"ಮಲ್ಟಿಮೀಡಿಯಾ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
robot Adding: ta:பல்லூடகம்; cosmetic changes
ಚು
ಚು (robot Adding: ta:பல்லூடகம்; cosmetic changes)
default [[Sound recording and reproduction]]
desc none
</imagemap>[[Fileಚಿತ್ರ:C5.ogg|150px|noicon]]</center> ||<center><imagemap>
Image:Praktica.jpg|80px
default [[Image]]
 
 
== ಮಲ್ಟಿಮೀಡಿಯಾದ ವರ್ಗೀಕರಣ ==
'''ರೇಖಾತ್ಮಕ''' (ಲೀನಿಯರ‍್) ಮತ್ತು '''ರೇಖಾತ್ಮಕವಲ್ಲದ''' (ನಾನ್-ಲೀನಿಯರ‍್) ವರ್ಗಗಳು ಎಂಬುದಾಗಿ ಮಲ್ಟಿಮೀಡಿಯಾವನ್ನು ಸ್ಥೂಲವಾಗಿ ವಿಭಜಿಸಬಹುದು. [[ಚಲನಚಿತ್ರದ ಪ್ರಸ್ತುತಿ]]ಯೊಂದರಂತೆ ವೀಕ್ಷಕನಿಗೆ ಯಾವುದೇ ನಿರ್ದೇಶನಾತ್ಮಕ ನಿಯಂತ್ರಣದ ಅವಕಾಶವಿಲ್ಲದೆಯೇ ರೇಖಾತ್ಮಕ ಕ್ರಿಯಾಶೀಲ ಹುರುಳು ಮುಂದುವರಿಯುತ್ತದೆ. [[ಕಂಪ್ಯೂಟರ್‌ ಆಟ]]ವೊಂದರಲ್ಲಿ ಬಳಕೆಯಾದಂತೆ ಅಥವಾ ಸ್ವಯಂ-ವೇಗದ [[ಕಂಪ್ಯೂಟರ್‌ ಆಧರಿತ ತರಬೇತಿ]]ಗಳಲ್ಲಿ ಬಳಕೆಯಾಗುವ ರೀತಿಯಲ್ಲಿ ಮುನ್ನಡೆಯನ್ನು ನಿಯಂತ್ರಿಸಲು, ಬಳಕೆದಾರ [[ಪ್ರಭಾವಿ ಕ್ರಿಯಾಶಕ್ತಿ]]ಯನ್ನು ರೇಖಾತ್ಮಕವಲ್ಲದ ಹುರುಳು ಒದಗಿಸುತ್ತದೆ. ರೇಖಾತ್ಮಕವಲ್ಲದ ಹುರುಳಿಗೆ [[ಅಧಿಕಮಾಧ್ಯಮ]]ವು ಒಂದು ಉದಾಹರಣೆಯಾಗಿದೆ.
 
 
 
== ಮಲ್ಟಿಮೀಡಿಯಾದ ಪ್ರಮುಖ ಗುಣಲಕ್ಷಣಗಳು ==
[[ಸಂಗೀತ ಸಾಧನ]]ವೊಂದರ ಅಂದರೆ, ಮೀಡಿಯಾ ಪ್ಲೇಯರ‍್ನ ನೆರವಿನೊಂದಿಗೆ ಸ್ಥಳೀಯವಾಗಿ, [[ಬಿಂಬಿಸುವ]], [[ಪ್ರಸಾರ ಮಾಡುವ]], ಅಥವಾ ಚಾಲನೆ ನೀಡುವ ಮೂಲಕ '''ಮಲ್ಟಿಮೀಡಿಯಾ ಪ್ರಸ್ತುತಿಗಳನ್ನು''' [[ವೇದಿಕೆ]]ಯೊಂದರ ಮೇಲೆ ಖುದ್ದಾಗಿ ವೀಕ್ಷಿಸಬಹುದು. ಸದರಿ [[ಪ್ರಸರಣ]]ವು ಒಂದು ಪ್ರತ್ಯಕ್ಷ ಅಥವಾ ಧ್ವನಿಮುದ್ರಿತ ಮಲ್ಟಿಮೀಡಿಯಾ ಪ್ರಸ್ತುತಿಯಾಗಿರಬಹುದು. ಪ್ರಸರಣಗಳು ಹಾಗೂ ಧ್ವನಿಮುದ್ರಣಗಳು [[ಸದೃಶಿ]] (ಅನಲಾಗ್) ಸ್ವರೂಪದಲ್ಲಿರಬಹುದು ಅಥವಾ [[ಅಂಕೀಯ]] (ಡಿಜಿಟಲ್‌) ವಿದ್ಯುನ್ಮಾನ ಮಾಧ್ಯಮ ತಂತ್ರಜ್ಞಾನದ ಸ್ವರೂಪದಲ್ಲಿರಬಹುದು. ಅಂಕೀಯ [[ಆನ್‌ಲೈನ್‌]] ಮಲ್ಟಿಮೀಡಿಯಾವನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು ಅಥವಾ [[ಪ್ರವಹಿಸಲು ಅನುವು ಮಾಡಬಹುದು]]. ಪ್ರವಹಿಸುವ ಮಲ್ಟಿಮೀಡಿಯಾವು ಪ್ರತ್ಯಕ್ಷ ಸ್ವರೂಪದಲ್ಲಿರಬಹುದು ಅಥವಾ ಕೋರಿಕೆಯ-ಮೇರೆಗೆ ಬರಬಹುದು.
 
 
 
== ಪರಿಭಾಷೆ ==
 
=== ಪದದ ಇತಿಹಾಸ ===
 
 
 
 
=== ಪದದ ಬಳಕೆ ಮತ್ತು ಸಂದರ್ಭ ===
ಮಾಧ್ಯಮಗಳು (ಮೀಡಿಯಾ) ಎಂಬುದು ಮಾಧ್ಯಮ (ಮೀಡಿಯಂ) ಎಂಬುದರ ಬಹುವಚನವಾಗಿರುವುದರಿಂದ, [[ಶ್ರವ್ಯ CDಗಳ]] ಒಂದು ಸಂಗ್ರಹದಂಥ ಮಾಧ್ಯಮಗಳ ಕೇವಲ ಒಂದು ಸ್ವರೂಪದ ಬಹು-ಸಂಭವಿಸುವಿಕೆಯನ್ನು ವಿವರಿಸಲು "ಬಹು" ಎಂಬ ಪದವನ್ನು ಬಳಸಿದರೆ, "ಮಲ್ಟಿಮೀಡಿಯಾ" ಎಂಬುದು ಒಂದು [[ಶಬ್ದಾಧಿಕ್ಯ]]ವಾಗಿ ಪರಿಣಮಿಸುತ್ತದೆ. ಆದ್ದರಿಂದ ಮಾಧ್ಯಮ ಮತ್ತು ಹುರುಳಿನ '''ಬಹು ನಮೂನೆಗಳನ್ನು''' ವಿವರಿಸಲು "ಮಲ್ಟಿಮೀಡಿಯಾ" ಎಂಬ ಪದವನ್ನು ಏಕಮಾತ್ರವಾಗಿ ಅಥವಾ ಪ್ರತ್ಯೇಕವಾಗಿ ಬಳಸುವುದು ಮುಖ್ಯವಾಗಿರುತ್ತದೆ.
 
 
 
== ಬಳಕೆ ==
 
 
[[Fileಚಿತ್ರ:StevenKooninBP20050222 CopyrightKaihsuTai.jpg|thumb|right|ಪವರ್‌ಪಾಯಿಂಟ್‌ ಬಳಸಿಕೊಂಡಿರುವ ಒಂದು ಪ್ರಸ್ತುತಿ.ಸಾಂಸ್ಥಿಕ ಪ್ರಸ್ತುತಿಗಳು ಮೀಡಿಯಾ ಹುರುಳು ಎಲ್ಲಾ ಸ್ವರೂಪಗಳನ್ನೂ ಸಂಯೋಜಿಸಬಹುದು.]]
[[Fileಚಿತ್ರ:AC89-0437-20 a.jpeg|right|thumb|ಮಲ್ಟಿಮೀಡಿಯಾ ಹುರುಳನ್ನು ಆಭಾಸವಾಸ್ತವತೆಯು ಬಳಸುತ್ತದೆ. ಮಲ್ಟಿಮೀಡಿಯಾದ ಅನ್ವಯಿಕೆಗಳು ಹಾಗೂ ವಿತರಣಾ ವೇದಿಕೆಗಳು ವಸ್ತುತಃ ಸೀಮಾತೀತವಾಗಿವೆ.]]
[[Fileಚಿತ್ರ:VVO Multimedia-Terminal 1.JPG|thumb|right|VVO ಮಲ್ಟಿಮೀಡಿಯಾ-ಡ್ರೆಸ್ಡನ್‌ WTCಯಲ್ಲಿನ (ಜರ್ಮನಿ) ತಾಣ]]
ಮಲ್ಟಿಮೀಡಿಯಾವು ತನ್ನ ಅನ್ವಯಿಕೆಯನ್ನು ಈ ಕೆಳಗಿನ ಹಲವಾರು ಕ್ಷೇತ್ರಗಳಲ್ಲಿ ಕಂಡುಕೊಂಡಿದೆಯಾದರೂ, ಕೇವಲ ಅಷ್ಟಕ್ಕೇ ಅದು ಸೀಮಿತಗೊಂಡಿಲ್ಲ. ಅಂಥ ಕೆಲವು ಕ್ಷೇತ್ರಗಳೆಂದರೆ [[ಜಾಹೀರಾತುಗಳು]], [[ಕಲೆ]], [[ಶಿಕ್ಷಣ]], [[ಮನರಂಜನೆ]], [[ಎಂಜಿನಿಯರಿಂಗ್‌]], [[ವೈದ್ಯಶಾಸ್ತ್ರ]], [[ಗಣಿತಶಾಸ್ತ್ರ]], [[ವ್ಯವಹಾರ]], [[ವೈಜ್ಞಾನಿಕ ಸಂಶೋಧನೆ]] ಮತ್ತು [[ಪ್ರದೇಶದ ಪ್ರಾಪಂಚಿಕ ಅನ್ವಯಿಕೆಗಳು]], ನೋಡಿ ಬ್ಯಾನರ್ಜಿ &amp; ಘೋಷ್‌ (2010). ಹಲವಾರು ಉದಾಹರಣೆಗಳು ಈ ಕೆಳಕಂಡಂತಿವೆ:
 
 
 
==== ಸೃಜನಶೀಲ ಉದ್ಯಮಗಳಲ್ಲಿನ ಬಳಕೆ ====
[[ಸೃಜನಶೀಲ ಉದ್ಯಮಗಳು]] ಮಲ್ಟಿಮೀಡಿಯಾವನ್ನು ವೈವಿಧ್ಯಮಯ ಉದ್ದೇಶಗಳಿಗಾಗಿ ಬಳಸುತ್ತವೆ. ಲಲಿತಕಲೆಗಳಿಂದ ಮನರಂಜನೆಯವರೆಗೆ, ಮನರಂಜನೆಯಿಂದ ವಾಣಿಜ್ಯ ಕಲೆಯವರೆಗೆ, ವಾಣಿಜ್ಯ ಕಲೆಯಿಂದ [[ಪತ್ರಿಕೋದ್ಯಮ]]ದವರೆಗೆ, ಪತ್ರಿಕೋದ್ಯಮದಿಂದ ಮಾಧ್ಯಮ ಮತ್ತು ತಂತ್ರಾಂಶ ಸೇವೆಗಳವರೆಗಿನ, ಈ ಕೆಳಗೆ ಪಟ್ಟಿ ಮಾಡಲಾದ ಉದ್ಯಮಗಳ ಪೈಕಿ ಯಾವುದಕ್ಕಾದರೂ ಮಲ್ಟಿಮೀಡಿಯಾದ ಬಳಕೆಯಾಗುತ್ತದೆ. ಸ್ವತಂತ್ರ ಅಥವಾ ಪ್ರತ್ಯೇಕ ಮಲ್ಟಿಮೀಡಿಯಾ ವಿನ್ಯಾಸಗಾರನೊಬ್ಬ ತನ್ನ ವೃತ್ತಿಜೀವನದಾದ್ಯಂತ ತನ್ನ ಕ್ಷೇತ್ರದ ಹಲವು ವಲಯಗಳಿಗೆ ವ್ಯಾಪಿಸಿಕೊಳ್ಳಬಹುದು. ತಾಂತ್ರಿಕ ವಿಷಯದಿಂದ ಮೊದಲ್ಗೊಂಡು ವಿಶ್ಲೇಷಣಾತ್ಮಕ ವಿಷಯದವರೆಗೆ, ಅಲ್ಲಿಂದ ಸೃಜನಶೀಲ ವಿಷಯದವರೆಗೆ ಅವರ ಕುಶಲತೆಗಳಿಗೆ ಸಂಬಂಧಿಸಿದ ಮನವಿಯು ಇರಬಹುದು.
 
 
 
===== ವಾಣಿಜ್ಯ ಬಳಕೆ =====
ವಾಣಿಜ್ಯ ಕಲಾವಿದರಿಂದ ಬಳಸಲ್ಪಡುತ್ತಿರುವ ವಿದ್ಯುನ್ಮಾನದ [[ಹಳೆಯ]] ಮತ್ತು [[ಹೊಸ ಮಾಧ್ಯಮ]]ಗಳ ಪೈಕಿ ಬಹುಪಾಲು ಮಲ್ಟಿಮೀಡಿಯಾವೇ ಆಗಿದೆ. [[ಜಾಹೀರಾತು ನೀಡಿಕೆ]]ಯಲ್ಲಿ ಫಕ್ಕನೆ ಸೆಳೆದುಕೊಳ್ಳಲು ಹಾಗೂ ಗಮನವನ್ನು ಇಡಲು ರೋಮಾಂಚಕ ಪ್ರಸ್ತುತಿಗಳನ್ನು ಬಳಸಲಾಗುತ್ತದೆ. ವ್ಯವಹಾರದಿಂದ ವ್ಯವಹಾರಕ್ಕೆ ನಡೆಯುವ ಸಂವಹನೆಗಳು, ಮತ್ತು ಅಂತರ ಕಚೇರಿಯ ಸಂವಹನೆಗಳು ಬಹುಪಾಲು [[ಸೃಜನಶೀಲ ಸೇವೆಗಳ]] ಸಂಸ್ಥೆಗಳಿಂದ ಅಭಿವೃದ್ಧಿಗೊಳಿಸಲ್ಪಡುತ್ತವೆ. ಪರಿಕಲ್ಪನೆಗಳನ್ನು ಮಾರಾಟ ಮಾಡಲು ಅಥವಾ ತರಬೇತಿ ಕಾರ್ಯಕ್ರಮದಲ್ಲಿ ಹುರುಪು ತುಂಬಲು, ಕೇವಲ ಸರಳವಾದ ಚಿತ್ರಫಲಕ (ಸ್ಲೈಡ್‌) ಪ್ರದರ್ಶನಗಳಿಗೆ ಬದಲಾಗಿ ತಾಂತ್ರಿಕವಾಗಿ ಮುಂದುವರಿದ ಮಲ್ಟಿಮೀಡಿಯಾ ಪ್ರಸ್ತುತಿಗಳನ್ನು ಬಳಸುವುದು ಇಲ್ಲಿನ ವಿಶೇಷವೆನ್ನಬಹುದು.
 
 
 
===== ಮನರಂಜನೆ ಮತ್ತು ಲಲಿತಕಲೆಗಳಲ್ಲಿನ ಬಳಕೆ =====
ಇದರ ಜೊತೆಗೆ, ಮಲ್ಟಿಮೀಡಿಯಾವು ಮನರಂಜನಾ ಉದ್ಯಮದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತದೆ. ಅದರಲ್ಲೂ ವಿಶೇಷವಾಗಿ ಚಲನಚಿತ್ರಗಳು ಮತ್ತು ಅನಿಮೇಷನ್‌ಗಳಲ್ಲಿನ [[ವಿಶೇಷ ಪರಿಣಾಮಗಳನ್ನು]] ಅಭಿವೃದ್ಧಿಪಡಿಸಲು ಮಲ್ಟಿಮೀಡಿಯಾವನ್ನು ಹೆಚ್ಚು ಹೆಚ್ಚು ಬಳಸಲಾಗುತ್ತದೆ.
 
 
 
==== ಶಿಕ್ಷಣದಲ್ಲಿನ ಬಳಕೆ ====
[[ಶಿಕ್ಷಣ]] ಕ್ಷೇತ್ರದಲ್ಲಿ, [[ಕಂಪ್ಯೂಟರ್‌-ಆಧರಿತ ತರಬೇತಿ]] ಶಿಕ್ಷಣಕ್ರಮಗಳು (ಕಂಪ್ಯೂಟರ್‌ ಬೇಸ್ಡ್‌ ಟ್ರೇನಿಂಗ್‌ ಕೋರ್ಸಸ್‌ ಅಥವಾ CBTಗಳೆಂದೇ ಇವು ಜನಪ್ರಿಯ) ಮತ್ತು ವಿಶ್ವಕೋಶ ಹಾಗೂ ಪಂಚಾಂಗಗಳಂಥ ಪರಾಮರ್ಶನ ಪುಸ್ತಕಗಳನ್ನು ತಯಾರಿಸಲು ಮಲ್ಟಿಮೀಡಿಯಾವನ್ನು ಬಳಸಲಾಗುತ್ತದೆ. ವೈವಿಧ್ಯಮಯ ಮಾಹಿತಿ ಕ್ರಮವ್ಯವಸ್ಥೆಗಳಲ್ಲಿನ ಪ್ರಸ್ತುತಿಗಳ ಒಂದು ಸರಣಿ, ನಿರ್ದಿಷ್ಟ ವಿಷಯವೊಂದರ ಕುರಿತಾದ ಪಠ್ಯ, ಮತ್ತು ಸಂಬಂಧಿಸಿದ ಚಿತ್ರಸರಣಿಗಳ ಮೂಲಕ ಬಳಕೆದಾರನು ಅವಲೋಕನವನ್ನು ಮಾಡಲು CBTಯೊಂದು ಅವಕಾಶ ಮಾಡಿಕೊಡುತ್ತದೆ. ಶಿಕ್ಷಣವನ್ನು ಮನರಂಜನೆಯೊಂದಿಗೆ ಸಂಯೋಜಿಸುವುದನ್ನು, ಅದರಲ್ಲೂ ವಿಶೇಷವಾಗಿ ಮಲ್ಟಿಮೀಡಿಯಾ ಮನರಂಜನೆಯನ್ನು ವಿವರಿಸಲು [[ಶಿಕ್ಷಣರಂಜನೆ]] ಎಂಬ ಅನೌಪಚಾರಿಕ ಪದವನ್ನು ಬಳಸಲಾಗುತ್ತದೆ.
 
 
 
==== ಎಂಜಿನಿಯರಿಂಗ್‌ ಕ್ಷೇತ್ರದಲ್ಲಿನ ಬಳಕೆ ====
ಮನರಂಜನೆಯಿಂದ ಮೊದಲ್ಗೊಂಡು ಸೇನಾ ಅಥವಾ ಕೈಗಾರಿಕಾ ತರಬೇತಿಯಂಥ [[ತರಬೇತಿ]]ಯವರೆಗಿನ ಯಾವುದೇ ಕ್ಷೇತ್ರಕ್ಕಾಗಿರುವ [[ಕಂಪ್ಯೂಟರ್‌ ಅನುಕರಣಗಳಲ್ಲಿ]] ಮಲ್ಟಿಮೀಡಿಯಾವನ್ನು [[ಸಾಫ್ಟ್‌ವೇರ‍್ ಎಂಜಿನಿಯರು]]ಗಳು ಬಳಸಬಹುದು. [[ತಂತ್ರಾಂಶ ಅಂತರವಸ್ತು]]ಗಳಿಗಾಗಿರುವ (ಅಂದರೆ, ಸಾಫ್ಟ್‌ವೇರ‍್ ಇಂಟರ್‌ಫೇಸ್‌ಗಳಿಗಾಗಿರುವ) ಮಲ್ಟಿಮೀಡಿಯಾವನ್ನು [[ಸೃಜನಶೀಲ ಕಸುಬುದಾರ]]ರುಗಳು ಮತ್ತು ಸಾಫ್ಟ್‌ವೇರ‍್ ಎಂಜಿನಿಯರುಗಳ ನಡುವಿನ ಒಂದು ಸಹೋದ್ಯಮವಾಗಿ ಬಹುಪಾಲು ಮಾಡಲಾಗುತ್ತದೆ.
 
 
 
==== ಉದ್ಯಮದಲ್ಲಿನ ಬಳಕೆ ====
[[ಔದ್ಯಮಿಕ ವಲಯ]]ದಲ್ಲಿ, ಷೇರುದಾರರು, ಮೇಲಧಿಕಾರಿಗಳು ಮತ್ತು ಸಹೋದ್ಯೋಗಿಗಳಿಗೆ ಮಾಹಿತಿಯನ್ನು ಸಾದರಪಡಿಸುವಲ್ಲಿ ನೆರವಾಗುವ ಒಂದು ಮಾರ್ಗವಾಗಿ ಮಲ್ಟಿಮೀಡಿಯಾವನ್ನು ಬಳಸಲಾಗುತ್ತದೆ. ವಸ್ತುತಃ ಸೀಮೆಯಿಲ್ಲದ ವೆಬ್‌-ಆಧರಿತ ತಂತ್ರಜ್ಞಾನದ ಮೂಲಕ ಪ್ರಪಂಚದಾದ್ಯಂತ ನೌಕರರಿಗೆ ತರಬೇತಿ ನೀಡಲು, ಜಾಹೀರಾತು ನೀಡಿಕೆಗೆ ಅನುವು ಮಾಡಲು ಹಾಗೂ ಉತ್ಪನ್ನಗಳನ್ನು ಮಾರಾಟ ಮಾಡಲೂ ಸಹ ಮಲ್ಟಿಮೀಡಿಯಾವು ಸಹಾಯಕಾರಿಯಾಗಿದೆ.
 
 
 
==== ಗಣಿತೀಯ ಮತ್ತು ವೈಜ್ಞಾನಿಕ ಸಂಶೋಧನೆಯಲ್ಲಿನ ಬಳಕೆ ====
[[ಗಣಿತೀಯ]] ಮತ್ತು [[ವೈಜ್ಞಾನಿಕ ಸಂಶೋಧನೆ]]ಯಲ್ಲಿ, ಮಾದರಿ ನಿರೂಪಣೆ ಮತ್ತು ಅನುಕರಣ ಕಾರ್ಯಕ್ಕಾಗಿ ಮಲ್ಟಿಮೀಡಿಯಾವು ಮುಖ್ಯವಾಗಿ ಬಳಕೆಯಾಗುತ್ತದೆ. ಉದಾಹರಣೆಗೆ, ಒಬ್ಬ [[ವಿಜ್ಞಾನಿ]]ಯು ನಿರ್ದಿಷ್ಟ ವಸ್ತುವೊಂದರ [[ಆಣ್ವಿಕ ಮಾದರಿ]]ಯೊಂದರ ಕಡೆಗೆ ಗಮನ ಹರಿಸಬಹುದು ಮತ್ತು ಹೊಸ ವಸ್ತುವೊಂದನ್ನು ರೂಪಿಸುವ ನಿಟ್ಟಿನಲ್ಲಿ ಅದನ್ನು ಮಾರ್ಪಡಿಸಬಹುದು. [[ಜರ್ನಲ್ ಆಫ್ ಮಲ್ಟಿಮೀಡಿಯಾ]]ದಂಥ ನಿಯತಕಾಲಿಕಗಳಲ್ಲಿ ಪ್ರಾತಿನಿಧಿಕ ಸಂಶೋಧನೆಯನ್ನು ಕಾಣಬಹುದು.
 
 
 
==== ಔಷಧದಲ್ಲಿನ ಬಳಕೆ ====
[[ವೈದ್ಯಶಾಸ್ತ್ರ]]ದಲ್ಲಿ, [[ವೈದ್ಯರು]] ವಸ್ತುತಃ [[ಶಸ್ತ್ರಚಿಕಿತ್ಸೆ]]ಯೊಂದರ ಕಡೆಗೆ ಗಮನಹರಿಸುವ ಮೂಲಕ ತರಬೇತಿಯನ್ನು ಪಡೆಯಬಹುದು ಅಥವಾ [[ವೈರಾಣು]]ಗಳು ಹಾಗೂ [[ಬ್ಯಾಕ್ಟೀರಿಯಾ]]ದಿಂದ ಹರಡಲ್ಪಟ್ಟ [[ಕಾಯಿಲೆ]]ಗಳಿಂದ [[ಮಾನವ ಶರೀರ]]ವು ಹೇಗೆ ಸೋಂಕಿಗೀಡಾಗುತ್ತದೆ ಎಂಬುದನ್ನು ಅನುಕರಣೆ ಮಾಡಬಹುದು ಮತ್ತು ನಂತರದಲ್ಲಿ ಅದನ್ನು ತಡೆಯುವ ವಿಧಾನಗಳನ್ನು ಅಭಿವೃದ್ಧಿಪಡಿಸಬಹುದು.
 
 
 
==== ದಸ್ತಾವೇಜು ಚಿತ್ರಿಸುವಿಕೆಯಲ್ಲಿನ ಬಳಕೆ ====
[[ದಸ್ತಾವೇಜು ಚಿತ್ರಿಸುವಿಕೆ]] ಎಂಬುದೊಂದು ಕೌಶಲವಾಗಿದ್ದು, ಒಂದು ಬಿಂಬ/ದಸ್ತಾವೇಜಿನ ಶಾಶ್ವತಪ್ರತಿಯನ್ನು ಇದು ತೆಗೆದು, ಅದನ್ನೊಂದು ಅಂಕೀಯ ಕ್ರಮವ್ಯವಸ್ಥೆಯಾಗಿ ಮಾರ್ಪಡಿಸುತ್ತದೆ.
 
 
 
=== ಇತರೆ ===
ಯುರೋಪ್‌ನಲ್ಲಿ, [[ಯುರೋಪಿಯನ್ ಮಲ್ಟಿಮೀಡಿಯಾ ಅಸೋಸಿಯೇಷನ್ಸ್‌ ಕನ್ವೆನ್ಷನ್‌]] (EMMAC) ಎಂಬುದು ಮಲ್ಟಿಮೀಡಿಯಾ ಉದ್ಯಮಕ್ಕಾಗಿರುವ ಒಂದು ಆಕರ ಸಂಘಟನೆಯಾಗಿದೆ.
 
 
 
== ಮಲ್ಟಿಮೀಡಿಯಾ ಸ್ವರೂಪವೊಂದರಲ್ಲಿ ಮಾಹಿತಿಯನ್ನು ರೂಪಿಸುವುದು ==
ಪಠ್ಯ, ಚಿತ್ರಗಳು, ವಿಡಿಯೋ ಮತ್ತು ಧ್ವನಿಯನ್ನು ಒಂದು ಏಕಸ್ವರೂಪ ಅಥವಾ ನಮೂನೆಯೊಳಗೆ [[ಅಭಿಗಮನ]] ಮಾಡುವುದನ್ನು ಮಲ್ಟಿಮೀಡಿಯಾ ಪ್ರತಿನಿಧಿಸುತ್ತದೆ. ಮಲ್ಟಿಮೀಡಿಯಾ ಮತ್ತು ಅಂತರ್ಜಾಲದ ಶಕ್ತಿಯು, ಮಾಹಿತಿಯು ಸಂಪರ್ಕಹೊಂದಿರುವ ರೀತಿಯಲ್ಲಿ ಇರುತ್ತದೆ.
 
 
 
== ಸಮಾವೇಶಗಳು ==
ಮಲ್ಟಿಮೀಡಿಯಾ ಸಮಾವೇಶಗಳು ದೊಡ್ಡ ಸಂಖ್ಯೆಯಲ್ಲಿದ್ದು, ಅವುಗಳ ಪೈಕಿ ಎರಡು ಪ್ರಮುಖ ವಿದ್ವತ್ಪೂರ್ಣ ವೈಜ್ಞಾನಿಕ ಸಮಾವೇಶಗಳೆಂದರೆ:
 
* [[ACM ಮಲ್ಟಿಮೀಡಿಯಾ]];
* [[IEEE ICME]], ಮಲ್ಟಿಮೀಡಿಯಾ &amp; ಮೇಳದ ಕುರಿತಾದ ಅಂತರರಾಷ್ಟ್ರೀಯ ಸಮಾವೇಶ.
 
 
 
== ಇದನ್ನೂ ಗಮನಿಸಿ ==
 
* [[ಮಿಶ್ರ ಮಾಧ್ಯಮ]]
* [[ಮಲ್ಟಿಮೀಡಿಯಾ ಸಾಕ್ಷರತೆ]]
* [[ಮಲ್ಟಿಮೀಡಿಯಾ ಸಂದೇಶ ಸೇವೆ]]
* [[ನಂತರದ ಅಕ್ಷರಸ್ಥ ಸಮಾಜ]]
 
 
 
== ಆಕರಗಳು ==
ಅಶೋಕ್ ಬ್ಯಾನರ್ಜಿ &amp; ಆನಂದ ಮೋಹನ್ ಘೋಷ್‌ ಬರೆದಿರುವ ಮಲ್ಟಿಮೀಡಿಯಾ ಟೆಕ್ನಾಲಜೀಸ್, ಟಾಟಾ ಮೆಕ್‌ಗ್ರಾ ಹಿಲ್‌, 2010, ISBN(13) 978-0-07-066923-9. ಕಲಿಕಾ ಕೇಂದ್ರ: [http://www.mhhe.com/banerji/fmt ]
{{reflist}}
 
 
== ಬಾಹ್ಯ ಕೊಂಡಿಗಳು ==
 
 
[[ವರ್ಗ:ಸಮೂಹ ಮಾಧ್ಯಮ]]
[[ವರ್ಗ:ಗಣಕಯಂತ್ರ]]
[[Categoryವರ್ಗ:ಮಲ್ಟಿಮೀಡಿಯಾ]]
[[Categoryವರ್ಗ:ಸಂಹವನಾ ವಿನ್ಯಾಸ]]
[[Categoryವರ್ಗ:ವಿನ್ಯಾಸ]]
[[Categoryವರ್ಗ:ಚಲನಚಿತ್ರ ಮತ್ತು ವಿಡಿಯೋ ಪರಿಭಾಷೆ]]
[[Categoryವರ್ಗ:ಚಲನಚಿತ್ರ ನಿರ್ಮಾಣ]]
 
 
[[ar:وسائط متعددة]]
[[da:Multimedia]]
[[de:Multimedia]]
 
[[en:Multimedia]]
[[eteo:MultimeediumPlurmedio]]
[[es:Multimedia]]
[[eoet:PlurmedioMultimeedium]]
[[fi:Multimedia]]
[[fr:Multimédia]]
[[ga:Ilmheáin]]
[[gl:Multimedia]]
[[he:מולטימדיה]]
[[ko:멀티미디어]]
[[hi:मल्टीमीडिया]]
[[hr:Multimedija]]
[[hu:Multimédia]]
[[id:Multimedia]]
[[is:Margmiðlun]]
[[it:Multimedialità]]
[[ja:マルチメディア]]
[[he:מולטימדיה]]
[[ko:멀티미디어]]
[[lt:Daugialypė terpė]]
[[lv:Multimedijs]]
[[lt:Daugialypė terpė]]
[[hu:Multimédia]]
[[nl:Multimedia]]
[[ja:マルチメディア]]
[[no:Multimedia]]
[[ps:ګڼرسنۍ]]
[[pl:Multimedia]]
[[ps:ګڼرسنۍ]]
[[pt:Multimédia]]
[[ru:Мультимедиа]]
[[sqsh:MultimediaMultimedija]]
[[simple:Multimedia]]
[[sk:Multimédiá]]
[[sq:Multimedia]]
[[sr:Мултимедија]]
[[sh:Multimedija]]
[[fi:Multimedia]]
[[sv:Multimedier]]
[[ta:பல்லூடகம்]]
[[th:มัลติมีเดีย]]
[[tr:Çoklu ortam]]
೧೬,೩೭೬

edits

"https://kn.wikipedia.org/wiki/ವಿಶೇಷ:MobileDiff/131272" ಇಂದ ಪಡೆಯಲ್ಪಟ್ಟಿದೆ