ಕೆ. ಬಾಲಚಂದರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೩ ನೇ ಸಾಲು:
ಕೆ ಬಾಲಚಂದರ್ ಅಂದರೆ ಆರಂಗೇಟ್ರಂ, ಅಪೂರ್ವ ರಾಗಂಗಳ್, ಅವರ್ಗಳ್, ಮನ್ಮಥ ಲೀಲೈ, ವರುಮಯಿನ್ ನಿರಂ ಸಿಗಪ್ಪು, ಸಿಂಧು ಭೈರವಿ, ಮರೋಚರಿತ್ರ, ಏಕ್ ದೂಜೆ ಕೆ ಲಿಯೇ, ಅವಳ್ ಒರು ತೊಡರ್ ಕಥೈ, ಬೆಂಕಿಯಲ್ಲಿ ಅರಳಿದ ಹೂವು, ಸುಂದರ ಸ್ವಪ್ನಗಳು, ಎರಡು ರೇಖೆಗಳು, ತೂಂಗಾದೆ ತಂಬಿ ತೂಂಗಾದೆ, ತಣ್ಣೀರ್ ತಣ್ಣೀರ್, ರುದ್ರವೀಣಾ ಮುಂತಾದ ಅನೇಕ ಚಿತ್ರಗಳು ಒಮ್ಮೆಲೆ ನೆನಪಾಗುತ್ತವೆ. ಮೇರು ನಟ ವಿಷ್ಣುವರ್ಧನ್ ಅವರಿಗೆ ಪ್ರಸಿದ್ಧಿ ತಂದುಕೊಟ್ಟ ತಾರೆ ಲಕ್ಷ್ಮಿ ನಿರ್ಮಾಣದ ಮಕ್ಕಳ ಸೈನ್ಯ ಚಿತ್ರದ ನಿರ್ಮಾಣ ಕೂಡಾ ಬಾಲಚಂದರ್ ಅವರದೇ. ಎ ಆರ್ ರೆಹಮಾನ್ ಮೊದಲಿಗೆ ಚಿತ್ರ ನಿರ್ದೇಶಕರಾಗಿದ್ದೂ ಬಾಲಚಂದರ್ ನಿರ್ಮಾಣದ (ಮಣಿರತ್ನಂ ನಿರ್ದೇಶನದ) ರೋಜಾ ಚಿತ್ರದಲ್ಲಿ. ಹೀಗೆ ಅವರ ಹಲವಾರು ಚಿತ್ರಗಳು ನೆನಪಾಗುತ್ತವೆ. ಅವರು ಕೊಟ್ಟ ಮರೆಯಲಾಗದ ಪ್ರತಿಭೆಗಳು ನೆನಪಾಗುತ್ತವೆ. ಅವರು ಇಂದು ದೂರದರ್ಶನದಲ್ಲಿ ಮೂಡಿಸುತ್ತಿರುವ ಹಲವಾರು ಸುಂದರ ಧಾರಾವಾಹಿಗಳು ನೆನಪಿಗೆ ಬರುತ್ತವೆ. ವ್ಯಕ್ತಿ ನೆಲೆಯ ಅಂತರ್ಮುಖಿ ಸಮಸ್ಯೆಗಳನ್ನು ಬಿಂಬಿಸುವ ಚಿತ್ರಗಳಿಗೆ ಅವರು ಪ್ರಧಾನ ಹೆಸರು. ಅವರ ಚಿತ್ರಗಳಲ್ಲಿನ ಚಿತ್ರಕಥೆ, ತಾಂತ್ರಿಕ ಗುಣ ಮಟ್ಟ, ಅಭಿನಯ ಕೌಶಲ್ಯ, ಸಂಗೀತ ಗುಣ ಇವುಗಳೆಲ್ಲಾ ಮಹತ್ವಪೂರ್ಣವೆನಿಸಿವೆ.
 
ಚಲನಚಿತ್ರರಂಗದಲ್ಲಿ ಪ್ರತಿಷ್ಠಿತ ಹೆಸರುಗಳಾಗಿರುವ ಕಮಲ ಹಾಸನ್, ರಜನೀಕಾಂತ್, ಪ್ರಕಾಶ್ ರಾಜ್, ವಿವೇಕ್ , ರಮೇಶ್ ಅರವಿಂದ್, ಜಯಪ್ರದಾ, ಸರಿತಾ, ಸುಜಾತಾ, ಗೀತಾ, ವಿಮಲಾ ರಾಮನ್, ಮಾಳವಿಕಾ ಅವಿನಾಶ್ ಅಂತಹ ಪ್ರತಿಭೆಗಳ ಹಿಂದಿರುವ ಅದಮ್ಯ ಶಕ್ತಿ ಕೆ .
ಬಾಲಚಂದರ್. ಅವರು ನಿರ್ದೇಶಿಸಿರುವ ಚಿತ್ರಗಳು ಎಂಭತ್ತಕ್ಕೂ ಹೆಚ್ಚು. ಚಿತ್ರಕಥೆ ರೂಪಿಸಿರುವ ಚಿತ್ರಗಳ ಸಂಖ್ಯೆ ನೂರಕ್ಕೂ ಹೆಚ್ಚು. ಅವರು ತಮ್ಮ ಚಿತ್ರ ಸಂಸ್ಥೆ ಕವಿತಾಲಯ ಪ್ರೊಡಕ್ಷನ್ಸ್ ಮೂಲಕ ಹಲವಾರು ಚಿತ್ರಗಳನ್ನು ರೂಪಿಸಿದ್ದಾರೆ. ತಮ್ಮ ಪ್ರಧಾನ ಭೂಮಿಕೆಯಾದ ತಮಿಳು ಚಿತ್ರರಂಗವಲ್ಲದೆ ತೆಲುಗು, ಹಿಂದಿ, ಕನ್ನಡ ಮತ್ತು ಮಲಯಾಳಂ ಚಿತ್ರಗಳನ್ನೂ ನಿರ್ಮಿಸಿ ನಿರ್ದೇಶಿಸಿದ್ದಾರೆ. ಅಷ್ಟೊಂದು ಸಾಧಿಸಿದ್ದರೂ ತಮ್ಮ ಸೌಜನ್ಯಯುತ ನಡವಳಿಕೆಯಿಂದ ಎಲ್ಲೆಲ್ಲೂ ಗೌರವಿಸಲ್ಪಟ್ಟಿದ್ದಾರೆ.
 
==ಪ್ರಶಸ್ತಿ ಗೌರವಗಳು==
"https://kn.wikipedia.org/wiki/ಕೆ._ಬಾಲಚಂದರ್" ಇಂದ ಪಡೆಯಲ್ಪಟ್ಟಿದೆ