ಪ್ರತಿಭಾ ಪಾಟೀಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು robot Modifying: cs:Pratibha Pátilová; cosmetic changes
೨೦ ನೇ ಸಾಲು:
'''ಪ್ರತಿಭಾ ದೇವಿಸಿಂಗ್ ಪಾಟೀಲ್''' (Hindi: प्रतिभा देवीसिंह पाटिल) ಭಾರತದ ಪ್ರಸಕ್ತ [[ಭಾರತದ ರಾಷ್ಟ್ರಧ್ಯಕ್ಷೆ|ರಾಷ್ಟ್ರಾಧ್ಯಕ್ಷೆ]]. ದೇಶದ ಮೊದಲ ಮಹಿಳಾ ರಾಷ್ಟ್ರಪತಿ. [[ಜುಲೈ ೨೫]], [[೨೦೦೭]] ರಂದು ಅಧಿಕಾರ ಸ್ವೀಕರಿಸಿದರು. [[ಮಹಾರಾಷ್ಟ್ರ]]ದ [[ನಾಡ್ ಗಾವ್]] ನಲ್ಲಿ [[ಡಿಸೆಂಬರ್ ೧೯]], [[೧೯೩೪]]ರಲ್ಲಿ ಇವರು ಜನಿಸಿದರು.
 
== ಪ್ರತಿಭಕ್ಕ, ಈಗ ನಮ್ಮ ದೇಶದ, ಪ್ರಪ್ರಥಮ ಮಹಿಳಾ ರಾಷ್ಟ್ರಾಧ್ಯಕ್ಷೆ ==
ಪ್ರತಿಭಾ ಪಾಟೀಲ್, ತಮ್ಮ ೨೮ ನೇ ವಯಸ್ಸಿನಲ್ಲಿಯೇ [[ಶಾಸಕಿ]]ಯಾದರು. ೩೩ ನೇ ವಯಸ್ಸಿನಲ್ಲಿ, ಸಹಾಯಕ ಸಚಿವೆಯಾಗಿ ಅನೇಕ ಖಾತೆಗಳನ್ನು ನಿರ್ವಹಿಸಿದ್ದಾರೆ. ಸ್ತ್ರೀ- ಶಿಕ್ಷಣ, ಸಹಕಾರ ಚಳವಳಿ, ಇವರ ಆಸಕ್ತಿಯ ಕ್ಷೇತ್ರಗಳು. ಅಕ್ಕನವರು, ಸುಮಾರು, [[ ೩ ಲಕ್ಷ ಓಟುಗಳ ಭರ್ಜರಿ ಅಂತರದ ಗೆಲುವಿನಿಂದ]], ನಮ್ಮ ದೇಶದ ೧೩ ನೆಯ,ಮಹಿಳಾ-ರಾಷ್ಟ್ರಪತಿಯಾಗಿ [[ರಾಷ್ಟ್ರಾಧ್ಯಕ್ಷೆಯಾಗಿ]], ಚುನಾಯಿಸಲ್ಪಟ್ಟರು. ಜುಲೈ ೨೫, ೨೦೦೭, ಬುಧವಾರದಂದು ಶ್ರೀಮತಿ. ಪ್ರತಿಭಾ ಪಾಟೀಲರು ತಮ್ಮ ಹೊಸಪದವಿಯನ್ನು ಸ್ವೀಕರಿಸಿದರು. ರಾಷ್ಟ್ರದ ಎಲ್ಲಾ ಜನತೆ, ಪ್ರತಿಭಕ್ಕನವರನ್ನು ಪ್ರೀತಿಯಿಂದ, ಗೌರವಾದರಗಳಿಂದ ಸ್ವಾಗತಿಸಿತು. ಅವರ ೫ ವರ್ಷಗಳ ರಾಷ್ಟ್ರಪತಿಯ ಕಾರ್ಯಾವಧಿಯಲ್ಲಿ, ಭಾರತದೇಶದ ಗೌರವ, ಘನತೆಗಳು ಮುಗಿಲನ್ನು ಮುಟ್ಟಲೆಂದು ಹಾರೈಸಿತು !
== ಪ್ರತಿಭಕ್ಕನವರ ಪೂರ್ವವೃತ್ತಾಂತ ==
ಹಿಂದಿನ ರಾಷ್ಟ್ರಾಧ್ಯಕ್ಷ, ಡಾ. ಅಬ್ದುಲ್ ಕಲಾಂರು ವಿಜ್ಞಾನಿಯಾದರೆ, ಪ್ರತಿಭಾಪಾಟೀಲ್ ರವರು ಒಬ್ಬ ಪಕ್ಕಾ ರಾಜಕೀಯ ಧುರೀಣರು. ರಾಜಕೀಯದಲ್ಲಿ ಚೆನ್ನಾಗಿ ನುರಿತಿದ್ದಾರೆ. ಮಹಾರಾಷ್ಟ್ರದಂತಹ ಪ್ರಗತಿಪರ ರಾಜ್ಯದ ಮುಂಬೈನಗರದಲ್ಲಿ ಅವರು ಹಲವಾರು ವರ್ಷಗಳಿಂದ ಅನೇಕ [[ಜನಕಲ್ಯಾಣ ಮಂತ್ರಿಪದವಿ]]ಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿರುವುದನ್ನು ಅವರ [['ಬಯೋಡೇಟ']]ವನ್ನು, ನೋಡಿದರೆ ಅರ್ಥವಾಗುತ್ತದೆ.
 
ಮಹಿಳೆಯಾದ್ದರಿಂದ ದೇಶದ ಆಗುಹೋಗುಗಳನ್ನು ಅರ್ಥಮಾಡಿಕೊಂಡು, ಅವುಗಳಿಗೆ ಸ್ಪಂದಿಸುವಾಗ ಒಂದು ಮಾತೃತ್ವದಪ್ರೀತಿ, ವಾತ್ಸಲ್ಯ, ಮಮತೆಗಳ ಛಾಯೆಯನ್ನು ನಾವು ಅವರ ಕಾರ್ಯವಿಧಾನಗಳಲ್ಲಿ ನಿರೀಕ್ಷಿಸಬಹುದೆನ್ನಿಸುತ್ತದೆ ! [[ಜಲಗಾವ್]] ನಂತಹ ಚಿಕ್ಕ ಹಳ್ಳಿಯಿಂದ ದೆಹಲಿಯ ರಾಷ್ಟ್ರಪತಿ ಭವನವನ್ನು ಮುಟ್ಟುವವರೆಗಿನ ಜೀವನ ಸಂಘರ್ಷ ಅತ್ಯಂತ ರೋಚಕವಾಗಿದೆ ! ಎಲ್ಲೂ ಹೆಚ್ಚಿನ ವಿವಾದಗಳಿಗೆ ಎಡೆಮಾಡಿಕೊಡದೆ, ಸದ್ದು -ಗದ್ದಲವಿಲ್ಲದೆ, ತಮ್ಮ ಕಾರ್ಯಗಳನ್ನು ನಿಭಾಯಿಸಿಕೊಂಡು ಬಂದ ಪ್ರತಿಭಕ್ಕನವರು, ಯಾವುದೇ ಜವಾಬ್ದಾರಿಯುತ ಹುದ್ದೆಯಲ್ಲಿರಲಿ, ನಮ್ಮ ಬೀ. ಡಿ. ಜತ್ತಿ, ವಸಂತರಾವ್ ನಾಯಿಕ್, ವೈ. ಬಿ. ಚವ್ಹಾನ್ ರಂತಹ ಹೆಸರಾಂತ ರಾಜಕಾರಣಿಗಳನ್ನು ನೆನೆಪಿಗೆ ತರುತ್ತಾರೆ.
== ಮಹಾರಾಷ್ಟ್ರದ ಜಲಗಾಂನ ಮಣ್ಣಿನಮಗಳಾದ ಪ್ರತಿಭಕ್ಕ, [[ಭಾರತದ ಪ್ರಪ್ರಥಮ ಮಹಿಳಾ ರಾಷ್ಟ್ರಾಧ್ಯಕ್ಷ್ಯೆ]] ==
ಪ್ರತಿಭಕ್ಕ, (ಅವರ ಬಾಲ್ಯದ ಹೆಸರು, ಪ್ರತಿಭಾ ಕುಮಾರಿ ಪಟೀಲ್) ಜನಿಸಿದ್ದು ೧೯, ಡಿಸೆಂಬರ್, ೧೯೩೪, ಮಹಾರಾಷ್ಟ್ರದ ಜಲಗಾಂ, ಹತ್ತಿರದ [[ ನಾಡ್ ಗಾಂ]], ಎಂಬ ಹಳ್ಳಿಯ ಒಂದು ಸಾಹುಕಾರ ಪರಿವಾರದಲ್ಲಿ. ಅವರ ತಂದೆಯವರ ಹೆಸರು, ನಾರಾಯಣ ಪಗ್ಲು ರಾವ್. ಮೂಲತಃ ಅವರ ಮನೆತನದವರು [[ರಾಜಾಸ್ತಾನ]]ನಿಂದ ಬಂದು ಮಹಾರಾಷ್ಟ್ರದ [[ಜಲಗಾವ್]] ನಲ್ಲಿ ವಾಸ್ತವ್ಯ ಹೂಡಿ, ಹತ್ತಿರ ಹತ್ತಿರ ಒಂದು ಶತಮಾನವೇ ಆಗಿರಬಹುದು. ಪ್ರಾಥಮಿಕ ಮಾಧ್ಯಮಿಕ ಶಾಲಾಶಿಕ್ಷಣಗಳನ್ನು ಜಲಗಾಂ ನ, ಆರ್. ಆರ್. ಸ್ಕೂಲಿನಲಿ ಮಾಡಿದರು. ತಮ್ಮ ಎಮ್. ಎ. ಡಿಗ್ರಿಯನ್ನು ಮೂಲ್ಜಿ ಜೈತ ಕಾಲೇಜ್ (ಎಮ್. ಜೆ) ನಲ್ಲಿ ಓದಿಮುಗಿಸಿದರು. "ಇಂಟರ್ ಕಾಲೇಜಿಯೇಟ್ ಭಾಷಣ ಸ್ಪರ್ಧೆ," ಗಳಲ್ಲಿ ಭಾಗವಹಿಸಿ, ಅನೇಕ ಪಾರಿತೋಷಕಗಳನ್ನು ಮೆಡಲ್ ಗಳನ್ನೂ ಗೆದ್ದಿದ್ದಾರೆ. ಇವರೊಬ್ಬ ಪ್ರಮುಖ ಟೇಬಲ್ ಟೆನ್ನಿಸ್ ಆಟಗಾರರಾಗಿ ತಮ್ಮ ಕಾಲೇಜನ್ನು ಪ್ರತಿನಿಧಿಸಿದ್ದರಂತೆ. ೧೯೬೨ ರಲ್ಲಿ ಅವರ ಕಾಲೇಜಿನಿಂದ, [[" ಎಮ್. ಜೆ. ಕಾಲೇಜ್ ಕ್ವೀನ್]]," ಎಂಬುದಾಗಿ ಚುನಾಯಿಸಲ್ಪಟ್ಟಿದರು ! ಅದೇ ವರ್ಷದಲ್ಲಿ ಅಡಿಲಾಬಾದ್ ನಲ್ಲಿ, "ಇಂಡಿಯನ್ ನ್ಯಾಷನಲ್ ಕಾಂಗ್ರೆಸ್," ಟಿಕೆಟ್ ಪಡೆದು ಅಸೆಂಬ್ಲಿ ಎಲೆಕ್ಷನಲ್ಲಿ ನಿಂತು, ಜಯಶೀಲರಾದರು. ಪ್ರತಿಭಾಪಾಟೀಲ್ ಮದುವೆಯಾದದ್ದು [[ಶ್ರೀ. ದೇವಿಸಿಂಗ್, ರಾಣ್ ಸಿಂಗ್ ಶಿಖಾವತ್]] ರವರ ಜೊತೆಗೆ- ೪೨ ವರ್ಷಗಳ ಹಿಂದೆ, ಜುಲೈ, ೭, ೧೯೬೫ ರಲ್ಲಿ. ಶಿಖಾವತ್ ಒಬ್ಬ ಸಂಘಟಕ, ಹಾಗೂ ಶಿಕ್ಷಣ ಪ್ರಸಾರಕ. ಕೆಲವು ವೈಯಕ್ತಿಕ ಕಾರಣಗಳಿಂದ ತಮ್ಮ ಪರಿವಾರದ [[ಪಾಟೀಲ್ ]] ಉಪನಾಮವನ್ನೆ, ತಮ್ಮ ಹೆಸರಿನ ಜೊತೆಗೆ ಸೇರಿಸಿಕೊಂಡಿದ್ದಾರೆ. ಈ ದಂಪತಿಗಳಿಗೆ, ಒಬ್ಬ ಮಗ ಮತ್ತು ಒಬ್ಬ ಮಗಳಿದ್ದಾರೆ.
== ಶ್ರೀಮತಿ. ಪ್ರತಿಭಾ ಪಾಟೀಲ್ ರ ವೃತ್ತಿಜೀವನ ==
ಪ್ರತಿಭಕ್ಕನವರು ಮೊದಲು ಸೋಶಿಯಲ್ ವರ್ಕರ್, ಆಗಿ ತಮ್ಮ ವೃತ್ತಿಯನ್ನು ಶುರುಮಾಡಿದರು. ಶ್ರೀಮತಿ ಪ್ರತಿಭಾ ದೇವಿಸಿಂಗ್ ಪಾಟೀಲ್ , [[ಎಮ್. ಎ ]] ; [[ಎಲ್. ಎಲ್. ಬಿ ]] ; [[ಎಮ್. ಜೆ. ಕಾಲೇಜ್]], ಜಲಗಾಂನಲ್ಲಿ [ಮಹಾರಾಷ್ಟ್ರ] ಮತ್ತು [[ಗವರ್ನಮೆಂಟ್ ಲಾ ಕಾಲೇಜ್]], ಬೊಂಬಾಯಿ. ಲಾ ಪದವೀಧರೆಯಾದಮೇಲೆ ಜಲಗಾವ್ ನಲ್ಲಿ ಅಡ್ವೊಕೇಟಾಗಿ ಕೆಲಸಮಯ ದುಡಿದರು.
[[ಚಿತ್ರ:Pratibha Patil 2.jpg|thumb |100px|ರಾಜಾಸ್ಥಾನರಾಜ್ಯದ ೧೬ ನೆಯ ಗವರ್ನರ್ ಆಗಿ ಶ್ರೀಮತಿ. ಪ್ರತಿಭಾ ಪಾಟೀಲ್ ]]
ನವೆಂಬರ್, ೮, ೨೦೦೪ ರಿಂದ ರಾಜಾಸ್ಥಾನರಾಜ್ಯದ ೧೬ ನೆಯ ಗವರ್ನರ್ ಆಗಿ, ಇದುವರೆವಿಗೂ ಅಂದರೆ, ರಾಷ್ಟ್ರಪತಿಸ್ಥಾನಕ್ಕೆ ಚುನಾವಣೆಗೆ ಅಭ್ಯರ್ಥಿಯಾಗಿ ನಿಲ್ಲುವವರೆಗೆ, ಸೇವೆಸಲ್ಲಿಸುತ್ತಿದ್ದರು. ಅವರು ರಾಜಾಸ್ಥಾನದ ಪ್ರಥಮ ಮಹಿಳಾಗವರ್ನರ್ ಕೂಡ. ೨೦೦೭ ರ ಆಗಸ್ಟ್ ತಿಂಗಳಲ್ಲಿ ಈಗಾಗಲೇ ರಾಷ್ಟ್ರವನ್ನುದ್ದೇಶಿಸಿ ಒಂದು ಅತ್ಯಂತ ಪ್ರಭಾವಿ ಭಾಷಣವನ್ನು ಮಾಡಿದರು. ಅದರಲ್ಲಿ ಮಹಿಳೆಯರು, ಮಕ್ಕಳು, ಮತ್ತು ಎಲ್ಲಾ ವರ್ಗದ ಜನರ ಹಿತಗಳ ಬಗ್ಗೆ ಒತ್ತು ಕೊಟ್ಟು ಮಾತಾಡಿದರು. ಇತ್ತೀಚೆಗೆ [[ಕಿತ್ತೂರು ರಾಣಿ ಚೆನ್ನಮ್ಮ]]ನವರ ವಿಗ್ರಹವನ್ನು, ಪಾರ್ಲಿಮೆಂಟ್ ಭವನದ ಮುಂದೆ ಉದ್ಘಾಟಿಸುವ ಮೂಲಕ, ಮಹಿಳೆಯರ ಮಹತ್ವವನ್ನು ದೇಶದ ಜನತೆಗೆ ಪರಿಚಯಿಸಿದರು.
{{-}}
== ಶ್ರೀಮತಿ. ಪ್ರತಿಭಾ ಪಾಟೀಲ್, ’[[ಯುದ್ಧ ವಿಮಾನ ಸುಖೋಯ್]]’ ನಲ್ಲಿ ಪ್ರಯಾಣಿಸಿದ (೭೪ ವರ್ಷಪ್ರಾಯದ) ’[[ಪ್ರಥಮ ಮಹಿಳಾ ರಾಷ್ಟ್ರಾಧ್ಯಕ್ಷೆ]]’ ==
ಬುಧವಾರ, (೨೦೦೯ ರ, ನವೆಂಬರ್ ೨೫ ರಂದು) ಪುಣೆಯ ’[[ಲೋಹೆಗಾನ್ ವಾಯುನೆಲೆ]]’ ಯಲ್ಲಿ, '[[ಎಂ. ಕೆ. ಐ, ಯುದ್ಧವಿಮಾನ, ಸುಖೋಯ್]]' ನಲ್ಲಿ ಅರ್ಧಗಂಟೆ ಹಾರುವುದರ ಮೂಲಕ, ಇಂತಹ ಸಾಹಸಕಾರ್ಯ ಮಾಡಿದ ’ಜಗತ್ತಿನ ಪ್ರಥಮ ಮಹಿಳಾರಾಷ್ಟ್ರಾಧ್ಯಕ್ಷೆ,’ ಎಂಬ ದಾಖಲೆಯನ್ನು ನಿರ್ಮಿಸಿದರು. ೧,೨೩೬ ಕಿ. ಮೀ. ವೇಗದಲ್ಲಿ ಹಾರಿದ ಯುದ್ಧ ವಿಮಾನ, ಆಗಸದಲ್ಲಿ ಯಾವ ಕಸರತ್ತನ್ನೂ ಮಾಡದೆ, ಬಂದಿಳಿದಾಗ, ನಮ್ಮ ರಾಷ್ಟ್ರದ ’ಮೂರು ಸೇನಾ-ಪಡೆಗಳ ಮಹಾ-ದಂಡನಾಯಕಿಯಾಗಿರುವ ಪ್ರತಿಭಾ ಪಾಟೀಲ್’ ವಿಜಯದ ನಗೆಯೊಂದಿಗೆ, ’[[ಪೈಲೆಟ್ ವಿಂಗ್ ಕಮ್ಯಾಂಡರ್, ಶ್ರೀ. ಎಸ್. ಸಜ್ಜನ್]]’ ರವರ ಕೈಕುಲಿಕಿ, ಹಾರಾಟ ಸಾಂಗವಾಗಿ ನೆರೆವೇರಿದ್ದಕ್ಕೆ ಶ್ಲಾಘಿಸಿದರು. ಯುದ್ಧನೌಕಾಯಾನದಲ್ಲಿ ಭಾಗವಹಿಸಿದ ೭೪ ವರ್ಷದ ಅತ್ಯಂತ ಹಿರಿಯಮಹಿಳೆಯೆಂಬ ಕೀರ್ತಿಯೂ ಅವರದಾಯಿತು. '[[ಜಿ. ಸೂಟ್]]' ಧರಿಸಿ, ಸಹ-ಚಾಲಕನ ಸೀಟ್ ನಲ್ಲಿ ವಿರಮಿಸಿದ್ದ ಪಾಟೀಲ್ ಗೆ, ಸಂಕಟ ಬಂದಾಗ ತುರ್ತು ನಿರ್ಗಮನ, ಮುಂತಾದ ಹಲವು ಎಚ್ಚರಿಕೆಯ ಸೂಚನೆಗಳನ್ನು ನೀಡಲಾಗಿತ್ತು.
 
== ’[[ಡಾ. ಎ. ಪಿ. ಜೆ. ಅಬ್ದುಲ್ ಕಲಾಂ]]’ಕೂಡಾ ತಮ್ಮ ರಾಷ್ಟ್ರಪತಿ-ಸಮಯಾವಧಿಯಲ್ಲಿ 'ಸುಖೋಯ್,'ನಲ್ಲಿ ಹಾರಿದ್ದರು ==
ಹಿಂದಿನ ರಾಷ್ಟ್ರಪತಿ, ’[[ಡಾ. ಎ. ಪಿ. ಜೆ. ಅಬ್ದುಲ್ ಕಲಾಂ]]’ ಕೂಡ ಸುಖೋಯ್ ಯುದ್ಧ ವಿಮಾನದಲ್ಲಿ ಪ್ರಯಾಣಿಸಿದ್ದರು. ಹೀಗಾಗಿ ಪ್ರತಿಭಾ ಪಾಟೀಲ್ ರು ಎರಡನೆಯ ರಾಷ್ಟ್ರಪತಿಯಾಗಿದ್ದಾರೆ. ಹಾರಾಟಕ್ಕೆ ಪೂರ್ವಭಾವಿಯಾಗಿ ಪಾಟೀಲ್ ರಿಗೆ, ವಿಶ್ರಾಂತಿ-ಗೃಹದಲ್ಲಿ ವೈದ್ಯಕೀಯ ಪರೀಕ್ಷೆಯನ್ನು ಮಾಡಿ, ಅವರ ಆರೋಗ್ಯ ಹಾರಲು ಅನಾನುಕೂಲವಿಲ್ಲ ವೆಂಬುದನ್ನು ಖಾತ್ರಿಮಾಡಲಾಗಿತ್ತು.
ಇಂದಿನ ಪ್ರಸಕ್ತ ಸಂದರ್ಭದಲ್ಲಿ ದೊರೆಯುತ್ತಿರುವ ರಕ್ಷಣಾ-ಸಂಪನ್ಮೂಲಗಳು ಮತ್ತು ನಮ್ಮ ದೇಶದ ವಾಯುಪಡೆಯ ಪೈಲೆಟ್ ಗಳ ವಾಯುಯಾನದ ಸಾಮರ್ಥ್ಯವನ್ನು ಅವರು ಮೆಚ್ಚಿ ಕೊಂಡಾಡಿದರು. ಅದೊಂದು ಅಧ್ಬುತ ಅನುಭವಾಗಿತ್ತೆಂದು ಅವರು ಪತ್ರಿಕಾಕರ್ತರಿಗೆ ತಿಳಿಸಿದರು.
 
== ರಾಜಕೀಯಕ್ಷೇತ್ರದಲ್ಲಿ ಶ್ರೀಮತಿ ಪ್ರತಿಭಾಪಾಟೀಲರು, ನಿರ್ಮಿಸಿದ ಹೆಜ್ಜೆಗುರುತುಗಳು : ==
<!--ವಕೀಲಿ ವೃತ್ತಿ -->
* ೧೯೬೨ರಲ್ಲಿ ಎಸ್.ಬಿ. ಚವಾಣ್‌ರಂಥ ಮರಾಠ ನೇತಾರರ ಪ್ರಭಾವದ ಅಡಿ ತಮ್ಮ ರಾಜಕೀಯ ಜೀವನ ಆರಂಭಿ
೧೦೦ ನೇ ಸಾಲು:
 
-->
== ವಿದೇಶ ಪ್ರವಾಸದ ==
[[ಚಿತ್ರ:Pratibha_patil_brazil_visit.jpg|thumb |120px|ಶ್ರೀಮತಿ. ಪ್ರತಿಭಾ ಪಾಟೀಲ್ - ವಿದೇಶ ಪ್ರವಾಸ - ಬ್ರಾಜಿಲ್]]
* ಯುರೋಪ್ : ಬ್ರಿಟನ್ , ಸೈಪ್ರಸ್ಗೆ, ಸ್ಪೇನ್ ಮತ್ತು ಪೋಲೆಂಡ್‌
೧೦೬ ನೇ ಸಾಲು:
* ಅಮೆರಿಕ : ಲ್ಯಾಟಿನ್ ಅಮೆರಿಕ, ಬ್ರಾಜಿಲ್
{{-}}
== ವಿಕಿಮೀಡಿಯಾ ==
ಚಿತ್ರ ಗ್ಯಾಲರಿ- ಪ್ರತಿಭಾ ಪಾಟೀಲ್
{{commonscat}}
೧೨೨ ನೇ ಸಾಲು:
[[bn:প্রতিভা দেবীসিংহ পাটিল]]
[[bpy:প্রতিভা পাতিল]]
[[cs:Pratibha PátilPátilová]]
[[da:Pratibha Patil]]
[[de:Pratibha Patil]]
"https://kn.wikipedia.org/wiki/ಪ್ರತಿಭಾ_ಪಾಟೀಲ್" ಇಂದ ಪಡೆಯಲ್ಪಟ್ಟಿದೆ