"ಜಾರ್ಜ್ ಬರ್ನಾರ್ಡ್ ಷಾ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಬರ್ನಾರ್ಡ್ ಷಾ ೬೦ ಕ್ಕೂ ಹೆಚ್ಚು ನಾಟಕಗಳನ್ನು ಬರೆದರು. ಇದಲ್ಲದೆ ಸಾಹಿತ್ಯ ವಿಮರ್ಶೆ ಮತ್ತು ಸಂಗೀತದ ಬಗ್ಗೆಯೂ ಬರೆದರು. ಇವರು ಪ್ರಸಿದ್ಧ ವಾಗ್ಮಿಯಾಗಿಯೂ ಹೆಸರು ಮಾಡಿದರು. ತಮ್ಮ ಕೃತಿಗಳಲ್ಲಿ ಸಾಮಾಜಿಕ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಹಾಗೆಯೇ ಅವರ ಕೃತಿಗಳಲ್ಲಿ ಹಾಸ್ಯದ ಎಳೆಯೂ ಸಾಮಾನ್ಯವಾಗಿ ಇರುತ್ತದೆ. ಶಿಕ್ಷಣ, ಆರೋಗ್ಯ, ಮದುವೆ, ಧರ್ಮ ಮೊದಲಾದ ವಿಷಯಗಳನ್ನು ತಮ್ಮ ಕೃತಿಗಳಲ್ಲಿ ಚರ್ಚಿಸಿದ ಬರ್ನಾರ್ಡ್ ಷಾ, ತಮ್ಮ ಕಾಲದ ಸಾಮಾಜಿಕ ತೊಡಕುಗಳನ್ನು ಕಟುವಾಗಿ ಟೀಕಿಸಿದರು. ತಮ್ಮ ಭಾಷಣಗಳ ಮೂಲಕ ಪುರುಷರಿಗೆ ಮತ್ತು ಮಹಿಳೆಯರಿಗೆ ಸಮಾನ ರಾಜಕೀಯ ಹಕ್ಕುಗಳು ಮೊದಲಾದ ವಿಷಯಗಳಿಗೆ ಶ್ರಮಿಸಿದರು.
=="ಪಿಗ್ಮಾಲಿಯನ್" ಚಲನಚಿತ್ರವಾಗಿ, ಜನರ ಮೆಚ್ಚುಗೆಗೆ ಪಾತ್ರವಾಯಿತು==
ಬರ್ನಾರ್ಡ್ ಷಾ ಅವರಿಗೆ, ೧೯೨೫ ರಲ್ಲಿ ಸಾಹಿತ್ಯಕ್ಕೆ [[ನೊಬೆಲ್ ಪ್ರಶಸ್ತಿ]] ದೊರೆಯಿತು. ತಮ್ಮ ನಾಟಕಗಳಲ್ಲಿ ಒಂದಾದ "ಪಿಗ್ಮಾಲಿಯನ್" ಚಲನಚಿತ್ರಚವಾಗಲು ಅವರು ಮಾಡಿದ ಕೆಲಸಕ್ಕಾಗಿ ಅವರಿಗೆ ಪ್ರತಿಷ್ಠಿತ '[[ಆಸ್ಕರ್ ಪ್ರಶಸ್ತಿ ]]',ಯೂ ದೊರೆಯಿತು (೧೯೩೮ ರಲ್ಲಿ). ಮಹಾತ್ಮ ಗಾಂಧಿ, ರವೀಂದ್ರನಾಥ್ ಠಾಕೂರ್ ಎಂದರೆ ರಿಗೆ ಬಲು ಪ್ರೀತಿ. ನೆಹರೂ ರವರಿಗೆ ಶಾರವರ ಕಾದಂಬರಿಗಳು ಅತಿ ಮೆಚ್ಚು. ಭಾರತೀಯ ಸಾಹಿತ್ಯಾಭಿಮಾನಿಗಳಿಗೆ ಆಪ್ತವ್ಯಕ್ತಿಷಾ ಒಬ್ಬ ಆಪ್ತ-ವ್ಯಕ್ತಿ. ಚಿಕ್ಕಅವರನ್ನು ಚಿಕ್ಕ-ಮಹಾತ್ಮರಂತೆ ಗೌರವಿಸುತ್ತಿದ್ದರು. ಸಸ್ಯಾಹಾರಿಯಾಗಿದ್ದ ಷಾ, ಭಾರತೀತರ ಮೆಚ್ಚುಗೆ ಗಳಿಸಿದ್ದರು. ಆಗಾಗ ಅವರು ಬೀರುತ್ತಿದ್ದ ನಗೆ, ಹಾಸ್ಯ-ಚಟಾಕಿ, ಚತುರೋಕ್ತಿಗಳು, ಅವರನ್ನು ಸಮಾಜದ ಎಲ್ಲ ವರ್ಗದ ಜನರೊಡನೆ ಒಡನಾಟಕ್ಕೆ ಪ್ರೇರೇಪಿಸಿದ್ದವು.
 
==ಐರಿಷ್ ಮೂಲದ 'ಷಾ' ತಮ್ಮನ್ನು ಇಂಗ್ಲೀಷ್ ನಾಟಕಗಳಿಗೆ ಒಡ್ಡಿ, ಜನಪ್ರಿಯತೆಗಳಿಸಲು ಸಾಹಸಮಾಡಬೇಕಾಯಿತು==
ಬರ್ನಾರ್ಡ್ 'ಷಾ' ಮೂಲತಃ ಐರಿಷ್ ಪ್ರಾಂತ್ಯದವರು. ತಾಯಿ, ಸಂಗೀತದ ಬಗ್ಗೆ ತೀವ್ರ ಒಲವಿದ್ದವಳು. ಕಲಿಯುತ್ತಿದ್ದಳು. ಅವರ ಶಿಕ್ಷರಿಂದ ಪ್ರಭಾವಿತರಾಗಿದ್ದರು. ಸಂಗೀತವನ್ನು ಅವರು ಅಭ್ಯಾಸಮಾಡಿದ್ದಲ್ಲದೆ, ತಮ್ಮ ವಿಮರ್ಶಕರಾಗಲು ಅದು ಅವರನ್ನು ಸಿದ್ಧಗೊಳಿಸಿತ್ತು. 'ಸಂಗೀತದ ವಿಮರ್ಶೆ,' ಗಳನ್ನು ಇಂದಿಗೂ ಗೌರವದಿಂದ ನೆನೆಯುತ್ತಾರೆ. ತಂದೆ ಸ್ವಲ್ಪ ಕುಡಿಯುವ ಚಟವನ್ನು ಅಭ್ಯಾಸಮಾಡಿಕೊಂಡಿದ್ದರು. ತಮ್ಮ ವಿದ್ಯಾಭ್ಯಾಸದ ಸಮಯದಲ್ಲಿ 'ಷಾ' ಅಷ್ಟೇನೂ ಪ್ರತಿಭಾವಂತ ಬಾಲಕನೆಂದು ಹೆಸರು ಗಳಿಸಲಿಲ್ಲ. ಆದರೆ ಸಾಹಿತ್ಯಕೃತಿಗಳನ್ನು ಚೆನ್ನಾಗಿ ಕುಲಂಕುಶವಾಗಿ ಅಭ್ಯಾಸಮಾಡಿ ಅದರಲ್ಲಿ ಪ್ರಾವೀಣ್ಯತೆಯನ್ನು ಸಂಪಾದಿಸಿದ್ದರು. ತಾಯಿ ತಮ್ಮ ಪತಿ ಮತ್ತು ಶಾರನ್ನು ಬಿಟ್ಟು,ಇಬ್ಬರು ಹೆಣ್ಣುಮಕ್ಕಳನ್ನು ಕರೆದುಕೊಂಡು ಲಂಡನ್ ಗೆ ಹೋಗಿಬಿಟ್ಟರು. ಅವರಿಗೆ ಸಂಗೀತದ ಗುರುಗಳನ್ನು ತುಂಬಾ ಹಚ್ಚಿಕೊಂಡಿದ್ದರು. ಈ ಪರಿಸ್ತಿತಿಯಲ್ಲಿ 'ಷಾ' ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಲಾಗದೆ, ಡಬ್ಲಿನ್ ನಗರಕ್ಕೆ ಹೋಗಿ, ಅಲ್ಲಿನ ಕಚೇರಿಯೊಂದರಲ್ಲಿ ಗುಮಾಸ್ತರಾಗಿ ಸೇರಿಕೊಂಡರು. ಆಗಲೇ ಸಮಯವಿದ್ದಾಗಲೆಲ್ಲಾ ಏನಾದರೂ ಕಥೆಗಳನ್ನು ಬರೆಯುವ ಹವ್ಯಾಸ ಬೆಳೆಯಿತು. ಲೇಖಕನಾಗುವ ಆದಮ್ಯ ಆಸೆ ಮನದಾಳದಲ್ಲಿ ಬೇರೂರಿತ್ತು. ಮುಂದೆ ಅವರು ಲಂಡನ್ ನಲ್ಲಿ ಸಂಗೀತದ ಶಿಕ್ಷಕಿಯಾಗಿ ಕೆಲಸಮಾಡುತ್ತಿದ್ದ ಅವರ ತಾಯಿಯಮನೆಯಲ್ಲಿ ಇದ್ದುಕೊಂಡು, ನೌಕರಿಯ ಹುಡುಕಾಟಕ್ಕೆ ಪ್ರಯತ್ನಿಸಿದರು. ಸುಮಾರು ೫ ಕಾದಂಬರಿಗಳನ್ನು ಆಗಲೇ ಬರೆದಿದ್ದರೂ ಅದನ್ನು ಯಾರೂ ಲೆಕ್ಕಕ್ಕೆ ತಗೆದುಕೊಳ್ಳಲಿಲ್ಲ. ಅವು ಅಷ್ಟೇನೂ ಹೆಸರುಮಾಡದ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಕಾಣಿಸಿಕೊಂಡವು. ಬರೆಯುವ ಆಸಕ್ತಿಯ ಜೊತೆಗೆ ಅಪ್ರತಿಮ ಭಾಷಣ ಮಾಡುವ ಕಲೆ ಹಸ್ತಗತವಾಗಿತ್ತು. '[[ಅನಿಬೆಸೆಂಟ್]]' ಎಂಬ ಮಹಿಳೆ, ಅವರ ಮಾತಿನಮೋಡಿಗೆ ಮರುಳಾಗಿ ಅವರನ್ನು ಮದುವೆಯಾಗಲು ಮುಂದೆಬಂದರು. ಆದರೆ 'ಷಾ' ಅದಕ್ಕೆ ಒಪ್ಪಲಿಲ್ಲ. ಬರೆಯುವ ಗೀಳು ಮನಸ್ಸಿನಲ್ಲೇ ಹೊಗೆಯಾಡುತ್ತಿತ್ತು. ಮೊದಲು ಸಂಗೀತ ನಾಟಕ-ವಿಮರ್ಶೆ, ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ಬರೆಯುತ್ತಿದ್ದ ಷಾ, ನಾಟಕಗಳ ಕಡೆಗೆ ವಾಲಿದರು. '[[ಸ್ಕಾಂಡಿನೇವಿಯನ್ ಭಾಷೆ]]'ಯ, '[[ಇಬ್ಸನ್]]' ಎಂಬ ನಾಟಕ ಕಾರನ ನಾಟಕಗಳನ್ನು ಇಂಗ್ಲೆಂಡ್ ನಾಟಕರಂಗಕ್ಕೆ '[[ಗ್ರೆನ್]]' ಎಂಬನಾಟಕಕಾರ,ತರುತ್ತಿದ್ದರು. ಅವರ ಪ್ರಕಾರ,ಇಂಗ್ಲೀಷ್ ನಲ್ಲಿ ಆ ಮಟ್ಟದ ನಾಟಕಗಳೇ ಇಲ್ಲ ಎಂದುವಾದಿಸಿದ್ದರು. 'ಷಾ' ಇದನ್ನು ಒಪ್ಪದೆ ತಾವೇ '[[ವಿಡೋವರ್ಸ್ ಹೌಸ್]]' ಎಂಬನಾಟಕವನ್ನು ರಚಿಸಿದರು. ಅದು ೧೮೯೨ ರಲ್ಲಿ, ಲಂಡನ್ ನ '[[ರಾಯಲ್ಟಿ ಥಿಯೇಟರ್]]' ನಲ್ಲಿ ಪ್ರದರ್ಶನ ಕಂಡಿತು, ಮತ್ತು ಹೆಸರುಮಾಡಿತು. ಇದಾದನಂತರ 'ಷಾ' ಸುಮಾರು ೬೦ ಕ್ಕೂ ಮಿಗಿಲಾಗಿ ನಾಟಕಗಳನ್ನು ಬರೆದು ಪ್ರಸಿದ್ಧರಾದರು. ಇಂಗ್ಲಿಷ್ ನ ಮಹಾನ್ ನಾಟಕಕಾರರಲ್ಲಿ ಒಬ್ಬರೆಂದು ಹೆಸರುಮಾಡಿದರು. 'ಇಬ್ಬನ್' ನ ಕೃತಿಗಳಂತೆ ಇಲ್ಲೂ ಸಾಮಾಜಿಕ ಸಮಸ್ಯೆಗಳ ಬಗ್ಗೆ ವಿಮರ್ಶೆಯಿದೆ.
೨೫,೬೧೩

edits

"https://kn.wikipedia.org/wiki/ವಿಶೇಷ:MobileDiff/118936" ಇಂದ ಪಡೆಯಲ್ಪಟ್ಟಿದೆ