ಕುಂದಾದ್ರಿ ಬೆಟ್ಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: '''ಕುಂದಾದ್ರಿ ಬೆಟ್ಟ'''ವು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನಲ್ಲಿ ಇ...
 
No edit summary
೧ ನೇ ಸಾಲು:
'''ಕುಂದಾದ್ರಿ ಬೆಟ್ಟ'''ವು [[ಶಿವಮೊಗ್ಗ]] ಜಿಲ್ಲೆ [[ತೀರ್ಥಹಳ್ಳಿ]] ತಾಲೂಕಿನಲ್ಲಿ ಇದೆ. [[ತೀರ್ಥಹಳ್ಳಿ]]ಯಿಂದ [[ಆಗುಂಬೆ]] ಕಡೆ ಹೋಗುವಾಗ ಗುಡ್ಡೆಕೇರಿ ಎಂಬ ಗ್ರಾಮದಿಂದ ಸುಮಾರು ೯ ಕಿ.ಮೀ ದೂರದಲ್ಲಿ [[ಕುಂದಾದ್ರಿ]] ಬೆಟ್ಟವಿದೆ.
ಬೆಟ್ಟವನ್ನು ತಲುಪಲು ಡಾಂಬರು ರಸ್ತೆಯಿದೆ ಹಾಗು ನಡೆದು ಹೋಗಲು ಕಾಲು ದಾರಿ ಕೂಡ ಇದೆ. ಕುಂದಾದ್ರಿ ಬೆಟ್ಟವು [[ಜೈನ]]ರ ಪವಿತ್ರ ಯಾತ್ರಾ ಸ್ಥಳವಾಗಿದೆ. ಬೆಟ್ಟದ ಮೇಲೆ [[ಪಾರ್ಶ್ವನಾಥ]] ಚೈತ್ಯಾಲಯವಿದೆ. ಇಲ್ಲಿಗೆ ಪ್ರತಿ ವರ್ಶವರುಷ ಸಾವಿರಾರು ಪ್ರವಾಸಿಗರು ಬೇಟಿ ನೀಡುತ್ತಾರೆ ಹಾಗು ನೂರಾರು ಚಾರಣಿಗರು ಚಾರಣ ಮಾಡಲು ಬರುತ್ತಾರೆ. ಬೆಟ್ಟದ ಮೇಲಿನಿಂದ ಕಾಣುವ ಪ್ರಕೃತಿ ಸೌಂದರ್ಯ ಕಣ್ಣಿಗೆ ಹಬ್ಬವಾಗುತ್ತದೆ. ಎಲ್ಲಿ ನೋಡಿದರಲ್ಲಿ ದಟ್ಟ [[ಕಾಡು]], ತೋಟಗಳು, ಹೊಲ-ಗದ್ದೆಗಳು. ಬೆಟ್ಟಕ್ಕೆ ಬೇಟಿ ನೀಡುವವರು ಊಟ ಮತ್ತು ನೀರಿನ ವ್ಯವಸ್ಥೆ ಮಾಡಿಕೊಂಡು ಬಂದರೆ ಉತ್ತಮ.
 
==ಇತಿಹಾಸ==
 
ಕುಂದಾದ್ರಿ ಬೆಟ್ಟದಲ್ಲಿ ಕುಂದ ಕುಂದ ಸ್ವಾಮಿಗಳು ತಪಸ್ಸು ಮಾಡಿದರೆಂಬ ಪ್ರತೀತಿಯ ಹಿನ್ನೆಲೆಯಲ್ಲಿ ಈ ಬೆಟ್ಟಕ್ಕೆ ಕುಂದಾದ್ರಿ ಎಂಬ ಹೆಸರು ಬಂತು. ಭಾಷಾ ಶಾಸ್ತ್ರದ ನಿಟ್ಟಿನಲ್ಲಿ ನೋಡಿದರೆ, ಕನ್ನಡದಲ್ಲಿ ಕುಂದ ಎಂಬ ಪದಕ್ಕೆ ಎತ್ತರವಾದ ಗೋಡೆ ಎಂಬ ಅರ್ಥವೂ ಇರುವುದರಿಂದ, ಕುಂದದ ರೀತಿ ಇರುವ ಬೆಟ್ಟಕ್ಕೆ ಕುಂದಾದ್ರಿ ಎಂಬ ಹೆಸರು ಜನಬಳಕೆಯಲ್ಲಿ ಬಂದಿರಲೂಬಹುದು.
 
==ತಂಗುವುದು ಎಲ್ಲಿ?==
 
ಕುಂದಾದ್ರಿಯ ತುದಿಯಲ್ಲಿ ಒಂದು ದೇವಾಲಯ ಮತ್ತು ನೀರಿನ ಅನುಕೂಲಗಳು ಇರುವುದಾದರೂ, ಜನಸಾಮನ್ಯರಿಗೆ ತಂಗಲು ಸರಿಯಾದ ವ್ಯವಸ್ಥೆ ಇಲ್ಲವೆಂದೇ ಹೇಳಬಹುದು.
ಹಳೆಯ ಪ್ರವಾಸಿ ಮಂದಿರವು ಅವಶೇಷಗಳ ರೂಪದಲ್ಲಿದೆ(೨೦೦೮) ಮತ್ತು ಭದ್ರತೆ ಇಲ್ಲ.ಚಾರಣಿಗರು ಕ್ಯಾಂಪ್ ಮಾಡಬಹುದು, ಅಷ್ಟೆ. ಜನಸಾಮನ್ಯರು ಸಮೀಪದ ತೀರ್ಥಹಳ್ಳಿಯಲ್ಲಿ ತಂಗಬಹುದು ಅಥವಾ ಆಗುಂಬೆಯಲ್ಲೂ ತಂಗಬಹುದು.
 
[[Category: ಪ್ರವಾಸೋದ್ಯಮ]]
"https://kn.wikipedia.org/wiki/ಕುಂದಾದ್ರಿ_ಬೆಟ್ಟ" ಇಂದ ಪಡೆಯಲ್ಪಟ್ಟಿದೆ