ವಿದ್ಯುದಾವೇಶ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: thumb '''ವಿದ್ಯುದಾವೇಶ'''ವು ಕೆಲವು ಉಪಪರಮಾಣು ಕಣಗಳ ಒಂದು ಮೂಲಭೂತ ...
( ಯಾವುದೇ ವ್ಯತ್ಯಾಸವಿಲ್ಲ )

೦೩:೪೪, ೧೧ ಮೇ ೨೦೧೦ ನಂತೆ ಪರಿಷ್ಕರಣೆ

ವಿದ್ಯುದಾವೇಶವು ಕೆಲವು ಉಪಪರಮಾಣು ಕಣಗಳ ಒಂದು ಮೂಲಭೂತ ಸಂರಕ್ಷಿತ ಲಕ್ಷಣ, ಮತ್ತು ಇದು ಅವುಗಳ ವಿದ್ಯುತ್ಕಾಂತೀಯ ಅಂತರಕ್ರಿಯೆಯನ್ನು ನಿರ್ಧರಿಸುತ್ತದೆ. ವಿದ್ಯುದಾವೇಶಿತ ವಸ್ತುವು ವಿದ್ಯುತ್ಕಾಂತೀಯ ಕ್ಷೇತ್ರಗಳಿಂದ ಪ್ರಭಾವಿತವಾಗುತ್ತದೆ ಮತ್ತು ಅಂತಹ ಕ್ಷೇತ್ರಗಳನ್ನು ಸೃಷ್ಟಿಸುತ್ತದೆ. ಚಲಿಸುತ್ತಿರುವ ಆವೇಶ ಮತ್ತು ವಿದ್ಯುತ್ಕಾಂತೀಯ ಕ್ಷೇತ್ರದ ನಡುವಿನ ಅಂತರಕ್ರಿಯೆಯು, ನಾಲ್ಕು ಮೂಲಭೂತ ಬಲಗಳ ಪೈಕಿ ಒಂದಾದ, ವಿದ್ಯುತ್ಕಾಂತೀಯ ಬಲದ ಮೂಲವಾಗಿದೆ.