ರಕ್ತಹೀನತೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೩೨ ನೇ ಸಾಲು:
 
==ರೋಗಲಕ್ಷಣಗಳು==
ಹೆಚ್ಚಿನವರಿಗೆ ರಕ್ತಹೀನತೆ ಇರುವುದು ಗೊತ್ತೇ ಇರುವುದಿಲ್ಲ. ಬೇರೆ ಯಾವುದಾದರೂ ಖಾಯಿಲೆಗೆ ತುತ್ತಾಗಿ ರಕ್ತ ಪರೀಕ್ಷೆ ಮಾಡುವ ಸಂದರ್ಭದಲ್ಲಿ ರಕ್ತಹೀನತೆ ಇರುವುದು ಕಂಡುಬರುವ ಸಾಧ್ಯತೆ ಇರುತ್ತದೆ.
 
ಗಂಭೀರವಲ್ಲದ ಸಂದರ್ಭದಲ್ಲಿ ಅಥವಾ ನಿಧಾನವಾಗಿ ಬರುವ ಸಂದರ್ಭದಲ್ಲಿ, ಈ ರೋಗ ಸೌಮ್ಯವಾದ ಅಥವಾ ಅಸ್ಪಷ್ಟವಾದ ಲಕ್ಷಣಗಳನ್ನು ಲಕ್ಷಣಗಳನ್ನು ತೋರಿಸುತ್ತದೆ. ಅಂದರೆ- ಸುಸ್ತಾದಂತೆ ಅನಿಸುವುದು, ನಿಃಶಕ್ತಿ, ದೀರ್ಘ ಉಚ್ವಾಸ-ನಿಶ್ವಾಸ ತೆಗೆಯಲು ಕಷ್ಟವಾಗುವುದು ತಲೆನೋವು, ಗಮನವನ್ನು ಕೇಂದ್ರೀಕರಿಸಲು ವಿಫಲವಾಗುವುದು ಇತ್ಯಾದಿ.
ಕಾಯಿಲೆಯುರಕ್ತಹೀನತೆಯು ತಕ್ಷಣದಲ್ಲಿಗಂಭೀರ ಬಂದಾಗಹಂತಕ್ಕೆ ತಲುಪಿದಾಗ, ಆಗ ಗಂಭೀರವಾದ ಲಕ್ಷಣಗಳು ಕಾಣಿಸಬಹುದು. ಅಂದರೆ- ಗೊಂದಲ, ತಲೆ ತಿರುಗುವಿಕೆ, ಪ್ರಜ್ಞೆ ತಪ್ಪುವುದು, ವಿಪರೀತ ಬಾಯಾರಿಕೆ, ಎದೆ ಬೇನೆ, ಹೃದಯಬಡಿತದಲ್ಲಿ ವ್ಯತ್ಯಾಸ ಇತ್ಯಾದಿ. ಇನ್ನುಕೆಲವೊಮ್ಮೆ ಕೆಲವೊಂದು ರೋಗಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರಬಹುದು. ಅದೇ ರೀತಿ, ಸೌಮ್ಯರೂಪದ ರಕ್ತಹೀನತೆಯು ದೀರ್ಘಕಾಲದವರೆಗೆ ಮುಂದುವರಿದರೆ, ದೇಹವು ಈ ಬದಲಾವಣೆಗೆ ಹೊಂದಿಕೊಳ್ಳಬಹುದು.
 
ಇನ್ನು ಕೆಲವೊಮ್ಮೆ ರಕ್ತಹೀನತೆಗೆ ಕಾರಣವಾಗುವ ಅಂಶಗಳು ಬದಲಾದಂತೆ ಲಕ್ಷಣಗಳು ಬದಲಾಗುತ್ತವೆ. ಉದಾಹರಣೆಗೆ, ರಕ್ತದಲ್ಲಿ ಕಬ್ಬಿಣಾಂಶದ ಕೊರತೆ ಆದಾಗ ಚರ್ಮದ ಬಣ್ಣದಲ್ಲಿ ಬದಲಾವಣೆ ಕಂಡುಬರುತ್ತದೆ.
 
ದೀರ್ಘಕಾಲದ ರಕ್ತಹೀನತೆಯು ಶಿಶುಗಳಲ್ಲಿ ನರಮಂಡಲದ ಬೆಳವಣಿಗೆಯ ಮೇಲೆ ದುಷ್ಪರಿಣಾಮ ಉಂಟುಮಾಡಬಹುದು. ಪರಿಣಾಮವಾಗಿ ಮಕ್ಕಳಲ್ಲಿ ನಡವಳಿಕೆಯಲ್ಲಿನ ವ್ಯತ್ಯಾಸಕ್ಕೆ ಕಾರಣವಾಗಬಹುದು. ಇನ್ನು ಶಾಲಾ ಮಕ್ಕಳಲ್ಲಿ ಶೈಕ್ಷಣಿಕ ಕಾರ್ಯಕ್ಷಮತೆಯನ್ನು ಕಡಿಮೆ ಮಾಡಬಹುದು.
 
==ಪರೀಕ್ಷೆ ಮತ್ತು ಪತ್ತೆ==
"https://kn.wikipedia.org/wiki/ರಕ್ತಹೀನತೆ" ಇಂದ ಪಡೆಯಲ್ಪಟ್ಟಿದೆ