ಸುಂದರಬನ್ಸ್ ರಾಷ್ಟ್ರೀಯ ಉದ್ಯಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು robot Adding: ms:Sundarban |
ಚು robot Adding: cy:Sundarbans; cosmetic changes |
||
೧ ನೇ ಸಾಲು:
{{Infobox ವಿಶ್ವ ಪರಂಪರೆಯ ತಾಣ
| WHS = ಸುಂದರ್ಬನ್ಸ್ ರಾಷ್ಟ್ರೀಯ ಉದ್ಯಾನ
| Image = [[
| State Party = {{flagicon|India}}[[ಭಾರತ]]
| Type = ಪ್ರಾಕೃತಿಕ
೧೬ ನೇ ಸಾಲು:
ಸುಂದರಬನವು ಅತಿ ಸಂಕೀರ್ಣವಾದ ಕಡಲ್ಗಾಲುವೆಗಳನ್ನು ಹೊಂದಿದೆ. ಜೊತೆಗೆ ಕೆಸರಂಗಳಗಳು ಮತ್ತು ಮ್ಯಾಂಗ್ರೋವ್ ಅರಣ್ಯಗಳಿಂದ ಕೂಡಿದ ಸಣ್ಣಸಣ್ಣ ದ್ವೀಪಗಳನ್ನು ಬೃಹತ್ ಸಂಖ್ಯೆಯಲ್ಲಿ ಒಳಗೊಂಡಿದೆ. ಇಲ್ಲಿನ ಮ್ಯಾಂಗ್ರೋವ್ ಅರಣ್ಯಗಳು ಸಮುದ್ರದ ಉಪ್ಪುನೀರನ್ನು ಸಹಿಸಿಕೊಂಡು ಬೆಳೆಯಬಲ್ಲವಾಗಿವೆ. ಸುಂದರಬನವು [[ಬಂಗಾಳದ ಹುಲಿ]]ಯ ತವರು. ಜೊತೆಗೆ ಜಿಂಕೆ, ಮೊಸಳೆ, ಉರಗಗಳು ಮತ್ತು ಹಲವು ಜಾತಿಯ ಪಕ್ಷಿಗಳಿಗೆ ನೆಲೆಯಾಗಿದೆ. ಇಲ್ಲಿ ಸುಮಾರು ೫೦೦ ಬಂಗಾಳ ಹುಲಿ (ರಾಯಲ್ ಬೆಂಗಾಲ್ ಟೈಗರ್) ಗಳಿವೆಯೆಂದು ಅಂದಾಜು ಮಾಡಲಾಗಿದೆ.
[[
== ಇತಿಹಾಸ ==
[[ಮೊಘಲ್ ಸಾಮ್ರಾಜ್ಯ]]ದ ಕಾಲದಲ್ಲಿ ( ೧೨೦೩-೧೫೩೮) ಇಲ್ಲಿನ ಅರಸರು ಸುಂದರಬನವನ್ನು ಗುತ್ತಿಗೆಗೆ ನೀಡೀದ್ದರು. ಈ ಪ್ರದೇಶವು ಜಗತ್ತಿನಲ್ಲಿ ಮೊಟ್ಟಮೊದಲ ಬಾರಿಗೆ ವೈಜ್ಞಾನಿಕವಾಗಿ ನಿಭಾಯಿಸಲ್ಪಟ್ಟ ಮ್ಯಾಂಗ್ರೋವ್ ಅರಣ್ಯವು ಸಹ ಆಗಿದೆ. ೧೭೫೭ರಲ್ಲಿ ಮೊಘಲ್ ಸಮ್ರಾಟ ಆಲಂಗೀರನಿಂದ ಸುಂದರಬನವನ್ನು [[ಈಸ್ಟ್ ಇಂಡಿಯಾ ಕಂಪೆನಿ]] ಗುತ್ತಿಗೆಗೆ ಪಡೆಯಿತು. ಮುಂದೆ ೧೮೬೦ರಲ್ಲಿ ಬಂಗಾಳ ಪ್ರಾಂತ್ಯದಲ್ಲಿ ಅರಣ್ಯ ಇಲಾಖೆಯ ಸ್ಥಾಪನೆಯಾಗಿ ಸುಂದರಬನದ ವ್ಯವಸ್ಥಿತ ನಿರ್ವಹಣೆ ಮೊದಲಾಯಿತು. ಈ ಪ್ರದೇಶವನ್ನು ೧೮೭೫-೭೬ರಲ್ಲಿ [[ಮೀಸಲು ಅರಣ್ಯ]]ವನ್ನಾಗಿ ಘೋಷಿಸಲಾಯಿತು.
== ಭೂರಚನೆ ಮತ್ತು ಪರಿಸರ ==
[[
[[
ಸುಂದರಬನವು ಗಂಗಾನದಿಯ [[ಮುಖಜಭೂಮಿ]]ಯಾಗಿದ್ದು ಅತಿ ಸಂಕೀರ್ಣ ಪರಿಸರ ವ್ಯವಸ್ಥೆಯನ್ನು ಹೊಂದಿದೆ. ಸುಂದರಬನದ ೬೨% ಭಾಗವು ಬಾಂಗ್ಲಾದೇಶದ ಆಗ್ನೇಯ ಭಾಗದಲ್ಲಿ ಸಾಗರದಂಚಿನಲ್ಲಿದೆ. ಅರಣ್ಯದ ದಕ್ಷಿಣದಲ್ಲಿ [[ಬಂಗಾಳ ಕೊಲ್ಲಿ]]ಯಿದೆ. ಸುಂದರಬನದ ಪೂರ್ವದ ಗಡಿಯಲ್ಲಿ ಬಾಲೇಶ್ವರ್ ನದಿಯಿದ್ದು ಉತ್ತರದಲ್ಲಿ ಫಲವತ್ತಾದ ಸಾಗುವಳಿ ಪ್ರದೇಶವಿದೆ. ಮುಖ್ಯನದಿಗಳ ಹೊರತಾಗಿ ಇತರ ಹಳ್ಳ ಮತ್ತು ತೊರೆಗಳಿಗೆ ಹೆಚ್ಚಿನ ಕಡೆಯಲ್ಲಿ ಕಟ್ಟೆಗಳನ್ನು ನಿರ್ಮಿಸಲಾಗಿದ್ದು ಈ ಪ್ರದೇಶದಲ್ಲಿ ನೀರಿನ ಹರಿವು ಗಣನೀಯವಾಗಿ ಕುಸಿದಿದೆ. ಇದರ ಪರಿಣಾಮವಾಗಿ ಸುಂದರಬನದ ವಿಸ್ತಾರವು ಸಹ ಕ್ರಮೇಣ ಇಳಿಮುಖವಾಗುತ್ತಿದೆ. ಇಲ್ಲಿನ ನದಿ, ಕಾಲುವಗಳು ಸಿಹಿನೀರು ಮತ್ತು ಸಾಗರದ ಉಪ್ಪು ನೀರಿನ ಸಂಗಮ ಸ್ಥಾನಗಳಾಗಿವೆ. ಈ ಪ್ರದೇಶದ ನೆಲವು ಸಮುದ್ರಮಟ್ಟದಿಂದ ೦.೯ ಮೀಟರ್ನಿಂದ ೨.೧೧ ಮೀ. ಗಳಷ್ಟು ಎತ್ತರದಲ್ಲಿದೆ.
[[
[[ಕರಾವಳಿ]]ಯ ಭೌತಿಕ ಪರಿಸರದ ಬೆಳವಣಿಗೆಯು ಸಾಗರದ ಅಲೆಕಳ ಚಲನವಲನ, [[ಉಬ್ಬರವಿಳಿತ]] , [[ಮಳೆಮಾರುತ]] ಹಾಗೂ ತೀರದಲ್ಲಿನ ನೀರಿನ ಸೆಳೆತ ಮುಂತಾದವುಗಳನ್ನು ಅವಲಂಬಿಸಿರುತ್ತದೆ. ಸಾಮಾನ್ಯವಾಗಿ ಇವುಗಳು ಆ ಪ್ರದೇಶದಲ್ಲಿನ ಭೂಸವೆತವನ್ನು ನಿರ್ಧರಿಸುತ್ತವೆ. ಆದರೂ ಸಹ ಸುಂದರಬನದ ಮ್ಯಾಂಗ್ರೋವ್ ಅರಣ್ಯಗಳು ಇಲ್ಲಿನ ಭೂಪ್ರದೇಶದಲ್ಲಿ ಸವಕಳಿಯನ್ನು ತಡೆಗಟ್ಟಿ ಭೂಸ್ಥಿರತೆಯನ್ನು ಒದಗಿಸುವಲ್ಲಿ ಪರಿಣಾಮಕಾರಿಯಾಗಿವೆ. ಮಳೆಗಾಲದ ಸಮಯದಲ್ಲಿ ಇಲ್ಲಿನ ಮುಖಜಭೂಮಿಯ ಬಹುಪಾಲು ನೀರಿನಲ್ಲಿ ಮುಳುಗಿರುತ್ತದೆ. ಈ ಸಮಯದಲ್ಲಿ ಸಮುದ್ರದೆಡೆಗೆ ತಳ್ಳಲ್ಪಟ್ಟ ಮೆಕ್ಕಲುಮಣ್ಣಿನ ಹೆಚ್ಚಿನ ಭಾಗವು [[ಚಂಡಮಾರುತ]]ಗಳ ಪ್ರಕ್ರಿಯೆಯಿಂದಾಗಿ ಮತ್ತೆ ಹಿಂದಕ್ಕೆ ಒತ್ತರಿಸಲ್ಪಡುವುದು. ಹೀಗಾಗಿ ಸುಂದರಬನದ ಪ್ರದೇಶದಲ್ಲಿ ಫಲವತ್ತಾದ ಮೆಕ್ಕಲುಮಣ್ಣಿನ ಪರಿಮಾಣವು ಕಾಯ್ದುಕೊಳ್ಳಲ್ಪಡುತ್ತದೆ.
ಇದರ ಹೊರತಾಗಿಯೂ ಇಲ್ಲಿನ ಭೂಮಟ್ಟವು ಕ್ರಮೇಣ ಕುಸಿಯುತ್ತಿರುವುದನ್ನು ಗಮನಿಸಲಾಗಿದೆ. ಸುಂದರಬನಕ್ಕೆ ಹರಿದುಬರುವ ಸಿಹಿನೀರಿನ ಪ್ರಮಾಣವು ಇಳಿಯತೊಡಗಿದ್ದು ಇದರಿಂದಾಗಿ ಈ ಪ್ರದೇಶದ ಅರಣ್ಯಪ್ರದೇಶವು ಕುಗ್ಗುತ್ತಿದೆ. ಗಿಡಮರಗಳು ಕಡಿಮೆಯಾದಂತೆ ಮೆಕ್ಕಲುಮಣ್ಣನು ತಡೆದಿಟ್ಟುಕೊಳ್ಳುವ ಸಾಮರ್ಥ್ಯವು ಕುಸಿಯತೊಡಗಿದ್ದು ಫಲಸ್ವರೂಪವಾಗಿ ಭೂಸವೆತ ಹೆಚ್ಚುತ್ತಿದ್ದು ನೆಲೆದ ಮಟ್ಟ ಕುಸಿಯುತ್ತಿದೆ. ಈ ಶತಮಾನದ ಅಂಚಿಗೆ ಇಲ್ಲಿನ ಸಾಗರಮಟ್ಟವು ೪೫ ಸೆಂಟಿಮೀಟರ್ಗಳಷ್ಟು ಹೆಚ್ಚುವ ಅಂದಾಜಿದ್ದು ಇದರಿಂದಾಗಿ ಸುಂದರಬನಕ್ಕೆ ಮುಳುಗಡೆಯ ಅಪಾಯವಿದೆಯೆಂದು ಅಧ್ಯಯನಗಳು ತಿಳಿಸುತ್ತವೆ.
== ಸಸ್ಯವೈವಿಧ್ಯ ==
[[
ಸುಂದರಬನದಲ್ಲಿ ಸುಮಾರು ೨೪೫ ಸಸ್ಯವಂಶಗಳಿಗೆ ಸೇರಿದ ೩೩೪ ತಳಿಗಳ ಗಿಡಮರಗಳನ್ನು ಗುರುತಿಸಲಾಗಿದೆ. ಸುಂದರಬನವನ್ನು ತೇವಭರಿತ [[ಉಷ್ಣವಲಯ]]ದ ಕಾಡೆಂದು ವರ್ಗೀಕರಿಸಲಾಗಿದೆ. ಈ ಪ್ರದೇಶದ ನೀರಿನಲ್ಲಿರುವ ಉಪ್ಪಿನ ಪ್ರಮಾಣಕ್ಕೆ ಅನುಗುಣವಾಗಿ ೩ ಅರಣ್ಯವಲಯಗಳು ರೂಪುಗೊಂಡಿವೆ. ಸುಂದರಿ ವೃಕ್ಷಗಳು ಮತ್ತು ಗೇವಾ ಮರಗಳು ಇಲ್ಲಿ ವ್ಯಾಪಕವಾಗಿ ಕಾಣಬರುತ್ತವೆ. ಜೊತೆಗೆ ಢುಂಡುಲ್ ಮತ್ತು ಕಂಕ್ರಾ ಮರಗಳು ಸಹ ಬಹಳಷ್ಟು ಇವೆ. ಹಲವು ಜಾತಿಯ ಹುಲ್ಲುಗಳು ಮತ್ತು [[ತಾಳೆ]]ಯ ವಂಶಕ್ಕೆ ಸೇರಿದ ಹಲವು ಜಾತಿಯ ಮರಗಳು ಸಹ ಸುಂದರಬನದಲ್ಲಿ ನೆಲೆಯೂರಿವೆ. ಚುಕ್ಕೆ [[ಜಿಂಕೆ]]ಗಳಿಗೆ ಮುಖ್ಯ ಆಹಾರವಾಗಿರುವ ಕಿಯೋರಾ ಸಸ್ಯವು ಇಲ್ಲಿ ಬಹಳ ವ್ಯಾಪಕವಾಗಿದೆ.
== ಪ್ರಾಣಿಸಂಕುಲ ==
ಸುಂದರಬನದಲ್ಲಿನ ಪ್ರಾಣಿವೈವಿಧ್ಯ ಬಲು ವಿಸ್ತಾರವಾದುದು. ಬಂಗಾಳದ ಹುಲಿ ಮತ್ತು [[ಡಾಲ್ಫಿನ್]]ಗಳು ಇವಿಗಳಲ್ಲಿ ಬಲು ಪ್ರಸಿದ್ಧವಾದವು. ಈ ಪ್ರದೇಶದಲ್ಲಿ ಹಲವು ವನ್ಯಧಾಮಗಳನ್ನಿ ರಚಿಸಲಾಗಿದ್ದು ಈ ವಲಯಗಳಲ್ಲಿ ಬೇಟೆಯಾಡುವಿಕೆ ಮತ್ತು ಅರಣ್ಯ ಉತ್ಪನ್ನಗಳ ಸಂಗ್ರಹಣೆಯನ್ನು ಸಂಪೂರ್ಣವಾಗಿ ಪ್ರತಿಬಂಧಿಸಲಾಗಿದೆ. ಇದರಿಂದಾಗಿ ಈಲ್ಲಿನ ಪ್ರಾಣಿಗಳಿಗ ತಕ್ಕಮಟ್ಟಿನ ರಕ್ಷಣೆ ಒದಗಿದೆ. ಸುಂದರಬನದಲ್ಲಿ ಒಟ್ಟು ೫೦೦ ಹುಲಿಗಳಿವೆಯೆಂದು ಅಂದಾಜು ಮಾಡಲಾಗಿದೆ. ಹಲವು ತಳಿಯ [[ಕಡಲಾಮೆ]]ಗಳು, [[ಮಾನಿಟರ್ ಹಲ್ಲಿ]], [[ಹೆಬ್ಬಾವು]] ಮುಂತಾದ ಜೀವಿಗಳು ಸಹ ಇಲ್ಲಿ ವ್ಯಾಪವಾಗಿ ಕಾಣಬರುತ್ತವೆ.
೨೩೯ ನೇ ಸಾಲು:
|}
== ಇವನ್ನೂ ನೋಡಿ ==
* [[ವಿಶ್ವ ಪರಂಪರೆಯ ತಾಣ]]
* [[ಭಾರತದ ರಾಷ್ಟ್ರೀಯ ಉದ್ಯಾನಗಳು]]
== ಬಾಹ್ಯ ಸಂಪರ್ಕಕೊಂಡಿಗಳು ==
* A [http://www.unep-wcmc.org/sites/wh/sundarba.html ಸುಂದರ್ಬನ್ಸ್ ಬಗ್ಗೆ ನೈಜ ಮಾಹಿತಿ]
* [http://whc.unesco.org/en/list/452 ಯುನೆಸ್ಕೋ ಅಧಿಕೃತ ಅಂತರ್ಜಾಲ ಮಾಹಿತಿ ತಾಣ]
* [http://projecttiger.nic.in/sundarbans.htm ಸುಂದರಬನ್ಸ್ ಪ್ರಾಜೆಕ್ಟ್ ಟೈಗರ್ ಮೀಸಲು ವಲಯ]
* [http://www.indiantiger.org/tiger-reserves-in-india/sundarban-national-park-tiger-reserves-in-india.html IndianTiger.org ಸುಂದರ್ಬನ್ಸ್ ರಾಷ್ಟ್ರೀಯ ಉದ್ಯಾನ]
* [http://www.india-wildlife-tour.com/wildlife-sancturies-india/sunderbans-national-park-tiger-reserve.html ಸುಂದರ್ಬನ್ಸ್ ರಾಷ್ಟ್ರೀಯ ಉದ್ಯಾನ]
* [http://www.ecoindia.com/sundarbans-national-park.html EcoIndia.com ಸುಂದರ್ಬನ್ಸ್ ರಾಷ್ಟ್ರೀಯ ಉದ್ಯಾನ]
* [http://www.webindia123.com/wildlife/parks/westbengal/sundarbans.htm Web123India: ಸುಂದರ್ಬನ್ಸ್ ]
{{ಭಾರತದ ವಿಶ್ವ ಪರಂಪರೆಯ ತಾಣಗಳು}}
[[ವರ್ಗ:
[[ವರ್ಗ:ಭಾರತದ ರಾಷ್ಟ್ರೀಯ ಉದ್ಯಾನಗಳು]]
[[bn:সুন্দরবন]]
[[cs:Sundarbans]]
[[cy:Sundarbans]]
[[da:Sundarbans]]
[[de:Sundarbans]]
|