ಭೂಮಿಯ ವಾಯುಮಂಡಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
ಭೂಮಿಯ ವಾತಾವರಣವು ಭೂಮಿಯು ತನ್ನ ಸುತ್ತಲೂ ಗುರುತ್ವಾಕರ್ಷಣೆಯಿಂದ ಸೆಳೆದಿಟ್ಟಿರುವ ಅನಿಲಗಳ ವಿಶಾಲ ಆವರಣ.ಭೂಮಿಯ ವಾತಾವರಣವು [[ಸೂರ್ಯ]]ನ [[ಅತಿನೇರಳೆ ಕಿರಣ]]ಗಳನ್ನು ಹೀರಿಕೊಳ್ಳುವದರಿಂದಲೂ,ಸೂರ್ಯನಿಂದ ಬರುವ ಉಷ್ಣತೆಯನ್ನು ಉಳಿಸಿಕೊಂಡು(ಹಸಿರುಮನೆ ವಿದ್ಯಮಾನ ಅಥವಾ ಗ್ರೀನ್ ಹೌಸ್ ಎಫೆಕ್ಟ್)ಭೂಮಿಯ ಮೇಲ್ಮೈಯನ್ನು ಬೆಚ್ಚಗಿಡುವದಿಂದಲೂ ಮತ್ತು [[ಹಗಲು]], [[ರಾತ್ರಿ]]ಗಳಲ್ಲಿ [[ತಾಪಮಾನ]]ವು ತೀರಾ ಏರಿಳಿಕೆಯಾಗದಂತೆ ನಿಯಂತ್ರಿಸುವುದರಿಂದಲೂ [[ಭೂಮಿಯ ಜೀವರಾಶಿ]]ಗಳನ್ನು ರಕ್ಷಿಸುತ್ತದೆ.
ಭೂಮಿಯ ವಾತಾವರಣದ ತೂಕವು ಸುಮಾರು ಐದು ಕ್ವಾಡ್ರಿಲಿಯನ್ (೫೦೦೦೦೦೦೦೦೦೦೦೦೦೦)ಟನ್ ಗಳಷ್ಟು. ಈ ತೂಕದ ಮುಕ್ಕಾಲು ಭಾಗದಷ್ಟು ಭಾರವು ಭೂಮಿಯ ಮೇಲ್ಮೈಯಿಂದ ೧೧ ಕಿ.ಮೀ ವರೆಗಿನ ವಾಯುವಿನಿಂದಾಗುತ್ತದೆ.ಮೇಲ್ಮೈಯಿಂದ ಎತ್ತರಕ್ಕೆ ಹೋದಂತೆಲ್ಲಾ ವಾತಾವರಣದ ಸಾಂದ್ರತೆಯು ಕ್ಷೀಣಿಸುತ್ತಾ, ವಾತಾವರಣವು ತೆಳ್ಳಗಾಗುತ್ತಾ, ಇನ್ನೂ ಮೇಲಕ್ಕೆ ಹೋದಂತೆ ನಿಧಾನವಾಗಿ [[ಅಂತರಿಕ್ಷ]]ವಾಗಿ ಮಾರ್ಪಡುತ್ತದೆ.
ವಾತಾವರಣಕ್ಕೂ, ಅಂತರಿಕ್ಷಕ್ಕೂ ಯಾವುದೇ ನಿಶ್ಚಿತ ಗಡಿಯಿಲ್ಲ.[[ಆಂತರಿಕ್ಷನೌಕೆ]]ಯು ಭೂಮಿಯ ವಾತಾವರಣವನ್ನು ಮರುಪ್ರವೇಶಿಸುವಾಗ ([[ವಾತಾವರಣದಲ್ಲಿ ಮರುಪ್ರವೇಶಿಸುವಿಕೆ]])ಭೂಮಿಯ ಮೇಲ್ಮೈಯಿಂದ ಸುಮಾರು ೧೨೦ ಕಿ.ಮೀ ಎತ್ತರದಲ್ಲಿ ವಾಯುವಿನ ಉಪಸ್ಥಿತಿಯನ್ನು ತೋರುವ ಗಮನಾರ್ಹ ವಿದ್ಯಮಾನಗಳನ್ನು ಕಾಣಬಹುದು. ಸಾಮಾನ್ಯವಾಗಿ ಮೇಲ್ಮೈಯಿಂದ ೧೦೦ ಕಿ.ಮೀ ಎತ್ತರದಲ್ಲಿರುವ [[ಕ್ರಾಮನ್ ರೇಖೆ]]ಯೆಂದು ಕರೆಯಲ್ಪಡುವ ಪ್ರದೇಶವನ್ನು ಅಂತರಿಕ್ಷ ಮತ್ತು ವಾತಾವರಣದ ಗಡಿಯೆಂದು ಪರಿಗಣಿಸುತ್ತಾರೆ.
==ಸಂಯೋಜನೆ==
[[Image:Atmosphere gas proportions.svg|thumb|right|ಡಿಸೆಂಬರ್ 1987ರಲ್ಲಿ ಅಳೆಯಲ್ಪಟ್ಟ ವಾತಾವರಣದ ಸಂಯೋಜನೆ. ಕೆಳಗಿನ ವೃತ್ತಾಕಾರದ ಚಿತ್ರವು ವಾತಾವರಣದ 0.038%ರಷ್ಟಿರುವ ಅತಿ-ವಿರಳ ಅನಿಲಗಳ ಸಂಯೋಜನೆಯನ್ನು ತೋರಿಸುತ್ತದೆ.]]
ವಾಯುವು ಮುಖ್ಯವಾಗಿ ಸಾರಜನಕ,ಆಮ್ಲಜನಕ ಮತ್ತು ಅರ್ಗಾನ್ ಅನಿಲಗಳಿಂದ ಕೂಡಿದೆ.ಇವುಗಳನ್ನು ವಾತಾವರಣದ "ಮುಖ್ಯ ಅನಿಲ" ಗಳೆನ್ನುತ್ತಾರೆ.ಉಳಿದ ಇತರ ಅನಿಲಗಳು ತೀರಾ ವಿರಳ ಪ್ರಮಾಣದಲ್ಲಿವೆ.ಇವುಗಳನ್ನು
ವಾತಾವರಣದ "ವಿರಳ ಅನಿಲ" ಗಳೆನ್ನುತ್ತಾರೆ. ಇವು ಯಾವವೆಂದರೆ, [[ಹಸಿರುಮನೆ ಅನಿಲ]]ಗಳಾದ ನೀರಾವಿ,[[ಕಾರ್ಬನ್ ಡೈ ಆಕ್ಸೈಡ್]],[[ಮೀಥೇನ್]],[[ನೈಟ್ರಸ್ ಆಕ್ಸೈಡ್]] ಮತ್ತು [[ಓಝೋನ್]].
ಶೋಧಿಸಿ,ಶುಧ್ಧೀಕರಿಸಿದ [[ಗಾಳಿ]]ಯು(ವಾಯು), ಅತಿ ವಿರಳ ಪ್ರಮಾಣದಲ್ಲಿ ಕೆಲವು ರಾಸಾಯನಿಕ ಸಂಯುಕ್ತಗಳನ್ನು ಹೊಂದಿರುತ್ತದೆ.ಶುಧ್ಧೀಕರಿಸದ ಸಾಮಾನ್ಯ ವಾಯುವಿನಲ್ಲಿ ಹಲವು ಪ್ರಾಕೃತಿಕ ವಸ್ತುಗಳು ಕಾಣಬರುತ್ತವೆ.
ಅವು ಯಾವವೆಂದರೆ,[[ಧೂಳು]],[[ಪರಾಗರೇಣು]],[[ಅತಿಸೂಕ್ಷ್ಮ ಬೀಜಗಳು]],[[ಕಡಲ ತೇವಾಂಶ]](ಸೀ ಸ್ಪ್ರೇ), [[ಜ್ವಾಲಾಮುಖಿ]]ಗಳ ಬೂದಿ, [[ಉಲ್ಕೆ]]ಗಳ ಬೂದಿ ಮುಂತಾದವು.
[[ಕೈಗಾರಿಕಾ ಪ್ರದೂಷಕ]]ಗಳಾದ [[ಕ್ಲೋರಿನ್]] ಮತ್ತು ಅದರ ಸಂಯುಕ್ತಗಳು, [[ಫ್ಲೋರಿನ್]]ಮತ್ತು ಅದರ ಸಂಯುಕ್ತಗಳು, [[ಪಾದರಸ]] ಮತ್ತು [[ಗಂಧಕ]] (ಸಂಯುಕ್ತ ರೂಪದಲ್ಲಿ ಉ.ದಾ ಸಲ್ಫರ್ ಡೈ ಆಕ್ಸೈಡ್).
{| class="wikitable"
|+'''ಒಣ ಹವೆಯ ಸಂಯೋಜನೆ, ಪ್ರಮಾಣಕ್ಕನುಗುಣವಾಗಿ'''|colspan=2 style="font-size: 85%" |''ppmv: [[ಪಾರ್ಟ್ಸ್ ಪರ್ ಮಿಲಿಯನ್]] ಪ್ರಮಾಣಕ್ಕನುಗುಣವಾಗಿ''
|-
!align = "left" | ಆನಿಲ
!align = "left" |ಪ್ರಮಾಣ
|-
| [[ಸಾರಜನಕ]] (N<sub>2</sub>) || 780,840 ppmv (78.084%)
|-
| [[ಆಮ್ಲಜನಕ]] (O<sub>2</sub>) || 209,460 ppmv (20.946%)
|-
| [[ಅರ್ಗಾನ್]] (Ar) || 9,340 ppmv (0.9340%)
|-
| [[ಕಾರ್ಬನ್ ಡೈ ಆಕ್ಸೈಡ್]] (CO<sub>2</sub>) || 383 ppmv (0.0383%)
|-
| [[ನಿಯಾನ್]] (Ne) || 18.18 ppmv (0.001818%)
|-
| [[ಹೀಲಿಯಂ]] (He) || 5.24 ppmv (0.000524%)
|-
| [[ಮೀಥೇನ್]] (CH<sub>4</sub>) || 1.745 ppmv (0.0001745%)
|-
| [[ಕ್ರಿಪ್ಟಾನ್]] (Kr) || 1.14 ppmv (0.000114%)
|-
| [[ಜಲಜನಕ]] (H<sub>2</sub>) || 0.55 ppmv (0.000055%)
|-
| [[ನೈಟ್ರಸ್ ಅಕ್ಸೈಡ್]] (N<sub>2</sub>O) || 0.3 ppmv (0.00003%)
|-
| [[ಝೆನಾನ್]] (Xe) || 0.09 ppmv (9x10<sup>−6</sup>%)
|-
| [[ಓಝೋನ್]] (O<sub>3</sub>) || 0.0 to 0.07 ppmv (0% to 7x10<sup>−6</sup>%)
|-
| [[ನೈಟ್ರೋಜೆನ್ ಡೈ ಆಕ್ಸೈಡ್]] (NO<sub>2</sub>) || 0.02 ppmv (2x10<sup>−6</sup>%)
|-
| [[ಅಯೋಡಿನ್]] (I) || 0.01 ppmv (1x10<sup>−6</sup>%)
|-
| [[ಕಾರ್ಬನ್ ಮೋನಾಕ್ಸೈಡ್]] (CO) || 0.1 ppmv
|-
| [[ಅಮೋನಿಯಾ]] (NH<sub>3</sub>) || trace
|-
| Colspan=2 |'''Not included in above dry atmosphere:'''
|-
| [[ನೀರಾವಿ]] (H<sub>2</sub>O) || ~0.40% ಸರಾಸರಿ, ಸಾಮಾನ್ಯವಾಗಿ 1%-4% ರಷ್ಟು ಮೇಲ್ಮೈಯಲ್ಲಿ.
|}
"https://kn.wikipedia.org/wiki/ಭೂಮಿಯ_ವಾಯುಮಂಡಲ" ಇಂದ ಪಡೆಯಲ್ಪಟ್ಟಿದೆ