ಬೆಂಜಮಿನ್ ಡಿಸ್ರೇಲಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೬೪ ನೇ ಸಾಲು:
ಇದರಿಂದಾಗಿ ಮುಂದಿನ ನಾಲ್ಕು ವರ್ಷಗಳನ್ನು ನಿಷ್ಕ್ರಿಯೆಯಲ್ಲಿ ಕಳೆದ. ಈ ಕಾಲದಲ್ಲಿ ಇವನು ಮಾಡಿದ ಒಂದೇ ಕೆಲಸವೆಂದರೆ ದಿ ಯಂಗ್ ಡ್ಯೂಕ್ ಎಂಬ ಇನ್ನೊಂದು ಕಾದಂಬರಿಯ ಲೇಖನ. ಮೂರು ಸಂಪುಟಗಳ ಈ ಕಾದಂಬರಿಯೇನೂ ಗುಣದಲ್ಲಿ ಮೊದಲನೆಯದಕ್ಕಿಂತ ಭಿನ್ನವಾಗಿರಲಿಲ್ಲ. 1830ರಲ್ಲಿ ತನ್ನ ಸೋದರಿಯ ವರನೊಂದಿಗೆ ಪಶ್ಚಿಮ ಏಷ್ಯದ ದೇಶಗಳಲ್ಲಿ ಸುತ್ತಾಡಿ ಅಮೂಲ್ಯ ಅನುಭವ ಗಳಿಸಿದ. ಆದರೆ ಕೈರೋದಲ್ಲಿ ಆ ವರ ತೀರಿಕೊಂಡ. ಈ ಅನುಭವಗಳನ್ನೆಲ್ಲ ಕಾಂಟಾರಿನಿ ಫ್ಲೆಮಿಂಗ್ ಹಾಗೂ ಅಲ್ರಾಯ್ ಕಾದಂಬರಿಗಳಲ್ಲಿ ಅಭಿವ್ಯಕ್ತಿಸಿದ. ಈ ಎರಡೂ ಕೃತಿಗಳು ಡಿಸ್ರೇಲಿಯ ಮಹತ್ವಾಕಾಂಕ್ಷೆಯನ್ನು ಸೂಚಿಸುತ್ತವೆ.
==ರಾಜಕಾರಣ==
ಸಾಹಿತಿ ಡಿಸ್ರೇಲಿ 1832ರಲ್ಲಿ ರಾಜಕಾರಣವನ್ನು ಪ್ರವೇಶಿಸಿದ. ಹೈ ವೈಕಮ್ ಕ್ಷೇತ್ರದ ಚುನಾವಣೆಯಲ್ಲಿ ಸ್ವತಂತ್ರ ತೀವ್ರಗಾಮಿ ಅಭ್ಯರ್ಥಿಯಾಗಿ ಮೂರು ಸಾರಿ ಸ್ಪರ್ಧಿಸಿ ಮೂರು ಸಾರಿಯೂ ಸೋತ. ಯಾವುದಾದರೊಂದು ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುವುದು ಸೂಕ್ತವೆಂಬುದು ಇವನಿಗೆ ಮನವರಿಕೆಯಾಯಿತು. ಟೋರಿ-ಕನ್ಸರ್ವೆಟಿವ್ ಪಕ್ಷದ ಧೋರಣೆಗಳು ಇವನ ಅಭಿಪ್ರಾಯಗಳಿಗೆ ಹೆಚ್ಚು ಭಿನ್ನವಾಗಿಲ್ಲವೆಂದು ಎನಿಸಿತು. ಇವನು ಆ ಪಕ್ಷದ ಕಡೆಗೆ ವಾಲಿದ. ರಾಜಕೀಯ ರಂಗದಲ್ಲಿ 1836ರ ಅನಂತರ ಒಳ್ಳೆಯ ದಿನಗಳು ಬಂದುವುಬಂದವು. ಮೆಲ್‍ಬರ್ನನ ನಾಯಕತ್ವದ ಹ್ವಿಗ್ ಸರ್ಕಾರವನ್ನು ಖಂಡಿಸಿ ಟೈಮ್ಸ್ ಪತ್ರಿಕೆಯಲ್ಲಿ ಬರೆದ ದಿ ರನ್ನಿಮೀಡ್ ಲೆಟರ್ಸ್, ಎ ವಿಂಡಿಕೇಷನ್ ಆಫ್ ದಿ ಇಂಗ್ಲಿಷ್ ಕಾನ್‍ಸ್ಟಿಟ್ಯೂಷನ್, ದಿ ಸ್ಪಿರಿಟ್ ಆಫ್ ಹ್ವಿಗಿಸ್‍ಮ್ ಲೇಖನಗಳಿಂದ ಡಿಸ್ರೇಲಿ ಖ್ಯಾತಿ ಪಡೆದ. ಜೊತೆಗೆ ಇವನು ಕಾದಂಬರಿಗಳ ಬರೆವಣಿಗೆಯನ್ನೂ ಮುಂದುವರಿಸಿದ. 1837ರಲ್ಲಿ 4ನೆಯ ವಿಲಿಯಮ್ ದೊರೆಯ ಮರಣ ಸಂಭವಿಸಿ, ವಿಕ್ಟೋರಿಯ ರಾಣಿ ಪಟ್ಟಕ್ಕೆ ಬಂದಳು. ಡಿಸ್ರೇಲಿ ಮೇಡ್‍ಸ್ಟನ್ ಕ್ಷೇತ್ರದಿಂದ ಕನ್ಸರ್ವೆಟಿವ್ ಪಕ್ಷದ ಅಭ್ಯರ್ಥಿಯಾಗಿ ಕಾಮನ್ಸ್ ಸಭೆ ಪ್ರವೇಶಿಸಿದ. ಈತ ಪ್ರಥಮವಾಗಿ ಪಾರ್ಲಿಮೆಂಟಿನಲ್ಲಿ ಮಾಡಲೆತ್ನಿಸಿದ ಭಾಷಣದಿಂದ ಅಪಹಾಸ್ಯಕ್ಕೆ ಗುರಿಯಾದ. ಆದರೂ ಸಭೆಯನ್ನು ಉದ್ದೇಶಿಸಿ, ನೀವು ನನ್ನ ಭಾಷಣವನ್ನು ಕೇಳಲೇಬೇಕಾದ ದಿನ ಬಂದೇ ಬರುತ್ತದೆ ಎಂದು ನುಡಿದು ಸುಮ್ಮನಾದ. 1839-1840ರ ವರೆಗೂ ನಡೆದ ಚಾರ್ಟಿಸ್ಟ್ ಚಳವಳಿಯ ಬಗ್ಗೆ ನಡೆದ ಚರ್ಚೆಯಲ್ಲಿ ಡಿಸ್ರೇಲಿ ತನ್ನ ವ್ಯಕ್ತಿತ್ವವನ್ನು ಪ್ರದರ್ಶಿಸಿದ. ತನ್ನ ಪಕ್ಷದ ಅಭ್ಯರ್ಥಿಯಾಗಿದ್ದ ವಿಂಡ್‍ಹ್ಯಮ್ ಲೂಯಿಯ ವಿಧವೆ ಶ್ರೀಮತಿ ಮೇರಿ ಆನ್ ಇವಾನ್ಸಳೊಂದಿಗೆ ವಿವಾಹವಾಗಿ ಸಮಾಜದಲ್ಲಿ ಪ್ರತಿಷ್ಠಿತನಾದನಲ್ಲದೆ ಸಾಕಷ್ಟು ಐಶ್ವರ್ಯವನ್ನೂ ಪಡೆದ.
 
ಮುಂದೆ ಕನ್ಸರ್ವೆಟಿವ್ ನಾಯಕ ಸರ್ ರಾಬರ್ಟ್ ಪೀಲನ ಸರ್ಕಾರದ ವಿರುದ್ಧ ತನ್ನ ಸ್ನೇಹಿತರೊಂದಿಗೆ ಸೇರಿ ಚಟುವಟಿಕೆಗಳನ್ನಾರಂಭಿಸಿದ. ಆತನ ರಾಜಕೀಯ ಧೋರಣೆಗಳನ್ನು ಟೀಕಿಸಿ ಮೂರು ಕಾದಂಬರಿಗಳನ್ನು ಬರೆದ. ಪೀಲ್ ಅನುಸರಿಸಿದ ಧಾನ್ಯನಿಯಂತ್ರಣ ನೀತಿ ವಿರೋಧಿಗಳ ಟೀಕೆಗೆ ಗುರಿಯಾಯಿತು. ಪೀಲ್ ರಾಜೀನಾಮೆ ನೀಡಿದ. ಆದರೂ 1846ರ ಜನವರಿಯಲ್ಲಿ ಪುನಃ ಅಧಿಕಾರಕ್ಕೆ ಬಂದು ಡಿಸ್ರೇಲಿ ಹಾಗೂ ಜಾರ್ಜ್ ಬೆಂಟಿಂಕರ ಪ್ರಬಲ ವಿರೋಧಕ್ಕೆ ಗುರಿಯಾದ. ಆ ವೇಳೆಗೆ ಡಿಸ್ರೇಲಿ ಟೋರಿ ಪಕ್ಷದ ಪ್ರಮುಖನೆನಿಸಿಕೊಂಡಿದ್ದ.