ಮೂರ್ಖರ ದಿನಾಚರಣೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ಪ್ರತೀ ವರ್ಷ ಏಪ್ರಿಲ್ ಮೊದಲ ದಿನ ಆಚರಿಸಲಾಗುತ್ತದೆ.
Content deleted Content added
No edit summary
( ಯಾವುದೇ ವ್ಯತ್ಯಾಸವಿಲ್ಲ )

೧೧:೫೫, ೧೧ ಸೆಪ್ಟೆಂಬರ್ ೨೦೦೫ ನಂತೆ ಪರಿಷ್ಕರಣೆ

ಮೂರ್ಖರ ದಿನಾಚರಣೆ


ಮೂರ್ಖರ ದಿನಾಚರಣೆಯನ್ನು ವಿಶ್ವದಾದ್ಯಂತ ಎಪ್ರಿಲ್ 1 ರಂದು ಆಚರಿಸಲಾಗುತ್ತದೆ. ಈ ದಿನವು ವದಂತಿ ಹಾಗೂ ಬಡಪಾಯಿಗಳನ್ನು ಗೋಳು ಹೊಯ್ದುಕೊಳ್ಳುವ ತುಂಟಾಟಗಳಿಗಾಗಿ ಪ್ರಸಿದ್ಧವಾಗಿದೆ.

ಇತಿಹಾಸ

ಮೂರ್ಖರ ದಿನಾಚರಣೆ ಎಂದಿನಿಂದ ಯಾರಿಂದ ಏಕೆ ಶುರುವಾಯಿತು ಎಂಬ ಬಗ್ಗೆ ಸ್ಪಷ್ಟ ಪುರಾವೆಗಳು ಸಿಕ್ಕಿಲ್ಲ. ಆದರೆ 16ನೆಯ ಶತಮಾನದಲ್ಲಿ ನಡೆದ ಪಂಚಾಂಗ ಪದ್ಧತಿ ಬದಲಾವಣೆಯೇ ಇದಕ್ಕೆ ಕಾರಣವೆಂದು ಸಾಮಾನ್ಯವಾಗಿ ನಂಬಲಾಗಿದೆ. ರೋಮನ್ ಕಾಲದಿಂದಲೂ ನೂತನ ವರ್ಷದ ಆಚರಣೆಯನ್ನು 25 ಮಾರ್ಚ್ ರಿಂದ ಪ್ರಾರಂಭಿಸಿ, ಒಂದು ವಾರದ ವರೆಗೆ ಆಚರಿಸಿ, 1 ಎಪ್ರಿಲ್ ರಂದು ಮುಕ್ತಾಯಗೊಳಿಸುತಿದ್ದರು. ಫ್ರಾನ್ಸ್ನ ದೊರೆ ಒಂಭತ್ತನೆಯ ಚಾರ್ಲ್ಸ್ 1582ರಲ್ಲಿ ಹೊಸ ಗ್ರೆಗೊರಿಯನ್ ಪಂಚಾಂಗ ಪದ್ಧತಿ ಘೋಷಿಸಿದ. ಹೊಸ ಪಂಚಾಂಗ ಪದ್ಧತಿ ಪ್ರಕಾರ 1 ಜನವರಿಯು ನೂತನ ವರ್ಷದ ದಿನವಾಗಿತ್ತು. ದುರದೃಷ್ಟವಷಾತ್ ಕೆಲ ಜನರಿಗೆ ಈ ಘೋಷಣೆ ತಲುಪಲಿಲ್ಲ ಹಾಗೂ ಅವರು ಸಂಪ್ರದಾಯ ಮುರಿಯಲು ನಿರಾಕರಿಸಿದರು. ಇಂಥವರನ್ನು 'ಮೂರ್ಖರು' ಎಂದು ಗೇಲಿ ಮಾಡಿ 1 ಎಪ್ರಿಲ್ ಅನ್ನು ಅವರ ದಿನಾಚರಣೆಯಾಗಿ ಆಚರಿಸಲಾಗುತ್ತದೆ ಎಂದು ಪ್ರತೀತಿ.


ಆಚರಣೆ

ಇಂದಿಗೂ ಎಮ್. ಟಿ. ವಿ. ಹಾಗೂ ಚಾನೆಲ್ ವಿ ಮುಂತಾದ ಟಿ. ವಿ. ಚಾನೆಲ್ಗಳಲ್ಲಿ 1 ಎಪ್ರಿಲ್ ರಂದು ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.