ಸೂಳೆಕೆರೆ (ಶಾಂತಿ ಸಾಗರ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ಭಾರತದ ಸರೋವರ
Content deleted Content added
ಹೊಸ ಪುಟ: '''ಶಾಂತಿ ಸಾಗರ'''ವು ಸೂಳೆ ಕೆರೆ ಎಂಬ ಮತ್ತೊಂದು ಹೆಸರಿನಿಂದ ಜನಪ್ರಿಯವಾಗಿದೆ. ಇದ...
( ಯಾವುದೇ ವ್ಯತ್ಯಾಸವಿಲ್ಲ )

೧೩:೪೦, ೭ ಡಿಸೆಂಬರ್ ೨೦೦೯ ನಂತೆ ಪರಿಷ್ಕರಣೆ

ಶಾಂತಿ ಸಾಗರವು ಸೂಳೆ ಕೆರೆ ಎಂಬ ಮತ್ತೊಂದು ಹೆಸರಿನಿಂದ ಜನಪ್ರಿಯವಾಗಿದೆ. ಇದು ಚನ್ನಗಿರಿ ತಾಲೂಕಿನಲ್ಲಿ ಚನ್ನಗಿರಿಯಿಂದ ದಾವಣಗೆರೆಗೆ ಹೋಗುವ ಮಾರ್ಗದಲ್ಲಿ ಸುಮಾರು ೧೮ ಕಿ.ಮೀ ದೂರದಲ್ಲಿದೆ. ೧೨ ನೇ ಶತಮಾನದಲ್ಲಿ ಸುಮಾರು ೫೩೯.೧೬ ಚ.ಮೈಲಿ ವಿಸ್ತಾರವಿರುವ ಈ ಕೆರೆಯನ್ನು ಹರಿದ್ರಾವತಿ ನದಿಗೆ (ಹಿರೇ ಹಳ್ಳ) ಅಡ್ಡವಾಗಿ ಕಟ್ಟಲಾಗಿದೆ. ಈ ಕೆರೆಯು ಸುಮಾರು ೩೨ ಹಳ್ಳಿಗಳ ೨೮೭೬ ಹೆಕ್ಟೇರು ಜಾಗಕ್ಕೆ ನೀರುಣಿಸುತ್ತದೆ.

೧೨ ನೇ ಶತಮಾನದಲ್ಲಿ ಸ್ವರ್ಗಾವತಿ ಎಂಬ ಪಟ್ಟಣವಿತ್ತು (ಈಗಿನ ಕಗತೂರು ಎಂಬ ಗ್ರಾಮ). ಸ್ವರ್ಗಾವತಿ ಪಟ್ಟಣದ ದೊರೆ ವಿಕ್ರಮರಾಜನ ಮಗಳು ಶಾಂತವ್ವ ಎಂದು. ಅವಳು ಸಿದ್ದೇಶ್ವರ ಎಂಬ ಯುವಕನೊಂದಿಗೆ ಗಾಂಧರ್ವ ವಿವಾಹವಾಗುತ್ತಾಳೆ. ಇದನ್ನು ಒಪ್ಪದ ಪಟ್ಟಣದ ಜನರು ಅವಳನ್ನು ಸೂಳೆ ಎಂದು ಕರೆಯುತ್ತಾರೆ. ಆನಂತರ ಶಾಂತವ್ವನು ಗಂಡನ ಜೊತೆ ಸೇರಿ ದೊಡ್ಡದಾದ ಕೆರೆಯನ್ನು ಕಟ್ಟಿಸಿ, ತನಗೆ ಬಂದಿರುವ ಕಳಂಕ ಹೋಗಲಿ ಎಂದು ಕೆರೆಗೆ ಹಾರವಾಗುತ್ತಾಳೆ. ನಂತರ ಗಂಡನಾದ ಸಿದ್ದೇಶ್ವರನು ಹೆಂಡತಿಯ ಅಗಲಿಕೆಯನ್ನು ತಾಳಲಾರದೆ ಪಕ್ಕದಲ್ಲಿರುವ ಬೆಟ್ಟಕ್ಕೆ ಹೋಗಿ ಇಹ ಲೋಕವನ್ನು ತ್ಯಜಿಸುತ್ತಾನೆ. ಈ ಹಿನ್ನೆಲೆಯಲ್ಲಿ ಗುಡ್ದದ ಮೇಲೆ ಈಗಲೂ ಸಿದ್ದೇಶ್ವರ ದೇವಾಲಯವಿದೆ. ಇವರ ನೆನಪಿಗಾಗಿ ಪ್ರತಿ ವರ್ಷ ಸಿದ್ದೇಶ್ವರ ಜಾತ್ರೆ ನಡೆಯುತ್ತದೆ. ಶಾಂತವ್ವಳ ನೆನಪಿಗಾಗಿ ಪ್ರತಿ ವರ್ಷ ಜಾತ್ರೆಯ ದಿನ ಶಾಂತವ್ವಳ ತವರು ಮನೆ ಕಗತಲೂರು ಗ್ರಾಮದಲ್ಲಿನ ಇವರ ಮನೆಯಿಂದ ಮಡ್ಲಕ್ಕಿ ಹೋದ ನಂತರವೆ ರಥ ಯಾತ್ರೆಗೆ ಚಾಲನೆ ನೀಡುವುದು.