ಚಿಂತಾಮಣಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೪ ನೇ ಸಾಲು:
ಚಿಂತಾಮಣಿಯಿಂದ, ’ಬಟ್ಲಹಳ್ಳಿ’ ಗೆ ಗೋಗುವ ಹಾದಿಯಲ್ಲಿ ೧೫ ಕಿ. ಮೀ ದೂರ ಸಾಗಿದರೆ, ಸಿಕ್ಕುತ್ತದೆ. ಹತ್ತಿರದಲ್ಲೇ ’ವೀರನಾರಾಯಣ ಮಂದಿರ’ ವಿದೆ. ಬೃಹದಾಕಾರದ ಬೆಟ್ಟದ ಮೇಲೆ, ’[[ವಿಷ್ಣುಪಾದಗಳಿವೆ’]]. ಇದರ ತಪ್ಪಲಿನಲ್ಲೇ [[ಮುತ್ತಿನ ಕೊಳ]] ವೆಂಬ, ವಿಶಾಲ ಕೊಳವೊಂದು ಗೋಚರಿಸುತ್ತದೆ. ಫಾಲ್ಗುಣ ಮಾಸದಲ್ಲಿ ’ವೀರನಾರಾಯಣ ಸ್ವಾಮಿ ಬ್ರಹ್ಮ ರಥೋತ್ಸವ’ ಜರುಗುತ್ತದೆ.
==’ಗರುಡಮಾರಲಹಳ್ಳಿ’==
ಚಿಂತಾಮಣಿಯಿಂದ ೧೮ ಕಿ. ಮೀ ದೂರದಲ್ಲಿರುವ ಪ್ರಾಚೀನ ಲಕ್ಷಣವನ್ನು ಹೊಂದಿರುವ ’ಭೈರವೇಶ್ವರ ದೇವಾಲಯ’ ವು, 'ಸೀತಿ ಬೆಟ್ಟ' ದಂತೆಯೇ ’[[ಮೊರಸು ಒಕ್ಕಲಿಗರು]],’ ನಡೆದುಕೊಳ್ಳುವ ಯಾತ್ರಾ ಸ್ಥಳವಾಗಿದೆ. ಈ ದೇವಾಲಯದ ವಿಶೇಷತೆಯೆಂದರೆ, ದೇವಾಲಯದ ಸುತ್ತಲೂ ವಿಶಾಲವಾದ ಒಳ ಪ್ರಾಕಾರವಿದ್ದು, ಹಲವು ಪುಟ್ಟ ಪುಟ್ಟ ದೇವಾಲಯಗಳನ್ನು ಹೊಂದಿದೆ. ’[[ಏರು ಬಯ್ಯಮ್ಮ’]] ಎಂಬ ಕನ್ಯಾ ಪೂಜಾ-ಗುಡಿ ಇಲ್ಲಿಯೇ ಇದೆ. ಇದು ’ಶಕ್ತಿದೇವತೆ’ ಯೆಂಬ ನಂಬಿಕೆಯಿದೆ. ಇದರಂತೆಯೇ ’[[ಇರಗರು ಎಂಬ ಬಾಲಕರ ಗುಡಿ]],’ ಗುಡಿಯನ್ನುಯನ್ನು ಕಾಣಬಹುದು. ಮಾನವಾತೀತ ಶಕ್ತಿಗಳ ಆರಾಧನೆಯ ಒಂದು ಪದ್ಧತಿ ಇಲ್ಲಿ ಬೆಳೆದುಬಂದಿದೆ.
 
==ರೆಹಮಾನ್ ಘಡ್’==
ಚಿಂತಾಮಣಿಯಿಂದ ನೈರುತ್ಯ ದಿಕ್ಕಿಗೆ ಹೋದರೆ, ೧೨ ಕಿ. ಮೀ. ದೂರದಲ್ಲಿ, ’[[ಟಿಪ್ಪು ಸುಲ್ತಾನ್]],’ ನಿರ್ಮಿಸಿದ, [[ರೆಹಮಾನ್ ಘಡ್ ಕೋಟೆ]]ಯಿದೆ. ಸಮುದ್ರಮಟ್ಟದಿಂದ ೪,೨೨೭ ಅಡಿ ಎತ್ತರದಲ್ಲಿದೆ. ’ಮಹಾಭಾರತ’ ದ ಕಾಲದಲ್ಲಿ ಪಾಂಡವರ ಸಹೋದರ ’[[ಭೀಮಸೇನ]]’ ನನ್ನು ಇಲ್ಲಿ ಸೆರೆಯಿಡಲಾಗಿತ್ತೆಂದು ಎಂಬ ಪ್ರತೀತಿಯಿದೆ. ಹಿಂದೂಗಳು ಬೆಟ್ಟವನ್ನು ’[[ತಪಸ್ ಗಿರಿ]]’ ಎನ್ನುತ್ತಾರೆ. ಬೆಟ್ಟದಮೇಲೆ ಪುಷ್ಕರಣಿ, ದೇವಾಲಯ, ಹಾಗೂ ಅನೇಕ ಶಿಥಿಲ-ಕಟ್ಟಡಗಳ ಅವಶೇಷಗಳು ಕಣ್ಣಿಗೆ ಬೀಳುತ್ತವೆ.
"https://kn.wikipedia.org/wiki/ಚಿಂತಾಮಣಿ" ಇಂದ ಪಡೆಯಲ್ಪಟ್ಟಿದೆ