ತೆಲುಗು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
 
೪೦ ನೇ ಸಾಲು:
 
==ಶಬ್ದಕೋಶ==
ಮಿಕ್ಕೆಲ್ಲ ಭಾಷೆಗಳಂತೆಯೇ ತೆಲುಗು ಸಹ ಸ್ವಂತವಾಗೂ ಪರಭಾಷೆಯಿಂದ ಎರವಲು ಪಡೆದೂ ಶಬ್ದಸಂಪತ್ತನ್ನು ಬೆಳೆಸಿಕೊಂಡಿದೆ. ಕೆಲವು ಶಬ್ದಗಳಿಗೆ ಹೊಸ ಅರ್ಥಗಳು ಬಂದಿವೆ. ಕೆಲವಕ್ಕೆ ಮೂಲ ಅರ್ಥದಿಂದ ಉದ್ಭವವಾದ ಮತ್ತೊಂದು ಅರ್ಥ ಪ್ರಾಪ್ತವಾಗುತ್ತದೆ. ಉದಾಹರಣೆಗೆ, ಮಾಟ (ಮಾತು) ಎಂಬುದನ್ನು ಮೂಲದ ಅರ್ಥಕ್ಕೆ ಸಮೀಪವಾಗಿಯೋ ಅಥವಾ ದೂರವಾಗಿಯೋ ಇರುವ ಅನೇಕ ಭಾವಗಳನ್ನು ಹೇಳಲು ಉಪಯೋಗಿಸುತ್ತಾರೆ. ಸಿ.ಪಿ. ಬ್ರೌನ್ ಈ ಪದಕ್ಕೆ ಮಾತು, (ಪದ) ಮಾತುಗೊಡುವದು, ಸುದ್ದಿ ಎಂಬ ಅರ್ಥ ಕೊಟ್ಟಿದ್ದಾನೆ. ಅಲ್ಲದೆ ಗಮನಾರ್ಹವಾದ ಉದಾಹರಣೆಗಳನ್ನು ಕೊಟ್ಟಿದ್ದಾನೆ; ಮಾಟಾಡು, ಮಾಟಕಾರಿ (ವಾಚಾಳಿ), ಮಾಟಲಕು ಪಟ್ಟುಕೊಂಟೆ ವಿಡವದು (ಮಾತನಾಡಲು ಮೊದಲು ಮಾಡಿದರೆ ಮುಗಿಸಲೇ ಒಲ್ಲೆ), ಮಂಚಿ ಮಾಟ (ಒಳ್ಳೆಯದು), ನಾಕು ತುರುಕ ಮಾಟಲು ರಾವು (ನನಗೆ ತುರುಕು ಮಾತು ತಿಳಿಯದು), ವಾಡಿಕಿ ನಾಕು ಮಾಟಲು ಲೇವು (ನನಗೂ ಅವನಿಗೂ ಮಾತಿಲ್ಲ), ಅತನು ಮಾಟ ತಪ್ಪಲೇದು (ಆತ ಕೊಟ್ಟ ಭಾಷೆಯನ್ನು ತಪ್ಪುವುದಿಲ್ಲ), ನಾ ಮಾಟ ವೇರು, ನೀ ಮಾಟ ವೇರು (ನಾನೊಂದು ಹೇಳುತ್ತೇನೆ, ನೀನೊಂದು ಹೇಳುತೀಯ) ಆಯನ ಮಾಟಕು ಎದುರುಲೇದು (ಆತನ ಮಾತಿಗೆ ಎದುರಿಲ್ಲ), ವೊಕ ಮಾಟ ಯಿಚ್ಚಿಪದಿಮಾಟಲು ತೀಸುಕೊನ್ನಾಡು (ಒಂದು ಮಾತಿಗೆ ಹತ್ತು ಮಾತು ಪಡೆದ), ಆ ಮಾಟ ವಿಂಟೇ ಆಯನ ಯೇಮನುನು? (ಈ ಮಾತು ಕೇಳಿದರೆ ಆತ ಏನೆಂದಾನು?) ಕೆಲವು ಶಬ್ದಗುಚ್ಚಗಳಲ್ಲಿ ಮಾಟ ಎಂಬುದನ್ನು ಭಾಷಾಂತರಿಸುವ ಅವಶ್ಯವಿಲ್ಲ. ಉದಾಹರಣೆಗೆ, ಆಮೆ ತಿರುಗವಸ್ತುವಲ್ಲದೆ ಮಾಟ ತೆಲಿಸಿ (ಅವಳು ಹಿಂದಿರುಗುತ್ತಾಳೆಂದು ತಿಳಿದು); ಆ ಮಾಟೇಯೆರುಗನು (ಆ ವಿಷಯವೇ ತಿಳಿಯದು); ಇಪ್ಪಟ್ಲೋ ವಾನಿ ಮಾಟ ಸಾಗದು (ಈಗ ಅವನ ಮಾತು ನಡೆಯದು); ಯೆಂತ ಮಾಟ! (ಎಂಥ ಮಾತು!) ಮಾಟ ಎಂಬುದನ್ನು ಇನ್ನೂ ಹಲವಾರು ಬಗೆಗಳಲ್ಲಿ ಉಪಯೋಗಿಸುತ್ತಾರೆ. ದೇಸೀ ಪ್ರಯೋಗಗಳನ್ನು ಬೆಳೆಸಿರುವ ಇಂಥ ಹಲವಾರು ಪದಗಳಿವೆ. ಶಬ್ದಾರ್ಥ ನಿರ್ವಚನ ಶಾಸ್ತ್ರಕ್ಕೆ ತೆಲುಗು ಭಾಷೆಯಲ್ಲಿ ಒಳ್ಳೆಯ ಅವಕಾಶವಿದೆ.
 
-ತನಂ (ಸಂಸ್ಕೃತದ ತ್ವಂ ಎಂಬುದರಿಂದ ಪ್ರಾಕೃತದ ಟಣಂ ಎಂಬುದರ ಮೂಲಕ) ಎಂಬ ಪದ ಭಾಷೆಯನ್ನು ಹತ್ತು ಪಡಿ ಸಿರಿವಂತವಾಗಿ ಮಾಡಿದೆ. ಭಾವಾರ್ಥ ಸೂಚಕ ಪ್ರತ್ಯಯವಾಗಿ ಅದನ್ನು ಶಬ್ದಗಳಿಗೆ ಹಚ್ಚುತ್ತಾರೆ. ಉದಾಹರಣೆಗೆ, ಮಂಚಿತನಂ (ಒಳ್ಳೆಯತನ), ಪೆಂಕೆತನಂ (ದುಷ್ಟತನ), ಪೆದ್ದತನಂ (ದೊಡ್ಡತನ), ಪೆತ್ತನಂ (ಮೇಲುಸ್ತುವಾರಿಕೆ), ಪಿರಿಕಿತನಂ (ಹೇಡಿತನ) ಮುಂತಾದುವು.
೫೨ ನೇ ಸಾಲು:
ಎರವು ತೆಗೆದುಕೊಂಡ ಪದಗಳನ್ನು ಜೀರ್ಣಿಸಿಕೊಳ್ಳುವ ವಿಧಾನದಲ್ಲಿ ಒಂದು ವಿಶೇಷಾಂಶ ಗೋಚರಿಸುತ್ತದೆ. ಇಂಗ್ಲಿಷಿನ ರೂಲ್ ಎಂಬ ಶಬ್ದಕ್ಕೆ ಅದರ ಬಹುವಚನ ಪ್ರತ್ಯಯವನ್ನು ಸೇರಿಸಿ ಹೇಳುತ್ತಾರೆ. ನೀಕು ರೂಲ್ಸು ತೆಲುಸನಾ? (ನಿನಗೆ ರೂಲ್ಸು ಗೊತ್ತೇ?) ನೀವು ರೂಳ್ಳು ಗೀಯಗವಲಾ? (ನೀನು ಗೆರೆಗಳನ್ನು ಎಳೆಯ ಬಲ್ಲೆಯಾ). ಮನ್ಸ ಮುಂತಾದ ಶಬ್ದಗಳಲ್ಲಿ ಅಂತ್ಯದಲ್ಲಿರುವ `ಸ್ ಎಂಬ ಅಕ್ಷರವನ್ನು ಬಹುವಚನ ಪ್ರತ್ಯಯವಾಗಿ ತೆಲುಗ ನಾಕು ಸಮನು ವಚ್ಚಿಂದಿ ಎನ್ನುತ್ತಾನೆ. ಇದನ್ನು ಬಹುವಚನದಲ್ಲಿ ಉಪಯೋಗಿಸುವಾಗ ಸಮನ್‍ಲು ಎಂದು ಪ್ರಯೋಗಿಸುತ್ತಾನೆ. ಇದು ಅರಗಿಸಿಕೊಳ್ಳುವ ವಿಧಾನವನ್ನು ಸೂಚಿಸುತ್ತದೆ.
 
ಕೆಲವು ಪರಕೀಯ ಶಬ್ದಗಳು ಜನಕ್ಕೆ ಎಷ್ಟು ಪರಿಚಿತವಾಗಿವೆಯೆಂದರೆ ಅವು ತೆಲುಗು ಶಬ್ದಗಳಲ್ಲ ಎಂದು ಅವರಿಗೆ ಹೇಳಿದಾಗ ಅವರು ಅಚ್ಚರಿಗೊಳ್ಳುತ್ತಾರೆ. ಉದಾಹರಣೆಗೆ: ರೈಲು ಬಂಡಿ, ಕಾನಿಸ್ತೇಬಲು, ಪೋಸ್ಟ್ ಆಫೀಸು, ಕವರು, ಇಸ್ಕೂಲು, ಕಾಲೇಜಿ, ಇಸ್ಪೇಟು, ಕಳಾವರು, ಕೋರ್ಟು, ವೋಟು, ಟಿಕೆಟ್ಟು, ಲಾಯರು, ಅಸುಪತ್ರಿ -ಮುಂತಾದುವು. ತೆಲುಗಿನಲ್ಲಿ ಒಗಟುಗಳೂ ಗಾದೆಗಳೂ ತುಂಬ ಇವೆ. ಇವುಗಳಲ್ಲಿ ತಮ್ಮದೇ ಆದ ಅಂತರಪ್ರಾಸ, ಅಂತ್ಯಪ್ರಾಸ, ಛಂದೋಲಯಗಳು ಮುಂತಾದ ಲಕ್ಷಣಗಳು ಇವೆ. ಪೋರಾನಿ ಛೋಟುಲಕುಪೋತೆಚೋಟುಲಕುಪೋತೆ, ರಾರಾನಿ ನಿಂದಲು ರಾಕ ಮಾನವು (ಹೋಗಬಾರದ ಜಾಗಕ್ಕೆ ಹೋದರೆ ನೀನು ನಿಂದೆಗೂ ಅವಮಾನಕ್ಕೂ ಪಾತ್ರನಾಗಬೇಕಾಗುತ್ತದೆ); ಮಾಟಲು ಕೋಟಲು ದಾಟುತಾಯ್; ಕಾನಿ ಕಾಳ್ಳು ಗಡಪ ದಾಟಲೇವು (ಮಾತುಗಳು ಕೋಟೆಗಳನ್ನು ದಾಟುತ್ತವೆ; ಕಾಲುಗಳು ಹೊಸಿಲನ್ನು ದಾಟವು- ಬರಿ ಬಾಯಿ ಮಾತಿನವನ್ನು ಕುರಿತು ಹೀಯಾಳಿಕೆ), ಒಕನಾಡು ವಿಂದು ಒಕನಾಡು ಮಂದು (ಒಂದು ದಿನ ಹಬ್ಬ, ಒಂದು ದಿನ ಮದ್ದು), ತಾನು ವಲಚಿಂದಿ ರಂಭ; ತಾನು ಮುನಿಗಿಂದಿ ಗಂಗ (ತಾನೊಲಿದವಳು ರಂಭೆ; ತಾನು ಮಿಂದುದು ಗಂಗೆ); ತಾಡುಲೇನಿ ಕಟ್ಟು; ಕೋಲಲೇನಿ ಪೆಟ್ಟು (ಹಗ್ಗವಿಲ್ಲದ ಕಟ್ಟು, ಬಾಣವಿಲ್ಲದ ಗುರಿ); ಶುಲ್ಕ ಪ್ರಿಯಾಲು, ಶೂನ್ಯ ಹಸ್ತಾಲು (ಶುಲ್ಕ ಹೊಗಳಿಕೆ, ಶೂನ್ಯ ಹಸ್ತ) ಇತ್ಯಾದಿ.
 
ಒಗಟುಗಳೂ ಅಂತರಪ್ರಾಸಅಂತಃಪ್ರಾಸ, ಅಂತ್ಯಪ್ರಾಸ ಮತ್ತು ಛಂದಸ್ಸುಗಳಿಂದ ನಿಬದ್ಧವಾಗಿವೆ. ಉದಾಹರಣೆಗೆ ತೆಲ್ಲನಿಮಡಿಲೋ ನಲ್ಲನಿವಿತ್ತುಲು; ಚೇತಿತೊತಲ್ಲಿನಾಚೇತಿತೊಚಲ್ಲಿನಾಮ್, ನೋಟಿತೋ ಏರಿನಾಂ (ಬಿಳಿ ಹೊಲದಲ್ಲಿ ಕಪ್ಪು ಬೀಜಗಳನ್ನು ನಮ್ಮ ಕೈಯಿಂದ ಬಿತ್ತಿದೆವು, ಬಾಯಿಂದ ಎತ್ತಿದೆವು)- ಬಿಳಿಯ ಕಾಗದದ ಮೇಲೆ ಕಪ್ಪು ಶಾಯಿಯಿಂದ ಬರೆದು ಆಮೇಲೆ ಅದನ್ನು ಓದುವದನ್ನು ಕುರಿತ ಒಗಟೆಯಿದು. ದಾನಿ ಭೋಗಂ ರಾಜ ಭೋಗಂ, ದಾನಿ ಪಾಲು ಪೆಂಟಪಾಲು (ಅದರ ಭೋಗ ರಾಜಭೋಗ, ಅದರ ಪಾಲು ತಿಪ್ಪೆ)- ರಾಜನು ಊಟ ಮಾಡಿದ ಬಾಳೆ ಎಲೆಯ ವರ್ಣನೆ ಇದು.
{{ದ್ರಾವಿಡ ಭಾಷೆಗಳ ವಂಶಾವಳಿ}}
 
"https://kn.wikipedia.org/wiki/ತೆಲುಗು" ಇಂದ ಪಡೆಯಲ್ಪಟ್ಟಿದೆ