ವಿಂಧ್ಯ ಪರ್ವತಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಅಂತರವಿಕಿ ಸಂಪರ್ಕಗಳು
೨ ನೇ ಸಾಲು:
'''ವಿಂಧ್ಯ ಪರ್ವತಗಳು''' [[ಭಾರತ]]ದ ಪಶ್ಚಿಮ ಮತ್ತು ಮಧ್ಯಭಾಗದಲ್ಲಿನ ಪರ್ವತಶ್ರೇಣಿ. ಈ ಶ್ರೇಣಿಯು ಉತ್ತರಭಾರತದ ಸಿಂಧೂ-ಗಂಗಾ ಬಯಲನ್ನು ದಕ್ಷಿಣದ [[ದಖ್ಖನ್ ಪೀಠಭೂಮಿ]]ಯಿಂದ ಭೌಗೋಳಿಕವಾಗಿ ಪ್ರತ್ಯೇಕಿಸುತ್ತದೆ. ವಿಂಧ್ಯ ಪರ್ವತಗಳು ಪಶ್ಚಿಮದಲ್ಲಿ [[ಗುಜರಾತ್]]-[[ರಾಜಸ್ಥಾನ]]-[[ಮಧ್ಯ ಪ್ರದೇಶ]]ಗಳು ಸಂಧಿಸುವ ಸ್ಥಾನದಲ್ಲಿ ಆರಂಭವಾಗಿ ಪೂರ್ವಕ್ಕೆ ಹಬ್ಬಿ ಮಿರ್ಜಾಪುರದಲ್ಲಿ [[ಗಂಗಾ ನದಿ]]ಯ ಸಮೀಪದವರೆಗೆ ಹರಡಿವೆ. ವಿಂಧ್ಯಪರ್ವತಗಳ ಪಶ್ಚಿಮೋತ್ತರ ಭಾಗವು ಹೆಚ್ಚೂಕಡಿಮೆ ಪೂರ್ಣ ಒಣಪ್ರದೇಶವಾಗಿದ್ದು ಜನವಸತಿಗೆ ಅನುಕೂಲಕರವಾಗಿಲ್ಲ. ಪರ್ವತಗಳ ದಕ್ಷಿಣಭಾಗವು [[ನರ್ಮದಾ ನದಿ]]ಯ ಜಲಾನಯನ ಪ್ರದೇಶವಾಗಿದೆ. ಉತ್ತರದ ಭಾಗದಲ್ಲಿ ಗಂಗಾನದಿಯ [[ಉಪನದಿ]]ಗಳಾದ [[ಕಾಳಿ ಸಿಂಧಿ]], [[ಪಾರ್ಬತಿ]], [[ಬೇಟ್ವಾ]] ಮತ್ತು [[ಕೇನ್]] ನದಿಗಳು ಹರಿಯುತ್ತವೆ. ವಿಂಧ್ಯ ಪರ್ವತಗಳ ಪೂರ್ವ ಅಂಚಿನಲ್ಲಿ [[ಸೋನ್ ನದಿ]]ಯು ಹರಿಯುತ್ತದೆ. ವಿಂಧ್ಯ ಪರ್ವತಗಳ ಮಧ್ಯಭಾಗದ ಉತ್ತರಕ್ಕಿರುವ ಪ್ರದೇಶವನ್ನು [[ವಿಂಧ್ಯ ಪೀಠಭೂಮಿ]] ಎಂದು ಕರೆಯಲಾಗುತ್ತದೆ. ಮಧ್ಯ ಪ್ರದೇಶದ ಮುಖ್ಯ ನಗರಗಳಾದ [[ಭೋಪಾಲ್]] ಮತ್ತು [[ಇಂದೋರ್]] ನಗರಗಳು ಈ ಪೀಠಭೂಮಿಯಲ್ಲಿವೆ.
[[ವರ್ಗ:ಪರ್ವತಶ್ರೇಣಿಗಳು]]
[[bn:বিন্ধ্য পর্বতমালা]]
[[cs:Vindhja]]
[[de:Vindhyagebirge]]
[[en:Vindhya Range]]
[[et:Vindhya]]
[[eo:Vindhya-montaro]]
[[fr:Vindhya]]
[[hi:विन्ध्याचल]]
[[it:Monti Vindhya]]
[[mr:विंध्य]]
[[nl:Vindhyagebergte]]
[[ja:ヴィンディヤ山脈]]
[[ru:Виндхья]]
[[fi:Vindhya]]
[[sv:Vindhyabergen]]
[[ta:விந்திய மலைத்தொடர்]]
[[te:వింధ్య పర్వతాలు]]
"https://kn.wikipedia.org/wiki/ವಿಂಧ್ಯ_ಪರ್ವತಗಳು" ಇಂದ ಪಡೆಯಲ್ಪಟ್ಟಿದೆ