ವಾತಾವರಣದಲ್ಲಿ ಮರುಪ್ರವೇಶಿಸುವಿಕೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: thumb|300px|right|[[ಮಂಗಳ ಗ್ರಹ ಅನ್ವೇಷಣ ರೋವರ್ನೌಕೆಯ ಏರೋಶೆಲ್ ಯಂತ್ರವು, ಮಂಗಳ...
( ಯಾವುದೇ ವ್ಯತ್ಯಾಸವಿಲ್ಲ )

೧೪:೦೨, ೨೮ ಸೆಪ್ಟೆಂಬರ್ ೨೦೦೯ ನಂತೆ ಪರಿಷ್ಕರಣೆ

ಮಾನವ ನಿರ್ಮಿತ ಅಥವಾ ಪ್ರಾಕೃತಿಕ ವಸ್ತುಗಳು ಬಾಹ್ಯಾಕಾಶದಿಂದ ಭೂಮಿಯಂತಹ ಯಾವುದಾದರೂ ಒಂದು ಗ್ರಹದ ವಾತಾವರಣವನ್ನು ಪ್ರವೇಶಿಸುವದನ್ನು ವಾತಾವರಣದಲ್ಲಿ ಮರುಪ್ರವೇಶಿಸುವಿಕೆ ಅಥವಾ ವಾಯುಮಂಡಲದಲ್ಲಿ ಪ್ರವೇಶಿಸುವಿಕೆ ಎಂದು ಹೇಳಬಹುದು. ಸಾಮಾನ್ಯವಾಗಿ ಉಪಕಕ್ಷೀಯ ಅಂತರಿಕ್ಷನೌಕೆಗಳು ಮತ್ತು ಸ್ಥಿರ ಕಕ್ಷೆಯಲ್ಲಿದ್ದು ಮರಳಿ ಬರುತ್ತಿರುವ ಗಗನನೌಕೆಗಳು ಈ ಕ್ರಿಯೆಯ ಮೂಲಕ ವಾತಾವರಣವನ್ನು ಹಾದು ಭೂಮಿಯನ್ನು ತಲುಪುತ್ತವೆ. ಈ ಕ್ರಿಯೆಯು ಸಾಮಾನ್ಯವಾಗಿ ವಾಯುಮಂಡಲವನ್ನು ಪ್ರವೇಶಿಸುವಾಗ ಘರ್ಷಣೆಯಿಂದ ಉಂಟಾಗುವ ಉಷ್ಣತೆಯಿಂದ (ಏರೋಡೈನಾಮಿಕ್ ಹೀಟಿಂಗ್) ಗಗನನೌಕೆಯನ್ನು ರಕ್ಷಿಸುವುದಕ್ಕಾಗಿ ವಿಶೇಷ ಕ್ರಮಗಳನ್ನೊಳಗೊಂಡಿರುತ್ತದೆ.ಅಂತರಿಕ್ಷನೌಕೆಗಳ ಅತಿವೇಗದ ವಾತಾವರಣದ ಮರುಪ್ರವೇಶಿಸುವಿಕೆಗಾಗಿ ಹಲವಾರು ಅತ್ಯುನ್ನತ ತಂತ್ರಙ್ಞಾನಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಮಂಗಳ ಗ್ರಹ ಅನ್ವೇಷಣ ರೋವರ್ನೌಕೆಯ ಏರೋಶೆಲ್ ಯಂತ್ರವು, ಮಂಗಳದ ವಾತಾವರಣವನ್ನು ಪ್ರವೇಶಿಸುತ್ತಿರುವುದು. ಕಲಾವಿದನ ಕಲ್ಪನೆ.
ಆಪೋಲೊ ಕಮಾಂಡ್ ಮಾಡ್ಯೂಲ್ ಒಂದು ನಿಶ್ಚಿತ ಕೋನದಲ್ಲಿ ವಾಲಿಕೊಂಡು ವಾಯುಮಂಡಲವನ್ನು ಪ್ರವೇಶಿಸುತ್ತಿರುವುದು, ಕಲಾವಿದನ ಕಲ್ಪನೆ.