ರಾಗಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೨ ನೇ ಸಾಲು:
ಇಲ್ಲಿ ನಾವು ಇದರ ಉಪಯುಕ್ತತೆ ಮತ್ತು ಇದು ಹೇಗೆ ಇಳುವರಿಯನ್ನು ಹೆಚ್ಚಿಸುತ್ತದೆ ಎಂದು ತಿಳಿಸುತ್ತೇವೆ. ಈ ವಿಧಾನವನ್ನು ನೀರಿನ ಮಿತಬಳಕೆ ಮತ್ತು ಹೆಚ್ಚಿನ ಇಳುವರಿಗಾಗಿ ಅಭಿವುಧ್ಡಿಪಡಿಸಲಾಗಿದೆ. ಇದನ್ನು ಈಗಾಗಲೇ ಪ್ರಯೋಗಿಸಿ ನೋಡಲಾಗಿದೆ.
 
ರಾಗಿ ಒಂದು ವಾಷಿ೯ಕ ಬೆಳೆಯಾಗಿದ್ದು, ಒಂದು ಬೆಳೆಯಾಗಿ ಅಥವಾ ಮಿಶ್ರಬೆಳೆಯಾಗಿಯೂ (ಶೇಂಗಾ, ಹಲಸಂದಿ ಜೊತೆಯಾಗಿ) ಬೆಳೆಯಬಹುದು. ಕಟಾವಾದ ನಂತರ ಬಹಳ ದಿನಗಳವರೆಗೆ ಸಂರಕ್ಷಿಸಬಹುದಾಗಿದ್ದು, ಅತ್ಯಧಿಕ ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶಗಳನ್ನೊಳಗೊಂಡಿದೆಸಂರಕ್ಷಿಸಬಹುದು. ಇದು ಒಂದು ಉತ್ತಮ ಆಹಾರ ಬೆಳೆಯಾಗಿದ್ದು ಮಕ್ಕಳು ದೊಡ್ದವರೆನ್ನೆದೆ ಉಪಯೋಗಿಸಬಹುದು. ರಾಗಿಮುದ್ದೆ ಅತ್ಯಂತ ಜನಪ್ರಿಯ ಆಹಾರ ಪ್ರಕಾರವಾಗಿದೆ.
 
ಪೋಷಕಾಂಶಗಳ ವಿವರ/೧೦೦ ಗ್ರಾಮ್ ರಾಗಿ
 
ಪ್ರೋಟಿನ್ : ೭.೩ ಗ್ರಾಂ
ಕೊಬ್ಬು : ೧.೩ ಗ್ರಾಂ
ಪಿಷ್ಟ : ೭೨ ಗ್ರಾಂ
ಖನಿಜಾಂಶ : ೨.೭ ಗ್ರಾಂ
ಸುಣ್ಣದಾಂಶ : ೩.೪೪ ಗ್ರಾಂ
ನಾರಿನಾಂಶ : ೩.೬ ಗ್ರಾಂ
ಶಕ್ತಿ : ೩೨೮ ಕಿ.ಕ್ಯಾ.
 
ಅಧಿಕ ಇಳುವರಿ ಕೊಡುವ ಅನೇಕ ರಾಸಾಯನಿಕಗಳು ರಸಗೊಬ್ಬರಗಳಿದ್ದರೂ ರೈತರಿಗೆ ಎಕರೆಗೆ ೧೫ ಕ್ವಿಂಟಾಲ್ ಸಿಗುವುದು. ಆದರೆ ಹಾವೇರಿ (ಉತ್ತರ ಕನಾ೯ಟಕ) ಭಾಗದ ರೈತರಿಗೆ ಗುಳಿ ವಿಧಾನ ಬಳಸುವುದರಿಂದ ೧೮-೨೦ ಕ್ವಿಂಟಾಲ್ ದೊರೆಯುತ್ತಿದೆ. ಇದರಿಂದ ಅವರಿಗೆ ಹೈಬ್ರಿಡ್ ಬಳಸುವ ಅವಶ್ಯಕತೆ ಇಲ್ಲ. ಈ ವಿಧಾನ ಅತ್ಯಂತ ಸರಳವಾಗಿದ್ದು ಯಾರು ಬೇಕಾದರೂ ಅಳವಡಿಸಿಕೊಳ್ಳಬಹುದಾಗಿದ್ದು, ಇದು ಹಾವೇರಿ ರೈತರ ಸಾಧನೆಯಾಗಿದೆ.
"https://kn.wikipedia.org/wiki/ರಾಗಿ" ಇಂದ ಪಡೆಯಲ್ಪಟ್ಟಿದೆ