ಗೋಪಾಲಕೃಷ್ಣ ಅಡಿಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೪ ನೇ ಸಾಲು:
 
==ವಿದ್ಯಾಭ್ಯಾಸ/ಶಿಕ್ಷಣ==
ಬೈಂದೂರುಗಳಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ನಂತರ ಅಡಿಗರು ಕುಂದಾಪುರದ ಹೈಸ್ಕೂಲಿನಲ್ಲಿ ಶಿಕ್ಷಣ ಮುಗಿಸಿದರು. ಹದಿಮೂರರ ಹರೆಯದಲ್ಲೇ ಪದ್ಯ ಬರೆಯಲಾರಂಭಿಸಿದ ಅವರಿಗೆ ಕುಂದಾಪುರದ ವಾತಾವರಣ ಇನ್ನಷ್ಟು ಬರೆಯಲು ಪ್ರೇರಣೆ ನೀಡಿತು.ಮೊದಲೇ ಇದ್ದ ಓದುವ ಹುಚ್ಚು ಇನ್ನಷ್ಟು ಬಲವಾಯಿತು. ಆ ಸಂದರ್ಭದಲ್ಲಿ ಶಿವರಾಮ ಕಾರಂತರ ಅಣ್ಣ ಕೋಲಕೋಟ ಲಕ್ಮೀನಾರಾಯಣ ಕಾರಂತರು ಅಡಿಗರಿಗೆ ಒಳ್ಳೆಯ ಪುಸ್ತಕಗಳನ್ನು ನೀಡಿ ಪ್ರೋತ್ಸಾಹಿಸುತ್ತಿದ್ದರು. ಆಗ ಇಡೀ ದೇಶವೇ ಮಹಾತ್ಮಾ ಗಾಂಧೀಜಿಯವರ ನೇತೃತ್ವದಲ್ಲಿ ಸ್ವಾತಂತ್ರ್ಯ ಹೋರಾಟ, ಪರಾಕಾಷ್ಠೆಯನ್ನು ಸಮೀಪಿಸುತ್ತಿದ್ದ ಕಾಲ. ಅಡಿಗರೂ ಹುಮ್ಮಸ್ಸಿನಿಂದ ಹೋರಾಟದಲ್ಲಿ ಭಾಗಿಯಾದರು. ಹೆಂಡದಂಗಡಿಯ ಮುಂದೆ `ಪಿಕೆಟಿಂಗ್' ಮಾಡಿದರು. ದೇಶ ಭಕ್ತಿಯ ಉತ್ಸಾಹ, ಉದ್ರೇಕಗಳು ಅವರ ಕಾವ್ಯ ರಚನೆಗೆ ಪೂರಕವಾದವು. ಅವರ ಕೆಲವು ಕವನಗಳು ಬೆಂಗಳೂರಿನ `ಸುಬೋಧ', ಮಂಗಳೂರಿನ `ಬಡವರ ಬಂಧು', ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾದವು. ಎಸ್.ಎಸ್.ಎಲ್.ಸಿ ಮುಗಿದ ನಂತರ ಅಡಿಗರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಇಂಟರ್ಮೀಡಿಯಟ್ ತರಗತಿಗೆ ಸೇರಿ ಕೊಂಡರು. ಅಲ್ಲಿ ಕಳೆದ ಐದಾರು ವರ್ಷ ಅವರ ಬದುಕಿನ ಒಂದು ಮಹತ್ವದ ಅವಧಿಯಾಗಿತ್ತು. ಈ ಅವಧಿಯಲ್ಲಿ ಅವರಿಗೆ ಬಿ.ಎಚ್. ಶ್ರೀಧರ್, ಹೆಚ್ ವೈ.ಶಾರದಾಪ್ರಸಾದ್, ಚದುರಂಗ, ಟಿ.ಎಸ್.ಸಂಜೀವ ರಾವ್. ಎಂ.ಶಂಕರ್, ಕೆ.ನರಸಿಂಹಮೂರ್ತಿ ಮುಂತಾದವರ ಒಡನಾಟ, ಸ್ನೇಹ ಅವರಿಗೆ ಲಭ್ಯವಾಯಿತು. `ಭಾವತರಂಗ' ಸಂಕಲನದ ಹೆಚ್ಚಿನ ಕವನಗಳು ಈ ಅವಧಿಯಲ್ಲಿ ರಚಿತವಾದವು. ಅವುಗಳಲ್ಲೊಂದಾದ `ಒಳತೋಟಿ' ಎಂಬ ಕವನ ಬಿ.ಎಂ.ಶ್ರೀ ರಜತ ಮಹೋತ್ಸವದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನದ ಸುವರ್ಣ ಪದಕವನ್ನು ಪಡೆಯಿತು. ಅಡಿಗರು ತಮ್ಮ ಪ್ರಾರಂಭದ ವಿದ್ಯಾಭ್ಯಾಸವನ್ನು ದಕ್ಷಿಣ ಕನ್ನಡದಲ್ಲಿ ಮುಗಿಸಿ, ನಂತರ [[ಮೈಸೂರು|ಮೈಸೂರಿಗೆ]] ಬಂದರು. ಬಿ.ಎ.(ಆನರ್ಸ್), ಎಂ.ಎ.(ಇಂಗ್ಲೀಷ್) ಪದವಿಗಳನ್ನು [[ಮೈಸೂರು ವಿಶ್ವವಿದ್ಯಾಲಯ]]ದಿಂದ ಪಡೆದ ಅವರು ಮೈಸೂರು ಶಾರದಾವಿಲಾಸ ಕಾಲೇಜು, ಸೆಂಟ್ ಫಿಲೋಮಿನಾ ಕಾಲೇಜು ಹಾಗೂ ಕುಮಟಾದ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದರು. ನಂತರ [[ಉಡುಪಿ]]ಯ ಪೂರ್ಣಪ್ರಜ್ಞ ಕಾಲೇಜು, [[ಸಾಗರ|ಸಾಗರದ]] ಲಾಲ್ ಬಹಾದ್ದೂರ್ ಶಾಸ್ತ್ರಿ ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿ ಕೆಲಸ ಮಾಡಿದ ಅಡಿಗರು ನ್ಯಾಷನಲ್ ಬುಕ್ ಟ್ರಸ್ಟ್‌ನ ನಿರ್ದೇಶಕರಾಗಿ, ಸಿಮ್ಲಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‌ಡ್ ಸ್ಟಡೀಸ್‌ನ ರಿಸರ್ಚ್ ಫೆಲೋ ಆಗಿ ಕೆಲಸ ಮಾಡಿದರು. ಐವತ್ತೊಂದನೇ [[ಕನ್ನಡ ಸಾಹಿತ್ಯ ಸಮ್ಮೇಳನ]]ದ ಅಧ್ಯಕ್ಷರಾಗಿ ಗೌರವಿಸಲ್ಪಟ್ಟ ಅಡಿಗರು ರಾಜ್ಯ ಸಾಹಿತ್ಯ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಕೇರಳದ ಕುಮಾರನ್ ಆಶಾನ್ ಪ್ರಶಸ್ತಿ ಹಾಗೂ ಕಬೀರ್ ಸಂಮಾನ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. "ಸಾಕ್ಷಿ" ಪತ್ರಿಕೆಯ ಸಂಪಾದಕರಾಗಿ ಹೊಸ ಸಂವೇದನೆ ಹಾಗೂ ಹೊಸ ಅಭಿವ್ಯಕ್ತಿ ವಿಧಾನಗಳಿಗೆ ಮಾರ್ಗದರ್ಶಕರಾದರು. ಒಮ್ಮೆ ಬೆಂಗಳೂರು ಕ್ಷೇತ್ರದಿಂದ ಲೋಕಸಭಾ ಚುನಾವಣೆಗೂ ಸ್ಫರ್ಧಿಸಿದ್ದರು. ಅಡಿಗರು ಸಾಗರದಲ್ಲಿದ್ದಾಗ ಕೇವಲ ಸಾಹಿತಿಗಳನ್ನು ಕಾಲೇಜಿಗೆ ಆಹ್ವಾನಿಸಿ ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಕೊಡುತ್ತಿದ್ದರು. ಅವರು ತಮ್ಮ ವಿದ್ಯಾರ್ಥಿಗಳಿಗೂ ವಿವಿಧ ಪುಸ್ತಕಗಳನ್ನು ಓದಲು ಪ್ರೇರೇಪಿಸುತ್ತಿದ್ದರು. ಅವರು ಕಾಲೇಜಿನ ಉಪನ್ಯಾಸಕರನ್ನು ತಮ್ಮ ಗೆಳೆಯರಂತೆಯೇ ಸ್ವೀಕರಿಸಿದ್ದರು. ಅವರು ಒಬ್ಬರೇ ಕಾಲೇಜಿನ 'ಕ್ಯಾಂಟೀನ್' ಹೋಗಿದ್ದು ತೀರಾ ಅಪರೂಪವೇ ಸರಿ. ಕೆಲವು ಬಾರಿ ಅವರು ತಮ್ಮ ವಿದ್ಯಾರ್ಥಿಗಳಿಗೂ ಶುಲ್ಕ ತುಂಬಲು, ಪುಸ್ತಕ ಕೊಳ್ಳಲು ತಮ್ಮ ಸಂಬಳದಿಂದಲೇ ಸಹಾಯ ಮಾಡುತ್ತಿದ್ದರು. ಮನೆಯಲ್ಲಿಯೂ ಒಬ್ಬಿಬ್ಬ ವಿದ್ಯಾರ್ಥಿಗಳು ಇದ್ದೇ ಇರುತ್ತಿದ್ದರು.<ref>http://www.cnn.com/profiles/manu-raju</ref>
<ref name="hin2">[http://www.hindu.com/mag/2004/04/25/stories/2004042500260300.htm The Mysore generation] {{Webarchive|url=https://web.archive.org/web/20040823112054/http://www.hindu.com/mag/2004/04/25/stories/2004042500260300.htm |date=2004-08-23 }} ''The Hindu'' - 25 Apr 2004.</ref><ref name="bio">{{cite web|url=http://geocities.com/indian_poets/kannada.html |title=Indian Poets Writing In Kannada |deadurl=bot: unknown |archiveurl=https://web.archive.org/web/20091026144559/http://geocities.com/indian_poets/kannada.html |archivedate=26 October 2009 |df= }} - Indian Poets</ref>
 
"https://kn.wikipedia.org/wiki/ಗೋಪಾಲಕೃಷ್ಣ_ಅಡಿಗ" ಇಂದ ಪಡೆಯಲ್ಪಟ್ಟಿದೆ