ವಿಜಯನಗರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: fi, id, it, nl Removing: de
೧೨ ನೇ ಸಾಲು:
[[ಹಿಂದೂ]] ವಿಜಯನಗರ ಸಾಮ್ರಾಜ್ಯ ೧೩೩೬ ರಲ್ಲಿ ಹಕ್ಕ (ನಂತರ ಹರಿಹರ) ಮತ್ತು ಬುಕ್ಕ (ನಂತರ ಬುಕ್ಕ ರಾಯ) ಎಂಬ ಅಣ್ಣತಮ್ಮಂದಿರಿಂದ ಸ್ಥಾಪಿಸಲ್ಪಟ್ಟಿತ್ತು. ಅವರ ಮೂಲ ಸ್ಥಾನ ಇದೇ ಕ್ಷೇತ್ರದಲ್ಲೇ ಇತ್ತೆಂದು ತಿಳಿದುಬಂದಿದೆ. [[ರಾಜಧಾನಿ]] ಮೊದಲು ಪ್ರಾಯಶಃ [[ತುಂಗಭದ್ರಾ]] ನದಿಯ ಉತ್ತರದಲ್ಲಿ ವಿಠ್ಠಲ ದೇವಸ್ಥಾನದ ಬಳಿ ಇರುವ [[ಆನೆಗೊಂದಿ]] ಎಂಬ ಗ್ರಾಮದಲ್ಲಿತ್ತು. ಸಾಮ್ರಾಜ್ಯ ಬೆಳೆಯುತ್ತಾ ಸಮೃದ್ಧವಾದಂತೆ ರಾಜಧಾನಿಯನ್ನು ತುಂಗಭದ್ರೆಯ ದಕ್ಷಿಣದಲ್ಲಿರುವ ಹೆಚ್ಚು ಸುರಕ್ಷಿತ ವಿಜಯನಗರಕ್ಕೆ ವರ್ಗಾಯಿಸಲಾಯಿತು.
 
ನಗರ ೧೪ನೇ ಶತಮಾನದಿಂದ ೧೬ ನೇ ಶತಮಾನದ ವರೆಗೆ ಉಚ್ಛ್ರಾಯ ಸ್ಥಿತಿಯಲ್ಲಿತ್ತು, ವಿಜಯನಗರ ಸಾಮ್ರಾಜ್ಯದ ಶಕ್ತಿಯ ತುಟ್ಟತುದಿಯಲ್ಲಿ. ಇದೇ ಸಮಯದಲ್ಲಿ ಅದು ಕಾಲಕಾಲಕ್ಕೆ ಉತ್ತರ ದಖನ್ ಪ್ರದೇಶದಲ್ಲಿ ಇದ್ದು ಒಟ್ಟಾಗಿ '''ದಖನ್ ಸುಲ್ತಾನೇಟ್ ''' ಎಂದು ಕರೆಯಲ್ಪಟ್ಟ ಮುಸ್ಲಿಮ್ ರಾಜ್ಯಗಳೊಂದಿಗೆ ಘಟ್ಟಿಸುತ್ತಿತ್ತು. [[೧೫೬೫]] ರಲ್ಲಿ ನಗರ ಅಂತಿಮವಾಗಿ ಈ ಸುಲ್ತಾನೇಟ್‌ಗಳ ಮೈತ್ರಿತ್ವಕ್ಕೆ ಸೋತಿತು ಮತ್ತು ರಾಜಧಾನಿಯನ್ನು ವಶಪಡಿಸಿಕೊಳ್ಳಲಾಯಿತು. ಜಯ ಪಡೆದ ಸೈನಿಕರು ಅನೇಕ ತಿಂಗಳುಗಳ ಕಾಲ ವಿಜಯನಗರದಲ್ಲಿ ಕೊಲೆ, ಲೂಟಿ ನಡೆಸಿದರು. ಇದರ ನಂತರವೂ ವಿಜಯನಗರ ಸಾಮ್ರಾಜ್ಯ ಉಳಿದರೂ ಸಹ ಅದು ನಿಧಾನವಾಗಿ ಕೆಳಮುಖವಾಯಿತು. ರಾಜಧಾನಿಯಾಗಿದ್ದ ವಿಜಯನಗರವನ್ನು ಪುನರ್ನಿರ್ಮಾಣ ಮಾಡಲಾಗಲಿಲ್ಲಮಾಡಲು ಪ್ರಯತ್ನಿಸುತ್ತಿದ್ದಾರೆ. ಇಂದಿನವರೆಗೂ ಅಲ್ಲಿ ಜನವಸತಿಯಿಲ್ಲ.
 
ಅಂದಿನ ಮುಸ್ಲಿಮ್ ರಾಜ್ಯಗಳ ಸಂಪರ್ಕದ ಪರಿಣಾಮವಾಗಿ ವಿಜಯನಗರದ ಕಟ್ಟಡಗಳಲ್ಲಿ ಮುಸ್ಲಿಮ್ ಪ್ರಭಾವವನ್ನು ಸ್ವಲ್ಪ ಮಟ್ಟಿಗೆ ಕಾಣಬಹುದು.
"https://kn.wikipedia.org/wiki/ವಿಜಯನಗರ" ಇಂದ ಪಡೆಯಲ್ಪಟ್ಟಿದೆ