ತಿಪಟೂರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಗಗನ ಬಿ (ಚರ್ಚೆ) ರ 1088912 ಪರಿಷ್ಕರಣೆಯನ್ನು ವಜಾ ಮಾಡಿ: ಅಸಂಬದ್ಧ ವಿಷಯ.
ಟ್ಯಾಗ್‌ಗಳು: ರದ್ದುಗೊಳಿಸಿ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೧೦೦ ನೇ ಸಾಲು:
==ನಗರ==
ತಿಪಟೂರು ನಗರ ತುಮಕೂರಿಗೆ ಪಶ್ಚಿಮದಲ್ಲಿ 73.6ಕಿಮೀ. ದೂರದಲ್ಲಿ, ಉ.ಅ.13o 15' ಮತ್ತು ಪೂ.ರೇ, 76o32 ' ಮೇಲೆ, ಬೆಂಗಳೂರು - ಅರಸೀಕೆರೆ ರೈಲುಮಾರ್ಗದಲ್ಲಿ, ಸಮುದ್ರಮಟ್ಟದಿಂದ 2,783 ಅಡಿ ಎತ್ತರದಲ್ಲಿ ಇದೆ. ಜನ ಸಂಖ್ಯೆ ೫೯,೫೪೨ (೨೦೧೧)<ref name="ಜನಸಂಖ್ಯೆ">{{cite web | url=http://www.censusindia.gov.in/pca/SearchDetails.aspx?Id=696396 | title=ಭಾರತ ಸರ್ಕಾರದ ಜನಗಣತಿ}}</ref>. ತುಮಕೂರು ಜಿಲ್ಲೆಯಲ್ಲಿ ಇದು ಎರಡನೆಯ ದೊಡ್ಡ ನಗರ. ಮೊದಲನೆಯದು ತುಮಕೂರು, ಹಲವು ರಸ್ತೆಗಳು ಇಲ್ಲಿ ಸಂಧಿಸುತ್ತವೆ. ಶ್ರಿ ಕೃಷ್ಣರಾಜೆಂದ್ರ ಮತ್ತು ಗಾಂಧಿನಗರ ಬಡಾವಣೆಗಳಿದ ಕೂಡಿ ಬೆಳೆಯುತ್ತಿರುವ ತಿಪಟೂರು ಒಂದು ಮುಖ್ಯ ವ್ಯಾಪಾರಸ್ಥಳ. ತೆಂಗು ಮತ್ತು ಕೊಬ್ಬರಿ ಇಲ್ಲಿ ಮಾರಾಟವಾಗುವ ಮುಖ್ಯ ಸರಕುಗಳು. [[ಮುಂಬಯಿ]], [[ದೆಹಲಿ]], [[ಕಾನ್ಪುರ]], ಮುಂತಾದ ದೂರದ ವ್ಯಾಪಾರದ ಕೇಂದ್ರಗಳಿಗೆ ಕೊಬ್ಬರಿ ಮಾರಾಟವಾಗುತ್ತದೆ. ಪ್ರತಿ ಶನಿವಾರ ಇಲ್ಲಿ ಸಂತೆ ನೆರೆಯುತ್ತದೆ. ಇಲ್ಲಿ ಒಂದು ನಗರಸಭೆ ಉಂಟು. ಅನೇಕ ಶಾಲೆಗಳೂ ಹಿಂದೆ ಮೈಸೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಸೇರಿದ್ದು ಈಗ ತುಮಕೂರು ವಿಶ್ವವಿದ್ಯಾಲಯ ವ್ಯಾಪ್ತಿಗೆ ಒಳಪಟ್ಟಿರುವ ಕಲ್ಪತರು ಕಾಲೇಜೂ ಇವೆ. ವಿದ್ಯುತ್ತು, ಅಂಚೆ, ತಂತಿ, ದೂರವಾಣಿ, ಸಾರ್ವಜನಿಕ ಆಸ್ಪತ್ರೆ, ಪಶುವೈದ್ಯಶಾಲೆ ಮುಂತಾದ ಸೌಲಭ್ಯಗಳುಂಟು.ನಗರಕ್ಕೆ ಸುರಕ್ಷಿತ ನೀರಿನ ಸರಬರಾಜಾಗುತ್ತದೆ. ಕೊಬ್ಬರಿ ಎಣ್ಣೆಯ ಮತ್ತು ಮರ ಕೊಯ್ಯುವ ಕಾರ್ಖಾನೆಗಳಿವೆ. ವಾಣಿಜ್ಯ ಬ್ಯಾಂಕುಗಳುಂಟು. ಇಲ್ಲಿರುವ ದೇವಾಲಯಗಳಲ್ಲಿ ಕಲ್ಲೇಶ್ವರ, ತಿಪಟೂರಮ್ಮ, ಆಂಜನೇಯಸ್ವಾಮಿ, ಮಲ್ಲಿಕಾರ್ಜುನ ಕಾಶಿವಿಶ್ವೇಶ್ವರ ಮತ್ತು ಕನ್ಯಕಾಪರಮೇಶ್ವರಿ ದೇವಾಲಯಗಳು ಪ್ರಮುಖವಾದವು.
 
=== ಗಂಜಲಘಟ್ಟ ===
ಗಂಜಲಘಟ್ಟವು ಭಾರತದ ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನಲ್ಲಿರುವ ಒಂದು ಸಣ್ಣ ಗ್ರಾಮ/ ಕುಗ್ರಾಮವಾಗಿದೆ. ಇದು ಮಸವನಘಟ್ಟ ಪಂಚಾಯತಿ ಅಡಿಯಲ್ಲಿ ಬರುತ್ತದೆ. ಇದು ಬೆಂಗಳೂರು ವಿಭಾಗಕ್ಕೆ ಸೇರಿದೆ. ಈ ಗ್ರಾಮವು ಉತ್ತರಕ್ಕೆ ತಿಪಟೂರು ತಾಲೂಕು, ಪೂರ್ವಕ್ಕೆ ತುರುವೇಕೆರೆ ತಾಲೂಕು, ದಕ್ಷಿಣಕ್ಕೆ ನಾಗಮಂಗಲ ತಾಲೂಕಿನಿಂದ ಸುತ್ತುವರೆದಿದೆ. ಈ ಗ್ರಾಮವು ಜಿಲ್ಲಾ ಕೇಂದ್ರವಾದ ತುಮಕೂರಿನಿಂದ 84 ಕಿಮೀ ಹಾಗೂ ತಿಪಟೂರಿನಿಂದ 28 ಕಿಮೀ ದೂರದಲ್ಲಿದೆ. ಗ್ರಾಮದ ಒಟ್ಟು ಭೌಗೋಳಿಕ ವಿಸ್ತೀರ್ಣ 225.42 ಹೆಕ್ಟೇರ್. 2011ರ ಜನಗಣತಿಯ ಪ್ರಕಾರ ಈ ಗ್ರಾಮವು ಒಟ್ಟು 439 ಜನಸಂಖ್ಯೆಯನ್ನು ಹೊಂದಿದೆ ಹಾಗೂ ಒಟ್ಟು 123 ಮನೆಗಳಿವೆ. ಮಹಿಳೆಯರ ಸಂಖ್ಯೆ ಒಟ್ಟು 223 ಇದ್ದು ಪುರುಷರ ಸಂಖ್ಯೆ 214 ಇದೆ ಮತ್ತು ಈ ಗ್ರಾಮದ ಸಾಕ್ಷರತೆ ಪ್ರಮಾಣ ಶೇಕಡ 57.6 ಇದ್ದು ಮಹಿಳಾ ಸಾಕ್ಷರತೆ ಪ್ರಮಾಣ ಶೇಕಡ 24.1ರಷ್ಠಿದೆ. ಈ ಗ್ರಾಮದಲ್ಲಿ ಒಂದು ಅಂಗನವಾಡಿ ಕೇಂದ್ರ ಹಾಗು ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಪಾಠಶಾಲೆ ಇದೆ. ಈ ಗ್ರಾಮಕ್ಕೆ ತಲುಪಲು ರಸ್ತೆಯ ಮಾರ್ಗವಾಗಿ ತಲುಪಬೇಕಾಗುತ್ತದೆ
 
==ಉಲ್ಲೇಖಗಳು==
"https://kn.wikipedia.org/wiki/ತಿಪಟೂರು" ಇಂದ ಪಡೆಯಲ್ಪಟ್ಟಿದೆ