ಎಸ್.ಎಲ್. ಭೈರಪ್ಪ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೨ ನೇ ಸಾಲು:
[[ಯು. ಆರ್. ಅನಂತ್‍ಮೂರ್ತಿಯವರು]] ಭೈರಪ್ಪನವರ ಕಾದಂಬರಿಗಳ ಪ್ರಮುಖ ಟೀಕಾಕಾರ. ಭೈರಪ್ಪನವರು ತಮ್ಮ ಹಾಗೂ ಅನಂತಮೂರ್ತಿಯವರ ನಡುವೆ ನಡೆದ ವಾದ ವಿವಾದಗಳನ್ನು ಭಿತ್ತಿ ಎಂಬ ತಮ್ಮ ಕಾದಂಬರಿಯಲ್ಲಿ ಹಾಗೂ [[ನಾನೇಕೆ ಬರೆಯುತ್ತೇನೆ]]ಯ ಕೆಲವು ಪ್ರಭಂದಗಳಲ್ಲಿ ದಾಖಲಿಸಿದ್ದಾರೆ.
 
ಮುಸ್ಲೀಮ್ ಆಳ್ವಿಕೆಯು ಭಾರತದ ಸಂಸ್ಕೃತಿ ಹಾಗೂ ಸಾಮಾಜಿಕ ಬೆಳವಣಿಗೆಗಳ ಮೇಲೇ ಬೀರಿದ ಪರಿಣಾಮವನ್ನು ಬಿಂಬಿಸುವ, ಐತಿಹಾಸಿಕ ಸತ್ಯಗಳನ್ನೊಳಗೊಂಡ ಭೈರಪ್ಪನವರ ಇತ್ತೀಚಿನ ಕಾದಂಬರಿ [[ಆವರಣ]] ಕರ್ನಾಟಕದಲ್ಲಿ ವಿವಾದದ ಅಲೆಯನ್ನೆಬ್ಬಿಸಿದೆ. ಭೈರಪ್ಪನವರು ಇತಿಹಾಸದ ಹೆಸರಲ್ಲಿ ಸಮಾಜವನ್ನ್ನು ಒಡೆದು ಆಳಲು ಬಯಸುವ ಮೂಲಭೂತವಾದಿ ಹಾಗೂ ಅವರಿಗೆ ಕಾದಂಬರಿ ಬರೆಯುವ ಜ್ಞಾನವಿಲ್ಲ ಎಂದು ಹೇಳಿಕೆ ಕೊಟ್ಟ ಅನಂತಮೂರ್ತಿಯವರು ಸಾಹಿತ್ಯಲೋಕದಲ್ಲಿ ಕಟುಟೀಕೆಗೊಳಗಾದರು. ಆದರೆ ಭೈರಪ್ಪನವರು ತಾವು ಯಾವುದರ ಬಗ್ಗೆಯೂ ಪೂರ್ವಾಗ್ರಹ ಪೀಡಿತರಾಗದೆ ಮಾಡಿದ ಸತ್ಯಾನ್ವೇಷಣೆಯ ಫಲವೇ ಆವರಣ ಎಂದು ಸಮರ್ಥಿಸಿಕೊಂಡಿದ್ದಾರೆ. ಟೀಕಾಕಾರರು ಯಾವುದೇ ತೀರ್ಮಾನಕ್ಕೆ ಬರುವ ಮುನ್ನ ಕಾದಂಬರಿಯಲ್ಲಿ ಸೂಚಿಸಿರುವ ಆಕರ ಗ್ರಂಥಗಳನ್ನು ಅಧ್ಯಯನ ಮಾಡಬೇಕು ಎಂದು ತಿಳಿಸಿದ್ದಾರೆ.ಇತ್ತೀಚೆಗೆ [[ವಿಜಯ ಕರ್ನಾಟಕ]] ಪತ್ರಿಕೆಯಲ್ಲಿ ಪ್ರಕಟವಾದ[[ಮತಾಂತರ]] ಎಂಬ ಲೇಖನಕ್ಕೆ ಬಹಳ ದಿನಗಳ ಕಾಲ ಪರ ಹಾಗೂ ವಿರೋಧಿ ವಿಮರ್ಶೆಗಳು ಪ್ರಕಟವಾಗಿದ್ದವು. ಜನಸಾಮಾನ್ಯರಿಗಂತೂ ಇದರಿಂದ ಬಹಳ ರೋಚಕ ಅನುಭವವಾಯಿತು.
==ಪ್ರಶಸ್ತಿಗಳು==
*‌ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ೧೯೬೬
"https://kn.wikipedia.org/wiki/ಎಸ್.ಎಲ್._ಭೈರಪ್ಪ" ಇಂದ ಪಡೆಯಲ್ಪಟ್ಟಿದೆ