ರಕ್ತಹೀನತೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೭೪ ನೇ ಸಾಲು:
ಕೆಲವೊಂದು ಚಿಕಿತ್ಸಾಕ್ರಮಗಳನ್ನು ಕೆಳಗೆ ವಿವರಿಸಲಾಗಿದೆ.
 
===* ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ===
 
ಬಹಳಷ್ಟು ಸಂದರ್ಭದಲ್ಲಿ ಪೌಷ್ಟಿಕಾಂಶಯುಕ್ತ ಆಹಾರದ ಕೊರತೆಯಿಂದ ರಕ್ತಹೀನತೆ ಕಾಣಿಸಿಕೊಳ್ಳುತ್ತದೆ. ಇದನ್ನು ತಡೆಯಲು ಉತ್ತಮ ಆಹಾರದಿಂದ ಮಾತ್ರ ಸಾಧ್ಯ. ಹದಿಹರೆಯದವರಿಗೆ ಉತ್ತಮ ಪೌಷ್ಠಿಕಾಂಶಗಳುಳ್ಳ ಆಹಾರವನ್ನು ನೀಡಬೇಕು. ಅದರಲ್ಲೂ ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ಪೌಷ್ಠಿಕ ಆಹಾರ ಅತ್ಯಗತ್ಯ. ರಕ್ತಹೀನತೆಗೆ ಪ್ರಮುಖ ಕಾರಣ ದೇಹದಲ್ಲಿ ಕಬ್ಬಿಣಾಂಶ ಕೊರತೆ. ಆದ್ದರಿಂದ ಕಬ್ಬಿಣಾಂಶ ಹೆಚ್ಚಾಗಿರುವ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದರಿಂದ ರಕ್ತಹೀನತೆ ತಡೆಯಬಹುದು. ತರಕಾರಿ, ಸೊಪ್ಪು, ರಾಗಿ, ಮೊಳಕೆ ಕಟ್ಟಿದ ಕಾಳುಗಳು, ಬೆಲ್ಲ, ನೆಲ್ಲಿಕಾಯಿ, ಕಿತ್ತಳೆ ಹಣ್ಣು, ಮುಂತಾದವುಗಳ ಸೇವನೆಯಿಂದ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿಣಾಂಶ ಹೊರೆಯುತ್ತದೆ<ref>{{cite web |title=ರಕ್ತಹೀನತೆ ಸಮಸ್ಯೆ ನಿಯಂತ್ರಿಸುವ ಪವರ್ ಈ ನೈಸರ್ಗಿಕ ಆಹಾರದಲ್ಲಿ ಅಡಗಿದೆ! |url=https://vijaykarnataka.com/lifestyle/health/try-these-natural-foods-to-keep-anaemia-at-bay/articleshow/80249486.cms?story=7 |website=vijaykarnataka.com |publisher=ವಿಜಯ ಕರ್ನಾಟಕ ಆನ್‍ಲೈನ್ |accessdate=3 April 2022}}</ref>.
 
===* ಜೀವಸತ್ವಗಳ ಪೂರೈಕೆ ===
ಬಿ-೧೨ ಜೀವಸತ್ವವು ಆರೋಗ್ಯಕರ ಕೆಂಪು ರಕ್ತಕಣಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಬಿ-೧೨ ಜೀವಸತ್ವದ ಕೊರತೆಯು ಕೆಂಪು ರಕ್ತಕಣಗಳ ಬೆಳವಣಿಗೆ ಮತ್ತು ಕಾರ್ಯನಿರ್ವಹಣೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಆ ಮೂಲಕ ತಾತ್ಕಾಲಿಕ ರಕ್ತಹೀನತೆಗೆ ಕಾರಣವಾಗುತ್ತದೆ. ಬಿ-೧೨ ಜೀವಸತ್ವ ದೇಹವು ಮೈಲಿನ್(ನರಕೋಶವನ್ನು ಸುತ್ತುವರೆದಿರುವ ಒಂದು ರಕ್ಷಣಾತ್ಮಕ ಲೇಪನ) ಅನ್ನು ತಯಾರಿಸಲು ಸಹಾಯ ಮಾಡುತ್ತದೆ. ಬಿ-೧೨ ಜೀವಸತ್ವದ ಕೊರತೆಯಿಂದ ಈ ಪೊರೆಗೆ ಹಾನಿ ಉಂಟಾಗಬಹುದು<ref>{{cite web |title=Vitamins C & B12 |url=https://healthyeating.sfgate.com/vitamins-c-b12-6692.html |website=healthyeating.sfgate.com |publisher=SFGATE |accessdate=3 April 2022}}</ref>.
 
ಆಹಾರದಲ್ಲಿರುವ ಕಬ್ಬಿಣವನ್ನು ಕರುಳಿನಲ್ಲಿ ಹೀರಿಕೊಳ್ಳಲು (ಕಬ್ಬಿಣ ಕೆಂಪು ರಕ್ತ ಜೀವಕೋಶಗಳಲ್ಲಿರುವ ಹೀಮೋಗ್ಲೋಬಿನ್ ತಯಾರಿಕೆಗೆ ಅತ್ಯವಶ್ಯ) ಸಿ ಜೀವಸತ್ವವು ಸಹಾಯ ಮಾಡುತ್ತದೆ. ಇದರ ಕೊರತೆ ಆದಾಗ ಆಹಾರದಲ್ಲಿನ ಕಬ್ಬಿಣಾಂಶವು ರಕ್ತಕ್ಕೆ ಸೇರದೆ ಇರಬಹುದು. ಆ ಮೂಲಕ ರಕ್ತದಲ್ಲಿ ಕಬ್ಬಿಣಾಂಶದ ಕೊರತೆ ಉಂಟಾಗುತ್ತದೆ. ಹಣ್ಣುಗಳು, ಲಿಂಬೆ, ಕಿತ್ತಳೆ, ಮೋಸಂಬಿ, ಪೇರಲ, ಹಸಿರು ತರಕಾರಿಗಳಲ್ಲಿ ಯಥೇಚ್ಚ ಪ್ರಮಾಣದಲ್ಲಿ ಸಿ ಜೀವಸತ್ವ ಇರುವುದರಿಂದ ಇವುಗಳನ್ನು ಸೇವಿಸುವ ಮೂಲಕ ಸಿ ಜೀವಸತ್ವವನ್ನು ಪಡೆಯಬಹುದು.
=== ಬಾಯಿಯ ಮೂಲಕ ಕಬ್ಬಿಣಾಂಶದ ಪೂರೈಕೆ ===
 
=== * ಬಾಯಿಯ ಮೂಲಕ ಕಬ್ಬಿಣಾಂಶದ ಪೂರೈಕೆ ===
ಕಬ್ಬಿಣದ ಮಾತ್ರೆ(ಕಬ್ಬಿಣದ ಸಲ್ಫೇಟ್, ಕಬ್ಬಿಣದ ಫ್ಯೂಮರೇಟ್ ಅಥವಾ ಕಬ್ಬಿಣದ ಗ್ಲುಕೋನೇಟ್‌‍)ಅನ್ನು ಬಾಯಿಯ ಮೂಲಕ ಸೇವಿಸುವುದರಿಂದ ಕಡಿಮೆ ಗಂಭೀರತೆಯ ರಕ್ತಹೀನತೆಯನ್ನು ತಹಬಂದಿಗೆ ತರಬಹುದು. ಇವುಗಳನ್ನು ತೆಗೆದುಕೊಳ್ಳುವಾಗ, ಹೊಟ್ಟೆಯಲ್ಲಿ ಒಂದು ರೀತಿಯ ಕಿರಿಕಿರಿ ಉಂಟಗುವುದು ಅಥವಾ ಮಲವು ಕಪ್ಪಾಗುವುದು ಸಾಮಾನ್ಯವಾದ ಅಡ್ಡಪರಿಣಾಮವಾಗಿದೆ. ಇಂಥ ಸಂದರ್ಭದಲ್ಲಿ ಕಬ್ಬಿಣವನ್ನು ಆಹಾರದೊಂದಿಗೆ ತೆಗೆದುಕೊಳ್ಳುವ ಮೂಲಕ ಹೊಟ್ಟೆಯ ಸಮಸ್ಯೆಯನ್ನು ನಿವಾರಿಸಬಹುದು.
 
===* ಚುಚ್ಚುಮದ್ದಿನ ಮೂಲಕ ===
ಬಾಯಿಯ ಮೂಲಕ ಕೊಡಲಾಗುವ ಔಷಧಗಳ ಪ್ರಭಾವ ಕಡಿಮೆ ಎನಿಸಿದಾಗ ಅಥವಾ ಗಂಭೀರ ಪರಿಸ್ಥಿತಿಯ ರಕ್ತಹೀನತೆಗೆ ಇವು ಸಾಲದಾದಾಗ, ಔಷಧವನ್ನು ಚುಚ್ಚುಮದ್ದಿನ ಮೂಲಕ ಪೂರೈಸಲಾಗುತ್ತದೆ.
ಗಂಭೀರವಾದ ರಕ್ತಹೀನತೆ ಇರುವ ಸಂದರ್ಭದಲ್ಲಿ, ರೋಗಿಯು ೧,೦೦೦ ಮಿಲಿಗ್ರಾಂಗಿಂತ ಹೆಚ್ಚಿನ ಕಬ್ಬಿಣದ ಕೊರತೆಯನ್ನು ಹೊಂದಿರಬಹುದು. ಇಂತಹ ಪರಿಸ್ಥಿತಿಯನ್ನು ಸುಧಾರಿಸಲು, ಅಂದರೆ ರಕ್ತದಲ್ಲಿ ಕಬ್ಬಿಣಾಂಶದ ಮಟ್ಟವನ್ನು ಮರಳಿ ಮೊದಲಿನ ಸ್ಥಿತಿಗೆ ತರಲು ಹಲವಾರು ತಿಂಗಳುಗಳೇ ಬೇಕಾಗಬಹುದು.
"https://kn.wikipedia.org/wiki/ರಕ್ತಹೀನತೆ" ಇಂದ ಪಡೆಯಲ್ಪಟ್ಟಿದೆ