ಐತರೇಯೋಪನಿಷತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
{{ಹಿಂದೂ ಧರ್ಮಗ್ರಂಥಗಳು}}
ಐತರೇಯ ಉಪನಿಷತ್, [[ಋಗ್ವೇದ]]ಕ್ಕೆ ಸೇರಿದ [[ಐತರೇಯ ಅರಣ್ಯಕ]]ದ, ಎರಡನೇ ಅರಣ್ಯಕದ ಭಾಗ. ಎರಡನೇ ಅರಣ್ಯಕದ ನಾಲ್ಕನೆಯ, ಐದನೆಯ ಮತ್ತು ಆರನೆಯ ಅಧ್ಯಾಯಗಳೇ ಐತರೇಯ ಉಪನಿಷತ್. [[ಶಂಕರಾಚಾರ್ಯ]]ರು [[ಭಾಷ್ಯ]] ಬರೆದಿರುವ ಪ್ರಮುಖವಾದ ದಶೋಪನಿಷತ್ತುಗಳಲ್ಲಿ ಇದೂ ಒಂದು. ಸಂಪ್ರದಾಯದ ನಂಬಿಕೆಯ ಪ್ರಕಾರ [[ಮಹೀದಾಸ]]ನೆಂಬ [[ಋಷಿ]]ಯಿಂದ ಪ್ರಕಾಶಿಸಲ್ಪಟ್ಟಿದೆ. ಈ ಉಪನಿಷತ್ತಿನಲ್ಲಿ ನಾಲ್ಕು ಅಧ್ಯಾಯಗಳಿವೆ. ಪ್ರತಿಯೊಂದು ಅಧ್ಯಾಯವೂ ಅಧ್ಯಯನ ಅನುಕೂಲಕ್ಕಾಗಿ ಸಣ್ಣ-ಸಣ್ಣ ಖಂಡಗಳಾಗಿ ವಿಭಜಿಸಲ್ಪಟ್ಟಿದೆ.
'''ಐತರೇಯೋಪನಿಷತ್'''ಋಗ್ವೇದಕ್ಕೆ ಸೇರಿದ ಉಪನಿಷತ್ತು.ಮೂರು ಅಧ್ಯಾಯಗಳಿಂದ ಕೂಡಿದೆ.ಅತ್ಮದ ವಿಚಾರವಾಗಿ ಪ್ರಶ್ನೆಗಳೂ ಅದಕ್ಕೆ ಸೂಕ್ತ ಉತ್ತರಗಳೂ ಇದರಲ್ಲಿವೆ.ಸೃಷ್ಟಿ,ಮಾನವ,ಬ್ರಹ್ಮಸ್ವರೂಪ ಇತ್ಯಾದಿ ವಿಷಯಗಳೂ ಇದರಲ್ಲಿ ಸೇರಿದೆ.ಇದು ಋಗ್ವೇದ ಐತರೇಯ ಅರಣ್ಯಕ್ಕೆ ಸೇರಿರುವುದರಿಂದ ಐತರೇಯ ಉಪನಿಷತ್ತು ಎಂದು ಹೆಸರು ಬಂದಿದೆ.
==ಮೊದಲನೆಯ ಅಧ್ಯಾಯ==
ಇದರ ಶಾಂತಿಮಂತ್ರ ಇಂತಿದೆ.
ಮೊದಲನೆಯ ಅಧ್ಯಾಯದಲ್ಲಿ ಸೃಷ್ಟಿಗೆ ಸಂಬಂಧಪಟ್ಟ ಅಖ್ಯಾಯಿಕೆಯಿದೆ. ಇದರಲ್ಲಿ ಪರಮಾತ್ಮನು ತನಿಗಿಂತ ಭಿನ್ನವಾದ ಬೇರೊಂದು ವಸ್ತುವನ್ನು ತೆಗೆದುಕೊಳ್ಳದೆ ಆಕಾಶಾದಿ ಕ್ರಮದಿಂದ ವಿಶ್ವವನ್ನು ಸೃಷ್ಟಿಸಿದನೆಂದೂ ನಂತರ ಅತ್ಮಪ್ರಬೋಧಕಾಗಿ [[ಪ್ರಾಣ]]ವೇ ಮೊದಲಾದವುಗಳಿಂದ ಕೂಡಿರುವ ಸರ್ವಶರೀರಗಳನ್ನೂ ತಾನೇ ಪ್ರವೇಶಿಸಿದನೆಂದೂ ಮತ್ತು ಪ್ರವೇಶಿಸಿದ ಮೇಲೆ ಯಥಾರ್ಥವಾದ ತನ್ನ [[ಆತ್ಮ]]ನನ್ನೇ "ನಾನು ಈ ಬ್ರಹ್ಮವೇ ಆಗಿರುತ್ತೇನೆ" ಎಂದು ಸಾಕ್ಷಾತ್ತಾಗಿ ಅರಿತುಕೊಂಡನೆಂದು ಹೇಳಲಾಗಿದೆ. ಆದ್ದರಿಂದ ಸರ್ವಶರೀರಗಳಲ್ಲಿಯೂ ಇರುವವನು ಅವನೊಬ್ಬ ಆತ್ಮನೇ ಹೊರತು ಬೇರೊಬ್ಬನಿಲ್ಲ, ಆದಕಾರಣ ಎಲ್ಲರೂ "ನಾನು ಬ್ರಹ್ಮವೇ ಆಗಿದ್ದೇನೆ" ''ಅಹಂ ಬ್ರಹ್ಮಾಸ್ಮಿ'' ಎಂದು ಅರಿಯಬೇಕೆಂದು ತಮ್ಮ ಭಾಷ್ಯದಲ್ಲಿ ಶಂಕರಾಚಾರ್ಯರು ಅಭಿಪ್ರಾಯಪಡುತ್ತಾರೆ.
 
==ಏರಡನೆಯ ಅಧ್ಯಾಯ==
'''ಓಂ ವಾಙ್ಮೇ ಮನಸಿ ಪ್ರತಿಷ್ಥಿತಾ ಮನೋ ಮೇ ವಾಚಿ ಪ್ರತಿಷ್ಥಿತಮಾವಿರಾವೀರ್ಮ ಏಧಿ|'''
ಎರಡನೆಯ ಅಧ್ಯಾಯದಲ್ಲಿ ಒಂದೇ ಖಂಡವಿದೆ.ಇದರಲ್ಲಿ ಜೀವನಿಗೆ ಜನ್ಮ-ಮರಣಗಳು [[ನದಿ]]ಯ ಸ್ರೋತದಂತೆ ಪುನಃ ಪುನಃ ಉಂಟಾಗುತ್ತವೆಯೆಂದು ಹೇಳಿದೆ ಅಲ್ಲದೆ, ಜೀವನ ಮೂರು ಅವಸ್ಥೆಗಳನ್ನು ಹೇಳಲಾಗಿದೆ. ಜೀವನು ಪುರುಷನಲ್ಲಿ [[ರೇತಸ್ಸು]] ಅಥವಾ [[ವೀರ್ಯ]] ರೂಪದಿಂದ ಇರುತ್ತಾನೆ. ಯಾವಾಗ ಪುರುಷನು ವೀರ್ಯವನ್ನು ಸ್ತ್ರೀಗರ್ಭದಲ್ಲಿ ಸೇಚನ ಮಾಡುವನೊ ಆಗ ಉತ್ಪತ್ತಿಯಾಗುವ ಗರ್ಭಸ್ಥ ಶಿಶುರೂಪವು ಮೊದಲನೆ ಅವಸ್ಥೆಯು. ಶಿಶುವು ಮಾತೃಗರ್ಭದಿಂದ ಹೊರಬಂದು ಜೀವಿಸುವುದು ಎರಡನೆಯ ಅವಸ್ಥೆಯು.ಕೊನೆಗೆ ಜೀವನವನ್ನು ಮುಗಿಸಿ ಶರೀರವನ್ನು ಬಿಟ್ಟಮೇಲೆ ಇನ್ನೊಂದು ಶರೀರವನ್ನು ಪಡೆದುಕೊಳ್ಳುವುದು ಮೂರನೆಯ ಅವಸ್ಥೆ. ಯಾವ ಅವಸ್ಥೆಯಲ್ಲಾದರೂ ಇರಲಿ ಜೀವನು ತನ್ನ ಅತ್ಮ ಸ್ವರೂಪವನ್ನು ಅರಿತುಕೊಂಡರೆ,ಬಂಧಮುಕ್ತನಾಗುತ್ತಾನೆಂದೂ, [[ವಾಮದೇವ]]ನು ಮಾತೃಗರ್ಭದಲ್ಲಿರುವಾಗಲೇ [[ಆತ್ಮಜ್ಞಾನ]]ವನ್ನು ಹೊಂದಿ ಅವಿದ್ಯಾಕೃತವಾದ ಶರೀರವನ್ನು ನಾಶಪಡಿಸಿಕೊಂಡು ಅಮೃತನಾದನೆಂದೂ ಹೇಳಲಾಗಿದೆ.
'''ವೇದಸ್ಯ ಮ ಆಣೀ ಸ್ಥಃ ಶ್ರುತಂ ಮೇ ಮಾ ಪ್ರಹಾಸೀರನೇನಾಹೋರಾತ್ರಾನ್ ಸಂದಧಾಮಿ|'''
== ಮೂರನೆಯ ಅಧ್ಯಾಯ==
'''ಋತಂ ವದಿಷ್ಯಾಮಿ|ಸತ್ಯಂ ವದಿಷ್ಯಾಮಿ|ತನ್ಮಾಮವತು ತದ್ವಕ್ತಾರಮವತು|'''
ಮೂರನೆಯ ಅಧ್ಯಾಯದಲ್ಲಿಯೂ ಒಂದೇ ಖಂಡವಿದೆ. ಎರಡನೆಯ ಅಧ್ಯಾಯದಲ್ಲಿ ಹೇಳಿದಂತೆ ವಾಮದೇವನು ಅರಿತುಕೊಂಡ ಆತ್ಮಸ್ವರೂಪದ ಜಿಜ್ಞಾಸೆಯನ್ನು ಮಾಡಲಾಗಿದೆ. ನಾಲ್ಕನೆಯ ಅಧ್ಯಾಯದಲ್ಲಿ "ವಾಙ್ಮೇ ಮನಸಿ ಪ್ರತಿಷ್ಟಿತಾ..." ಎಂದು ಪ್ರಾರಂಭವಾಗುವ [[ಶಾಂತಿಮಂತ್ರ]]ವೊಂದೇ ಇದೆ.
'''ಅವತು ಮಾಮವತು ವಕ್ತಾರಮ್ ಅವತು ವಕ್ತಾರಮ್||'''
 
'''ಓಂ ಶಾಂತಿಃ ಶಾಂತಿಃ ಶಾಂತಿಃ'''
 
== ಅಧಾರ ==
"https://kn.wikipedia.org/wiki/ಐತರೇಯೋಪನಿಷತ್" ಇಂದ ಪಡೆಯಲ್ಪಟ್ಟಿದೆ