ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: nds:Nobelpries för Literatur
ಚು robot Modifying: br:Priz Nobel al Lennegezh; cosmetic changes
೧ ನೇ ಸಾಲು:
'''ಸಾಹಿತ್ಯದಲ್ಲಿ [[ನೋಬೆಲ್ ಪ್ರಶಸ್ತಿ]]'''ಯು ([[ಸ್ವೀಡನ್‌ನ ಭಾಷೆ]]: Nobelpriset i litteratur) ೧೯೦೧ರಿಂದ, [[ಆಲ್‌ಫ್ರೆಡ್ ನೋಬೆಲ್]]‌ರ ಉಯಿಲಿನಲ್ಲಿರುವ ಶಬ್ದಗಳಲ್ಲಿ ಹೇಳುವುದಾದರೆ, "ಸಾಹಿತ್ಯದ ಕ್ಷೇತ್ರದಲ್ಲಿ ಒಂದು ಧ್ಯೇಯಪರ ಮಾರ್ಗದಲ್ಲಿ ಅತ್ಯುತ್ತಮ ಗ್ರಂಥವನ್ನು" ಸೃಷ್ಟಿಸಿದ ಯಾವುದೇ ದೇಶದ ಒಬ್ಬ ಲೇಖಕನಿಗೆ ವಾರ್ಷಿಕವಾಗಿ ನೀಡಲಾಗುತ್ತದೆ (ಮೂಲ ಸ್ವೀಡನ್‌ನ ಭಾಷೆ: ''den som inom litteraturen har producerat det utmärktaste i idealisk riktning''). ಕೆಲವೊಮ್ಮೆ ಪ್ರತ್ಯೇಕ ಕೃತಿಗಳನ್ನೂ ಉಲ್ಲೇಖಿಸಲಾಗುತ್ತದಾದರೂ, ಈ ಸಂಬಂಧದಲ್ಲಿ "ಗ್ರಂಥ" ಸಮಗ್ರವಾಗಿ ಒಬ್ಬ ಲೇಖಕನ ಕೃತಿಯನ್ನು ನಿರ್ದೇಶಿಸುತ್ತದೆ. ಯಾವುದೇ ಒಂದು ನಿರ್ದಿಷ್ಟ ವರ್ಷದಲ್ಲಿ ಯಾರು, ಯಾರಾದರೂ ಇದ್ದರೆ, ಪ್ರಶಸ್ತಿಯನ್ನು ಸ್ವೀಕರಿಸುತ್ತಾರೆಂಬುದನ್ನು [[ಸ್ವೀಡನ್‌ನ ಅಕಾಡೆಮಿ]]ಯು ನಿರ್ಧರಿಸುತ್ತದೆ ಮತ್ತು [[ಅಕ್ಟೋಬರ್]] ತಿಂಗಳ ಆರಂಭದಲ್ಲಿ ಆಯ್ಕೆಮಾಡಲಾದ ಪ್ರಶಸ್ತಿಗ್ರಾಹಕನ ಹೆಸರನ್ನು ಘೋಷಿಸುತ್ತದೆ.
== ’ಆಲ್ಫ್ರೆಡ್ ನೊಬೆಲ್’ ರ ಇಚ್ಛೆಯಪಾಲನೆ ==
'ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ' ಯನ್ನು ನೀಡುವ ಪ್ರಕ್ರಿಯೆಯನ್ನು ನಿರ್ಧರಿಸುವ ಜವಾಬ್ದಾರಿಯನ್ನು ’[[ಆಲ್ಫ್ರೆಡ್ ನೊಬೆಲ್]]’ ರ ಇಚ್ಛೆಯಂತೆ '[[ಸ್ವೀಡನ್ ದೇಶದ ಸಾಹಿತ್ಯ ಅಕಾಡೆಮಿ]],’ ನಿರ್ಧರಿಸುತ್ತಿದೆ. ಈ ಪ್ರಶಸ್ತಿಯನ್ನು ’ಒಂದು ಆದರ್ಶವಾದಿ ದೃಷ್ಟಿಕೋನದಿಂದ ನಿರ್ಧರಿಸಲ್ಪಟ್ಟ, ಅತಿ ಶ್ರೇಷ್ಠ ಕೃತಿಗೆ,'The most outstanding work in an ideal direction,' ಕೊಡಬೇಕೆನ್ನುವುದು ’ನೋಬೆಲ್ ಮಹಾಶಯ’ ರ ಧ್ಯೇಯವಾಗಿತ್ತು.
ಪ್ರಾರಂಭದಲ್ಲಿ ’ಸ್ವೀಡಿಷ್ ಅಕಾಡೆಮಿ’ ಯ ಸದ್ಯರಿಗೆ ತಾವೇಕೆ ಈ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕೆಂಬ ಭಾವನೆಯಿತ್ತು. ಆದರೆ, ’ಕಾರ್ಲ್ ಡೇವಿಡ್ ವಿರ್ಸೆನ್’ ಎಂಬ ಕಾರ್ಯದರ್ಶಿಗೆ, ಇಂಥ ಸುವರ್ಣಸಂಧಿಯನ್ನೇಕೆ ಹಾಳುಮಾಡಿಕೊಳ್ಳಬೇಕೆಂಬ ಅನಿಸಿಕೆಯಾಯಿತು. ತಮಗೆ ಇದರಿಂದ ಜಾಗತಿಕ ಮನ್ನಣೆ, ಅಧಿಕಾರ, ಹಾಗೂ ಪ್ರಚಾರ ಸಿಗುವ ಅವಕಾಶ, ಸುಸಂಧಿಗಳಿದ್ದವು. ಅವನು ತನ್ನ ಅನುಚರರಿಗೆ ಇದರಬಗ್ಗೆ ತಿಳಿಯಹೇಳಿ ಒಪ್ಪಿಸಿದ್ದಲ್ಲದೆ, ತನ್ನ ’ವಿಲುನಾಮೆ’ ಯಲ್ಲಿದ್ದ ’ಆದರ್ಶ ವಾದಿ ದೃಷ್ಟಿಕೋನ’ಎಂದರೆ, ’ಉನ್ನತ ಮಟ್ಟದ ನೈತಿಕ ಆದರ್ಶವೆಂದು ಅನುಸಂಧಾನ ಮಾಡಿಕೊಂಡು ದೇಶ, ಚರ್ಚ್ ಮತ್ತು ಕುಟುಂಬ ವ್ಯವಸ್ಥೆಯನ್ನು ವಿಮರ್ಶಾತೀತವೆಂದು ಪರಿಗಣಿಸುವ ಧಾರ್ಮಿಕ ಆದರ್ಶವಾದಿ ಕೃತಿಕಾರರಿಗೆ ಮಾತ್ರ ಬಹುಮಾನ ದೊರಕುವಂತೆ ನೋಡಿಕೊಂಡ. ಆದಕಾರಣ, ’ಲಿಯೊ ಟಾಲ್ ಷ್ಟಾಯ್’ ’ಹೆನ್ರಿಕ್ ಇಬ್ಸನ್’ ಮತ್ತು ’ಎಮಿಲಿ ಜೋಲಾ’ ರಂತಹ ಶ್ರ‍ೇಷ್ಟ ಮಟ್ಟದ ಸಾಹಿತಿಗಳಿಗೆ ನೋಬೆಲ್ ಪ್ರಶಸ್ತಿ ಸಿಗಲಿಲ್ಲ. ಇದು ೧೯೦೧ ರಿಂದ ೧೯೧೨ ರ ವರೆಗಿನ ಮೊದಲ ಘಟ್ಟವಾಗಿತ್ತು.
== ಎರಡನೆಯ ಘಟ್ಟ ==
ಮೊದಲನೆಯ ಮಹಾಯುದ್ಧದ ಅಲಿಪ್ತ ನೀತಿಯ ಘಟ್ಟವೆಂದು ಗುರುತಿಸಲಾಗಿದೆ. ದೊಡ್ಡ ರಾಷ್ಟ್ರಗಳೆಲ್ಲಾ ಎರಡು ಬಣಗಳಾಗಿ ಯುದ್ಧದಲ್ಲಿ ನಿರತರಾದಾಗ ನೊಬೆಲ್ ಸಮಿತಿ ಯಾವ ಬಣಕ್ಕೂ ಸೇರದ ಸಣ್ಣ ರಾಷ್ಟ್ರಗಳ ಸಾಹಿತಿಗಳಿಗೆ ಹಾಗೂ (ವಿಜ್ಞಾನಿಗಳಿಗೆ) ನೊಬೆಲ್ ಪ್ರಶಸ್ತಿಯನ್ನು ಕೊಟ್ಟಿತು. ನಾರ್ವೆ ದೇಶದ ’ನಟ್ ಹ್ಯಾಮ್ಸನ್’ ಮುಂತಾದವರಿಗೆ ಈ ಸಮಯದಲ್ಲಿ ’ನೊಬೆಲ್ ಪ್ರಶಸ್ತಿ’ ದೊರೆಯುವಂತಾಯಿತು.
== ೧೯೨೦ ರ ನಂತರ ==
ಕೆಲವು ವರ್ಷಗಳ ಕಾಲ, ಭವ್ಯ ಶೈಲಿಯ ಉದಾತ್ತ ನಿಲುವಿನ ಕೃತಿಗಳಿಗೆ ನೊಬೆಲ್ ಅಕಾಡೆಮಿ ಒಲವನ್ನು ತೋರಿಸಿತು.’ ಆದರ್ಶವಾದಿ ದೃಷ್ಟಿಕೋನ’ ವೆಂಬ ಪರಿಕಲ್ಪನೆಗೆ ಈ ಸಮಯದಲ್ಲಿ ಒಂದು ಹೊಸ ಅರ್ಥ ಬಂದಿತ್ತು. ಅದು ’ಉದಾರ ಹೃದಯದ ಮಾನವತೆ,’ ಎಂದು ’ಸ್ವೀಡಿಷ್ ಅಕಾಡೆಮಿ,’ ಅರ್ಥೈಸಿಕೊಂಡು, ’ಅನಾತೋಲ್ ಫ್ರಾನ್ಸ್’, ಹಾಗೂ ’ಜಾರ್ಜ್ ಬರ್ನಾರ್ಡ್ ಷಾ’ ರಂತಹ ಲೇಖಕರಿಗೆ ಪ್ರಶಸ್ತಿ ದೊರೆತದ್ದು ಈ ಘಟ್ಟದಲ್ಲೇ.
== ೧೯೩೦ ರ ದಶಕದಲ್ಲಾದ ಬದಲಾವಣೆಗಳು ==
ದಲ್ಲಿ ’ಸ್ವೀಡಿಷ್ ಅಕಾಡೆಮಿ’ ಯಾವ ಸಾಹಿತ್ಯ ಕೃತಿಗೆ ಜಾಗತಿಕ ಮಹತ್ವವಿದೆ. ಎನ್ನುವುದನ್ನು ಗಮನಕ್ಕೆ ತಂದುಕೊಂಡು ಪ್ರಶಸ್ತಿ ನೀಡುವ ಪರಿಪಾಠವನ್ನು ಬೆಳೆಸಿಕೊಳ್ಳಲಾರಂಭಿಸಿತು. ಇಂತಹ ಕಾಲ-ಘಟ್ಟದಲ್ಲಿ ಪ್ರಶಸ್ತಿವಿಜೇತರದವರು, ’ಪರ್ಲ್. ಎಸ್. ಬಕ್’ ಹಾಗೂ ’ಸಿಂಕ್ಲೇರ್ ಲೂಯಿಸ್’ ರಂತಹ ಜನಪ್ರಿಯ ಸಾಹಿತಿಗಳು. ಕೆಲವು ವಿಮರ್ಶಕರ ಪ್ರಕಾರ, ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ನೀಡುವ ಅರ್ಹತೆ ’ಸ್ವೀಡಿಷ್ ಅಕಾಡೆಮಿ’ ಗೆ ಇಲ್ಲವೆಂದು.
== ’ಎರಡನೆಯ ಮಹಾಯುದ್ಧ’ ದ ಬಳಿಕ ==
೧೯೪೦-೪೧-೪೨೪೩- ವರ್ಷಗಳಲ್ಲಿ ನೋಬೆಲ್ ಪ್ರಶಸ್ತಿ ನಿಲ್ಲಿಸಲಾಗಿತ್ತು.೧೯೪೪ ರಲ್ಲಿ ’ಆಯಾಂಡರ್ಸ್ ಆಸ್ಟರ್ ಲಿಂಗ್’ ಯೆಂಬುವ ನೇತೃತ್ವದಲ್ಲಿ ಹೊಸ ಅಕಾಡೆಮಿಯನ್ನು ರಚಿಸಿ, ಪದಾಧಿಕಾರಿಗಳು ಸಾಹಿತ್ಯವಲಯದಲ್ಲಿ ಹೊಸ ಪಂಥಗಳು, ಹೊಸ ಶೈಲಿಗಳಲ್ಲಿ ಕೃತಿರಚನೆಗೆ ಆದ್ಯತೆಯನ್ನು ಕೊಡಾಲಾರಂಭಿಸಿದರು. ನಿರ್ಧರಿಸಿದರು. ೧೯೩೦ ರ ಸಮಿತಿಯ ಮಾನದಂಡಕ್ಕೆ ಸಿಗದೆ, ಬಹುಮಾನದಿಂದ ವಂಚಿತರಾದ ’ಹರ್ಮನ್ ಹೆಸ್’, ೧೯೪೬ ರಲ್ಲಿನೊಬೆಲ್ ಪ್ರಶಸ್ತಿ ಪಡೆದರು. ಆದರೆ ಪ್ರಶಸ್ತಿಗೆ ಅರ್ಹತೆ ಪಡೆದ, ’ಎಜ್ರಾ ಪೌಂಡ್,’ ಕೆಲವು ರಾಜಕೀಯ ಕಾರಣಗಳಿಂದಾಗಿ ತಿರಸ್ಕರಿಸಲ್ಪಟ್ಟರು.ಇದಕ್ಕೆ ಮೊದಲಿನ ಮಾನದಂಡಗಳಿಗೆ ಮಾನ್ಯತೆ ನೀಡಿ ತಿರಸ್ಕರಿಸಲ್ಪಟ್ಟ ’ಪೌಲ್ ವೆಲೆರಿ’, ’ಜೇಮ್ಸ್ ಜಾಯ್ಸ್’, ಮುಂತಾದವರಿಗೂ ಈಗ ಪ್ರಶಸ್ತಿ ನೀಡುವುದು ಅನಿವಾರ್ಯವೆಂದು ಅಕಾಡೆಮಿ ನಿರ್ಣಯಕ್ಕೆ ಬಂದಾಗ್ಯೂ ಅವರು ತೀರಿಕೊಂಡಿದ್ದರಿಂದ ಅದು ಸಾಧ್ಯವಾಗಲಿಲ್ಲ. (ಮಾರ್ಗದರ್ಶೀ ಸೂತ್ರಗಳ ಸ್ಪಷ್ಟತೆಯಿಲ್ಲದೆ, ತನ್ನ ರಾಜಕಾರಣಗಳಿಗೆ ಬಂದಿಯಾಗಿ, ’ಪ್ರಶಸ್ತಿ ಪ್ರದಾನ ಸಮಿತಿ’, ’ಮಹಾತ್ಮಾ ಗಾಂಧಿ’ ಯಂತಹ ನಿಷ್ಟಾವಂತರಿಗೆ, ಅವರು ೧೯೪೮ ರಲ್ಲಿ ಕೊಲೆಯಾದ ಕಾರಣವನ್ನೇ ನೆಪಮಾಡಿ, ತಿರಸ್ಕರಿಸಿದರು) ಆ ವರ್ಷ ನೊಬೆಲ್ ಶಾಂತಿ ಬಹುಮಾನವನ್ನು ವಜಾಮಾಡಿದರು. '(ನೊಬೆಲ್ ಪ್ರಶಸ್ತಿ, ಮರಣೋತ್ತರ ಕೊಡುವ ಪರಿಪಾಠವಿಲ್ಲ)
 
== ೧೯೭೦ ರ ದಶಕದಲ್ಲಿ ==
ನಂತರ, ನವ್ಯ ಸಾಹಿತ್ಯದ ಬಿರುಸು ಕಡಿಮೆಯಾದಮೇಲೆ ಹೊಸ ಪಂಥ, ಹೊಸ ಶೈಲಿಗಳ ಹುಡುಕಾಟ ಕ್ರಮೇಣ ಅಕಾಡೆಮಿಗೆ ಕಡಿಮೆಯಾಯಿತು. ಮುಂದೆ ಅಜ್ಞಾತ ಪ್ರತಿಭೆಗಳ ಹುಡುಕಾಟ ಶುರುವಾಯಿತು. ೧೯೭೮ ರಲ್ಲಿ ’ಐಸಾಕ್ ಭಾಷೆವಿಸ್ ಸಿಂಗರ್ ’ರಂತಹ ಲೇಖಕರು, ಜಗತ್ತಿಗೆ ಪರಿಚಯವಾದದ್ದು ನೋಬೆಲ್ ಪ್ರಶಸ್ತಿಯಿಂದಲೇ ಎನ್ನಬಹುದು. ಅಂತಹವರಲ್ಲಿ ಭಾರತದ ’ರವೀಂದ್ರನಾಥ ಠಾಕೂರ್’ ರರೂ ಒಬ್ಬರು.
== ೧೯೮೬ ರ ತರುವಾಯ ==
ಜಗತ್ತಿನ ಬೇರೆಬೇರ ಭಾಗಗಳಲ್ಲೂ ವಿಪುಲವಾದ ಸಾಹಿತ್ಯ ಭಂಡಾರ ಸೃಷ್ಟಿಯಾಗುತ್ತಿರುವು ಪ್ರಥಮಬಾರಿಗೆ ಕಮಿಟಿಯವರ ಕಣ್ಣಿಗೆ ಬಿತ್ತು. ಯೂರೋಪ್ ಖಂಡ ದ ಲೇಖರನ್ನೇ ಆರಿಸುತ್ತಿದ್ದರು. ಇದರ ಫಲವೇ, ’ಯಸುನಾರಿ ಕವಬಾಟ’, 'v'ole ಸೊಯಿಂಕ’, ’ನಾಗ್ಯೂಬ್’, ಮಹಫೌಸ್, ಮುಂತಾದ ವಿಭಿನ್ನ ಸಾಂಸ್ಕೃತಿಕ ಪಂಗಡಕ್ಕೆ ಸೇರಿದ ಲೇಖಕರಿಗೆ ಪ್ರಶಸ್ತಿ ದಕ್ಕಲಾರಂಭಿಸಿತು.
== ಪ್ರಸಕ್ತ ನೀತಿ ==
ಇಂದಿನ ದಿನಗಳಲ್ಲಿ ’ಆಲ್ಫ್ರೆಡ್ ನೋಬೆಲ್’ ರ ’ವಿಲುನಾಮೆ’ ಯನ್ನು ಕಣ್ಣುಮುಚ್ಚಿಕೊಂಡು ಅನುಕರಿಸುವ ಪ್ರವೃತ್ತಿ ಕಡಿಮೆಯಾಗಿ, ಶ್ರೇಷ್ಟ ಸಾಹಿತ್ಯವನ್ನು ಅದರದೆ ನೆಲೆಯಲ್ಲಿ ಗುರುತಿಸುವ ಪ್ರಯತ್ನಗಳು ನಡೆಯುತ್ತಿವೆ. ಕೆಲವು ವಿಮರ್ಶಕರ ಪ್ರಕಾರ, ಕೆಲವು ಕಂಡ ಹಾಗೂ ಕೆಲವು ಕಾಣಿಸದ ಕಾರಣಗಳಿಗಾಗಿಯೇ ನೋಬೆಲ್ ಪ್ರಶಸ್ತಿ ಸಿಕ್ಕುವ ಇಲ್ಲವೇ ಅದರಿಂದ ವಂಚಿತರಾಗುವ ಸನ್ನಿವೇಷಗಳು ದಾಖಲೆಗೆ ಸಿಗುತ್ತವೆ. ಆದರೆ ನೋಬೆಲ್ ಪ್ರಶಸ್ತಿ ಒಬ್ಬ ವ್ಯಕ್ತಿಯ ಸಾಹಿತ್ಯ ಸೇವೆ, ಮತ್ತು ಅದರಲ್ಲಿನ ಪರಿಣತಿ ಹಾಗೂ ಸಮಾಜಕ್ಕೆ ಅದರ ಕೊಡುಗೆಯನ್ನು ದರ್ಶ್ಯಾಯಿಸುತ್ತದೆ. ಇದಕ್ಕೆ ನಿದರ್ಶನವಾಗಿ ವ್ಯಕ್ತಿಯ ಪ್ರತಿಷ್ಠೆ, ಸ್ಥಾನಮಾನಗಳು ಜಗತ್ತಿನಲ್ಲಿ ಹೆಚ್ಚಿರುವ ಸಂಗತಿಗಳಿಗೆ ಕೊರತೆಯಿಲ್ಲ.
 
೩೬ ನೇ ಸಾಲು:
[[bg:Нобелова награда за литература]]
[[bn:সাহিত্যে নোবেল পুরস্কার]]
[[br:Priz Nobel al lennegezhLennegezh]]
[[bs:Nobelova nagrada za književnost]]
[[ca:Premi Nobel de Literatura]]