ಬೆಂಜಮಿನ್ ಡಿಸ್ರೇಲಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Rescuing 1 sources and tagging 0 as dead.) #IABot (v2.0.8
No edit summary
೬೦ ನೇ ಸಾಲು:
ಐಸಾಕ್ ಡಿಸ್ರೇಲಿ ಮತ್ತು ಮರೀಯ ಬ್ಯಾಸೆವಿ ಇವರ ಹಿರಿಯ ಮಗ. 1804ರ ಡಿಸೆಂಬರ್ 21ರಂದು ಲಂಡನಿನಲ್ಲಿ ಜನನ. ಈತನ ತಾತ ಬೆಂಜಮಿನ್ ಡಿಸ್ರೇಲಿ ಇಟಲಿಯಿಂದ ಇಂಗ್ಲೆಂಡಿಗೆ ಬಂದು ನೆಲಸಿದ. ಡಿಸ್ರೇಲಿಯ ಅಜ್ಜಿ ಯೆಹೂದ್ಯ ವಂಶಸ್ಥೆ. ಡಿಸ್ರೇಲಿಯ ತಂದೆ 1817ರಲ್ಲಿ ತನ್ನ ಮಕ್ಕಳನ್ನು ಕ್ರೈಸ್ತ ಮತದ ಸಂಸ್ಕಾರಕ್ಕೆ ಒಳಪಡಿಸಿದ. ಇದರಿಂದಾಗಿ ಮುಂದೆ ಬೆಂಜಮಿನ್ ಡಿಸ್ರೇಲಿ ಬ್ರಿಟನಿನ ಪ್ರಧಾನಿಯಾಗುವುದು ಸಾಧ್ಯವಾಯಿತು. 1858ರ ವರೆಗೆ ಯಹೂದ್ಯರು ಅಲ್ಲಿಯ ಪಾರ್ಲಿಮೆಂಟಿನ ಸದಸ್ಯರಾಗುವಂತಿರಲಿಲ್ಲ.
==ಲೇಖಕ==
ಡಿಸ್ರೇಲಿ 17ನೆಯ ವಯಸ್ಸಿನಲ್ಲಿ ಒಂದು ನ್ಯಾಯವಾದಿಗಳ ಸಂಸ್ಥೆಯಲ್ಲಿ ಗುಮಾಸ್ತೆಯಾಗಿ ಸೇರಿಕೊಂಡ. ಆದರೆ ಮಹಾಕಾಂಕ್ಷೆಯಿಂದ ಕೂಡಿದ್ದ ಆತ 1824ರಲ್ಲಿ ಸಟ್ಟಾ ವ್ಯವಹಾರವೊಂದರಲ್ಲಿ ಕೈಹಾಕಿದ. ಅದರ ಫಲವಾಗಿ ಇವನು ಭಾರಿಯ ಸಾಲದ ಹೊರೆ ಹೊರಬೇಕಾಯಿತು. ಬಹುಕಾಲ ಇದರಿಂದ ಇವನು ವಿಮೋಚನೆ ಹೊಂದಲಾಗಲಿಲ್ಲ. ಇದಕ್ಕೆ ಮುಂಚೆ ತನ್ನ ತಂದೆಯ ಮಿತ್ರ ಜಾನ್ ಮರೆಯನ್ನು ರೆಪ್ರೆಸೆಂಟೆಟಿವ್ ಎಂಬ ದಿನಪತ್ರಿಕೆಯೊಂದನ್ನು ಆರಂಭಿಸಲು ಒಪ್ಪಿಸಿದ್ದ. ಇದರ ಬಂಡವಾಳಕ್ಕೆ ತನ್ನ ಭಾಗದ ಹಣವನ್ನು ಡಿಸ್ರೇಲಿ ಕೊಡಲಾಗಲಿಲ್ಲ. ಇದರಿಂದ ಮರೆ ಮತ್ತು ಇತರರೊಂದಿಗೆ ಕಲಹ ಉಂಟಾಯಿತು. ಟೋರಿ ವಲಯದಲ್ಲಿ ಅವರು ಪ್ರಮುಖರಾಗಿದ್ದರು. 21ನೆಯ21ನೇಯ ವಯಸ್ಸಿನಲ್ಲಿ ವಿವಿಯನ್ ಗ್ರೇ ಎಂಬ ಐದು ಸಂಪುಟಗಳ ಕಾದಂಬರಿಯೊಂದನ್ನು ಬರೆದು ತನ್ನ ಹೆಸರು ಹಾಕದೆ ಪ್ರಕಟಿಸಿದ. ಇದರಲ್ಲಿ ಮರೆ ಮತ್ತು ಇತರರ ವಿಡಂಬನೆಯಿತ್ತು. ಇವನೇ ಅದರ ಲೇಖಕನೆಂಬುದು ಬಹುಕಾಲ ರಹಸ್ಯವಾಗಿ ಉಳಿಯಲಿಲ್ಲ. ಇವನು ವಿಮರ್ಶಕರ ಟೀಕೆಗೆ ಗುರಿಯಾದ.
 
ಇದರಿಂದಾಗಿ ಮುಂದಿನ ನಾಲ್ಕು ವರ್ಷಗಳನ್ನು ನಿಷ್ಕ್ರಿಯೆಯಲ್ಲಿ ಕಳೆದ. ಈ ಕಾಲದಲ್ಲಿ ಇವನು ಮಾಡಿದ ಒಂದೇ ಕೆಲಸವೆಂದರೆ ದಿ ಯಂಗ್ ಡ್ಯೂಕ್ ಎಂಬ ಇನ್ನೊಂದು ಕಾದಂಬರಿಯ ಲೇಖನ. ಮೂರು ಸಂಪುಟಗಳ ಈ ಕಾದಂಬರಿಯೇನೂ ಗುಣದಲ್ಲಿ ಮೊದಲನೆಯದಕ್ಕಿಂತ ಭಿನ್ನವಾಗಿರಲಿಲ್ಲ. 1830ರಲ್ಲಿ ತನ್ನ ಸೋದರಿಯ ವರನೊಂದಿಗೆ ಪಶ್ಚಿಮ ಏಷ್ಯದ ದೇಶಗಳಲ್ಲಿ ಸುತ್ತಾಡಿ ಅಮೂಲ್ಯ ಅನುಭವ ಗಳಿಸಿದ. ಆದರೆ ಕೈರೋದಲ್ಲಿ ಆ ವರ ತೀರಿಕೊಂಡ. ಈ ಅನುಭವಗಳನ್ನೆಲ್ಲ ಕಾಂಟಾರಿನಿ ಫ್ಲೆಮಿಂಗ್ ಹಾಗೂ ಅಲ್ರಾಯ್ ಕಾದಂಬರಿಗಳಲ್ಲಿ ಅಭಿವ್ಯಕ್ತಿಸಿದ. ಈ ಎರಡೂ ಕೃತಿಗಳು ಡಿಸ್ರೇಲಿಯ ಮಹತ್ವಾಕಾಂಕ್ಷೆಯನ್ನು ಸೂಚಿಸುತ್ತವೆ.