ಕೆಫೀನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು roboto aldono de: su:Kaféin
ಚು robot Adding: lij:Caffeinna; cosmetic changes
೧ ನೇ ಸಾಲು:
[[Imageಚಿತ್ರ:Caffeine-3D-QuteMol.png|135px|right]]
[[Imageಚಿತ್ರ:Caffeine.svg|150px|right|ಕೆಫೀನ್ ಅಣುವಿನ ರಚನೆ]]
 
'''ಕೆಫೀನ್''' ಮಾನವರಲ್ಲಿ ಉತ್ತೇಜನವನ್ನು ಉಂಟು ಮಾಡುವ ಒಂದು ರಾಸಾಯನಿಕ ವಸ್ತು. ಇದು [[ಕಾಫಿ]] ಮೊದಲಾದ ಪೇಯಗಳು ಉತ್ತೇಜನಕಾರಿಯಾಗಿರುವುದಕ್ಕೆ ಕಾರಣವಾದ ರಾಸಾಯನಿಕ.
೮ ನೇ ಸಾಲು:
ಮನುಷ್ಯರಲ್ಲಿ ಕೆಫೀನ್ ಕೇಂದ್ರ ನರ ಮಂಡಲದ ಮೇಲೆ ಪ್ರಭಾವ ಬೀರಿ ಉತ್ತೇಜನಕಾರಿಯಾಗಿ ವರ್ತಿಸುತ್ತದೆ. ಇದರಿಂದಾಗಿ, ತಾತ್ಕಾಲಿಕವಾಗಿ [[ನಿದ್ರೆ]] ದೂರವಾಗಿ ಹೆಚ್ಚಿನ "ಚುರುಕು" ಮಾನಸಿಕವಾಗಿ ಅನುಭವಕ್ಕೆ ಬರುತ್ತದೆ. ಕೆಫೀನ್ ಮನುಷ್ಯರು ಅತಿ ಹೆಚ್ಚಾಗಿ ಸೇವಿಸುವ ಮನೋಪರಿವರ್ತಕ ವಸ್ತು.
 
== ಆಕರಗಳು ==
[[Imageಚಿತ್ರ:Espresso-roasted coffee beans.jpg|thumb|left|150px|ಹುರಿದ ಕಾಫಿ ಬೀಜಗಳು]]
 
ಕೆಫೀನ್ ಮುಖ್ಯವಾಗಿ ಸಸ್ಯಗಳಲ್ಲಿ ಕಂಡುಬರುವ "ಆಲ್ಕಲಾಯ್ಡ್" ಗುಂಪಿಗೆ ಸೇರಿದ ರಾಸಾಯನಿಕ ವಸ್ತು. ಅತಿ ಹೆಚ್ಚು ಕೆಫೀನ್ ಹೊಂದಿರುವ ಸಸ್ಯಗಳೆಂದರೆ ಕಾಫಿ, ಚಹಾ ಮತ್ತು ಕೋಕೋ. ಇದಲ್ಲದೆ, ಯೆರ್ಬಾ ಮೇಟ್, ಗ್ವರಾನಾ ಮೊದಲಾದ ಸಸ್ಯಗಳಲ್ಲೂ ಕೆಫೀನ್ ಕಂಡುಬರುತ್ತದೆ.
೧೯ ನೇ ಸಾಲು:
ಕೋಕೋ ಗಿಡಗಳು, ಮತ್ತು ಕೋಕೋ ದಿಂದ ತಯಾರಿಸಲಾಗುವ ಚಾಕೊಲೇಟ್ ಗಳಲ್ಲಿ ಸಹ ಅಲ್ಪ ಪ್ರಮಾಣದಲ್ಲಿ ಕೆಫೀನ್ ದೊರಕುತ್ತದೆ. ಇದಲ್ಲದೆ, ಕೋಕಾ ಕೋಲಾ ದಂತಹ ತಂಪು ಪಾನೀಯಗಳಲ್ಲೂ ಕೆಫೀನ್ ಇರುತ್ತದೆ.
 
== ಚರಿತ್ರೆ ==
[[Imageಚಿತ್ರ:CoffeePalestineStereo.jpg|thumb|right|220px|೧೯೦೦ ರ ಸುಮಾರಿನಲ್ಲಿ ಪ್ಯಾಲೆಸ್ಟೈನ್ ನ ಒಂದು ಕಾಫಿ ಮನೆ]]
ಮಾನವರು ಶಿಲಾಯುಗದ ಕಾಲದಿಂದಲೂ ಕೆಫೀನ್ ಅನ್ನು ಸೇವಿಸುತ್ತಾ ಬಂದಿದ್ದಾರೆ. ಕೆಲವು ಗಿಡಗಳ ಬೀಜ, ತೊಗಟೆ ಅಥವಾ ಎಲೆಗಳನ್ನು ಜಗಿಯುವುದರಿಂದ ಸುಸ್ತು ಕಡಿಮೆಯಾಗಿ ಮನಸ್ಸಿಗೆ ಮುದ ದೊರಕುತ್ತದೆಂಬುದನ್ನು ಜನ ಅರಿತುಕೊಂಡರು. ನಂತರ, ಈ ಗಿಡಗಳನ್ನು ಬಿಸಿ ನೀರಿನಲ್ಲಿ ಅದ್ದಿ ತೆಗೆದ ನಂತರ ಸೇವಿಸುವ ಮೂಲಕ ಅವುಗಳ ಪ್ರಭಾವ ಹೆಚ್ಚುತ್ತದೆ ಎಂಬುದನ್ನು ಅರಿತುಕೊಂಡರು.
 
೩೫ ನೇ ಸಾಲು:
ಪ್ರಪಂಚದಲ್ಲಿ ಒಟ್ಟು ವರ್ಷಕ್ಕೆ ೧,೨೦,೦೦೦ ಟನ್ ಗಳಷ್ಟು ಕೆಫೀನ್ ಸೇವನೆ ನಡೆಯುತ್ತದೆ.
 
== ಪರಿಣಾಮಗಳು ==
 
[[Imageಚಿತ್ರ:Caffeinated spiderwebs.jpg|200px|left|thumb|ಕೆಫೀನ್ ಜೇಡರ ಹುಳುಗಳ ಮೇಲೆ ಅಗಾಧ ಪರಿಣಾಮ ಬೀರುತ್ತದೆ, ಕೆಫೀನ್ ಸೇವಿಸಿದ ಜೇಡ ನೇಯ್ದ ಬಲೆ ಅಸ್ತವ್ಯಸ್ತವಾಗಿರುವುದನ್ನು ಕಾಣಬಹುದು.]]
 
ಕೆಫೀನ್ ಕೇಂದ್ರ ನರಮಂಡಲದ ಉತ್ತೇಜಕ. ಇದನ್ನು ಚಟಕ್ಕಾಗಿಯೂ ಸೇವಿಸಲಾಗುತ್ತದೆ; ವೈದ್ಯಕೀಯವಾಗಿ ದಣಿವು, ತಲೆನೋವು ಮೊದಲಾದ ಬಾಧೆಗಳ ಚಿಕಿತ್ಸೆಗಾಗಿಯೂ ಉಪಯೋಗಿಸಲಾಗುತ್ತದೆ. ಕೆಫೀನ್ ನ ಪರಿಣಾಮಗಳಲ್ಲಿ ಮುಖ್ಯ ಪರಿಣಾಮಗಳೆಂದರೆ ನಿದ್ರೆಯನ್ನ ತಾತ್ಕಾಲಿಕವಾಗಿ ಹೋಗಲಾಡಿಸಿ ಮನಸ್ಸನ್ನು "ಚುರುಕಾಗಿಸುವುದು", ಮತ್ತು ಮನಸ್ಸಿನ ಏಕಾಗ್ರತೆಯನ್ನು ಹೆಚ್ಚಿಸುವುದು. ಕೆಫೀನ್ ಅನ್ನು ಹೆಚ್ಚಿನ ಪ್ರಮಾಣಗಳಲ್ಲಿ ಸೇವಿಸಿದರೆ ಕೇಂದ್ರ ನರಮಂಡಲವೇ ಅಲ್ಲದೆ ಬೆನ್ನೆಲುಬು ನಿಯಂತ್ರಿಸುವ ನರಮಂಡಲದ ಮೇಲೆಯೂ ಪರಿಣಾಮ ಬೀರುತ್ತದೆ. ಈ ಪರಿಣಾಮಗಳು ಕಂಡುಬರಲು ಬೇಕಾಗುವ ಕೆಫೀನ್ ನ ಪ್ರಮಾಣ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ - ದೇಹ ತೂಕ ಮತ್ತು ಕೆಫೀನ್ ಅಭ್ಯಾಸ ಆ ವ್ಯಕ್ತಿಗೆ ಎಷ್ಟಿದೆ ಎಂಬುವನ್ನು ಇದು ಅವಲಂಬಿಸಿರುತ್ತದೆ. ಕೆಫೀನ್ ಸೇವನೆಯಾದ ಒಂದು ಗಂಟೆಯೊಳಗೆ ಅದು ಪರಿಣಾಮ ಬೀರತೊಡಗಿ, ಕೆಫೀನ್ ನ ಪರಿಣಾಮ ೩-೪ ಗಂಟೆಗಳ ವರೆಗೆ ಸಕ್ರಿಯವಾಗಿರುತ್ತದೆ.
೪೩ ನೇ ಸಾಲು:
ಹೀಗಾಗಿ ಕೆಫೀನ್ ದೈಹಿಕ ಮತ್ತು ಮಾನಸಿಗ ಸಾಮರ್ಥ್ಯವನ್ನು ತಾತ್ಕಾಲಿಕವಾಗಿ ಹೆಚ್ಚಿಸುತ್ತದೆ. ೧೯೭೯ ರಲ್ಲಿ ನಡೆದ ಒಂದು ಅಧ್ಯಯನದಂತೆ, ಸೈಕಲ್ ಸವಾರರು ಎರಡು ಗಂಟೆಗಳ ಅವಧಿಯಲ್ಲಿ ಕ್ರಮಿಸಿದ ದೂರ ಕೆಫೀನ್ ಸೇವನೆಯ ನಂತರ ಶೇ. ೭ ರಷ್ಟು ಹೆಚ್ಚಿತು. ಇತರ ಅಧ್ಯಯನಗಳು ಇನ್ನೂ ಬಲವಾದ ಪರಿಣಾಮಗಳನ್ನು ತೋರಿದವು; ಓಟಗಾರರ ಮೇಲೆ ನಡೆಸಿದ ಒಂದು ಪ್ರಯೋಗದ ಫಲಿತಾಂಶದಂತೆ, ದೇಹತೂಕದ ಪ್ರತಿ ಕೆಜಿಗೆ ೯ ಮಿಗ್ರಾಂ ಗಳಷ್ಟು ಕೆಫೀನ್ ಸೇವನೆಯಾದ ನಂತರ ಓಡುವ ಸಾಮರ್ಥ್ಯದಲ್ಲಿ ಶೇ. ೪೪ ರಷ್ಟು ಹೆಚ್ಚಳ ಉಂಟಾಯಿತು.
 
== ಅತಿಸೇವನೆ ==
 
ಕೆಫೀನ್ ಅನ್ನು ಹೆಚ್ಚು ಪ್ರಮಾಣಗಳಲ್ಲಿ ಸೇವಿಸಿದಾಗ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. "ಕೆಫೀನಿಸಮ್" ಎಂಬ ಸ್ಥಿತಿ ಸೇವಿಸುವವರಲ್ಲಿ ಉಂಟಾಗುತ್ತದೆ - ಕೆಫೀನ್ ನ "ಚಟ" ಆರಂಭವಾಗುವುದಲ್ಲದೆ, ಆತಂಕ, ಅಸಹನೆ, ಮಾಂಸಖಂಡಗಳ ಅನೈಚ್ಛಿಕ ಅದುರುವಿಕೆ (muscle twitching), ನಿದ್ರಾಹೀನತೆ ಮತ್ತು ಹೃದಯ ಬಡಿತದಲ್ಲಿ ಏರುಪೇರು - ಮೊದಲಾದ ಪರಿಣಾಮಗಳು ಕಂಡುಬರತೊಡಗುತ್ತವೆ. ಇಷ್ಟಲ್ಲದೆ, ಕೆಫೀನ್ ಜಠರದಲ್ಲಿ ಆಮ್ಲವಸ್ತುಗಳ ಉತ್ಪತ್ತಿಯನ್ನು ಪ್ರಚೋದಿಸುತ್ತದೆ. ಹೀಗಾಗಿ, ದೀರ್ಘ ಕಾಲ ಕೆಫೀನ್ ನ ಸೇವನೆಯನ್ನು ಹೆಚ್ಚಿನ ಪ್ರಮಾಣಗಳಲ್ಲಿ ಮಾಡಿದ್ದಾದರೆ ಅಸಿಡಿಟಿ, ಅಲ್ಸರ್ ಗಳು ಮೊದಲಾದ ತೊಂದರೆಗಳು ಆರಂಭವಾಗುವ ಸಾಧ್ಯತೆ ಹೆಚ್ಚುತ್ತದೆ.
೪೯ ನೇ ಸಾಲು:
ಕೆಫೀನ್ ನ ಅತಿಸೇವನೆಗೆ ಸಂಬಂಧಪಟ್ಟ ನಾಲ್ಕು ಮಾನಸಿಕ ತೊಂದರೆಗಳಿವೆ: ಕೆಫೀನ್ "ನಶೆ", ಕೆಫೀನ್ ಗೆ ಸಂಬಂಧಪಟ್ಟ ಆತಂಕ ಮನೋಭಾವ, ಕೆಫೀನ್ ಗೆ ಸಂಬಂಧಪಟ್ಟ ನಿದ್ರಾಹೀನತೆ, ಮತ್ತು ಇತರ ತೊಂದರೆಗಳು.
 
=== ಕೆಫೀನ್ ನಶೆ ===
 
ಕೆಫೀನ್ ಸೇವನೆಯ ಪ್ರಮಾಣ ಅತಿ ಹೆಚ್ಚಾದಾಗ - ಸುಮಾರು ೨೫೦ ಮಿಗ್ರಾಂ ಗಳನ್ನು ದಾಟಿದಾಗ (ಉದಾ: ೩ ಲೋಟಗಳಿಗಿಂತ ಹೆಚ್ಚು ಕಾಫಿ), ಕೇಂದ್ರ ನರಮಂಡಲಕ್ಕೆ ದೊರಕುವ ಉತ್ತೇಜನೆ ಮಿತಿಮೀರುತ್ತದೆ. ಈ ಮಾನಸಿಕ ಪರಿಸ್ಥಿತಿಯನ್ನು "ಕೆಫೀನ್ ನಶೆ" ಎಂದು ಕರೆಯಲಾಗುತ್ತದೆ. ಕೆಫೀನ್ ನಶೆಯ ಪರಿಣಾಮಗಳಲ್ಲಿ ಕೆಲವೆಂದರೆ: ಉತ್ಸಾಹ, ಆತಂಕ, ನಿದ್ರಾಹೀನತೆ, ಮುಖದಲ್ಲಿ ರಕ್ತಚಲನೆಯ ಹೆಚ್ಚಳ, ಹೆಚ್ಚಿನ ಮೂತ್ರದ ಉತ್ಪಾದನೆ, ಹೊಟ್ಟೆ ಕೆಡುವುದು, ಮಾಂಸಖಂಡಗಳ ಅದುರುವಿಕೆ, ಹೃದಯಬಡಿತದ ಏರುಪೇರು, ಇತ್ಯಾದಿ.
೫೫ ನೇ ಸಾಲು:
ಕೆಫೀನ್ ಸೇವನೆ ಮಿತಿ ಮೀರಿದರೆ, ಸಾವು ಸಹ ಪರಿಣಮಿಸಬಹುದು. ಮನುಷ್ಯರಲ್ಲಿ, ದೇಹತೂಕದ ಪ್ರತಿ ಕೆಜಿಗೆ ಒಂದೇ ದಿನದಲ್ಲಿ ೧೫೦-೨೦೦ ಮಿಗ್ರಾಂ ಗಳಷ್ಟು ಕೆಫೀನ್ (ಉದಾ: ೧೫೦-೨೦೦ ಕಪ್ ಕಾಫಿ) ಸೇವಿಸಿದಲ್ಲಿ ಜೀವಹಾನಿಯ ಸಂಭವ ಉಂಟಾಗುತ್ತದೆ. ಈ ಪ್ರಮಾಣದಲ್ಲಿ ಕಾಫಿಯನ್ನು ಯಾರೂ ಕುಡಿಯಲಾರರೂ, ಕೆಫೀನ್ ಮಾತ್ರೆಗಳ ಅತಿಸೇವನೆಯಿಂದ ಸಾವು ಸಂಭವಿಸಿರುವ ಉದಾಹರಣೆಗಳುಂಟು.
 
== ಬಾಹ್ಯ ಸಂಪರ್ಕಗಳು ==
* [http://home.howstuffworks.com/caffeine.htm Caffeine: How Stuff Works]
* [http://magma.nationalgeographic.com/ngm/0501/feature1/index.html National Geographic January 2005]
 
 
[[Categoryವರ್ಗ:ರಸಾಯನಶಾಸ್ತ್ರ]]
 
{{Link FA|en}}
೯೧ ನೇ ಸಾಲು:
[[ja:カフェイン]]
[[ko:카페인]]
[[lij:Caffeinna]]
[[lt:Kofeinas]]
[[lv:Kofeīns]]
"https://kn.wikipedia.org/wiki/ಕೆಫೀನ್" ಇಂದ ಪಡೆಯಲ್ಪಟ್ಟಿದೆ