ಪುರುಲೆ ಹಕ್ಕಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ತಿದ್ದುಪಡಿ
ಚಿತ್ರ Jungle_Bush-Quail_Bandhavgarh1.JPGರ ಬದಲು ಚಿತ್ರ Jungle_Bush_Quail,_Bandhavgarh_NP,_Madhya_Pradesh_1.jpg ಹಾಕಲಾಗಿದೆ.
 
೧೯ ನೇ ಸಾಲು:
 
'''ಪುರುಲೆ ಹಕ್ಕಿ''' (ಇಂಗ್ಲೀಶ್ ಜಂಗಲ್ ಬುಶ್ ಕ್ವೇಲ್) ಹಾರಾಡುವ ಹಕ್ಕಿ . ಇದೊಂದು [[ಭಾರತ]] ಉಪಖಂಡದ ನಿವಾಸಿ. ಒಣ ಮತ್ತು ಕುರುಚಲು ಕಾಡುಗಳಲ್ಲಿ ಕಲ್ಲುಬಂಡೆಗಳಿರುವ ಹುಲ್ಲುಗಾವಲುಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. [[ಕೋಳಿ]]ಯ ಜಾತಿಗೆ ಸೇರಿದ ಹಕ್ಕಿಯಿದು. ಗಂಡು ಮತ್ತು ಹೆಣ್ಣು ಹಕ್ಕಿಗಳ ದೇಹ ಬೇರೆಬೇರೆ ರೀತಿಯಿದೆ. ಗಂಡಿಗೆ ಮಾಸಲು ಬಿಳಿಯ ಮೇಲೆ ಕಪ್ಪು ಪಟ್ಟಿಗಳಿರುವ ಕೆಳಭಾಗ, ಕಂದು ಬಣ್ಣದ ಕೊಕ್ಕು ಮತ್ತು ಅದರ ಸುತ್ತಲಿನ ಭಾಗಗಳು,ಬಾಲ, ಹಳದಿ ಬಣ್ಣದ ಕಾಲು ಮತ್ತು ಪಾದಗಳು ಇವೆ. ಹೆಣ್ಣು ಹಕ್ಕಿಯ ಕೆಳಭಾಗದಲ್ಲಿ ಗಂಡಿನಂತೆ ಕಪ್ಪು ಪಟ್ಟಿಗಳಿಲ್ಲ. 10-12 ಸಂಖ್ಯೆಯ ಪುಟ್ಟ ಗುಂಪುಗಳಲ್ಲಿ ಇರುವ ಸಂಘಜೀವಿಯಿದು. ಧಾನ್ಯಗಳು, ಬೀಜಗಳು, ಕಾಳುಗಳು ಇದರ ಪ್ರಮುಖ ಆಹಾರ. ಕೆಲ ಕೀಟಗಳನ್ನೂ ತಿನ್ನುತ್ತದೆ.[[ಚಳಿಗಾಲ]]ದಲ್ಲಿ ಹೆಚ್ಚಾಗಿ ಸಂತಾನೋತ್ಪತ್ತಿ ನಡೆಸುತ್ತವೆ. ಏಕಸಂಗಾತಿ ಹಕ್ಕಿಗಳಿವು. ಹೆಣ್ಣು ಹಕ್ಕಿಯು ನೆಲದಲ್ಲಿ ಚಿಕ್ಕಕುಳಿ ಮಾಡಿ, 4 ರಿಂದ 9 ಕೆನೆ ಬಣ್ಣದ ಮೊಟ್ಟೆಗಳನ್ನಿಡುತ್ತದೆ. 21 ದಿನಗಳಲ್ಲಿ ಮರಿಗಳು ಹೊರಬರುತ್ತವೆ. ಗಂಡು ಹಕ್ಕಿಯು ತನ್ನ ವಾಸಸ್ಥಾನ, ಗೂಡು, ಸಂಗಾತಿ ಮತ್ತು ಮರಿಗಳನ್ನು ಎಚ್ಚರಿಕೆಯಿಂದ ಕಾಯ್ದುಕೊಳ್ಳುತ್ತದೆ.<ref>[http://vijaykarnataka.indiatimes.com/articleshow/45396047.cms ಪಕ್ಷಿನೋಟ:ಪುರುಲೆ ಹಕ್ಕಿ,ಪುಟ ೨,ವಿಜಯ ಕರ್ನಾಟಕ ಭಾನುವಾರ ೭, ಡಿಸೆಂಬರ್ ೨೦೧೪]</ref>
[[ಚಿತ್ರ:Jungle Bush- Quail, Bandhavgarh NP, Madhya Pradesh Bandhavgarh11.JPGjpg|thumbnail|center|ಪುರುಲೆ ಹಕ್ಕಿ]]
== ಉಲ್ಲೇಖ ==
<references/>
"https://kn.wikipedia.org/wiki/ಪುರುಲೆ_ಹಕ್ಕಿ" ಇಂದ ಪಡೆಯಲ್ಪಟ್ಟಿದೆ