ಪ್ರತಿಭಾ ಪಾಟೀಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೩ ನೇ ಸಾಲು:
ಪ್ರತಿಭಾ ಪಾಟೀಲ್, ತಮ್ಮ ೨೮ ನೇ ವಯಸ್ಸಿನಲ್ಲಿಯೇ [[ಶಾಸಕಿ]]ಯಾದರು. ೩೩ ನೇ ವಯಸ್ಸಿನಲ್ಲಿ, ಸಹಾಯಕ ಸಚಿವೆಯಾಗಿ ಅನೇಕ ಖಾತೆಗಳನ್ನು ನಿರ್ವಹಿಸಿದ್ದಾರೆ. ಸ್ತ್ರೀ- ಶಿಕ್ಷಣ, ಸಹಕಾರ ಚಳವಳಿ, ಇವರ ಆಸಕ್ತಿಯ ಕ್ಷೇತ್ರಗಳು. ಸುಮಾರು, [[೩ ಲಕ್ಷ ಓಟುಗಳ ಅಂತರದ ಗೆಲುವಿನಿಂದ]], ನಮ್ಮ ದೇಶದ ೧೩ ನೆಯ,ಮಹಿಳಾ-ರಾಷ್ಟ್ರಪತಿಯಾಗಿ [[ರಾಷ್ಟ್ರಾಧ್ಯಕ್ಷೆಯಾಗಿ]], ಚುನಾಯಿಸಲ್ಪಟ್ಟರು. ಜುಲೈ ೨೫, ೨೦೦೭, ಬುಧವಾರದಂದು ಶ್ರೀಮತಿ. ಪ್ರತಿಭಾ ಪಾಟೀಲರು ತಮ್ಮ ಹೊಸಪದವಿಯನ್ನು ಸ್ವೀಕರಿಸಿದರು.
 
== ಪ್ರತಿಭಕ್ಕನವರ ಪೂರ್ವವೃತ್ತಾಂತ ==
ಹಿಂದಿನ ರಾಷ್ಟ್ರಾಧ್ಯಕ್ಷ, ಡಾ. ಅಬ್ದುಲ್ ಕಲಾಂರು ವಿಜ್ಞಾನಿಯಾದರೆ, ಪ್ರತಿಭಾಪಾಟೀಲ್ ರವರು ಒಬ್ಬ ಪಕ್ಕಾ ರಾಜಕೀಯ ಧುರೀಣರು. ರಾಜಕೀಯದಲ್ಲಿ ಚೆನ್ನಾಗಿ ನುರಿತಿದ್ದಾರೆ. ಮಹಾರಾಷ್ಟ್ರದಂತಹ ಪ್ರಗತಿಪರ ರಾಜ್ಯದ ಮುಂಬೈನಗರದಲ್ಲಿ ಅವರು ಹಲವಾರು ವರ್ಷಗಳಿಂದ ಅನೇಕ [[ಜನಕಲ್ಯಾಣ ಮಂತ್ರಿಪದವಿ]]ಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿರುವುದನ್ನು ಅವರ [['ಬಯೋಡೇಟ']]ವನ್ನು, ನೋಡಿದರೆ ಅರ್ಥವಾಗುತ್ತದೆ.
==ಮಹಿಳೆಯೊಬ್ಬರು ರಾಷ್ಟ್ರಾಧ್ಯಕ್ಷೆಯಾದಾಗ==
ಮಹಿಳೆಯಾದ್ದರಿಂದ ದೇಶದ ಆಗುಹೋಗುಗಳನ್ನು ಅರ್ಥಮಾಡಿಕೊಂಡು, ಅವುಗಳಿಗೆ ಸ್ಪಂದಿಸುವಾಗ ಒಂದು ಮಾತೃತ್ವದಪ್ರೀತಿ, ವಾತ್ಸಲ್ಯ, ಮಮತೆಗಳ ಛಾಯೆಯನ್ನು ನಾವು ಅವರ ಕಾರ್ಯವಿಧಾನಗಳಲ್ಲಿ ನಿರೀಕ್ಷಿಸಬಹುದೆನ್ನಿಸುತ್ತದೆ ! [[ಜಲಗಾವ್]] ನಂತಹ ಚಿಕ್ಕ ಹಳ್ಳಿಯಿಂದ ದೆಹಲಿಯ ರಾಷ್ಟ್ರಪತಿ ಭವನವನ್ನು ಮುಟ್ಟುವವರೆಗಿನ ಜೀವನ ಸಂಘರ್ಷ ಅತ್ಯಂತ ರೋಚಕವಾಗಿದೆ ! ಎಲ್ಲೂ ಹೆಚ್ಚಿನ ವಿವಾದಗಳಿಗೆ ಎಡೆಮಾಡಿಕೊಡದೆ, ಸದ್ದು -ಗದ್ದಲವಿಲ್ಲದೆ, ತಮ್ಮ ಕಾರ್ಯಗಳನ್ನು ನಿಭಾಯಿಸಿಕೊಂಡು ಬಂದ ಪ್ರತಿಭಕ್ಕನವರು, ಯಾವುದೇ ಜವಾಬ್ದಾರಿಯುತ ಹುದ್ದೆಯಲ್ಲಿರಲಿ, ನಮ್ಮ ಬೀ. ಡಿ. ಜತ್ತಿ, ವಸಂತರಾವ್ ನಾಯಿಕ್, ವೈ. ಬಿ. ಚವ್ಹಾನ್ ರಂತಹ ಹೆಸರಾಂತ ರಾಜಕಾರಣಿಗಳನ್ನು ನೆನೆಪಿಗೆ ತರುತ್ತಾರೆ.
"https://kn.wikipedia.org/wiki/ಪ್ರತಿಭಾ_ಪಾಟೀಲ್" ಇಂದ ಪಡೆಯಲ್ಪಟ್ಟಿದೆ