ಭೂಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Modifying: ckb:زەوی
೮ ನೇ ಸಾಲು:
ಭೂಮಿ ಮತ್ತು ಅದರ ಸುತ್ತುಮುತ್ತಲಿನ ಅಂತರಿಕ್ಷದ ನಡುವೆ ಬಹಳಷ್ಟು ಒಡನಾಟಗಳು ಆಗುತ್ತವೆ. ಸ್ವಲ್ಪ ದೊಡ್ಡದೆಂದೇ ಹೇಳಬಹುದಾದ ಚಂದ್ರನ ಕಾರಣದಿಂದ ಸಾಗರಗಳಲ್ಲಿ [[:en:tide|ಉಬ್ಬರವಿಳಿತ]]ಗಳು ಉಂಟಾಗುತ್ತವೆ. ಹಲವಾರು ಕೋಟಿ ವರ್ಷಗಳ ಅವಧಿಯಲ್ಲಿ ಈ ಉಬ್ಬರವಿಳಿತಗಳು ಭೂಮಿಯ ಅಕ್ಷೀಯ ಪರಿಭ್ರಮಣ ವೇಗವನ್ನು ನಿಧಾನವಾಗಿ ಕಡಿಮೆಗೊಳಿಸಿವೆ. ಭೂಮಿಯ ಇತಿಹಾಸದ ಮೊದಲ ಭಾಗದಲ್ಲಿ ಒಂದು [[ಧೂಮಕೇತು]]ವಿನ ಅಪ್ಪಳಿಕೆಯಿಂದ ಸಾಗರಗಳು ಉದ್ಭವವಾದವು ಎಂದೆನ್ನಲಾಗಿದೆ. ನಂತರದ [[ಕ್ಷುದ್ರಗ್ರಹ]] ಅಪ್ಪಳಿಕೆಗಳು ಮೇಲ್ಮೈನ ಮೇಲೆ ಗಮನಾರ್ಹ ಬದಲಾವಣೆಗಳನ್ನು ಉಂಟುಮಾಡಿದ್ದಿರಬಹುದು. ಭೂಮಿಯ ಕಕ್ಷೆಯಲ್ಲಿನ ಬದಲಾವಣೆಗಳ ದೀರ್ಘಾವಧಿ [[:en:Milankovitch cycles|ಅವರ್ತ]]ವೇ ಮೇಲ್ಮೈನ ಬಹಳಷ್ಟು ಭಾಗಗಳನ್ನು ಹಿಮದಲ್ಲಿ ಹೊದಿಸಿದ [[ಹಿಮಯುಗ]]ಗಳಿಗೂ ಕಾರಣವಾಗಿದ್ದಿರಬಹುದು.
 
''''''ದಪ್ಪಗಿನ ಅಚ್ಚು''''''==ಇತಿಹಾಸ==
 
ಲಭ್ಯವಿರುವ ಪುರಾವೆಗಳನ್ನು ಆಧರಿಸಿ, ಗ್ರಹದ ಪೂರ್ವಾಪರದ ವಿವರಗಳನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ೪೫೬.೭ ಕೋಟಿ ವರ್ಷಗಳ ಹಿಂದೆ, ಸೂರ್ಯ ಮತ್ತು ಬೇರೆ ಗ್ರಹಗಳ ಜೊತೆಯಲ್ಲೇ ಭೂಮಿಯು [[:en:solar nebula|ಸೌರ ಜ್ಯೋತಿಪಟಲ]]ದಿಂದ ಉದ್ಭವವಾಯಿತು. ಭೂಮಿಯು ಪ್ರಸ್ತುತದ ಅರ್ಧ ವ್ಯಾಸವನ್ನು ಹೊಂದಿದ್ದಾಗ ವಾಯುಮಂಡಲದಲ್ಲಿ ನಿಧಾನವಾಗಿ ನೀರು ಮತ್ತು ನೀರಾವಿಗಳು ಶೇಖರವಾಗತೊಡಗಿದವು. ನೀರಿನ ಅಂಶ ಹೆಚ್ಚುತ್ತಿದ್ದಂತೆ, ದ್ರವರೂಪದಲ್ಲಿದ್ದ ಭೂಮಿಯ ಮೇಲ್ಮೈಯು ಘನರೂಪಕ್ಕೆ ತಿರುಗಿತು. ಇದರ ಸ್ವಲ್ಪ ನಂತರವೇ ಚಂದ್ರನ ಉದ್ಭವವಾಯಿತು. ಇದು ಮಂಗಳ ಗ್ರಹದಷ್ಟು ಗಾತ್ರದ [[:en:Theia (planet)|ಥೀಯ]] ಎಂಬ ಒಂದು ಕಾಯದಿಂದ ಆಗಿದ್ದಿರುವ ಸಾಧ್ಯತೆಗಳಿವೆ. ಭೂಮಿಯ ಒಳಭಾಗದಿಂದ ಹೊರಬಂದ ಅನಿಲಗಳು ಮತ್ತು [[:en:Volcano|ಅಗ್ನಿಪರ್ವತ]]ಗಳ ಚಟುವಟಿಕೆಗಳಿಂದ ಮುಂಚಿನ ವಾಯುಮಂಡಲದವು ಸೃಷ್ಟಿಯಾಯಿತು; [[ಧೂಮಕೇತು]]ಗಳಿಂದ ಬಂದ ಮಂಜು ಮತ್ತು ಸಾಂದ್ರೀಕರಿತವಾಗುತ್ತಿದ್ದ [[:en:water vapor|ನೀರಾವಿ]]ಗಳಿಂದ, [[:en:Origin of the world's oceans|ಮೊದಲ ಸಾಗರಗಳು]] ರೂಪುಗೊಂಡವು.<ref>A. Morbidelli ''et al'', 2000, "[http://adsabs.harvard.edu/abs/2000M&PS...35.1309M Source Regions and Time Scales for the Delivery of Water to Earth]", ''Meteoritics & Planetary Science'', vol. 35, no. 6, pp. 130920.</ref> ಸುಮಾರು ೪೦೦ ಕೋಟಿ ವರ್ಷಗಳ ಹಿಂದೆ ಪ್ರಬಲವಾದ ರಸಾಯನಿಕ ಕ್ರಿಯೆಗಳಿಂದ, ಒಂದು ಸ್ವ-ಪ್ರತಿಕೃತಿಕರಿಸಿಕೊಳ್ಳುವ ಸಂಯುಕ್ತ ವಸ್ತು ಹೊರಬಂದಿತೆಂದು ನಂಬಲಾಗಿದೆ. ಇದಾದ ೫೦ ಕೋಟಿ ವರ್ಷಗಳ ನಂತರ ಮೊಟ್ಟಮೊದಲ ಜೀವಿಯು ಅವತರಿಸಿತು.<ref>W. Ford Doolitte, "Uprooting the Tree of Life", ''Scientific American'', Feb. 2000.</ref>
"https://kn.wikipedia.org/wiki/ಭೂಮಿ" ಇಂದ ಪಡೆಯಲ್ಪಟ್ಟಿದೆ