ಗುರು ಗ್ರಹದ ವಾಯುಮಂಡಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವರ್ಗೀಕರಣ
೩೯ ನೇ ಸಾಲು:
ದಕ್ಷಿಣ ಟ್ರಾಪಿಕಲ್ ಪ್ರದೇಶವು ದಕ್ಷಿಣ ಟ್ರಾಪಿಕಲ್ ಝೋನ್ ಮತ್ತು SEB ಯನ್ನು ಒಳಗೊಂಡಿದೆ.ಗುರುಗ್ರಹದಲ್ಲೇ ಅತ್ಯಂತ ಕ್ರಿಯಾಶೀಲವಾಗಿರುವ ಪ್ರದೇಶ.ಇದರಲ್ಲಿ ಅತ್ಯಂತ ಪ್ರಬಲವಾದ ಪಶ್ಛಿಮವಾಹಿನಿಯಾಗಿ ಬೀಸುವ ಜೆಟ್ ಬಿರುಗಾಳಿಯಿದೆ.SEB ಯು ಗ್ರಹದಲ್ಲೇ ಅತ್ಯಂತ ಗಾಢವರ್ಣದ,ಅತ್ಯಂತ ವಿಸ್ತಾರವುಳ್ಳ ಬೆಲ್ಟ್.ಇದರ ಇನ್ನೊಂದು ವಿಶೇಷತೆಯೇನೆಂದರೆ "ಗ್ರೇಟ್ ರೆಡ್ ಸ್ಪಾಟ್"ಅನ್ನು ಹಿಂಬಾಲಿಸುವ ಚಂಡಮಾರುತಗಳಂತಹ ವಾಯು ಪ್ರಕ್ಷುಬ್ಧತೆಗಳ ಸರಣಿ ಇದರಲ್ಲಿರುವುದು.NTropZ ನಂತಯೇ STropZ ಕೂಡಾ ಗ್ರಹದ ಮುಖ್ಯ ಝೋನ್ ಗಳಲ್ಲೊಂದು. ಇದರಲ್ಲಿಯೇ ಸೌರವ್ಯೂಹದ ಅತ್ಯಂತ ದೈತ್ಯ ಗಾತ್ರದ ಚಂಡಮಾರುತ "ಗ್ರೇಟ್ ರೆಡ್ ಸ್ಪಾಟ್" ಇರುವುದು. ಈ ಝೋನ್ ಕೆಲವೊಮ್ಮೆ ದಕ್ಷಿಣ ಟ್ರಾಪಿಕಲ್ ವಾಯು ಪ್ರಕ್ಷುಬ್ಧತೆಯಿಂದ ವಿಭಜಿತವಾಗಿ ತೋರುತ್ತದೆ. ಈ ವಿಭಜನೆ ಬಹಳ ಕಾಲ ಇರುತ್ತದೆ. ಗತಕಾಲದಲ್ಲಿ ವೀಕ್ಷಣೆಗೆ ಸಿಕ್ಕ ವಿಭಜನೆ ೧೯೦೧ ರಿಂದ ೧೯೩೯ರ ವರೆಗೆ ಇತ್ತು.
ದಕ್ಷಿಣ ಟೆಂಪರೇಟ್ ಪ್ರದೇಶದಲ್ಲಿ, ದಕ್ಷಿಣ ಟೆಂಪರೇಟ್ ಬೆಲ್ಟ್ ಅಥವಾ STB ಮತ್ತೊಂದು ಗಾಢವರ್ಣದ, NTB ಗಿಂತಲೂ ಪ್ರಮುಖ ಬೆಲ್ಟ್. ಇದರಲ್ಲಿ ಮಾರ್ಚ್ ೨೦೦೦ದವರೆಗೂ ಬೇರೆ ಬೇರೆಯಾಗಿದ್ದ ಅಂಡಾಕಾರದ BC, DE, ಮತ್ತು FA ಎಂದು ಗುರುತಿಸಲ್ಪಟ್ಟ ಮೂರು ಚಂಡಮಾರುತಗಳಿದ್ದವು. ನಂತರ ಇವು ಒಂದನ್ನೊಂದು ಕೂಡಿಕೊಂಡು ದೈತ್ಯಾಕಾರದ "ಓವಲ್ BA" ಎಂಬ ಚಂಡಮಾರುತವಾಗಿ ಮಾರ್ಪಾಡಾದವು. GRSಗಿಂತ ಸ್ವಲ್ಪ ಚಿಕ್ಕದಾಗಿರುವ "ಓವಲ್ BA"ಯನ್ನು "ರೆಡ್ ಜೂನಿಯರ್" ಎಂದೂ ಕರೆಯುತ್ತಾರೆ."ಓವಲ್ BA"ಯ ಜನನಕ್ಕೆ ಕಾರಣವಾದ ಮೂರು ಚಂಡಮಾರುತಗಳು ಮೂಲತಃ ದಕ್ಷಿಣ ಟೆಂಪರೇಟ್ ಝೋನ್ (STZ) ವಾಸಿಗಳಾಗಿದ್ದವು ಆದರೆ ನಿಧಾನವಾಗಿ ಉತ್ತರಕ್ಕೆ ಚಲಿಸಿ STBಯೊಳಕ್ಕೆ ಬಂದು STB ಯ ಚಲನೆಗೆ ತಡೆಯೊಡ್ಡಿದಂತಾಯಿತು ನಂತರ "ಓವಲ್ BA"ಯ ಜನನವಾಯಿತು. STZನ ತೋರಿಕೆಯು ಅತಿ ಹೆಚ್ಚು ಸ್ಥಿತ್ಯಂತರಗಳಿಂದ ಕೂಡಿದೆ. ಗುರುವಿನ ವಾಯುಮಂಡಲದಲ್ಲಿ ಇನ್ನೂ ಅನೇಕ ವಿಶೇಷತೆಗಳಿವೆ ಆದರೆ ಅವನ್ನು ಭೂಮಿಯಿಂದ ವೀಕ್ಷಿಸುವುದು ಕಷ್ಟ. ಸೌತ್-ಸೌತ್ ಟೆಂಪರೇಟ್ ಪ್ರದೇಶವನ್ನು ಗುರುತಿಸುವುದು NNTR ಅನ್ನು ಗುರುತಿಸುವುದಕ್ಕಿಂತ ಹೆಚ್ಚು ಕಠಿಣ. ದಕ್ಷಿಣ ಧ್ರುವ ಪ್ರದೇಶದಿಂದ ಸುಲಭವಾಗಿ ಪ್ರತ್ಯೇಕಿಸಲು ಬಾರದ ಈ ಪ್ರದೇಶ ಸೂಕ್ಷ್ಮ ಮತ್ತು ಕ್ಷೀಣವಾಗಿ ಕಾಣಿಸುತ್ತದೆ. ಇದನ್ನು ಅಧ್ಯಯನ ಮಾಡಲು ದೊಡ್ಡ ದೂರದರ್ಶಕ ಅಥವಾ ಅಂತರಿಕ್ಷ ನೌಕೆಯೇ ಬೇಕು.
 
==ಪರಿಚಲನೆ==
ಗುರುಗ್ರಹದ ವಾತಾರವಣದ ಪರಿಚಲನೆಯು ಭೂಮಿಯ ವಾತಾವರಣದ ಪರಿಚಲನೆಗಿಂತ ತುಂಬಾ ಭಿನ್ನವಾಗಿದೆ. ಗುರುಗ್ರಹದ ಕೇಂದ್ರವು ದ್ರವರೂಪವಾಗಿದ್ದು ಅಲ್ಲಿ ಯಾವುದೇ ರೀತಿಯ ಘನ ಪದಾರ್ಥವಿಲ್ಲ.ಆದ್ದರಿಂದ ವಾತಾವರಣದ ಸಂವಹನವು ಗ್ರಹದ ವಾಯುಮಂಡಲದಾದ್ಯಂತ ಉಂಟಾಗುತ್ತದೆ.ಇದುವರೆಗೂ ಗುರುಗ್ರಹದ ವಾತಾವರಣವನ್ನು ಸಂಪೂರ್ಣವಾಗಿ ಅರ್ಥೈಸುವ ವಾದವು ಮಂಡಿಸಲ್ಪಟ್ಟಿಲ್ಲ.ಆ ರೀತಿಯ ಯಾವುದೇ ವಾದವು ಈ ಕೆಳಗಿನ ವಿದ್ಯಮಾನಗಳನ್ನು ವಿವರಿಸಬೇಕಾಗುತ್ತದೆ. ೧. ಗುರುಗ್ರಹದ ಭೂಮದ್ಯ ರೇಖೆಗೆ ಸಮನಾಂತರವಾಗಿರುವ ಪಟ್ಟಿಗಳಂತಹ ರಚನೆಗಳು. ೨. ಗುರುಗ್ರಹದ ಭೂಮಧ್ಯ ರೇಖೆಯ ಪ್ರದೇಶದಲ್ಲಿರುವ ಶಕ್ತಿಯುತವಾದ ಪೂರ್ವ ವಾಹಿನಿಯಾದ ಜೆಟ್ ಬಿರುಗಾಳಿ. 3. ಝೋನ್ ಮತ್ತು ಬೆಲ್ಟ್ ಗಳ ನಡುವಿನ ವ್ಯತ್ಯಾಸಗಳು,
4.ಗ್ರೇಟ್-ರೆಡ್-ಸ್ಪಾಟ್ ನಂತಹ ದೈತ್ಯ ಚಂಡಮಾರುತಗಳ ಉಗಮ ಮತ್ತು ಸ್ಥಿರತೆ.
ಗುರುಗ್ರಹದ ವಾತಾವರಣದ ಪರಿಚಲನೆಯನ್ನು ವಿವರಿಸುವ ವೈಙ್ಞಾನಿಕ ವಾದಗಳನ್ನು ಎರಡು ರೀತಿಯಾಗಿ ವಿಂಗಡಿಸಬಹುದು. ೧. ಶಾಲೋ ಮೋಡೆಲ್ ಮತ್ತು ೨. ಡೀಪ್ ಮೋಡೆಲ್ ಮೊದಲ ಗುಂಪಿನ ವಾದಗಳು ವಾತಾವರಣದ ಪರಿಚಲನೆಯು ಗುರುವಿನ ಸ್ಥಿರವಾದ ಗರ್ಭದ ಮೇಲೆ ವಾಯುಮಂಡಲದಲ್ಲಿ ಉಂಟಾಗುವ ವಿದ್ಯಮಾನ.ಎರಡನೆ ವಾದದ ಪ್ರಕಾರ ವಾತಾವರಣದ ಪರಿಚಲನೆಯು ಗುರುವಿನ ಅಂತರ್ಯದಲ್ಲೊಳಗಾಗುತ್ತಿರುವ ಸಂವಹನದ ವ್ಯಕ್ತಸ್ವರೂಪ. ಈ ಎರಡೂ ವಾದಗಳು ಗುರುಗ್ರಹದ ವಾತಾವರಣದ ಕೆಲವೊಂದು ವಿದ್ಯಮಾನಗಳನ್ನು ವಿವರಿಸುವಲ್ಲಿ ಸಫಲತೆಯನ್ನೂ ಮತ್ತೆ ಕೆಲವು ವಿದ್ಯಮಾನಗಳನ್ನು ವಿವರಿಸುವಲ್ಲಿ ಅಸಫಲತೆಯನ್ನೂ ಹೊಂದಿವೆ. ವಾತಾವರಣದ ಪರಿಚಲನೆಯನ್ನು ವಿವರಿಸುವ ನಿಜವಾದ ಕಾರಣವು ಈ ಎರಡೂ ವಾದಗಳ ಅಂಶಗಳನ್ನೊಳಗೊಂಡಿರಬೇಕು.
 
 
[[ವರ್ಗ:ಗುರು ಗ್ರಹ]]