ಸಿ. ರಾಜಗೋಪಾಲಚಾರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೭ ನೇ ಸಾಲು:
==ಕಾಂಗ್ರೆಸ್ಸಿನಲ್ಲಿ==
ಜವಹರಲಾಲ್ ನೆಹರೂ, ಸರ್ದಾರ ವಲ್ಲಭಭಾಯ್ ಪಟೇಲ್, ರಾಜೇಂದ್ರ ಪ್ರಸಾದ್ ಹಾಗೂ ಮೌಲಾನಾ ಅಬುಲ್ ಕಲಮ್ ಆಜಾದ್ ರೊಂದಿಗೆ ಸ್ವಾತಂತ್ರ್ಯ ಪೂರ್ವ ಭಾರತದ ಕಾಂಗ್ರೆಸ್ಸಿನ ಅತ್ಯುಚ್ಚ ನಾಯಕಮಣಿಗಳ ಪಂಕ್ತಿಯಲ್ಲಿ ರಾಜಾಜಿಯವರ ಹೆಸರೂ ಕೇಳಿಬರುತ್ತಿತ್ತು. ಸೇಲಂ ನ ಈ ಪ್ರಚಂಡ ವಕೀಲರನ್ನು ಒಂದು ಕಾಲದಲ್ಲಿ ಮಹಾತ್ಮಾ ಗಾಂಧಿಯವರ ಉತ್ತರಾಧಿಕಾರಿ ಎಂದೂ ಪರಿಗಣಿಸಲಾಗುತ್ತಿತ್ತು.
ರಾಜಾಜಿ ಮಹಾತ್ಮಾ ಗಾಂಧಿಯವರ ಬೀಗರೂ ಹೌದು - ರಾಜಾಜಿಯವರ ಮಗಳನ್ನು ಗಾಂಧಿಯವರ ಮಗನಿಗೆ ಕೊಟ್ಟಿತ್ತು. ಖ್ಯಾತ ಪತ್ರಕರ್ತ ರಾಜಮೋಹನ ಗಾಂಧಿ ಇವರಿಬ್ಬರ ಮೊಮ್ಮಗ. ಗಾಂಧಿಯವರ ಮರಣದವರೆಗೂ ಅವರ ನೆರಳಿನಲ್ಲೇ ಇದ್ದ ರಾಜಾಜಿ, ನೆಹರೂ ಮತ್ತು ಪಟೇಲರನ್ನು ಗಾಂಧಿಯವರ “ ತಲೆ, ಹೃದಯ ಮತ್ತು ಕೈಗಳು” ಎಂದೇ ಭಾವಿಸಲಾಗಿತ್ತು. ಇವರು ಮೂವರ ಪರಸ್ಪರ ಸಂಬಂಧ ಸಿಹಿ-ಕಹಿಯದಾಗಿದ್ದರೂ, ಗಾಂಧಿಯವ ವ್ಯಕ್ತಿತ್ವ ಹಾಗೂ ಎದುರಿಗಿದ್ದ ಒಂದೇ ಗುರಿ ಇವರನ್ನು ಒಟ್ಟುಗೂಡಿಸಿತ್ತು. ಆದರೂ ಇವರಿಗೆ ಪರಸ್ಪರ ಬಗ್ಯೆ ಅಪಾರ ಗೌರವವಿತ್ತು. ನೆಹರೂ ತಮ್ಮ ಆತ್ಮಕಥೆಯಲ್ಲಿ ರಾಜಾಜಿಯವರ “ ಪ್ರಖರ ಬುಧ್ಧಿಮತ್ತೆ, ನಿಸ್ಸ್ವಾರ್ಥ ಮನೋಭಾವ, ಹಾಗೂ ಅವರ ಪ್ರಚಂಡ ವಿಮರ್ಶಾ ಶಕ್ತಿ ಇವೆಲ್ಲವೂ ನಮ್ಮ ಗುರಿ ಸಾಧಿಸುವೆಡೆಯಲ್ಲಿ ದೊಡ್ಡ ಆಸ್ತಿಯಾಗಿತ್ತು” ಎಂದು ಬರೆಯುತ್ತಾರೆ.
1940ರ ದಶಕದಲ್ಲಿಯೇ ಭಾರತ ವಿಭಜಿತವಾಗುವ ಸಂಭವವನ್ನು ಮುಂಗಂಡ ಕಾಂಗ್ರೆಸ್ ನಾಯಕರುಗಳಲ್ಲಿ ರಾಜಾಜಿ ಒಬ್ಬರಾಗಿದ್ದರು. ಅಷ್ಟೇ ಅಲ್ಲ, ಹಾಗೆ ಅಸ್ತಿತ್ವಕ್ಕೆ ತರಲ್ಪಟ್ಟ ಪಾಕಿಸ್ತಾನವು ಇಪ್ಪತ್ತೈದು ವರ್ಷಗಳಲ್ಲಿಯೇ ಮತ್ತೊಮ್ಮೆ ಹೋಳಾಗುತ್ತದೆ ಎಂದೂ ಭವಿಷ್ಯ ನುಡಿದಿದ್ದರು ! ರಾಜಾಜಿ ತಮ್ಮ ರಾಜಕೀಯ ನೀತಿಗಳ ಉಗ್ರ ಸಮರ್ಥಕರಾಗಿದ್ದು, ಅವುಗಳ ಸಮರ್ಥನೆಯಲ್ಲಿ , ತಮ್ಮ ನಿಕಟವರ್ತಿಗಳೊಂದಿಗೂ ಸಾರ್ವಜನಿಕವಾಗಿ ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದಕ್ಕೆ ಹಿಂಜರೆಯುತ್ತಿರಲಿಲ್ಲ.
 
ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದಕ್ಕಾಗಿ ಬ್ರಿಟಿಷ್ ಸೆರೆವಾಸದ ರುಚಿ ಉಂಡ ರಾಜಾಜಿ ನಂತರ 1946ರಲ್ಲಿ ರಾಜಯಪಾಲರರಾಜ್ಯಪಾಲರ ಮಂಡಳಿಯ ಸದಸ್ಯರಾದರು. ಸ್ವಾತಂತ್ರ್ಯ ಪಡೆದ ನಂತರ, 1948ರಲ್ಲಿ ಮೌಂಟ್ ಬ್ಯಾಟನ್ನರ ಜಾಗದಲ್ಲಿ ಗವರ್ನರ್ ಜನರಲ್ ಎಂದು ನೇಮಕವಾಗಿ ( ಆ ಹುದ್ದೆಯನ್ನಲಂಕರಿಸಿದ ಏಕೈಕ ಭಾರತೀಯ) 1950, ಜನವರಿ 26ರಂದು ಭಾರತ ಗಣರಾಜ್ಯವಾಗುವವರೆಗೂ ಅದೇ ಹುದ್ದೆಯಲ್ಲಿ ಮುಂದುವರೆದರು. ಗವರ್ನರ್ ಜನರಲ್ ಹುದ್ದೆಯ ಜಾಗದಲ್ಲಿ ರಾಷ್ಟ್ರಪತಿಗಳ ಹಉದ್ದೆ ಬಂದು ರಾಜೇಂದ್ರ ಪ್ರಸಾದರು ಮೊದಲನೇ ರಾಷ್ಟ್ರಪತಿಗಳಾಗಿ ನೇಮಕವಾದರು.
 
ನೆಹರೂ ಮಂತ್ರಿಮಂಡಳದಲ್ಲಿ ಖಾತಾರಹಿತ ಮಂತ್ರಿಯಾಗಿ ನೇಮಕಗೊಂಡ ರಾಜಾಜಿ, ಪಟೇಲರ ನಿಧನದ ನಂತರ, ಗೃಹ ಮಂತ್ರಿಗಳಾದರು. 1952ರಿಂದ 1954ರವರೆಗೆ ಅವರು ಆಗಿನ ಮದ್ರಾಸ್ ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ಸರ್ಕಾರಿ ಪದವಿಗಳಿಂದ ಹೊರಬಂದ ಅವರು , ಭಾರತದ ಅತ್ಯುಚ್ಚ ಗೌರವ “ಭಾರತ ರತ್ನ” ವನ್ನು ಪಡೆದ ಮೊದಲ ಕೆಲವರಲ್ಲಿ ಒಬ್ಬರಾದರು.
 
== ಸ್ವತಂತ್ರ ಪಕ್ಷ ಸ್ಥಾಪನೆ==
ಕಾಂಗ್ರೆಸ್ ಸಕ್ರಿಯ ರಾಜಕೀಯದಿಂದ ನಿವೃತ್ತರಾದ ಮೇಲೆ, ರಾಜಾಜಿ, ನೆಹರೂ ಹಾಗೂ ಕಾಂಗ್ರೆಸ್ಸಿನ ಕಟು ಟೀಕಾಕಾರರಾದರು. 1950ರ ದಶಕದಲ್ಲಿ ಸ್ವತಂತ್ರ ಪಕ್ಷ ಸ್ಥಾಪಕರಲ್ಲಿ ಒಬ್ಬರಾದ ಅವರು, ನೆಹರೂರ ಸಮಾಜವಾದೀ ಧೋರಣೆಯು ಜನಪ್ರಯವಾಗಿದ್ದರೂ, ಲೈಸೆನ್ಸ್ ಪರ್ಮಿಟ್ ರಾಜ್ಯವನ್ನೂ ಹಾಗೂ ಅದರಿಂದ ಉಂಟಾಗುವ ಭ್ರಷ್ಟಾಚಾರ ಹಾಗೂ ದೇಶದ ಪ್ರಗತಿಯ ಧಕ್ಕೆಯನ್ನೂ ವಿರೋಧಿಸಿದರು. ತಮ್ಮ ಪತ್ರಿಕೆ ಸ್ವರಾಜ್ಯದಲ್ಲಿ ಅವರು ಹೀಗೆ ಬರೆಯುತ್ತಾರೆ:
"https://kn.wikipedia.org/wiki/ಸಿ._ರಾಜಗೋಪಾಲಚಾರಿ" ಇಂದ ಪಡೆಯಲ್ಪಟ್ಟಿದೆ