ಹುನಗುಂದ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೪೩ ನೇ ಸಾಲು:
ತಾಲ್ಲೂಕಿನಲ್ಲಿ ವ್ಯವಸಾಯಕ್ಕೆ ಸಹಾಯಕವಾಗಿ ಕೆಲವು ಬಾವಿಗಳಿವೆ. ಇಳಕಲ್ಲು, ಬೂದಿಹಾಳ, ಚಿಕ್ಕಮಗಿ, ಅಮೀನಗಡ ಮುಂತಾದ ಕಡೆ ಜಿನಗು ಕೆರೆಗಳ ಬೇಸಾಯವಿದೆ. ಚಿತ್ತವಾಡಗಿ ಕೆರೆ ಯೋಜನೆಯಿಂದ ಲಾಭಪಡೆಯುವ ತಾಲ್ಲೂಕುಗಳಲ್ಲಿ ಹುನಗುಂದವೂ ಒಂದು. ಜೋಳ, ಸಜ್ಜೆ, ಸೇಂಗಾ, ದ್ವಿದಳ ಧಾನ್ಯಗಳು, ಗೋದಿ, ಹತ್ತಿ, ಕಬ್ಬು ಮುಂತಾದುವನ್ನು ಬೆಳೆಯುತ್ತಾರೆ. ಪಶುಪಾಲನೆಯಿದ್ದು ಅವುಗಳ ರಕ್ಷಣೆ ಮತ್ತು ಅಭಿವೃದ್ಧಿಗೆ ನೆರವಾಗುವ ಪಶುವೈದ್ಯಾಲಯ ಗಳಿವೆ. ಮತ್ಸ್ಯೋದ್ಯಮ ಸಾಧಾರಣವಿದೆ. ಈ ತಾಲ್ಲೂಕಿನಲ್ಲಿ ಹತ್ತಿ ಸಂಸ್ಕರಣ ಕಾರ್ಖಾನೆಗಳಿವೆ. ಕೈಮಗ್ಗದ ಖಣಗಳಿಗೆ, ಸೀರೆಗಳಿಗೆ ಈ ತಾಲ್ಲೂಕು ಪ್ರಸಿದ್ಧ. ಮರಗೆಲಸ, ಬಿದಿರು ವಸ್ತುಗಳ ತಯಾರಿಕೆ ಮುಂತಾದ ಕೈಗಾರಿಕೆಗಳಿವೆ.
 
==ಪ್ರೇಕ್ಷಣಿಯ ಸ್ಠಳಗಳುಸ್ಥಳಗಳು ==
ಹುನಗುಂದಕ್ಕೆ ಪಶ್ಚಿಮದಲ್ಲಿ 26 ಕಿಮೀ ದೂರದಲ್ಲಿರುವ ಐಹೊಳೆ (ನೋಡಿ- ಐಹೊಳೆ) ಬಾದಾಮಿ ಚಾಳುಕ್ಯರ ಕಾಲದ ಸುಂದರ ದೇವಾಲಯ ಸಮೂಹಗಳಿರುವ ಪ್ರವಾಸಿ ಕೇಂದ್ರ. ಹುನಗುಂದಕ್ಕೆ ಆಗ್ನೇಯದಲ್ಲಿ 13 ಕಿಮೀ ದೂರದಲ್ಲಿರುವ ಇಳಕಲ್ಲು ನೇಯ್ಗೆ ಬಟ್ಟೆಗಳಿಗೆ ಪ್ರಸಿದ್ಧ. ಹುನಗುಂದದ ಈಶಾನ್ಯಕ್ಕೆ 24 ಕಿಮೀ ದೂರದಲ್ಲಿರುವ ಕರಡಿ ಗ್ರಾಮದಲ್ಲಿ ಕರಡಿಯ ಮುಖದಂತಿರುವ ನಂದಿ ದೇವಾಲಯವಿದೆ. ಈ ಕರಡಿಮುಖದ ನಂದಿ ದೇವಾಲಯದಿಂದಲೇ ಈ ಗ್ರಾಮಕ್ಕೆ ಕರಡಿ ಎಂಬ ಹೆಸರು ಬಂತೆಂದು ಹೇಳುವರು.ಹುನಗುಂದ ದಿಂದ ಈಶಾನ್ಯಕ್ಕೆ 30ಕಿಮೀ ದೂರದಲ್ಲಿರುವ ಹಾಗೂ ಬಾಗಲಕೋಟ ಜಿಲ್ಲೆಯ ಕೊನೆಯ ಗ್ರಾಮ ಕೋಡಿಹಾಳ‌ಲ್ಲಿ ಗ್ರಾಮದೇವಿ ನೆಲೆಸಿದಾಳ್ಳೆ 3ವರ್ಷಕ್ಕೆ ಒಂದು ಸಾರಿ ಜಾತ್ರೆ ಅತಿ ವಿಜೃಂಭಣೆಯಿಂದ ನಡೆಯುತ್ತದೆ ವಿಜಯನಗರದ ರಾಮರಾಯ 1565ರ ರಕ್ಕಸಗಿತಂಗಡಿಗಿ ಯುದ್ಧದಲ್ಲಿ ಇಲ್ಲಿ ಬೀಡುಬಿಟ್ಟಿದ್ದನೆಂದು ಪ್ರತೀತಿ. ಹುನಗುಂದದ ಆಗ್ನೇಯಕ್ಕೆ ಸು. 24 ಕಿಮೀ ದೂರದಲ್ಲಿರುವ ನಂದವಾಡಗಿ ಇಳಕಲ್ಲಿಗೆ ಈಶಾನ್ಯದಲ್ಲಿ 29 ಕಿಮೀ ದೂರದಲ್ಲಿದೆ. ಇದೊಂದು ಪುರಾತನ ಗ್ರಾಮ. ಹಿಂದೆ ನಂದರಾಜನ ರಾಜಧಾನಿಯಾಗಿತ್ತೆಂದು ಹೇಳುವರು. ಗ್ರಾಮದ ಒಂದು ಪ್ರವೇಶದ್ವಾರದ ಮುಂದೆ ಎತ್ತರವಾದ ಜಗಲಿಕಟ್ಟೆಯಿದ್ದು ಅಲ್ಲಿ ಒಂದು ಬೇವಿನ ಮರವೂ ವಿಷ್ಣುಚಕ್ರವುಳ್ಳ ಒಂದು ಕಲ್ಲೂ ಇದೆ. ಕೋಟೆಯೊಳಗೆ ದೊಡ್ಡ ಈಶ್ವರದೇವಾಲಯವಿದೆ. ಹುನಗುಂದಕ್ಕೆ ಉತ್ತರದಲ್ಲಿ 19 ಕಿಮೀ ದೂರದಲ್ಲಿರುವ [[ಕೂಡಲ ಸಂಗಮ|ಸಂಗಮ]] ಒಂದು ಪವಿತ್ರ ಕ್ಷೇತ್ರ. ಇದು ಕೃಷ್ಣಾ ಮತ್ತು ಮಲಪ್ರಭಾ ನದಿಗಳು ಕೂಡುವಲ್ಲಿದೆ.
 
"https://kn.wikipedia.org/wiki/ಹುನಗುಂದ" ಇಂದ ಪಡೆಯಲ್ಪಟ್ಟಿದೆ