ಗ್ರೇಟ್ ಟ್ರಿಗ್ನಾಮೆಟ್ರಿಕ್ ಸರ್ವೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೧ ನೇ ಸಾಲು:
ದ ಗ್ರೇಟ್ ಟ್ರಿಗ್ನೊಮೆಟ್ರಿಕಲ್ ಸರ್ವೆ ಆಫ್ ಇಂಡಿಯಾ ಯೋಜನೆಯು ೧೦ ಏಪ್ರಿಲ್ ೧೮೦೨ ರಲ್ಲಿ ಮದ್ರಾಸ್ ಸಮೀಪದಲ್ಲಿ ಬೇಸ್ ಲೈನ್ ಅಳತೆಯೊಂದರ ಮೂಲಕ ಶುರುವಾಯಿತು. ಮೇಜರ್ ಲ್ಯಾಂಬ್ಟನ್ ಅವರು ಉತ್ತರದಲ್ಲಿ ಸೇಂಟ್ ಥಾಮಸ್ ಗುಡ್ಡ ಮತ್ತು ದಕ್ಷಿಣದಲ್ಲಿ ಪೆರುಂಬೌಕ್ ಬೆಟ್ಟದ ನಡುವಲ್ಲಿನ ಸಪಾಟು ಭೂಮಿಯನ್ನು ಆಯ್ಕೆಮಾದಿಕೊಂಡರು. ಆ ಬೇಸ್ ಲೈನ್ ೭.೫ ಮೈಲು (೧೨.೧ ಕಿ.ಮಿ.) ಉದ್ದದ್ದಾಗಿತ್ತು. ಲೆಫ್ಟಿನೆಂಟ್ ಕೇಟರ್ ಅವರನ್ನು ಪಶ್ಚಿಮಭಾಗದ ಎತ್ತರದ ಪ್ರದೇಶವನ್ನು ಗುರುತಿಸಲು ಕಳುಹಿಸಲಾಯಿತು. ಕರಾವಳಿ ಭಾಗದ ತೆಲ್ಲಿಚೆರ್‍ರಿ ಮತ್ತು ಕಣ್ಣಾನೂರುಗಳನ್ನು ಸಂಪರ್ಕಿಸುವ ಉದ್ದೇಶ ಇದರದ್ದಾಗಿತ್ತು. ಇದಕ್ಕಾಗಿ ಮೌಂಟ್ ದೆಲ್ಲಿ ಮತ್ತು ತಡಿಯಾಂಡಮೋಳ್ ಎತ್ತರದ ಗುಡ್ದಗಳನ್ನು ಆಯ್ದುಕೊಳ್ಳಲಾಯಿತು. ತೀರದಿಂದ ತೀರದವರೆಗೆ ೩೬೦ ಮೈಲಿ (೫೮೦ ಕಿ.ಮಿ) ಎಂದು ಅಳೆಯಲಾಯಿತು. ಈ ಸರ್ವೆ ಲೈನ್ ೧೮೦೬ರಲ್ಲಿ ಮುಕ್ತಾಯಗೊಂಡಿತು. ಈ ಯೋಜನೆಯು ಸುಮಾರು ಐದು ವರ್ಷಗಳ ಕಾಲ ನಡೆಯಬಹುದೆಂದು ಈಸ್ಟ್ ಇಂಡಿಯಾ ಕಂಪನಿ ಅಂದಾಜಿಸಿತ್ತು. ಆದರೆ ಇದು ೧೮೫೭ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ನಂತರ ಈಸ್ಟ್ ಇಂಡಿಯಾ ಕಂಪನಿಯ ಆಡಳಿತ ಮುಗಿದ ಮೇಲೂ ನಡೆದು ಸುಮಾರು ೭೦ ವರ್ಷಗಳ ಕಾಲವನ್ನು ತೆಗೆದುಕೊಂಡಿತು. ಸರ್ವೆ ಮಾಡಬೇಕಾಗಿದ್ದ ಅಗಾಧವಾದ ಭೂಮಿಯಿದ್ದುದರಿಂದ ಸರ್ವೇಕ್ಷಣೆದಾರರು ಇಡೀ ಇಂಡಿಯಾವನ್ನು ತ್ರಿಕೋನಮಿತಿಗೊಳಪಡಿಸುವ ಬದಲಾಗಿ ಉತ್ತರದಿಂದ ದಕ್ಷಿಣಕ್ಕೆ ಪೂರ್ವದಿಂದ ಪಶ್ಚಿಮಕ್ಕೆ ಹರಡಿರುವಂತೆ 'gridiron' ಎಂಬ ತ್ರಿಕೋನ ಸರಪಳಿಗಳನ್ನು ರಚಿಸಿದರು. ಕೆಲವು ಸಮಯದಲ್ಲಿ ಈ ಸರ್ವೇಕ್ಷಣೆಯಲ್ಲಿ ೭೦೦ ಜನರು ಕೆಲಸ ಮಾಡುತ್ತಿದ್ದರು.
 
ಈ ಟ್ರಿಗ್ನೊಮೆಟ್ರಿಕಲ್ ಸರ್ವೇಯು ಟೊಪೊಗ್ರಫಿಕಲ್ ಸರ್ವೆ ಮತ್ತು ರೆವೆನ್ಯೂ (ಕಂದಾಯ) ಸರ್ವೆಗಳಿಂದ ಸ್ವತಂತ್ರವಾಗಿ ನಡೆದ ಸರ್ವೇಯಾಗಿತ್ತು. ೧೮೭೫ರಲ್ಲಿ ಈ ಸರ್ವೇಕ್ಷಣೆಯ ಬಜೆಟ್ಟನ್ನು ೨೪೦೦೦೦ ದಿಂದ ೨೦೦೦೦೦ ಪೌಂಡುಗಳಿಗೆ ಇಳಿಸಲು ತೀರ್ಮಾನಿಸಲಾಯಿತು. ಇದರ ಪರಿಣಾಮವಾಗಿ, ಜೆ. ಟಿ. ವಾಕರ್ ಎಂಬ ಸರ್ವೇಯರ್ ಜೆನೆರಲ್ ಅಡಿಯಲ್ಲಿ ಗ್ರೇಟ್ ಟ್ರಿಗ್ನೊಮೆಟ್ರಿಕಲ್ ಸರ್ವೆ, ಟೊಪೊಗ್ರಪಿಕಲ್ ಸರ್ವೆ ಹಾಗೂ ರೆವೆನ್ಯೂ ಸರ್ವೆಗಳನ್ನು 'ದ ಸರ್ವೆ ಆಫ್ ಇಂಡಿಯಾ' ಎಂಬ ಒಂದು ಯೋಜನೆಯಡಿ ಸೇರಿಸಲಾಯಿತು.<ref>{{cite book|pages=39–40|title= A memoir of the Indian Surveys, 1875–1890| author=Black, Charles E.D.| year=1891| place=London| publisher=Secretary of State for India in Council| url=https://archive.org/stream/memoironindiansu00blac#page/39/mode/1up}}</ref>
 
==ಉಪಕರಣಗಳು ಮತ್ತು ಬಳಸಿದ ವಿಧಾನಗಳು==