ಅಂಡಾಶ್ಮಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕೆಲವು ಬದಲಾವಣೆಗಳು
 
೨ ನೇ ಸಾಲು:
[[File:OoidSurface01.jpg|thumb|right|Ooids on the surface of a limestone; Carmel Formation (Middle Jurassic) of southern Utah]]
[[File:CarmelOoids.jpg|thumb|right|Thin-section of calcitic ooids from an oolite within the [[Carmel Formation]] (Middle [[Jurassic]]) of southern Utah]]
 
'''ಅಂಡಾಶ್ಮಗಳು''' ಊಲೈಟುಗಳೆಂಬ<ref>{{Cite book|last=|first=|url=https://books.google.com/books?id=9IsAEAAAQBAJ&pg=PA77|title=A to Z of Rocks, Minerals and Gems|date=2020|publisher=Quarto Publishing Group UK|isbn=978-0-7112-5684-2|language=en}}</ref> ಹೆಸರುಳ್ಳ ಇವು ಸಣ್ಣ ಸಣ್ಣ ದುಂಡು ಕಣಗಳು ಒಟ್ಟುಗೂಡಿ ಆಗಿರುವ ಒಂದು ಬಗೆಯ ಜಲಶಿಲೆ/[[ಸುಣ್ಣಕಲ್ಲು]].<ref>{{Cite web|title=Oolite|url=https://geokansas.ku.edu/oolite|url-status=live|access-date=October 8, 2021|website=[[Kansas Geological Survey]]}}</ref> ಸಾಮಾನ್ಯವಾಗಿ ಇವುಗಳ ವ್ಯಾಸ 1 ಮಿಮೀ. ಇವುಗಳ ಕೇಂದ್ರದಲ್ಲಿ ಗುರುತಿಸಬಹುದಾದೊಂದು [[ನ್ಯೂಕ್ಲಿಯಸ್]] ಇರುತ್ತದೆ. ಒಂದು ಅವಸಾದನದಲ್ಲಿ ಇವು ಬಹಳವಾಗಿದ್ದರೆ ಅದಕ್ಕೊಂದು ವಿಶಿಷ್ಟ ಹೆಣಿಗೆಯನ್ನು ಕೊಡುತ್ತವೆ. ಏಕಕೇಂದ್ರೀಯಪದರಗಳಿಲ್ಲದ ಅಥವಾ ನ್ಯೂಕ್ಲಿಯಸ್ ಇಲ್ಲದ ಇವುಗಳಂಥ ಬೇರೆಯ ಕಲ್ಲುಗಳನ್ನು ಮತ್ತು ಕೆಲವು ಫೊರ್ಯಾಮಿನಿಫೆರಾಗಳನ್ನು ಅಂಡಾಶ್ಮಗಳೆಂದು ಭ್ರಮಿಸುವುದುಂಟು.
 
==ಸಂಯೋಜನೆ==
ಅನೇಕ ತರದ ಅಂಡಾಶ್ಮದಂಥ ಕಾಯಗಳು ಬೇರೆಬೇರೆ ತೆರನಾದ [[ಖನಿಜ]]ಗಳನ್ನು ಒಳಗೊಂಡಿರುವುವೆಂದೂ ಅವುಗಳು ಬೇರೆಬೇರೆ ರೀತಿಯಲ್ಲಿ ರಚಿತವಾಗಿವೆಯೆಂದೂ ವರದಿಯಾಗಿದೆ. ಕ್ಯಾಲ್ಸೈಟಿನ ಅಂಡಾಶ್ಮಗಳೇ ಸರ್ವಸಾಧಾರಣವಾಗಿರುವುವು. ಇವು [[ಸಾಗರ]] ನಿಕ್ಷೇಪಗಳಲ್ಲಿ ಸಿಕ್ಕುತ್ತವೆ. ಕೆಲವು ಜಾಗಗಳಲ್ಲಂತೂ ಅಲ್ಲಿನ ಸುಣ್ಣಕಲ್ಲುಗಳ ತುಂಬ ಇವೇ ತುಂಬಿಕೊಂಡಿವೆ. ಇತರ ವಸ್ತುಗಳಿಂದ ರಚಿತವಾದ ಕೆಲವು ಅಂಡಾಶ್ಮಗಳು ಅದರಲ್ಲೂ ಸಿಲಿಕಾಮಯ ಮತ್ತು ಡೋಲಮೆಟಿಕ್ [[ಅದಿರು]]ಗಳು, [[ಕ್ಯಾಲ್ಸಿಯಂ ಕಾರ್ಬೋನೇಟ್|ಕ್ಯಾಲ್ಸಿಯಂ ಕಾರ್ಬೊನೇಟಿನ]] ಸ್ಥಾನಪಲ್ಲಟದಿಂದ ಉಂಟಾದುವು ಎಂಬುದರಲ್ಲಿ ಸಂಶಯವಿಲ್ಲ. ಆದರೆ ಮಿಕ್ಕವುಗಳ ಉತ್ಪತ್ತಿಯ ವಿಷಯ ಚರ್ಚಾಸ್ಪದವಾಗಿದೆ.
 
[[ಕ್ಯಾಲ್ಸಿಯಂ ಕಾರ್ಬೊನೇಟ್]] ಅಂಡಾಶ್ಮಗಳು ಸಾಮಾನ್ಯವಾಗಿ ತಮ್ಮ ಅಂತಃಕೇಂದ್ರದಲ್ಲಿ ಬಗೆಬಗೆಯ ಖನಿಜಗಳ ಕಣಗಳು, ಪಳೆಯುಳಿಕೆಗಳ ಚೂರುಗಳು, ಅಥವಾ ಇತರ ವಸ್ತುಗಳು_ಇವನ್ನು ಮೂಲದ್ರವ್ಯಗಳಾಗಿ ಹೊಂದಿವೆ. ಕೇಂದ್ರೀಯ ಮೂಲ ದ್ರವ್ಯಗಳು ಗಾತ್ರದಲ್ಲೂ ಆಕಾರದಲ್ಲೂ ವಿವಿಧತೆ ಉಂಟು. ಆದರೆ ಅವುಗಳ ಮೇಲೆ ಪದರಗಳು ಬೆಳೆದುಕೊಳ್ಳುತ್ತ ಹೋದಹಾಗೆಲ್ಲ ಹೆಚ್ಚು ಹೆಚ್ಚು ಗುಂಡಾದ ಆಕೃತಿಯನ್ನು ಪಡೆಯುತ್ತವೆ. ಈ ಆಕೃತಿಗಳು ಗಾತ್ರದಲ್ಲಿ ಒಂದೇ ಸಮವಾಗಿಲ್ಲ ಮತ್ತು ಬಣ್ಣ, ಅಪಾರಕತೆ ಮತ್ತು ಹರಳಿನ ರಚನೆಯಲ್ಲಿ ಒಂದಕ್ಕೊಂದಕ್ಕೆ ಸ್ವಲ್ಪ ವ್ಯತ್ಯಾಸವಿರುವುದರಿಂದ ಪ್ರತಿಯೊಂದನ್ನೂ ಪ್ರತ್ಯೇಕವಾಗಿ ಗುರುತಿಸಬಹುದು. ದಪ್ಪವಾಗಿರುವ ಅಂಥ ಕೆಲವು ಪದರಗಳಲ್ಲಿ ಕ್ಯಾಲ್ಸೈಟಿನ ನೇರವಾದ ಎಳೆಗಳಿರಬಹುದು. ಈ ಸೂಕ್ಷ್ಮ ಆಕೃತಿಗಳು ಮತ್ತೆ [[ಸ್ಫಟಿಕೀಕರಣ]]ಗೊಂಡು ಬದಲಾವಣೆ ಹೊಂದಿರಲೂಬಹುದು ಮತ್ತು ಕೆಲವು ಅಂಡಾಶ್ಮಗಳು ತಮ್ಮ ಏಕಕೇಂದ್ರೀಯ ಆಕಾರಗಳನ್ನು ಕಳೆದುಕೊಂಡಿರಲೂಬಹುದು.
 
ಕ್ಯಾಲ್ಸಿಯಂ ಕಾರ್ಬೊನೇಟಿನಿಂದಾದ ಅಂಡಾಶ್ಮಗಳೂ ಸ್ಥಾನಪಲ್ಲಟದಿಂದ ವ್ಯತ್ಯಾಸಹೊಂದಿರುವ ಇತರ ಅಂಡಾಶ್ಮಗಳೂ ಕೇಂಬ್ರಿಯನ್ ಯುಗಕ್ಕೆ ಪೂರ್ವದ ಕಾಲದಿಂದ ಆಧುನಿಕ ಕಾಲದವರೆಗಿನ ಶಿಲೆಗಳಲ್ಲಿರುವುದು ಕಂಡುಬಂದಿದೆ.
 
==ಉಲ್ಲೇಖಗಳು==
{{reflist}}
 
{{wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂಡಾಶ್ಮಗಳು|ಅಂಡಾಶ್ಮಗಳು}}
"https://kn.wikipedia.org/wiki/ಅಂಡಾಶ್ಮಗಳು" ಇಂದ ಪಡೆಯಲ್ಪಟ್ಟಿದೆ