ಹುನಗುಂದ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೪೪ ನೇ ಸಾಲು:
 
==ಪ್ರೇಕ್ಷಣಿಯ ಸ್ಠಳಗಳು ==
ಹುನಗುಂದಕ್ಕೆ ಪಶ್ಚಿಮದಲ್ಲಿ 26 ಕಿಮೀ ದೂರದಲ್ಲಿರುವ ಐಹೊಳೆ (ನೋಡಿ- ಐಹೊಳೆ) ಬಾದಾಮಿ ಚಾಳುಕ್ಯರ ಕಾಲದ ಸುಂದರ ದೇವಾಲಯ ಸಮೂಹಗಳಿರುವ ಪ್ರವಾಸಿ ಕೇಂದ್ರ. ಹುನಗುಂದಕ್ಕೆ ಆಗ್ನೇಯದಲ್ಲಿ 13 ಕಿಮೀ ದೂರದಲ್ಲಿರುವ ಇಳಕಲ್ಲು ನೇಯ್ಗೆ ಬಟ್ಟೆಗಳಿಗೆ ಪ್ರಸಿದ್ಧ. ಹುನಗುಂದದ ಈಶಾನ್ಯಕ್ಕೆ 24 ಕಿಮೀ ದೂರದಲ್ಲಿರುವ ಕರಡಿ ಗ್ರಾಮದಲ್ಲಿ ಕರಡಿಯ ಮುಖದಂತಿರುವ ನಂದಿ ದೇವಾಲಯವಿದೆ. ಈ ಕರಡಿಮುಖದ ನಂದಿ ದೇವಾಲಯದಿಂದಲೇ ಈ ಗ್ರಾಮಕ್ಕೆ ಕರಡಿ ಎಂಬ ಹೆಸರು ಬಂತೆಂದು ಹೇಳುವರು.ಹುನಗುಂದ ದಿಂದ ಈಶಾನ್ಯಕ್ಕೆ 30ಕಿಮೀ ದೂರದಲ್ಲಿರುವ ಹಾಗೂ ಬಾಗಲಕೋಟ ಜಿಲ್ಲೆಯ ಕೊನೆಯ ಗ್ರಾಮ ಕೋಡಿಹಾಳ‌ಲ್ಲಿ ಗ್ರಾಮದೇವಿ ನೆಲೆಸಿದಾಳ್ಳೆ 3ವರ್ಷಕ್ಕೆ ಒಂದು ಸಾರಿ ಜಾತ್ರೆ ವಿಜಯನಗರದ ರಾಮರಾಯ 1565ರ ರಕ್ಕಸಗಿತಂಗಡಿಗಿ ಯುದ್ಧದಲ್ಲಿ ಇಲ್ಲಿ ಬೀಡುಬಿಟ್ಟಿದ್ದನೆಂದು ಪ್ರತೀತಿ. ಹುನಗುಂದದ ಆಗ್ನೇಯಕ್ಕೆ ಸು. 24 ಕಿಮೀ ದೂರದಲ್ಲಿರುವ ನಂದವಾಡಗಿ ಇಳಕಲ್ಲಿಗೆ ಈಶಾನ್ಯದಲ್ಲಿ 29 ಕಿಮೀ ದೂರದಲ್ಲಿದೆ. ಇದೊಂದು ಪುರಾತನ ಗ್ರಾಮ. ಹಿಂದೆ ನಂದರಾಜನ ರಾಜಧಾನಿಯಾಗಿತ್ತೆಂದು ಹೇಳುವರು. ಗ್ರಾಮದ ಒಂದು ಪ್ರವೇಶದ್ವಾರದ ಮುಂದೆ ಎತ್ತರವಾದ ಜಗಲಿಕಟ್ಟೆಯಿದ್ದು ಅಲ್ಲಿ ಒಂದು ಬೇವಿನ ಮರವೂ ವಿಷ್ಣುಚಕ್ರವುಳ್ಳ ಒಂದು ಕಲ್ಲೂ ಇದೆ. ಕೋಟೆಯೊಳಗೆ ದೊಡ್ಡ ಈಶ್ವರದೇವಾಲಯವಿದೆ. ಹುನಗುಂದಕ್ಕೆ ಉತ್ತರದಲ್ಲಿ 19 ಕಿಮೀ ದೂರದಲ್ಲಿರುವ [[ಕೂಡಲ ಸಂಗಮ|ಸಂಗಮ]] ಒಂದು ಪವಿತ್ರ ಕ್ಷೇತ್ರ. ಇದು ಕೃಷ್ಣಾ ಮತ್ತು ಮಲಪ್ರಭಾ ನದಿಗಳು ಕೂಡುವಲ್ಲಿದೆ.
 
ಹುನಗುಂದದಲ್ಲಿ ಪುರಾತನ ದೇವಾಲಯಗಳು ಮತ್ತು ಊರಿಗೆ ಹೊಂದಿರುವ ಚಿಕ್ಕಗುಡ್ಡದ ಮೇಲೆ ಜೈನಬಸದಿಯ ಅವಶೇಷಗಳು ಇವೆ. ರಾಮಲಿಂಗ ದೇವಾಲಯವು ಊರೊಳಗಿದ್ದು ಗರ್ಭಗುಡಿಯು ನೆಲದಡಿ ಇದೆ. ಚಾಳುಕ್ಯ ಶೈಲಿಯ ಸ್ತಂಭಗಳು ಈ ಗುಡಿಯ ವೈಶಿಷ್ಟ್ಯ. ಎರಡು ಶಿಲಾಶಾಸನಗಳೂ ಇಲ್ಲಿವೆ. ಇಲ್ಲಿನ ಒಂದು ಪ್ರಾಥಮಿಕ ಶಾಲೆಯ ಅಡಿಯಲ್ಲಿ ಕಲ್ಲಿನ ಸ್ತಂಭಗಳ ಗುಹೆ ಇದೆ. ಮಲ್ಲಿಕಾರ್ಜುನ, ಮುದಮಾರುತಿ, ಸಂಗಮೇಶ್ವರ ದೇವಾಲಯಗಳು ಇತ್ತೀಚಿನವು. ಪ್ರತಿವರ್ಷ ಪಟ್ಟಣದಲ್ಲಿ ನಡೆಯುವ ಸಂಗಮೇಶ್ವರ ಜಾತ್ರೆ ಪ್ರಸಿದ್ಧ. ಹಳೆಯ ಕಾಲದ ಕೋಟೆಯ ಎರಡು ಅಗಸೀಬಾಗಿಲುಗಳುಂಟು. ಇಲ್ಲಿನ ಗುಡ್ಡದ ಮೇಲೆ ಹಳದಿ ಮಣ್ಣು ಸಿಕ್ಕುವುದರಿಂದ ಇದಕ್ಕೆ ಹೊನ್ನಕುಂಡ, ಹೊನ್ನಗುಂಡ ಎಂದು ಹಿಂದೆ ಕರೆಯತ್ತಿದ್ದರೆಂದು ತಿಳಿದುಬರುವುದು.
"https://kn.wikipedia.org/wiki/ಹುನಗುಂದ" ಇಂದ ಪಡೆಯಲ್ಪಟ್ಟಿದೆ