ಎಂ. ಕೆ. ಇಂದಿರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೨ ನೇ ಸಾಲು:
ಎಂ.ಕೆ.ಇಂದಿರಾ ಅವರ [[ಗೆಜ್ಜೆ ಪೂಜೆ]] [[ಫಣಿಯಮ್ಮ]] ಮತ್ತು [[ಪೂರ್ವಾಪರ]] ಎಂಬ ಕಾದಂಬರಿಗಳು ಚಲನಚಿತ್ರವಾಗಿವೆ. ಫಣಿಯಮ್ಮ ಚಿತ್ರವನ್ನು ನಿರ್ದೇಶಿಸಿದವರು ಶ್ರೀಮತಿ [[ಪ್ರೇಮಾ ಕಾರಂತ್]]. ಈ ಚಿತ್ರ ಅನೇಕ ಪ್ರಶಸ್ತಿಗಳನ್ನು ಗಳಿಸಿಕೊಂಡಿತು. ನಟಿ. [[ಎಲ್. ವಿ.ಶಾರದಾ]] ಈ ಚಿತ್ರದಲ್ಲಿ ಮುಖ್ಯ ಪಾತ್ರವನ್ನು ನಿರ್ವಹಿಸಿದ್ದರು. ಗೆಜ್ಜೆಪೂಜೆ ಕಾದಂಬರಿಯನ್ನು ದಿವಂಗತ [[ಪುಟ್ಟಣ್ಣ ಕಣಗಾಲ್]] ನಿರ್ದೇಶಿಸಿದ್ದರು.
 
===ಕಾದಂಬರಿಗಳು===
 
ಕನ್ನಡಸಾಹಿತ್ಯ ಕ್ಷೇತ್ರದಲ್ಲಿ ಪ್ರಸಿದ್ದ ಕಾದಂಬರಿಗಾರ್ತಿಯರಲ್ಲಿ ಒಬ್ಬರಾದ ಎಂ.ಕೆ.ಇಂದಿರ ಹುಟ್ಟಿದ್ದು (೧೯೧೭) ಮಲೆನಾಡಿನ ತೀರ್ಥಹಳ್ಳಿಯಲ್ಲಿ. ತಂದೆ ತರಿಕೆರೆ ಸೂರ್ಯನರಾಯಣ ತಾಯಿ ಬನಶಂಕರಮ್ಮ.ಮಕ್ಕಳ ಸಾಹಿತ್ಯದ ಪ್ರಸಿದ್ದರಾದ ಹೊಯ್ಸಳ, ಇವರ ಸೋದರಮಾವ. ಮಲೆನಾಡಿನ ಸಹ್ಯಾದ್ರಿಶ್ರೇಣಿ, ಭೀಮವೃಕ್ಶರಾಜಿ, ಹಕ್ಕಿಗಳ ಇಂಚರ, ಹಸಿರು .......ಇವೆಲ್ಲವೂ ಇಂದಿರ ಅವರ ಕಾದಂಬರಿಗಳಲ್ಲಿ ರಾರಾಜಿಸಿರುತ್ತವೆ. ಅವರ ಮೊಟ್ಟಮೊದಲ ಕಾದಂಬರಿ "ತುಂಗಭದ್ರ".ಈ ಕಾದಂಬರಿ ವಿಶ್ವವಿದ್ಯಾನಿಲಯದ ಪದವಿ ತರಗತಿಗೆ ಪಠ್ಯವಾಗಿತ್ತು.ನಂತರ "ಗೆಜ್ಜೆಪೂಜೆ", "ಸದಾನಂದ", "ನವರತ್ನ".....ಹೀಗೆ ಹಲವಾರು ಅವರ ಲೇಖನಿಯಿಂದ ಹೊರಬಂದವು.
* ತುಂಗಭದ್ರ
ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಸ್ಥಿತಿ, ವಿಧವಾವಿವಾಹ, ಬಾಲ್ಯವಿವಾಹ, ವಿಧವೆಯ ಗೋಳು, ಜಾತಿ ಪದ್ದತಿ ಇವೆಲ್ಲವೂ ಅವರ ಕಾದಂಬರಿಗಳಲ್ಲಿ ವ್ಯಕ್ತವಾಗುತ್ತಿತ್ತು.ಇವರ ಹಲವಾರು ಕೃತಿಗಳು ಅನ್ಯ ಭಾಷೆಗೂ ಅನುವಾದವಾಗಿದೆ. ಕಾದಂಬರಿಗಳಲ್ಲದೇ ಸುಮಾರು ನೂರೈವತ್ತು ಸಣ್ಣಕಥೆಗಳನ್ನೂ ಬರೆದಿದ್ದಾರೆ.ಇವರು ಒಟ್ಟೂ ಸುಮಾರು ನಲವತ್ತೊಂಬತ್ತು ಕಾದಂಬರಿಗಳು, ಹನ್ನೊಂದು ಕಥಾಸಂಕಲಗಳನ್ನು ಬರೆದಿದ್ದಾರೆ. "ಬಿಂದು" ಅರ್ಧಕ್ಕೇ ನಿಂತುಹೋದ ಆತ್ಮಕಥೆ.
* ಕೂಚುಭಟ್ಟ
 
ಕರ್ನಾಟಕ ಸಾಹಿತ್ಯ ಅಕೆಡಮಿ ಪುರಸ್ಕಾರ ಪಡೆದ ಇಂದಿರಾ ಅವರ ಕಾದಂಬರಿಗಳು:
* ಸದಾನಂದ
* ನವರತ್ನ
* ಫಣಿಯಮ್ಮ
 
ಚಲನಚಿತ್ರವಾಗಿರುವ ಕಾದಂಬರಿಗಳು:
* ಗೆಜ್ಜೆಪೂಜೆ
* ಮುಸುಕು
* ಪೂರ್ವಾಪರ
* ಗಿರಿಬಾಲೆ
* ಟು-ಲೆಟ್
* ಹೂಬಾಣ
* ಫಣಿಯಮ್ಮ
ಫಣಿಯಮ್ಮ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ದೊರೆಯಿತು. ಹಾಗೂ ಈ ಕೃತಿಯನ್ನು ತೇಜಸ್ವಿನಿ ನಿರಂಜನ ಇಂಗ್ಲಿಷ್ ಗೆ ಅನುವಾದ ಮಾಡಿದಾರೆ.
 
ಕಥಾಸಂಕಲನಗಳು:
* ಅಂಬರದ ಅಪ್ಸರೆ
* ನವರತ್ನ
 
===ಇನ್ನಿತರ ಕಾದಂಬರಿಗಳು=== :
* ಕೂಚುಬಟ್ಟ
* ಟೂ-ಲೇಟ್
* ತಗ್ಗಿನ ಮನೆ ಸೀತೆ
* ಮನ ತುಂಬಿದ ಮಡದಿ
* ಕಲಾದರ್ಶಿ
 
* ಗೆಜ್ಜೆಪೂಜೆ
ಸಾವಿತ್ರಮ್ಮ ದೇಜಗೌ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕೆಡಮಿ ಪ್ರಶಸ್ತಿ, 'ಸುರಗಿ' ಅಭಿನಂದನಾ ಗ್ರಂಥ ಸಮರ್ಪಣೆ, ಹೀಗೆ ಪ್ರೀತಿಯ ಗೌರವದ ಉಡುಗೊರೆಗಳನ್ನು ಪಡೆದ ಎಂ.ಕೆ.ಇಂದಿರಾ ಅಂಥಹ ಲೇಖಕಿಯನ್ನು ಪಡೆದ ನಮ್ಮ ಕನ್ನಡ ಸಾಹಿತ್ಯ ನಿಜಕ್ಕೂ ಧನ್ಯ.
 
 
 
 
"https://kn.wikipedia.org/wiki/ಎಂ._ಕೆ._ಇಂದಿರ" ಇಂದ ಪಡೆಯಲ್ಪಟ್ಟಿದೆ