ಭಾರತದ ಇತಿಹಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: ko:인도의 역사
೪೧ ನೇ ಸಾಲು:
[[ಕಬ್ಬಿಣದ ಯುಗ]]ದ ಕಾಲದಲ್ಲಿ ಭಾರತೀಯ ಉಪಖಂಡದಲ್ಲಿ ಅನೇಕ ಸಣ್ಣಪುಟ್ಟ ರಾಜ್ಯಗಳು, ಸಂಸ್ಥಾನಗಳು ಹರಡಿಕೊಂಡಿದ್ದವು. ಸುಮಾರು ಕ್ರಿಪೂ. ೧೦೦೦ರಷ್ಟು ಹಿಂದಿನ ವೇದಕಾಲೀಯ ಸಾಹಿತ್ಯಗಳಲ್ಲಿಯೂ ಇವುಗಳ ಉಲ್ಲೇಖವಿದೆ. ಕ್ರಿ.ಪೂ ೫೦೦ರ ಸುಮಾರಿಗೆ, [[ಮಹಾಜನಪದ]]ಗಳೆಂದು ಕರೆಯಲಾಗುವ ಹದಿನಾರು ರಾಜ್ಯಗಳು ಮತ್ತು ‘ಗಣರಾಜ್ಯಗಳು’ [[ಅಫ್ಘಾನಿಸ್ತಾನ]]ದಿಂದ [[ಬಾಂಗ್ಲಾದೇಶ]]ದವರೆಗಿನ , ಗಂಗಾನದಿಯ ತಪ್ಪಲು ಪ್ರದೇಶವನ್ನೊಳಗೊಂಡಂತೆ , ವಿಶಾಲ ಪ್ರದೇಶವನ್ನು ಆಳುತ್ತಿದ್ದವು. ವೈದಿಕ ಸಾಹಿತ್ಯದಲ್ಲಿ ಉಲ್ಲೇಖವಾಗಿರುವ ಇನ್ನೂ ಅನೇಕ ಸಣ್ಣಪುಟ್ಟ ರಾಜ್ಯಗಳು ಉಪಖಂಡದ ಇತರ ಪ್ರದೇಶಗಳಲ್ಲಿ ರಾಜ್ಯವಾಳುತ್ತಿದ್ದಿರಬೇಕು ಎಂದು ಕಾಣುತ್ತದೆ. ಮಗಧ, ಕೋಸಲ, ಕುರು ಮತ್ತು ಗಾಂಧಾರ ಇವು ಮಹಾಜನಪದಗಳಲ್ಲಿ ಅತಿ ಶಕ್ತಿಶಾಲಿ ರಾಜ್ಯಗಳಾಗಿದ್ದವು (ಸಾಕ್ಶ್ಯಾಧಾರಗಳು ಬೇಕಾಗಿವೆ)., ರಾಜನು ರಾಜ್ಯಾಧಿಕಾರವನ್ನು ಯಾವುದೇ ವಿಧಾನದಿಂದ ಗಳಿಸಿದ್ದರೂ, ವೈದಿಕ ವರ್ಗವು ಸೂಕ್ತ ವಂಶಪರಂಪರೆಯನ್ನೂ, ಧಾರ್ಮಿಕ ಅಧಿಕಾರವನ್ನೂ ಸೃಷ್ಟಿಸಿ, ಅವನಿಗೆ ದೈವಿಕ ಮೂಲವನ್ನು ಆರೋಪಿಸುತ್ತ , ರಾಜ್ಯಾಡಳಿತದ ಹಕ್ಕನ್ನು ಸಕ್ರಮವಾಗಿಸುತ್ತಿತ್ತು. ಅಂದಿನ ರಾಜಕೀಯ ವ್ಯಕ್ತಿತ್ವಗಳ ಬಗ್ಯೆ ವೇದ ಮತ್ತು ಪುರಾಣಗಳಲ್ಲಿನ ಉಲ್ಲೇಖಗಳು ಎಷ್ಡರಮಟ್ಟಿಗೆ ಪ್ರಾತಿನಿಧಿಕವಾಗಿವೆ ಎಂಬುದು ವಿವಾದಾಸ್ಪದವಾಗಿದೆ. ಉತ್ತರ ಭಾರತದ ಜನಸಾಮಾನ್ಯರ ಆಡುಭಾಷೆ ಪ್ರಾಕೃತವಾಗಿದ್ದರೆ, ವಿದ್ಯಾವಂತ ವರ್ಗ [[ಸಂಸ್ಕೃತ]]ವನ್ನು ಉಪಯೋಗಿಸುತ್ತಿತ್ತು. ಹಿಂದೂ ಧಾರ್ಮಿಕ ವಿಧಿವಿಧಾನಗಳು ಸಂಕೀರ್ಣವಾಗಿದ್ದು, ಅವುಗಳನ್ನು ನೆರವೇರಿಸುವುದು ಕೇವಲ ವೈದಿಕ ವರ್ಗದವರಿಗೆ ಮಾತ್ರ ಸಾಧ್ಯವಾಗಿತ್ತು.
[[ತತ್ತ್ವಶಾಸ್ತ್ರ]]ದ ಪ್ರಥಮಾವಸ್ಥೆ ಎಂದು ಪರಿಗಣಿಸಲಾದ [[ಉಪನಿಷತ್ತು]]ಗಳ ರಚನೆಗೆ ಮೊದಲಾದದ್ದು ಇದೇ ಕಾಲದಲ್ಲಿ ಎಂದು ಊಹಿಸಲಾಗಿದೆ. [[ಭಾರತೀಯ ತತ್ತ್ವ ಶಾಸ್ತ್ರ]]ದ ಮೇಲೆ ಅಗಾಧ ಪರಿಣಾಮ ಬೀರಿದ ಈ ಗ್ರಂಥಗಳ ರಚನೆಯಾದ ಈ ಕಾಲದಲ್ಲಿಯೇ, [[ಬೌದ್ಧ ಧರ್ಮ]] ಮತ್ತು [[ಜೈನ ಧರ್ಮ]]ಗಳೂ ಬೆಳವಣಿಗೆಯಾಗುತ್ತಿದ್ದವು. ಪುರಾತನ ಗ್ರೀಸಿನಂತೆ, ಈ ಕಾಲವನ್ನೂ ವೈಚಾರಿಕತೆಯ ಸುವರ್ಣಯುಗ ಎಂದು ಕರೆಯಬಹುದಾಗಿದೆ. ಭುದ್ಧನ ಜನನ ಕಿ.ಪು೧೮೮೭ರಲ್ಲಿ ಅಗಿ ಕಿ.ಪು೧೮೦೯ರಲ್ಲಿ ನಿಧನ ಹೊಂದಿದ.ಇವನಿಂದ[[ಬೌದ್ಧ ಧರ್ಮ]]ದ ಸ್ಥಾಪನೆಯಾಯಿತು. ಇದನ್ನು ಮೊದಮೊದಲು [[ವೈದಿಕ ಧರ್ಮ]]ದ ಅಂಗವೆಂದೇ ಉದ್ದೇಶಿಸಲಾಗಿತ್ತು. ಅದೇ ಸರಿಸುಮಾರಿಗೆ, ಕ್ರಿ.ಪೂ. ಆರನೆಯ ಶತಮಾನದಲ್ಲಿ [[ಮಹಾವೀರ]]ನು [[ಜೈನ ಧರ್ಮ]]ವನ್ನು ಸ್ಥಾಪಿಸಿದನುಪ್ರಚಾರ ಮಾಡಿದನು (ಮಹಾವೀರನು ಜೈನ ಧರ್ಮವನ್ನು ಸ್ಥಾಪಿಸಲಿಲ್ಲ ಅವನು ಜೈನ ಧರ್ಮದ ೨೪ನೇ ತಿರ್ಥಂಕರ. ಈ ಎರಡೂ ಧರ್ಮಗಳ ತತ್ತ್ವಗಳು ಸರಳವಾಗಿದ್ದು , ಅವುಗಳನ್ನು ಪ್ರಾಕೃತದಲ್ಲಿ ಪ್ರಸಾರ ಮಾಡಿದ್ದರಿಂದ ಜನಸಾಮಾನ್ಯರ ಮನ್ನಣೆ ಪಡೆಯಲು ಸಾಧ್ಯವಾಯಿತು.[[ಜೈನ ಧರ್ಮ]]ದ ಪ್ರಭಾವ ಭೌಗೋಳಿಕವಾಗಿ ಸೀಮಿತವಾಗಿದ್ದರೂ , ಬೌದ್ಧ ಸನ್ಯಾಸಿ, ಸನ್ಯಾಸಿನಿಯರ ಪ್ರಚಾರದ ದೆಸೆಯಿಂದ , ಬೌದ್ಧ ಧರ್ಮವು ಮಧ್ಯ ಏಶಿಯಾ, ಪೂರ್ವ ಏಶಿಯಾ, [[ಟಿಬೆಟ್]], [[ಶ್ರೀಲಂಕಾ]] ಮತ್ತು ಆಗ್ನೇಯ ಏಶಿಯಾದಷ್ಟು ದೂರದವರೆಗೂ ಹಬ್ಬಿತು.
[[ಜೈನ ಧರ್ಮ]] ಮತ್ತು [[ಬೌದ್ಧ ಧರ್ಮ]] ಸ್ಥಾಪನೆಯಾದ ಈ ಕಾಲದ ಇತಿಹಾಸದ ದಾಖಲೆಗಳು ವಿರಳವಾಗಿದ್ದರೂ, [[ಮಹಾಜನಪದ]]ಗಳನ್ನು ಅದೇ ಕಾಲದಲ್ಲಿ [[ಮೆಡಿಟರೇನಿಯನ್]] ಪ್ರದೇಶದಲ್ಲಿದ್ದ ಪುರಾತನ ಗ್ರೀಕ್ ರಾಜ್ಯಗಳಿಗೆ ಹೋಲಿಸಬಹುದಾಗಿದೆ. [[ಮಹಾಜನಪದ]]ಗಳ ಕಾಲದಲ್ಲಿ ಪ್ರಾರಂಭವಾದ ತತ್ತ್ವಶಾಸ್ತ್ರವು ಸಂಪೂರ್ಣ ಪೂರ್ವ ಜಗತ್ತಿನ ನಂಬಿಕೆ, ಶ್ರದ್ಧೆಗಳಿಗೆ ತಳಹದಿಯಾದರೆ, ಅದೇ ಕಾಲದಲ್ಲಿ ಪುರಾತನ ಗ್ರೀಸಿನಲ್ಲಿ ಉಗಮವಾದ ತತ್ತ್ವಶಾಸ್ತ್ರವು ಸಂಪೂರ್ಣ ಪಶ್ಚಿಮ ಜಗತ್ತಿನ ನಂಬಿಕೆಗಳಿಗೆ ಅಡಿಗಲ್ಲಾಯಿತು. ಪರ್ಷಿಯಾ ಮತ್ತು ಗ್ರೀಸ್ ದೇಶಗಳಿಂದ ಆಕ್ರಮಣದೊಂದಿಗೆ ಮತ್ತು ಮಗಧದಲ್ಲಿ ಸಂಪೂರ್ಣ ಭಾರತದದುದ್ದಕ್ಕೂ ಹಬ್ಬಿದ ಮಹಾಸಾಮ್ರಾಜ್ಯದ ಉದಯದೊಂದಿಗೆ , ಈ ಕಾಲದ ಸಮಾಪ್ತಿಯಾಯಿತು.
 
"https://kn.wikipedia.org/wiki/ಭಾರತದ_ಇತಿಹಾಸ" ಇಂದ ಪಡೆಯಲ್ಪಟ್ಟಿದೆ