ಅಟಕಾಮಾ ಮರುಭೂಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Modifying: eu:Atacama basamortua; cosmetic changes
೧ ನೇ ಸಾಲು:
[[Imageಚಿತ್ರ:300px-Atacama.png|thumb|300px|ನ್ಯಾಸಾ ಒದಗಿಸಿರುವ ಅಟಕಾಮಾ ಮರುಭೂಮಿಯ ಚಿತ್ರ.]]
[[Imageಚಿತ್ರ:Atacama1.jpg|300px|right|thumb|ಅಟಕಾಮಾ ಮರುಭೂಮಿ]]
[[Imageಚಿತ್ರ:Valle de la luna san pedro chile.jpg|thumb|300px|ಅಟಕಾಮಾ ಮರುಭೂಮಿಯ ಚಂದ್ರನ ಕಣಿವೆ ಪ್ರದೇಶ.]]
 
'''ಅಟಕಾಮಾ ಮರುಭೂಮಿ''' [[ದಕ್ಷಿಣ ಅಮೇರಿಕಾ]] ಭೂಖಂಡದಲ್ಲಿರುವ ಒಂದು ವಿಶಾಲ ಪೂರ್ಣ ಒಣ [[ಪೀಠಭೂಮಿ]]. ಈ ಪ್ರದೇಶವು [[ಮಳೆ]]ಯನ್ನು ಕಾಣದ ಪ್ರದೇಶವಾಗಿದೆ. ಅಟಕಾಮಾ ಮರುಭೂಮಿಯು [[ಆಂಡೆಸ್ ಪರ್ವತ]]ಗಳ ಪಶ್ಚಿಮ ಭಾಗದಲ್ಲಿ  [[ಶಾಂತ ಮಹಾಸಾಗರ]]ದ ಕರಾವಳಿಗೆ ಹೊಂದಿಕೊಂಡಿರುವ ಸುಮಾರು ೬೦೦ ಮೈಲಿ (೯೬೬ ಕಿ.ಮೀ.) ಅಗಲದ ಪಟ್ಟಿ. ಅಧ್ಯಯನಗಳ ಪ್ರಕಾರ ಅಟಕಾಮಾ ಮರುಭೂಮಿಯು ಜಗತ್ತಿನ ಅತ್ಯಂತ ಒಣ ಮರುಭೂಮಿಯಾಗಿದೆ. ಒಂದು ಅಂದಾಜಿನ ಪ್ರಕಾರ ಇದು [[ಕ್ಯಾಲಿಫೋರ್ನಿಯಾ]]ದ [[ಸಾವಿನ ಕಣಿವೆ]]ಗಿಂತ ೫೦ ಪಟ್ಟು ಹೆಚ್ಚು ಶುಷ್ಕಪ್ರದೇಶ. ಅಟಕಾಮಾ ಮರುಭೂಮಿಯ ವಿಸ್ತೀರ್ಣ ಸುಮಾರು ೧೮೧,೩೦೦ ಚದರ ಕಿ.ಮೀ. [[ಚಿಲಿ]] ದೇಶದ ಉತ್ತರಭಾಗದಲ್ಲಿ ಹಬ್ಬಿರುವ ಅಟಕಾಮಾ ಮರುಭೂಮಿಯ ಹೆಚ್ಚಿನ ಭಾಗ ಉಪ್ಪಿನ ಗುಡ್ಡಗಳು, ಮರಳು ಮತ್ತು ಲಾವಾ ಹರಿವಿನಿಂದುಂಟಾಗಿರುವ ಗಟ್ಟಿ ಬೆಂಗಾಡು. ಪೂರ್ವದ ಆಂಡೆಸ್ ಪರ್ವತಗಳು ಮತ್ತು ಪಶ್ಚಿಮದ ಚಿಲಿಯ ಕರಾವಳಿ ಬೆಟ್ಟಸಾಲುಗಳ ನಡುವೆ ಸಿಲುಕಿರುವ ಅಟಕಾಮಾ ಮರುಭೂಮಿಗೆ ಮಳೆಯ ಹನಿ ಕೂಡ ಬೀಳದಂತೆ ಇವೆರಡು ಪರ್ವತಸಾಲುಗಳು ತಡೆಯೊಡ್ಡಿವೆ. ಹೀಗಾಗಿ ಅಟಕಾಮಾ ಮರುಭೂಮಿಯು ಪೂರ್ಣವಾಗಿ ಬಂಜರು ಪ್ರದೇಶವಾಗಿದ್ದು ಹೆಚ್ಚಿನ ಜೀವಸೆಲೆ ಇಲ್ಲಿಲ್ಲ. ಹೆಚ್ಚಿನ ಭಾಗದ ಸರಾಸರಿ ವಾರ್ಷಿಕ ಮಳೆಯ ಪ್ರಮಾಣ ಕೇವಲ ಒಂದು ಮಿಲಿಮೀಟರ್ ಆಗಿದ್ದರೆ ಇಲ್ಲಿನ ಅನೇಕ ಹವಾಮಾನ ವೀಕ್ಷಣಾ ಕೇಂದ್ರಗಳಲ್ಲಿ ದಶಕಗಳ ಕಾಲ ಹನಿ ಮಳೆ ಸಹ ದಾಖಲಾಗಿಲ್ಲ. ೧೫೭೦ ರಿಂದ ೧೯೭೧ರವರೆಗೆ ಗಣನೀಯ ಮಳೆ ಅಟಕಾಮಾ ಮರುಭೂಮಿಯಲ್ಲಿ ಬಿದ್ದಿಲ್ಲವೆಂಬುದಕ್ಕೆ ಸಾಕ್ಷ್ಯಾಧಾರಗಳಿವೆ. ಇಂತಹ ಶುಷ್ಕ ವಾತಾವರಣದ ಕಾರಣದಿಂದಾಗಿ ಅಟಕಾಮಾ ಮರುಭೂಮಿಯ ಅತ್ಯುನ್ನತ ಪ್ರದೇಶ ೬೮೮೫ ಮೀ. ಗಳಷ್ಟು ಎತ್ತರದಲ್ಲಿದ್ದರೂ ಸಹ ಅಲ್ಲಿ ಯಾವುದೇ [[ಹಿಮನದಿ]]ಗಳಾಗಲಿ ಯಾ [[ನೀರು|ನೀರಿನ]] ಇನ್ನಾವುದೇ ಮೂಲವಾಗಲಿ ಇಲ್ಲ. ಸಾಗರಕ್ಕೆ ಸಮೀಪದಲ್ಲಿರುವ ಮರುಭೂಮಿಯ ಭಾಗಗಳು ಆಗೊಮ್ಮೆ ಈಗೊಮ್ಮೆ ಸಾಗರದ ಕಡೆಯಿಂದ ಗಾಳಿಯೊಡನೆ ತೇಲಿಬರುವ ನೀರಿನಂಶ ( ಸಾಗರದ ಮಂಜು) ಪಡೆಯುತ್ತಿದ್ದು ಈ ಅಲ್ಪ ತೇವಾಂಶವು ಕೆಲತಳಿಯ [[ಕಳ್ಳಿ]] ಮತ್ತು [[ಆಲ್ಗೇ]]ಗಳಂತಹ ಸಸ್ಯಗಳಿಗೆ ಜೀವನಾಧಾರವಾಗಿದೆ. ಉಳಿದ ಭಾಗಗಳು [[ಮಂಗಳ ಗ್ರಹ]]ದ ಮೇಲ್ಮೈಯನ್ನು ಬಲುಮಟ್ಟಿಗೆ ಹೋಲುತ್ತವೆ. ಅಟಕಾಮಾ ಮರುಭೂಮಿಯಲ್ಲಿ ಜನವಸತಿ ಬಲು ವಿರಳ. ಕೆಲವೊಂದು [[ಒಯಸಿಸ್‌]]ಗಳಿದ್ದು ಅವುಗಳ ಆಸುಪಾಸಿನಲ್ಲಿ ಅಲ್ಪ ಜನವಸತಿಯಿದೆ. [[ತಾಮ್ರ]], [[ಬೆಳ್ಳಿ]] ಮತ್ತು [[ನೈಟ್ರೇಟ್‌]] ನಿಕ್ಷೇಪಗಳು ಇಲ್ಲಿ ಪತ್ತೆಯಾಗಿದ್ದು ಇವುಗಳ ಗಣಿಗಾರಿಕೆಯಲ್ಲಿ ತೊಡಗಿರುವ ಕೆಲ ಜನರು ಸಹ ಅಟಕಾಮಾ ಮರುಭೂಮಿಯಲ್ಲಿ ವಾಸಿಸುತ್ತಾರೆ.
 
== ಇವನ್ನೂ ನೋಡಿ ==
* [[ಚಿಲಿ]]
* [[ಮರುಭೂಮಿ]]
* [http://commons.wikimedia.org/wiki/Atlas_of_Chile/Clickable_map ಅಟಕಾಮಾ ಮರುಭೂಮಿಯ ಬಗ್ಗೆ ಭೌಗೋಳಿಕ ಮಾಹಿತಿ ]
 
== ಬಾಹ್ಯ ಸಂಪರ್ಕಕೊಂಡಿಗಳು ==
* [http://www.sanpedrodeatacama.org ಅಟಕಾಮಾ ಮರುಭೂಮಿ]
* [http://amesnews.arc.nasa.gov/releases/2003/03_87AR.html ಅಟಕಾಮಾ ಮರುಭೂಮಿಯಲ್ಲಿ ಮಂಗಳ ಗ್ರಹದಲ್ಲಿರುವಂತಹ ಮಣ್ಣು]
೧೭ ನೇ ಸಾಲು:
* [http://www.atacamaphoto.com/atacama/atacama-3.htm ಅಟಕಾಮಾ ಮರುಭೂಮಿಯ ಚಿತ್ರಗಳು.]
 
[[Categoryವರ್ಗ:ಭೂಗೋಳ]]
[[Categoryವರ್ಗ:ಮರುಭೂಮಿಗಳು]]
 
[[af:Atacamawoestyn]]
೩೬ ನೇ ಸಾಲು:
[[es:Desierto de Atacama]]
[[et:Atacama]]
[[eu:Atacama basamortua]]
[[fa:آتاکاما]]
[[fi:Atacama]]
"https://kn.wikipedia.org/wiki/ಅಟಕಾಮಾ_ಮರುಭೂಮಿ" ಇಂದ ಪಡೆಯಲ್ಪಟ್ಟಿದೆ