ಚಿಂತಾಮಣಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: fr:Chintamani
೩೩ ನೇ ಸಾಲು:
ಹತ್ತಿರವಿರುವ, ರಮ್ಯತಾಣದಲ್ಲಿ ಆಕರ್ಶಕ ಬೆಟ್ಟ-ಗುಡ್ಡಗಳಿವೆ. ವೆಂಕಟರಮಣಸ್ವಾಮಿದೆವಲಯವಿದೆ. ಗರ್ಭಗುಡಿಯಲ್ಲಿ ಧಾರ್ಮಿಕಸಂಕೆತರೂಪದಲ್ಲಿರುವ ಹುತ್ತದಾಕಾರದಲ್ಲಿ ನರಸಿಂಹದೆವರ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಇಲ್ಲಿ ಚೈತ್ರ ಬಹುಳ ಸಪ್ತಮಿಯಂದು ನಡೆಯುವ ಬ್ರಹ್ಮ-ರಥೋತ್ಸವ ಹೆಸರುವಾಸಿ.
== ’ಆಲಂಬಗಿರಿ’ ==
ಚಿಂತಾಮಣಿಯಿಂದ ೧೦ ಕಿ. ಮೀ ದೂರದಲ್ಲಿದೆ. ಆಲಂಬಗಿರಿ ವೆಂಕಟಾರಮಣಸ್ವಾಮಿ ದೇವಾಲಯದಲ್ಲಿ ಗರ್ಭಗೃಹ ಮತ್ತು ಎರಡು ಮಂಟಪಗಳಿವೆ. ವಿಶಾಲವಾದ ನವರಂಗ, ಆಯತಾಕಾರದ ಮುಖಮಂಟಪಗಳು ಕಂಡುಬರುತ್ತವೆ. ಗರ್ಭಗುಡಿಯ ಮೇಲ್ಭಾಗದಲ್ಲಿರುವ ಚೌಕಾಕಾರದ ವಿಜಯನಗರ ಶಿಲ್ಪದ ಶೈಲಿಯ ಶಿಖರವನ್ನು ನವೀಕರಿಸಲಾಗಿದೆ.ಪೂರ್ವ ದಿಕ್ಕಿನಲ್ಲಿ ಪ್ರವೇಶದ್ವಾರ. ಚೈತ್ರ ಹುಣಿಮೆಯಂದು, ಬ್ರಹ್ಮ ರಥೋತ್ಸವ. ಮರಾಠ ನಾಯಕರು ಇದರ ನಿರ್ಮಾಣಮಾಡಿದ್ದಾರೆ.
 
==ಕೈವಾರ==
ಮಹಾಭಾರತದ ಕಾಲದಲ್ಲಿ ಏಕಚಕ್ರಪುರವೆಂದು ಕರೆಯಲಾಗುತ್ತಿದ್ದ ಕೈವಾರ, ಅರಗಿನ ಮನೆಯಿಂದ ತಪ್ಪಿಸಿಕೊಂಡು ಪಾಂಡವರು ಸ್ವಲ್ಪಕಾಲ ಇಲ್ಲಿ ತಂಗಿದ್ದರೆಂದು ಹೇಳಲಾಗಿದೆ. ಈ ಗ್ರಾಮದ ಹತ್ತಿರವಿರುವ 'ಚಿದಂಬಗಿರಿ ಬೆಟ್ಟ' ದ ಮೇಲೆ ವಾಸವಾಗಿದ್ದ ಬಕಾಸುರನನ್ನು ಭೀಮಸೇನನು ಕೊಂದು, ಅವನ ಶವವನ್ನು ಬೆಟ್ಟದ ಗುಹೆಯೊಂದರಲ್ಲಿ ಮುಚ್ಚಿಟ್ಟಿದ್ದನೆಂಬ ಪ್ರತೀತಿಯಿದೆ. ಈ ಮೇಲೆ ಒಸರುವ ಮಣ್ಣಿನ ರಾಡಿಯನ್ನು ಬಕಾಸುರನ ಕೀವು-ರಕ್ತವೆಂಉ ಸ್ಥಳೀಯ ಜನ ಭಾವಿಸುತ್ತಾರೆ. ಕೈವಾರ ಕ್ಷೇತ್ರದಲ್ಲಿ ಅಮರ ನಾರಾಯಣ, ಧರ್ಮರಾಯ, ಭೀಮೇಶ್ವರ,ಅರ್ಜುನೇಶ್ವರ, ನಕುಲೇಶ್ವರ, ಸಹದೇವೇಶ್ವರ ದೆವಾಲಯಗಳಿವೆ. ಕೈವಾರದ ನಾರಾಯಣೇಶ್ವರ ದೇವಾಲಯ ಈಗಿನ ಪ್ರಮುಖ ಆಕರ್ಷಣೆಯ ಕೇಂದ್ರ. ವಿಜಯನಗರ ಕಾಲದ ಹಲವಾರು ದೇವಾಲಯಗಳು ಕೈವಾರದ ಸುತ್ತಮುತ್ತ, ಇವೆ. ’ಕಾಲಜ್ಞಾನ ಬರೆದ,ಯೋಗಿನಾರೇಯಣ, ತೆಲುಗು ಕನ್ನಡ ಕವಿಸಂತರು, ಈಗ್ರಾಮದಲಿ ನೆಲೆಸಿದ್ದಾರೆ.
"https://kn.wikipedia.org/wiki/ಚಿಂತಾಮಣಿ" ಇಂದ ಪಡೆಯಲ್ಪಟ್ಟಿದೆ