ಮಾಲೂರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
Unnecessary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೩೯ ನೇ ಸಾಲು:
ಜಿಲ್ಲಾ ಕೇಂದ್ರದಿಂದ : ೪೮ ಕಿ.ಮೀ
 
 
==ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸನಿವಾಸ ಶಾಲೆ==
 
ಮಾಸ್ತಿ ಕನ್ನಡದ ಆಸ್ತಿ. ಮಾಸ್ತಿ ಮಾಲೂರು ತಾಲ್ಲೂಕಿನ ಹೋಬಳಿ ಕೇಂದ್ರಗಿದು ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಶ್ರೀ ವೆಂಕಟೇಶ ಅಯ್ಯಂಗಾರ್ ರವರಿಂದಾಗಿ ದೇಶದ ಗಮನ ಸೆಳೆದ ಗ್ರಾಮವಾಗಿದೆ. ಡಾ.ಮಾಸ್ತಿ ವೆಂಕಟೇಶ ಅಯ್ಯಂಗಾರ್ ಮಾಸ್ತಿ ಗ್ರಾಮದವರಾಗಿದ್ದು ಶಿಕ್ಷಣವನ್ನು ಇದೇ ತಾಲ್ಲೂಕಿನ ಹುಂಗೇನಹಳ್ಳಿ(ವಾಸ), ಮೈಸೂರು ಮತ್ತು ಮದ್ರಾಸುಗಳಲ್ಲಿ ಶಿಕ್ಷಣ ಪಡೆದು ರಾಜ್ಯ ಸರ್ಕಾರದ ಅಸಿಸ್ಟೆಂಟ್ ಕಮೀಶನರ್ ಆಗಿ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸಿ ಸುಮಾರು ವಿವಿಧ ಪ್ರಕಾರದ ೧೨೫ ಪುಸ್ತಕಗಳನ್ನು ರಚಿಸಿದ್ದಾರೆ. ಇವರನ್ನು ಸಣ್ಣ ಕಥೆಗಳ ಜನಕ ಎಂದು ಕರೆದಿದ್ದು, ಚಿಕ್ಕವೀರರಾಜೇಂದ್ರ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿದೆ. ಇವರು ೧೯೨೯ ರ ಬೆಳಗಾವಿ ಸಾಹಿತ್ಯ ಸಮ್ಮೇಳನದ ಅದ್ಯಕ್ಷರಾಗಿದ್ದರು. ಇವರಿಗೆ ಅನೇಕ ಗೌರವ ಪ್ರಶಸ್ತಿಗಳು ಲಭಿಸಿರುತ್ತವೆ. ಇವರ ಕಾವ್ಯನಾಮ ಶ್ರೀನಿವಾಸ
* ಧರ್ಮರಾಯಸ್ವಾಮಿ ದೇವಾಲಯ
ತಾಲ್ಲೂಕು ಕೇಂದ್ರದಿಂದ: ೦ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೨೫ ಕಿ.ಮೀ
 
ಮಾಲೂರಿನ ಮಾರಮ್ಮ ಧರ್ಮರಾಯ, ಸುದ್ದುಕುಂಟೆ ಆಂಜನೇಯ ದೇವಾಲಯಗಳು ಮುಖ್ಯವಾದುವು. ಧರ್ಮರಾಯ ದೇವಸ್ಥಾನವು ೧೯೩೦-೩೧ ರಲ್ಲಿ ನಿರ್ಮಾಣವಾಗಿದ್ದು ೧೯೯೫ ರಲ್ಲಿ ಜೀರ್ಣೋದ್ದಾರಗೊಂಡಿತು. ಇಲ್ಲಿನ ವಿಶೇಷ ಎಂದರೆ ಮಾರ್ಚಿ-ಎಪ್ರಿಲ್ ತಿಂಗಳಿನಲ್ಲಿ ಅತ್ಯಂತ ವಿಜೃಂಬಣೆಯಿಂದ ನಡೆಯುವ ಧರ್ಮರಾಯನ ಕರಗ ಮಹೋತ್ಸವ ಲಕ್ಷಾಂತರ ಜನ ಕರಗ ವೀಕ್ಷಣೆ ಮಾಡುತ್ತಾರೆ. ಈ ದೇವಾಲಯದಲ್ಲಿ ಕಲ್ಯಾಣ ಮಂಟಪ ಹಾಗೂ ವಿಶಾಲ ಮೈದಾನವಿದೆ.
* ಶಿವಾರಪಟ್ಟಣ
ತಾಲ್ಲೂಕು ಕೇಂದ್ರದಿಂದ : ೧೨ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೨೦ ಕಿ.ಮೀ
 
ಮಾಲೂರು ಹೆಂಚಿನ ಕಾರ್ಖಾನೆ
ತಾಲ್ಲೂಕು ಕೇಂದ್ರದಿಂದ : ೧/೨ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೨೬ ಕಿ.ಮೀ
 
ಕೋಲಾರ ಜಿಲ್ಲೆಗೆ ಸೇರಿದ ಮಾಲೂರು ತಾಲ್ಲೂಕು ಕೇಂದ್ರ. ಇದರ ಸುತ್ತಮುತ್ತ ನೂರಾರು ಇಟ್ಟಿಗೆ ಹಾಗು ಹೆಂಚಿನ ಕಾರ್ಖಾನೆಗಳು ನೆಲೆಗೊಂಡಿವೆ. ಇಲ್ಲಿ ದೊರೆಯುವ ವಿಶೇಷ ಜೇಡಿ ಮಣ್ಣು ಹಾಗೂ ನೀಲಗಿರಿ ಉರುವಲುಗಳಿಂದಾಗಿ ಇಲ್ಲಿನ ಹೆಂಚು ಮತ್ತು ಇಟ್ಟಿಗೆ ಕಾರ್ಖಾನೆಗಳು ಪ್ರಸಿದ್ಧವಾಗಿವೆ. ಇಲ್ಲಿ ತಯಾರಾಗುವ ಹೆಂಚುಗಳಿಗೆ ರಾಜ್ಯ ಅಲ್ಲದೇ ತಮಿಳುನಾಡು ಆಂಧ್ರ ಪ್ರದೇಶದಿಂದ ಬೇಡಿಕೆ ಇದೆ. ಈ ಪ್ರದೇಶವು ತರಕಾರಿ ಮತ್ತು ಹೂಗಳಿಗೆ ಮನೆಮಾತಾಗಿದೆ. ಬಿಹಾರ, ಒರಿಸ್ಸ, ಆಂಧ್ರ ಮತ್ತು ತಮಿಳುನಾಡಿನ ಅನೇಕ ಕಾರ್ಮಿಕರಿಗೆ ಇಟ್ಟಿಗೆ ಕಾರ್ಖಾನೆಗಳು ಆಶ್ರಯ ತಾಣವಾಗಿವೆ. ಮಾಲೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರವಾಗಿದೆ. ಮಾಲೂರು ಸೊಣ್ಣಪ್ಪ ಹರಿಕಥಾ ವಿದ್ವಾಂಸರಾಗಿದ್ದು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಹಾಸ್ಯ ಸಾಹಿತಿಗಳಾದ ಎಂ.ಎಸ್ ನರಸಿಂಹಮೂರ್ತಿ, ಸಿ.ಎಂ.ಗೋವಿಂದರೆಡ್ಡಿ, ಆರ್ ವಿಜಯರಾಘವನ್, ಸ.ರಘುನಾಥ ಮತ್ತು ಡಾ.ಕೆ.ವೈ.ನಾರಾಯಣಸ್ವಾಮಿ ಮುಂತಾದವರು ರಾಜ್ಯ ಮಟ್ಟದ ಲೇಖಕರಾಗಿ ಗುರುತಿಸಿಕೊಂಡಿದ್ದಾರೆ.
"https://kn.wikipedia.org/wiki/ಮಾಲೂರು" ಇಂದ ಪಡೆಯಲ್ಪಟ್ಟಿದೆ