ಪ್ರಾಚೀನ ಈಜಿಪ್ಟ್‌: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: Reverted ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
2401:4900:33C0:99DE:2:1:1B7:41DA (ಚರ್ಚೆ) ರ 1090639 ಪರಿಷ್ಕರಣೆಯನ್ನು ವಜಾ ಮಾಡಿ
ಟ್ಯಾಗ್: ರದ್ದುಗೊಳಿಸಿ
೧ ನೇ ಸಾಲು:
[[ಚಿತ್ರ:All Gizah Pyramids.jpg|thumb|250px|ಗಿಜಾದ ಪಿರಮಿಡ್‌‌ಗಳು, ಇವು ಪ್ರಾಚೀನ ಈಜಿಪ್ಟ್ ನಾಗರಿಕತೆಯ ಪ್ರಮುಖ ಗುರುತುಗಳಾಗಿವೆ‌.]] [[ಚಿತ್ರ:Ancient Egypt map-en.svg|thumb|200px|ಪ್ರಾಚೀನ ಈಜಿಪ್ಟಿನ ನಕ್ಷೆ, ರಾಜವಂಶದ ಅವಧಿಯಲ್ಲಿನ ಪ್ರಮುಖ ನಗರ ಮತ್ತು ಪ್ರದೇಶಗಳನ್ನು ತೋರಿಸುತ್ತಿದೆ.ಕ್ರಿ.ಪೂ. 3150ರಿಂದ ಕ್ರಿ.ಪೂ. 30ರವರೆಗೆ)]]
 
'''ಪ್ರಾಚೀನ ಈಜಿಪ್ಟ್‌''' ಪೌರಾತ್ಯ [[ಉತ್ತರ ಆಫ್ರಿಕಾ]]ದ [[ನೈಲ್ ನದಿ]] ದಂಡೆಯುದ್ದಕ್ಕೂ ಚಾಚಿಕೊಂಡಿದ್ದ ಒಂದು [[ಪುರಾತನ]] [[ನಾಗರಿಕತೆ]3150], ಈ ಪ್ರದೇಶದಲ್ಲಿ ಈಗ ಆಧುನಿಕ [[ಈಜಿಪ್ಟ್]] ಇದೆ. ಈ ನಾಗರಿಕತೆಯು ಸುಮಾರು ಕ್ರಿ.ಪೂ 3150ರ<ref>ಕ್ರಿ.ಪೂ. 664ರ ನಂತರದವು ಮಾತ್ರ ಸುರಕ್ಷಿತವಾದುವೆಂದು ಹೇಳುತ್ತವೆ. ವಿವರಗಳಿಗಾಗಿ [[ಈಜಿಪ್ಟಿನ ಕಾಲಗಣನೆ]]ಯನ್ನು ಗಮನಿಸಿ. {{cite web|url=http://www.digitalegypt.ucl.ac.uk/chronology/index.html|title=Chronology|accessdate=2008-03-25|publisher=Digital Egypt for Universities, University College London}}</ref> ಸಂದರ್ಭದಲ್ಲಿ [[ಒಳನಾಡು ಮತ್ತು ಕೆಳ ಈಜಿಪ್ಟಿನ]] ರಾಜಕೀಯ ಸಂಘಟನೆಯೊಂದಿಗೆ ಮೊದಲ [[ಫೇರೋ]]ನಡಿಯಲ್ಲಿ ಏಕೀಭವಗೊಂಡು, ನಂತರದ ಸುಮಾರು ಮ‌ೂರು ಸಹಸ್ರವರ್ಷಗಳಷ್ಟು ಕಾಲ ಬೆಳವಣಿಗೆ ಹೊಂದಿತು.<ref>ಡಾಡ್ಸನ್‌ (2004) ಪುಟ 46</ref> ಇದರ [[ಇತಿಹಾಸ]]ವು ಸುಭದ್ರ ''ರಾಜ್ಯ'' ಗಳ ಸಂದರ್ಭದಲ್ಲಿ ಉತ್ತಮವಾಗಿತ್ತು, ನಂತರ ಈ ರಾಜ್ಯಗಳು 'ಮಧ್ಯಕಾಲೀನ ಯುಗ' ಎಂದು ಕರೆಯುವ ಪರಸ್ಪರ ಅಭದ್ರತೆಯ ಅವಧಿಯಲ್ಲಿ ಬೇರ್ಪಟ್ಟವು. ಪ್ರಾಚೀನ ಈಜಿಪ್ಟ್‌ [[ಹೊಸ ರಾಜ್ಯ]]ಗಳ ಸಂದರ್ಭದಲ್ಲಿ ಪರಮೋತ್ಕರ್ಷ ಸ್ಥಿತಿ ತಲುಪಿತು, ಆನಂತರ ಅದು ನಿಧಾನವಾಗಿ ಅವನತಿಯ ಕಾಲವನ್ನು ಪ್ರವೇಶಿಸಿತು. ಈ ಅವಧಿಯಲ್ಲಿ ಈಜಿಪ್ಟ್‌ ವಿದೇಶಿ ಪ್ರಭಾವದ ಉತ್ತರಾಧಿಕಾರಿಗಳ ಅಧೀನಕ್ಕೊಳಪಟ್ಟಿತು. ಫೇರೋಗಳ ಆಳ್ವಿಕೆಯು ಕ್ರಿ.ಪೂ 31ರಲ್ಲಿ, ಪ್ರಾಚೀನ [[ರೋಮನ್ ಸಾಮ್ರಾಜ್ಯ]] ಈಜಿಪ್ಟ್‌ಅನ್ನು ವಶಪಡಿಸಿಕೊಂಡು [[ಒಂದು ಪ್ರಾಂತ]]ವಾಗಿ ಮಾಡಿಕೊಂಡಾಗ ಅಧಿಕೃತವಾಗಿ ಕೊನೆಗೊಂಡಿತು.<ref>ಕ್ಲೈಟಾನ್‌ (1994) ಪುಟ 217</ref>
 
ಪ್ರಾಚೀನ ಈಜಿಪ್ಟ್‌ ನಾಗರಿಕತೆಯ ಯಶಸ್ವಿಗೆ ಕಾರಣ ನೈಲ್‌ ನದಿ ಕಣಿವೆಯ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಅದರ ಸಾಮರ್ಥ್ಯ. ಫಲವತ್ತಾದ ಕಣಿವೆಯಲ್ಲಿನ ಪ್ರವಾಹದ ಬಗ್ಗೆ ಭವಿಷ್ಯ ನುಡಿಯಬಹುದಾದ ಸ್ಥಿತಿ ಮತ್ತು ನಿಯಂತ್ರಿತ [[ನೀರಾವರಿ]] ವ್ಯವಸ್ಥೆಯು ಅಧಿಕ ಪ್ರಮಾಣದ ಬೆಳೆ ಬೆಳೆಯಲು ಸಹಾಯಕವಾಗಿತ್ತು. ಇವು [[ಸಾಮಾಜಿಕ ಅಭಿವೃದ್ಧಿ]] ಮತ್ತು ಸಂಸ್ಕೃತಿಯ ಬೆಳವಣಿಗೆಯನ್ನು ಉತ್ತೇಜಿಸಿದವು. ಸಂಪನ್ಮೂಲ ಗಳುಸಂಪನ್ಮೂಲಗಳು ಸಾಕಷ್ಟಿಲ್ಲದಿದ್ದುದರಿಂದ [[ಆಡಳಿತ]]ವು ಕಣಿವೆ ಮತ್ತು ಸುತ್ತಲಿನ ನಿರ್ಜನ ಪ್ರದೇಶಗಳ ಖನಿಜ ಸಂಪತ್ತನ್ನು ಉಪಯೋಗಕ್ಕೆ ಬರುವಂತೆ ಮಾಡಿತು, ಸ್ವತಂತ್ರ [[ಬರವಣಿಗೆ ಪದ್ಧತಿ]]ಯನ್ನು ಅಭಿವೃದ್ಧಿಗೊಳಿಸಿತು, ಸಮಷ್ಟಿ ನಿರ್ಮಾಣಕಾರ್ಯಗಳನ್ನು ಮತ್ತು ಕೃಷಿ ಯೋಜನೆಗಳನ್ನು ರಚಿಸಿತು, ಸುತ್ತಮುತ್ತಲಿನ ಪ್ರದೇಶಗಳೊಂದಿಗೆ ವ್ಯವಹಾರ ನಡೆಸಿತು, [[ವಿದೇಶಿ ಶತ್ರುಗಳನ್ನು ಸೋಲಿಸುವ]] ಮತ್ತು ಈಜಿಪ್ಟಿನ ಪ್ರಾಬಲ್ಯತೆಯನ್ನು ದೃಢಪಡಿಸುವ ಉದ್ಧೇಶವನ್ನು ಹೊಂದಿರುವ ಸೇನೆಯನ್ನು ರೂಪಿಸಿತು. ಈ ಚಟುವಟಿಕೆಗಳನ್ನು ಪ್ರೇರೇಪಿಸುವುದು ಮತ್ತು ಆಯೋಜಿಸುವುದು; ಗಣ್ಯ [[ಲೇಖಕರ]], ಧಾರ್ಮಿಕ ಮುಖಂಡರ ಮತ್ತು ಆಡಳಿತಗಾರರ ಅಧಿಕಾರವಾಗಿತ್ತು. ಇದು [[ಧಾರ್ಮಿಕ ನಂಬಿಕೆ]]ಗಳನ್ನು ವಿಸ್ತಾರವಾಗಿ ಬೆಳೆಸುವ ನಿಟ್ಟಿನಲ್ಲಿ ಈಜಿಪ್ಟಿನ ಜನರ ಸಹಕಾರ ಮತ್ತು ಏಕತೆಯನ್ನು ಕಾಪಾಡುತ್ತಿದ್ದ [[ಫೇರೋ]]ಗಳ ನಿಯಂತ್ರಣದಡಿ ನಡೆಯುತ್ತಿತ್ತು.<ref>ಜೇಮ್ಸ್‌ (2005) ಪುಟ 8</ref><ref>ಮ್ಯಾನ್ಯುವೆಲಿಯನ್‌ (1998) ಪುಟಗಳು 6–7</ref>
 
ಪ್ರಾಚೀನ ಈಜಿಪ್ಟಿನವರ ಪ್ರಮುಖ ಸಾಧನೆಗಳೆಂದರೆ - ಶಾಶ್ವತ ಸ್ಮಾರಕವಾದ [[ಪಿರಮಿಡ್‌ಗಳು]], ದೇವಾಲಯಗಳು ಮತ್ತು [[ಆಬಲಿಸ್ಕ್‌ಗಳು(ಚೌಕ ಸೂಜಿಯಂಥ ಕಂಬಗಳು)]] ಮೊದಲಾದವುಗಳ ನಿರ್ಮಾಣಕ್ಕೆ ಕಾರಣವಾದ ಅವರ [[ರಚನೆ]], [[ಸ್ಥೂಲ ಸಮೀಕ್ಷೆ]] ಮತ್ತು ನಿರ್ಮಾಣದ ಕುಶಲತೆಗಳು; [[ಗಣಿತಶಾಸ್ತ್ರ]] ಪದ್ಧತಿ, [[ಔಷಧದ ಪ್ರಾಯೋಗಿಕ ಮತ್ತು ಪರಿಣಾಮಕಾರಿ ವ್ಯವಸ್ಥೆ]], ನೀರಾವರಿ ವ್ಯವಸ್ಥೆ ಮತ್ತು ಕೃಷಿ ಉತ್ಪನ್ನ ಕೌಶಲಗಳು, ಮೊದಲು ಆವಿಷ್ಕರಿಸಿದ ಹಡಗು,<ref name="AIA" /> [[ಈಜಿಪ್ಟಿನ ಪಿಂಗಾಣಿ]] ಮತ್ತು ಗಾಜಿನ ತಂತ್ರವಿದ್ಯೆಗಳು, [[ಸಾಹಿತ್ಯ]]ದ ಹೊಸ ಸ್ವರೂಪಗಳು ಮತ್ತು ಆರಂಭದ ಶಾಂತಿ ಒಪ್ಪಂದ.<ref>ಕ್ಲೈಟಾನ್‌ (1994) ಪುಟ 153</ref> ಈಜಿಪ್ಟ್‌ ಶಾಶ್ವತ ಆಸ್ತಿಯನ್ನು ಉಳಿಸಿಹೋಗಿದೆ. ಅದರ [[ಕಲೆ]] ಮತ್ತು [[ವಾಸ್ತುಶಿಲ್ಪ]]ಗಳನ್ನು ಎಲ್ಲಾ ಕಡೆ ವಿಸ್ತಾರವಾಗಿ ಅನುಸರಿಸಲಾಗಿದೆ. ಅಲ್ಲದೇ ಅದರ ಪ್ರಾಚೀನತೆಯು ಪ್ರಪಂಚದ ಮ‌ೂಲೆಮ‌ೂಲೆಯಲ್ಲೂ ಕೀರ್ತಿಗಳಿಸಿಕೊಂಡಿದೆ. ಅದರ ಸ್ಮಾರಕಗಳ ಭಗ್ನಾವಶೇಷಗಳು ಶತಮಾನಗಳಿಂದಲೂ ಪ್ರವಾಸಿಗರಿಗೆ ಮತ್ತು ಬರಹಗಾರರ ಕಲ್ಪನೆಗಳಿಗೆ ಪ್ರೇರಣೆ ನೀಡಿವೆ. ಆರಂಭಿಕ ಆಧುನಿಕ ಯುಗದಲ್ಲಿ ಬೆಳಕಿಗೆ ಬಂದ ಪ್ರಾಚೀನಾವಶೇಷಗಳು ಮತ್ತು ಭೂಶೋಧನೆಗಳು ಈಜಿಪ್ಟ್‌ ನಾಗರಿಕತೆಯ [[ವೈಜ್ಞಾನಿಕ ಪರೀಕ್ಷೆ]]ಗೆ ಅವಕಾಶ ಮಾಡಿಕೊಟ್ಟವು. ಅಲ್ಲದೇ ಅದರ ಸಾಂಸ್ಕೃತಿಕ ಆಸ್ತಿಗೆ ಈಜಿಪ್ಟ್‌ನಲ್ಲಿ ಮಾತ್ರವಲ್ಲದೆ ಇಡೀ ಪ್ರಪಂಚದಲ್ಲೇ ಶ್ರೇಷ್ಠ ಮನ್ನಣೆ ತಂದುಕೊಟ್ಟಿತು.<ref>ಜೇಮ್ಸ್‌ (2005) ಪುಟ 84</ref>
"https://kn.wikipedia.org/wiki/ಪ್ರಾಚೀನ_ಈಜಿಪ್ಟ್‌" ಇಂದ ಪಡೆಯಲ್ಪಟ್ಟಿದೆ