"ನಂದಾದೇವಿ ರಾಷ್ಟ್ರೀಯ ಉದ್ಯಾನ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
 
'''ನಂದಾದೇವಿ ರಾಷ್ಟ್ರೀಯ ಉದ್ಯಾನ'''ವು [[ಭಾರತ]]ದ [[ಉತ್ತರಾಖಂಡ]] ರಾಜ್ಯದಲ್ಲಿದೆ. ಇದು [[ನಂದಾದೇವಿ]] ಪರ್ವತದ ಆಸುಪಾಸಿನ ಪ್ರದೇಶಗಳನ್ನು ಒಳಗೊಂಡಿದೆ. ೧೯೮೨ರಲ್ಲಿ ರಾಷ್ಟ್ರೀಯ ಉದ್ಯಾನವಾಗಿ ಘೋಷಿಸಲ್ಪಟ್ಟ ನಂದಾದೇವಿ ರಾಷ್ಟ್ರೀಯ ಉದ್ಯಾನವು ೧೯೮೮ರಲ್ಲಿ ಯುನೆಸ್ಕೋದಿಂದ [[ವಿಶ್ವ ಪರಂಪರೆಯ ತಾಣ]]ವಾಗಿ ಹೆಸರಿಸಲ್ಪಟ್ಟಿತು. ಸುಮಾರು ೬೩೦.೩೩ ಚ.ಕಿ.ಮೀ. ವಿಸ್ತಾರವಾಗಿರುವ ನಂದಾದೇವಿ ರಾಷ್ಟ್ರೀಯ ಉದ್ಯಾನವು ನಂದಾದೇವಿ ಧಾಮವನ್ನು ಒಳಗೊಂಡಿದೆ. ಈ ಧಾಮವು [[ಹಿಮಾಲಯ]]ದ ಉನ್ನತ ಶಿಖರಸಾಲುಗಳ ನಡುವಿನ ಪಾತಳಿ ಪ್ರದೇಶವಾಗಿದೆ. [[ರಿಷಿ ಗಂಗಾ]] ಕೊಳ್ಳದಲ್ಲಿ ಹರಿಯುವ ಅದೇ ಹೆಸರಿನ ನದಿಯು ಈ ಪ್ರದೇಶಕ್ಕೆ ನೀರುಣಿಸುತ್ತದೆ. ಸಮೀಪದಲ್ಲಿಯೇ ಇರುವ [[ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನ]]ದ ಜೊತೆಗೂಡಿ ನಂದಾದೇವಿ ರಾಷ್ಟ್ರೀಯ ಉದ್ಯಾನವು [[ವಿಶ್ವ ಪರಂಪರೆಯ ತಾಣ]]ವೆನಿಸಿದೆ. ಇವೆರಡೂ ರಾಷ್ಟ್ರೀಯ ಉದ್ಯಾನಗಳು ನಂದಾದೇವಿ [[ಜೀವಗೋಲ]] ಮೀಸಲಿನ ಅಂಗವಾಗಿವೆ. ನಂದಾದೇವಿ ರಾಷ್ಟ್ರೀಯ ಉದ್ಯಾನವು ಸಮುದ್ರಮಟ್ಟದಿಂದ ೩೫೦೦ ಮೀಟರ್‌ಗಳಷ್ಟು ಎತ್ತರದಲ್ಲಿದೆ. ಉದ್ಯಾನಪ್ರದೇಶದ ಒಳಗೆ ಇರುವ ಮುಖ್ಯ ಪರ್ವತಶಿಖರಗಳೆಂದರೆ : ನಂದಾದೇವಿ (೭೮೧೬ ಮೀ.), ದೇವೀಸ್ತಾನ್-೧ (೬೬೭೮ ಮೀ.), ದೇವೀಸ್ತಾನ್-೨ (೬೫೨೯ ಮೀ.) ಮತ್ತು ರಿಷಿ ಕೋಟ್ (೬೨೩೬ ಮೀ.)
[[Imageಚಿತ್ರ:Nanda-sanctuary-annotated.jpg|left|thumb|250px|ನಂದಾದೇವಿ ಧಾಮದ ಕಾಂಟೂರ್ ನಕಾಶೆ]]
 
== ಇವನ್ನೂ ನೋಡಿ ==
[[ನಂದಾದೇವಿ]]
 
 
{{ಭಾರತದ ವಿಶ್ವ ಪರಂಪರೆಯ ತಾಣಗಳು}}
 
[[ವರ್ಗ:ವಿಶ್ವ ಪರಂಪರೆಯ ತಾಣಗಳು]]
 
[[es:Parque Nacional Nanda Devi]]
[[fi:Nanda Devin kansallispuisto]]
[[gu:નંદાદેવી નેશનલરાષ્ટ્રીય પાર્કઉદ્યાન]]
[[he:הפארק הלאומי נאנדה דווי]]
[[hi:नन्दा देवी राष्ट्रीय उद्यान]]
೧೬,೪೨೪

edits

"https://kn.wikipedia.org/wiki/ವಿಶೇಷ:MobileDiff/127475" ಇಂದ ಪಡೆಯಲ್ಪಟ್ಟಿದೆ