ಹಸಿರುಮನೆ ವಿದ್ಯಮಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: '''ಹಸಿರುಮನೆ ವಿದ್ಯಮಾನ''' ಅಥವಾ "ಹಸಿರುಮನೆ ಪ್ರಭಾವ"ವು ( ಇಂಗ್ಲಿಷ್ ನಲ್ಲಿ ಗ್...
( ಯಾವುದೇ ವ್ಯತ್ಯಾಸವಿಲ್ಲ )

೧೫:೦೩, ೨೪ ಸೆಪ್ಟೆಂಬರ್ ೨೦೦೯ ನಂತೆ ಪರಿಷ್ಕರಣೆ

ಹಸಿರುಮನೆ ವಿದ್ಯಮಾನ ಅಥವಾ "ಹಸಿರುಮನೆ ಪ್ರಭಾವ"ವು ( ಇಂಗ್ಲಿಷ್ ನಲ್ಲಿ ಗ್ರೀನ್ ಹೌಸ್ ಎಫೆಕ್ಟ್) ಗ್ರಹ ಮತ್ತು ನೈಸರ್ಗಿಕ ಉಪಗ್ರಹಗಳ ವಾತಾವರಣತಾಪಮಾನಕ್ಕೆ ಸಂಬಂಧಿಸಿದ ವಿದ್ಯಮಾನ.ವಾತಾವರಣದಲ್ಲಿ ಇನ್-ಫ್ರಾ-ರೆಡ್ ವಿಕಿರಣವನ್ನು ಹೀರಿಕೊಳ್ಳುವಂತಹ ಅನಿಲಗಳ ಉಪಸ್ಥಿತಿಯಿಂದ ಗ್ರಹ ಅಥವಾ ಉಪಗ್ರಹದ ಮೇಲ್ಮೈ ಬಿಸಿಯಾಗುವಿಕೆ ಅಥವಾ ಮೇಲ್ಮೈ ಉಷ್ಣತೆಯ ಏರುವಿಕೆಯನ್ನು ಹಸಿರುಮನೆ ವಿದ್ಯಮಾನವೆಂದು ಕರೆಯುತ್ತಾರೆ. ವಾತಾವರಣದ ಈ ಅನಿಲಗಳನ್ನು ಹಸಿರುಮನೆ ಅನಿಲಗಳೆಂದು ಕರೆಯುತ್ತಾರೆ.ಈ ಅನಿಲಗಳು ಉಷ್ಣತೆಯನ್ನು ಗ್ರಹದ ಮೇಲ್ಮೈಗೆ ತಾಗಿಕೊಂಡಿರುವ ವಾತಾವರಣದ ಟ್ರೋಪೋಸ್ಫಿಯರ್ ನಲ್ಲೇ ಹಿಡಿದಿಡುವುದರಿಂದ,ಗ್ರಹದ ಮೇಲ್ಮೈ ಉಷ್ಣತೆ ಏರುತ್ತದೆ. ಈ ಕ್ರಿಯೆಯು ಪ್ರಯೋಗಕ್ಕಾಗಿ ಅಥವಾ ಕೃಷಿಗಾಗಿ ಬಿಸಿ ಗಾಳಿಯನ್ನು ಹಿಡಿದಿಡುವ ಗಾಜಿನ ಕಟ್ಟಡವಾದ ಬರಿಯ "ಹಸಿರುಮನೆ"ಯಿಂದ ಪೂರ್ಣವಾಗಿ ಬೇರೆಯದು ಮತ್ತು ಅದಕ್ಕೂ ಇದಕ್ಕೂ ಏನೂ ಸಂಬಂಧವಿಲ್ಲವೆನ್ನುವುದನ್ನು ಗಮನಿಸಬೇಕು.