಿಸಳರ ಕವಿತೆ==
'''ಪುಸ್ತಕ'''
* ಪುಸ್ತಕ ಮಾತನು ಹೇಳುತಿದೆ
ಚಿತ್ತವ ಹತ್ತಿಸಿ ಕೇಳು
ಒಳ್ಳೆಯ ಕಡೆಯಲಿ ಇಡು ನನ್ನ
ಬೀರೂ ಪೆಟ್ಟಿಗೆ ಬಲು ಚೆನ್ನ
ಬೀಳದೆ ಧೂಳು ಇಹಪರಿ ಮೇಲೆ
ಬೇರೊಂದಟ್ಟೆಯ ಹೊಂದಿಸು, ಮಗು
 
* ಜನಗಳ ಕಾಲಡಿ ಹಾಕದಿರು
ಕಿವಿಗಳ ನಿತ್ಯ ಮಡಿಸದಿರು
ಹಾಳೆಯ ಮಡಿಸಿ ಬೋರಲು ಇರಿಸಿ
ಕಷ್ಟಕೆ ಸಿಕ್ಕಿಸಬೇಡ, ಮಗು
 
* ನನ್ನಯ ತಿರುಳು ಕಾಡಿನದು
ನನ್ನಯ ಅರಿವು ನಾಡಿನದು
ಬೆಂಕಿಲಿ ಬೆಂದು ನೀರಲಿ ನೆಂದು
ಯಂತ್ರವ ಹೊಕ್ಕು ಬಂದೆ, ಮಗು
 
* ಏನೊಂದಾದರು ಕೇಳು, ಮಗು
ಯಾವಾಗೆಂದರೆ ಹೇಳುವೆನು
ಬೇಸರವಿಲ್ಲದೆ ಸೇವಿಪೆನಲ್ಲವೆ
ನನ್ನೇಕಿನ್ನೂ ನೋಯಿಸುವೆ?
 
* ತೂಕಡಿಸುತ್ತಾ ಮುಟ್ಟದಿರು
ಅರೆಗಣ್ಣಾಗಿರೆ ತೆರೆಯದಿರು
ಕಡ್ಡಿಯ ಸಿಕ್ಕಿ ತಲೆಯಡಿ ಅಡಕಿ
ಗೊರಕೆಯ ಹೊಡೆಯದೆ ಇರು ಮಗುವೆ
 
* ಮೇಜಿನ ಮೇಲೆ ಚೌಕವಿದೆ
ಮೊಗಮೇಲಾಗಿಡು, ಹೂವು ಇಡು
ಕಈಗಳ ತೊಳೆದು ಚೌಕದಿ ತೊಡೆದು
ಆಮೇಲೆನ್ನನು ಓದು ಮಗು
-ಚಂದಮಾಮ ಸಂಕಲನದಿಂದ
"https://kn.wikipedia.org/wiki/ಹೊಯಿಸಳ" ಇಂದ ಪಡೆಯಲ್ಪಟ್ಟಿದೆ